ಪ್ರೀತಿಸಿ ಮದುವೆಯಾಗಿದ್ದ ಹೆಂಡತಿಯಿಂದ ದೂರಾದ ನಿರ್ಮಾಪಕ ಪುಷ್ಕರ್ ಮಲ್ಲಿಕಾರ್ಜುನಯ್ಯಾ.. ಅಷ್ಟಕ್ಕೂ ಇವರ ಪತ್ನಿ ಯಾರು ಗೊತ್ತಾ..

0 views

ನಿರ್ಮಾಪಕ ಪುಷ್ಕರ್ ಮಲ್ಲಿಕಾರ್ಜುನಯ್ಯಾ.. ಈ ಹೆಸರು ರಕ್ಷಿತ್ ಶೆಟ್ಟಿ ಅವರ ಬಳಗದಲ್ಲಿ ಕೇಳಿ ಬಂದು ನಂತರ ಸಿನಿಮಾ ಇಂಡಸ್ಟ್ರಿಯಲ್ಲಿ ಚಿರಪರಿಚಿತವಾಗಿತ್ತು.. ದೊಡ್ಡ ನಿರ್ಮಾಪಕರ ಸಾಲಿನಲ್ಲಿ ಸೇರಿಕೊಂಡಿದ್ದರು.. ಆದರೆ ಇಂತಹ ದೊಡ್ಡ ನಿರ್ಮಾಪಕ ತಮ್ಮ ವ್ಯಯಕ್ತಿಕ ಬದುಕಿನಲ್ಲಿ ಎಡವಿ ತಮ್ಮ‌ವ್ಪತ್ನಿಯಿಂದ ದೂರಾದ ವಿಚಾರ ಇದೀಗ ಬೆಳಕಿಗೆ ಬಂದಿದೆ.. ಹೌದು ಖುದ್ದು ಅವರೇ ತಮ್ಮ ಪ್ರೀತಿ ಹಾಗೂ ಮದುವೆ ಮತ್ತು ದೂರಾದ ಕತೆಯನ್ನು ಹೇಳಿಕೊಂಡಿದ್ದಾರೆ.. ಹೌದು ಪುಷ್ಕರ್ ಮಲ್ಲಿಕಾರ್ಜುನಯ್ಯ ಅವರು ಕಿರಿಕ್ ಪಾರ್ಟಿ ಸಿನಿಮಾದ ನಿರ್ಮಾಪಕರೆಂದು ಎಲ್ಲರಿಗೂ ಪರಿಚಿತ ಆದರೆ ಅಸಲಿಗೆ ಇಲ್ಲಿ ಕತೆಯೇ ಬೇರೆ ಇದೆ.. ಹೌದು ಪುಷ್ಕರ್ ಮಲ್ಲಿಕಾರ್ಜುನಯ್ಯ ಅವರು ಮೊದಲು ನಿರ್ಮಿಸಿದ್ದ ಸಿನಿಮಾ ಗೋದಿ ಬಣ್ಣ ಸಾಧಾರಣ ಮೈಕಟ್ಟು ಸಿನಿಮಾ..

ಆನಂತರ ಇತ್ತ ಅದಾಗಲೇ ಕಿರಿಕ್ ಪಾರ್ಟಿ ಸಿನಿಮಾ ಚಿತ್ರೀಕರಣ ಸಂಪೂರ್ಣವಾಗಿತ್ತು.. ಆದರೆ ಮೊದಲ ಬಾರಿಗೆ ಮೂರು ಕೋಟಿ ರೂಪಾಯಿ ಬಂಡವಾಳ ಹಾಕಿ ರಕ್ಷಿತ್ ಶೆಟ್ಟಿ ಸಿನಿಮಾ ನಿರ್ಮಾಣ ಮಾಡಿದ್ದರು.. ಸಿನಿಮಾ ಬಿಡುಗಡೆ ಮಾಡುವ ಮುನ್ನ ತಮ್ಮ ಬಂಡವಾಳವನ್ನು ಮರಳಿ ಪಡೆದು ಸುರಕ್ಷಿತರಾಗಬೇಕಾದ ಕಾರಣ ಸಿನಿಮಾದ ಲಾಭದ ಮೂವತ್ತು ಶೇಕಡವನ್ನು ಪುಷ್ಕರ್ ಅವರಿಗೆ ಕೊಟ್ಟು ಮೂರು ಕೋಟಿ ಪಡೆದರು.. ಪುಷ್ಕರ್ ಅವರು ಕಿರಿಕ್ ಪಾರ್ಟಿ ಸಿನಿಮಾದ ನಿರ್ಮಾಪಕರಲ್ಲ.. ಬದಲಿಗೆ ಅವರು ಸಿನಿಮಾದ ಪ್ರೆಸೆಂಟರ್ ಆಗಿದ್ದರು.. ಕಿರಿಕ್ ಪಾರ್ಟಿ ಗೆದ್ದ ನಂತರ ಹಂಬಲ್ ಪೊಲಿಟಿಷಿಯನ್ ನೋಗರಾಜ್ ಸಿನಿಮಾ ನಿರ್ಮಾಣ ಮಾಡಿದರು.. ನಂತರ ಸಾಲು ಸಾಲು ಸಿನಿಮಾಗಳನ್ನು ನಿರ್ಮಿಸಿ ಯಶಸ್ವಿ ನಿರ್ಮಾಪಕನಾಗಿ ಗುರುತಿಸಿ ಕೊಂಡರು.. ಆನಂತರ ರಕ್ಷಿತ್ ಶೆಟ್ಟಿ ಅವರಿಗೂ ಪುಷ್ಕರ್ ಅವರಿಗೂ ಮನಸ್ತಾಪಗಳು ಮೂಡಿ ಇಬ್ಬರೂ ಸಹ ತಮ್ಮ ತಮ್ಮ ವ್ಯವಹಾರಗಳನ್ನು ಬೇರೆ ಬೇರೆ ಮಾಡಿಕೊಂಡದ್ದು ಸುದ್ದಿಯಾಗಿತ್ತು..

ಇನ್ನು ಇದೀಗ ಸಂದರ್ಶನವೊಂದರಲ್ಲಿ ತಮ್ಮ ವ್ಯಯಕ್ತಿಕ ಜೀವನದ ಕುರಿತು ಹೇಳಿಕೊಂಡಿದ್ದು‌ ತಾವು ಪ್ರೀತಿಸಿ ಮದುವೆಯಾದ ಹುಡುಗಿಯಿಂದಲೂ ದೂರಾದ ಕತೆಯನ್ನು ಹೇಳಿಕೊಂಡಿದ್ದಾರೆ.. ಹೌದು ಪುಷ್ಕರ್ ಮಲ್ಲಿಕಾರ್ಜುನಯ್ಯ ಅವರು ಮೂಲತಃ ತುಮಕೂರಿನ ನರಸೀಪುರದವರು.. ಇಂಜಿನಿಯರಿಂಗ್ ಒದುವಾಗ ಪಿಯುಸಿ ಓದುತ್ತಿದ್ದ ಯುವತಿಯನ್ನು ಪ್ರೀತಿಸಲು ಆರಂಭಿಸಿದ್ದರು.. ಇಬ್ಬರ ಪ್ರೀತಿಯ ಜೀವನ ಬಹಳ ಚೆನ್ನಾಗಿಯೇ ಇತ್ತು.. ಇಂಜಿನಿಯರಿಂಗ್ ಮುಗಿಸಿ ಲಂಡನ್ ಗೆ ಹೋಗುವ ನಿರ್ಧಾರ ಮಾಡಿದ್ದರು ಪುಷ್ಕರ್ ಅವರು.. ಆದರೆ ಆ ಯುವತಿ ಎಲ್ಲಿಗೆ ಬೇಕಾದರೂ ಹೋಗಿ.. ಆದರೆ ಹೋಗುವ ಮುನ್ನ ನನ್ನನ್ನು ಮದುವೆಯಾಗಿ ಎಂದಿದ್ದರಂತೆ.. ಅದಕ್ಕೆ ಒಪ್ಪೊದ ಪುಷ್ಕರ್ ಅವರು ತಾವು ಪ್ರೀತಿಸಿದ ಯುವತಿಯನ್ನು ಕರೆದುಕೊಂಡು ಹೋಗಿ ತುಮಕೂರಿನ ದೇವರಾಯನದುರ್ಗ ಬೆಟ್ಟದ ನರಸಿಂಹಸ್ವಾಮಿ ದೇವಸ್ಥಾನದಲ್ಲಿ ತಾಳಿ‌ಕಟ್ಟಿದ್ದರು‌.

ಆನಂತರ ಲಂಡನ್ ಗೆ ತೆರಳಿದ್ದರು.. ನಂತರ ಐದು ವರ್ಷಗಳ ಕಾಲ ಈ ವಿಚಾರವನ್ನು ಮುಚ್ಚಿಟ್ಟು ಓದನ್ನು ಮುಗಿಸಿ ಕೆಲಸಕ್ಕೆ ಸೇರಿಕೊಂಡು ನಂತರ ಮತ್ತೆ ಮನೆಯವರಿಗೆ ವಿಚಾರ ತಿಳಿಸಿ 2008 ರಲ್ಲಿ ಮತ್ತೆ ಎರಡನೇ ಬಾರಿಗೆ ಅದೇ ಹುಡುಗಿಯನ್ನು ಮದುವೆಯಾದರು.. ಪ್ರೀತಿಸಿ ಎರಡು ಬಾರಿ ತಾಳಿ ಕಟ್ಟಿದ್ದ ಹುಡುಗಿಯ ಜೊತೆ ಮೂರು ವರ್ಷ ಸಂಸಾರ ಮಾಡಿದ ಪುಷ್ಕರ್ ಮಲ್ಲಿಕಾರ್ಜುನಯ್ಯ ಅವರು 2011 ರಲ್ಲಿ ಪತ್ನಿಯಿಂದ ದೂರಾಗಲು ನಿರ್ಧಾರ ಮಾಡಿದರು.. ಹೌದು ಈ ಬಗ್ಗೆ ಅವರೇ ಹೇಳಿಕೊಂಡಂತೆ “ನನಗೆ ಹೆಂಡತಿ ಅಥವಾ ಪ್ರೇಯಸಿ ಅಥವಾ ಮಗಳೇ ಆಗಿರಲಿ.. ನಾನು ಹೆಣ್ಣು ಮಕ್ಕಳು ಅಂತ ಬಂದಾಗ ನನ್ನ ದೃಷ್ಟಿಕೋನ ಒಂದೇ ರೀತಿ ಇರುತ್ತದೆ.. ಭಾರತೀಯ ಸಂಪ್ರದಾಯದಲ್ಲಿಯೇ ಆಲೋಚನೆ ಮಾಡುತ್ತೇನೆ..

ಹೀಗೆ ಇರಬೇಕು ಎನ್ನುವ ಪೊಸೆಸಿವ್ ನೆಸ್ ಇದೆ.. ಸಂಪ್ರದಾಯಗಳನ್ನು ಪಾಲಿಸಬೇಕು ಎನ್ನುತ್ತೇನೆ.. ಆದರೆ ನನ್ನ ಪತ್ನಿ ಬೇರೆ ರೀತಿ.. ಅವರು ಇದನ್ನೆಲ್ಲಾ ಹೆಚ್ಚು ಅನುಸರಿಸುತ್ತಿರಲಿಲ್ಲ.. ಕೆಲಸಕ್ಕೆ ಅಂತ ಅವರು ಬೆಂಗಳೂರಿಗೆ ಬಂದರು. ಆಗ ನಮ್ಮಿಬ್ಬರ ನಡುವೆ ಸಾಕಷ್ಟು ಮನಸ್ತಾಪಗಳು ಮೂಡಿ ಬಂತು.. ಹೀಗಾಗಿ ಇಬ್ಬರೂ ದೂರಾಗುವ ನಿರ್ಧಾರವನ್ನು ತೆಗೆದುಕೊಂಡೆವು.. ಈ ನಿರ್ಧಾರದ ಬಳಿಕ ನಾನು ಬಹಳಷ್ಟು ಕುಗ್ಗಿ ಹೋದೆ.. ನಮ್ಮ ಊರಿನಲ್ಲಿಯೇ ಹತ್ತು ವರ್ಷ ಕೆಲಸ ಮಾಡಿದೆ.. ಆದರೆ ಇದರಿಂದ ಹೊರ ಬರಲು ಸಾಧ್ಯವಾಗುತ್ತಿರಲಿಲ್ಲ.. ಹೀಗೆ ಇದ್ದರೆ ನನ್ನ ಜೀವನ ಸರಿ ಬರಲ್ಲ ಎಂದು ನಾನು ಸಿನಿಮಾ ನಿರ್ಮಾಣ ಮಾಡಲು ಬೆಂಗಳೂರಿಗೆ ಬಂದೆ.. ನಂತರ ನನ್ನ ಜೀವನ ಬದಲಾಯಿತು.. ಈಗ ಬಹಳ ಖುಷಿಯಾಗಿದ್ದೇನೆ..

ನನ್ನ ಕೆಲಸದಲ್ಲಿ ನನಗೆ ಸಂತೋಷ ಇದೆ.. ನನ ಕೆಲಸವೇ ನನ್ನ ನೋವನ್ನು ಮರೆಸಿದೆ.. ಆಗೋದೆಲ್ಲಾ ಒಳ್ಳೆಯದಕ್ಕೆ ಅನ್ನೋ ರೀತಿ ಆ ರೀತಿ ಆಗಿದ್ದಕ್ಕೆ ನಾನೀಗ ಸಿನಿಮಾ ನಿರ್ಮಾಪಕನಾದೆ.. ಅಷ್ಟೇ ಅಲ್ಲ ನಾನು ನನ್ನ ಜೀವನದಲ್ಲಿ ಇನ್ನು ಯಾವತ್ತೂ ಮದುವೆ ಆಗೋದಿಲ್ಲ.. ಹೀಗೆ ಇದ್ದುಬಿಡ್ತೀನೆ.. ಮತ್ತೆ ಮದುವೆಯಾದರೆ ಅದನ್ನು ನಿಭಾಯಿಸುವಲ್ಲಿ ಎಡವುತ್ತೇನೆ.. ಅದಕ್ಕೆ ಮತ್ತೆ ಮತ್ತೆ ನೋವು ಅನುಭವಿಸುವುದು ಬೇಡ ಎಂದು ನಿರ್ಧಾರ ಮಾಡಿದ್ದೇನೆ.. ಎಂದರು.. ಜೊತೆಗೆ ತಮ್ಮ ಪತ್ನಿ ಯಾರು ಎಂಬ ವಿಚಾರವನ್ನು ತಿಳಿಸದೇ ಹಾಗೆಯೇ ಮುಚ್ವಿಟ್ಟು ತಮ್ಮ ನೋವಿನ ಲವ್ ಸ್ಟೋರಿಯನ್ನು ಹೇಳಿಕೊಂಡರು.. ಒಟ್ಟಿನಲ್ಲಿ ಯಾರೇ ಆಗಲಿ ಎಂತಹ ದೊಡ್ಡ ಶ್ರೀಮಂತನೇ ಆಗಲಿ ಜೀವನದಲ್ಲಿ ಎಲ್ಲರಿಗೂ ಒಂದಲ್ಲಾ ಒಂದು ಕೊರತೆ ಇದ್ದೇ ಇರುತ್ತದೆ ಎಂಬುದು ಮಾತ್ರ ಸತ್ಯ..