ಅತ್ತ ಗಂಡನಿಂದಲೂ ದೂರ ಆದಳು.. ಇತ್ತ ಪ್ರಿಯಕರನೂ ಕೈಕೊಟ್ಟ.. ಈಕೆಯ ಸ್ಥಿತಿ ಏನಾಗಿದೆ ನೋಡಿ..

0 views

ಜೀವನದಲ್ಲಿ ಪ್ರತಿಯೊಂದು ನಿರ್ಧಾರ ತೆಗೆದುಕೊಳ್ಳುವ ಮುನ್ನ ಸಾವಿರ ಬಾರಿ ಯೋಚಿಸಬೇಕು ಎಂಬ ಮಾತು ನೂರಕ್ಕೆ ನೂರು ಸತ್ಯ.. ಸುಮ್ಮನೆ ಕಂಡ ಕಂಡವರ ನಂಬಿ ಮೈ ನೀಡುವ ಹೆಣ್ಣು ಮಕ್ಕಳಿಗೆ ಇದೊಂದು ಪಾಠವಾಗಿದೆ.. ಹೌದು ಅತ್ತ ಗಂಡನಿಂದ ದೂರಾದ ಹೆಣ್ಣು ಇತ್ತ ಪ್ರಿಯಕರನಿಂದಲೂ ಮೋಸ ಹೋಗಿ ಬಂದಿರುವ ಸ್ಥಿತಿ‌ ನೋಡಿ.. ಈಕೆಯ ಹೆಸರು ಪುಷ್ಪ.. ಚಾಮರಾಜನಗರ ಜಿಲ್ಲೆಯ ಹರದನಹಳ್ಳಿಯ ಅಮಚವಾಡಿ ಎಂಬ ಗ್ರಾಮದವರು.. ಈಕೆ ಹದಿನಾಲ್ಕು ವರ್ಷವಿದ್ದಾಗ ಇವರ ತಾಯಿ ತೀರಿಕೊಳ್ಳುತ್ತಾರೆ.‌.

ನಂತರ ಅಪ್ಪನ ಆಶ್ರಯದಲ್ಲಿ ಬೆಳೆಯಬೇಕಾದ ಹೆಣ್ಣು ಗಂಡನ ಮನೆ ಸೇರುತ್ತಾಳೆ.. ಹೌದು ಪುಷ್ಪಾಳ ತಂದೆ.. ತಾಯಿ ಇಲ್ಲದ ಕಾರಣ ಹದಿನಾಲ್ಕನೇ ವಯಸ್ಸಿಗೆ ನಂಜನಗೂಡು ತಾಲೂಕಿನ ಬದನಗುಪ್ಪೆ ಗ್ರಾಮದ ನಿವಾಸಿ ಕೃಷ್ಣ ನಾಯಕ ಎಂಬುವವರಿಗೆ ಮಗಳನ್ನು ಕೊಟ್ಟು ಮದುವೆ ಮಾಡಿರುತ್ತಾರೆ.. ಚಿಕ್ಕ ವಯಸ್ಸಿಗೆ ಸಂಸಾರದ ಜವಾಬ್ದಾರಿ ನೀಗಿಸಬೇಕಾಗುತ್ತದೆ.. ಪುಷ್ಪಾಳಿಗೆ ಒಂದು ಹೆಣ್ಣು ಮಗುವೂ ಹುಟ್ಟುತ್ತದೆ.. ಆದರೆ ಆನಂತರ 5 ವರ್ಷಗಳ ಬಳಿಕ ಗಂಡನ ಜೊತೆ ಸಂಸಾರ ಮಾಡಲು ಸಾಧ್ಯವಿಲ್ಲವೆಂದು ಮದುವೆಯಾದ ಐದೇ ವರ್ಷಕ್ಕೆ ಗಂಡನಿಂದ ದೂರವಾಗಿ ತವರು ಮನೆಯಲ್ಲಿ ಅಜ್ಜಿ ಹಾಗೂ ಮಗಳ ಜೊತೆ ವಾಸ ಮಾಡಲು ಶುರು ಮಾಡುತ್ತಾರೆ..

ಜೀವನ ನಿರ್ವಹಣೆ ಮಾಡಲು.. ಹಾಗೂ ಮಗುವಿನ ಜವಾಬ್ದಾರಿ ಪುಷ್ಪಾಳ ಮೇಲೆಯೇ ಇದ್ದ ಕಾರಣ ಪುಷ್ಪಾ ಚಾಮರಾಜನಗರದ ಬ್ಯೂಟಿ ಪಾರ್ಲರ್ ಒಂದರಲ್ಲಿ ಕೆಲಸಕ್ಕೆ ಸೇರಿ ದುಡಿದು ಜೀವನ ನಡೆಸುತ್ತಿರುತ್ತಾಳೆ..‌ ಇಷ್ಟೇ ಆಗಿದ್ದರೆ ಜೀವನ ಹೇಗೋ ಮಗುವಿನ ಮುಖ ನೋಡಿಕೊಂಡು ನೆಮ್ಮದಿಯಿಂದ ಸಾಗಬಹುದಾಗಿತ್ತು.. ಆದರೆ ಅದೇ ಸಮಯದಲ್ಲಿ ಮಹೇಶ್ ಎಂಬಾತನ ಪರಿಚಯವಾಗುತ್ತದೆ.. ವೃತ್ತಿಯಲ್ಲಿ ಆಟೋ ಚಾಲಕನಾಗಿದ್ದ ಮಹೇಶ್.. ಪುಷ್ಪಾಳ ಎಲ್ಲ ವಿಚಾರವನ್ನು ಚೆನ್ನಾಗಿ ತಿಳಿದುಕೊಂಡು ನಿನಗೆ ಬಾಳು ಕೊಡುತ್ತೇನೆ ನಿನ್ನನ್ನು ಪ್ರೀತಿಸುತ್ತೇನೆ ಎಂದು ನಂಬಿಸಿ ಮೋಸ ಮಾಡಿದ್ದಾನೆ.. ತನ್ನ ಅಜ್ಜಿಯೊಂದಿಗೆ ತವರು ಮನೆಯಲ್ಲಿ ಜೀವನ ನಡೆಸುತ್ತಿದ್ದ ಪುಷ್ಪಾಳನ್ನ ಚಾಮರಾಜನಗರ ಪಟ್ಟಣಕ್ಕೆ ಕರೆಸಿಕೊಂಡ ಮಹೇಶ್..

ಮನೆ ಮಾಡಿಕೊಂಡು ಜೀವನ ನಡೆಸುತ್ತಿದ್ದ.. ಅವನನ್ನು ನಂಬಿದ ಪುಷ್ಪ ಮದುವೆಯಾಗದಿದ್ದರೂ ತನ್ನ ಮೈ ನೀಡಿ ದುಡುಕಿನ ನಿರ್ಧಾರ ತೆಗೆದುಕೊಂಡಳು.. ನಂತರ ಮದುವೆಯಾಗುವಂತೆ ಪುಷ್ಪಾ ಪೀಡಿಸಿದಾಗಲೆಲ್ಲ ಕತೆ ಹೇಳುತ್ತಿದ್ದ ಮಹೇಶ್ ಕೊನೆಗೆ ಮಾಡಿದ ಕೆಲಸವೇ ಬೇರೆ.. ಹೌದು.. ಪುಷ್ಪ ನಂತರ ಗರ್ಭಿಣಿಯಾಗಿದ್ದು.. ವಿಚಾರ ತಿಳಿದ ಮಹೇಶ್ ಅದನ್ನು ತೆಗೆಸುವಂತೆ ಪೀಡಿಸಿದ್ದಾನೆ.. ಆದರೆ ಅದಕ್ಕೆಲ್ಲಾ ಒಪ್ಪದ ಪುಷ್ಪಾಳನ್ನು ತಮಿಳುನಾಡಿಗೆ ಪ್ರವಾಸ ಕರೆದುಕೊಂಡು ಹೋಗಿ ಅಲ್ಲಿಯೇ ಖಾಸಗಿ ಆಸ್ಪತ್ರೆಯಲ್ಲಿ ಎಲ್ಲಾ ಮುಗಿಸಿಕೊಂಡು ಮರಳಿ ಮೈಸೂರಿಗೆ ಕರೆದುಕೊಂಡು ಬಂದಿದ್ದಾನೆ…

ಆದರೆ ಇದೀಗ ಮಹೇಶನಿಗೆ ಮತ್ತೊಬ್ಬ ಮಹಿಳೆಯ ಜೊತೆಗೆ ಇದೇ ರೀತಿಯ ಪ್ರೀತಿ ಹುಟ್ಟಿ ಆಕೆಯ ಜೊತೆಗೂ ಎಲ್ಲಾ ರೀತಿಯ ಸಂಬಂಧ ಇರುವುದು ತಿಳಿದ ಪುಷ್ಪ ನ್ಯಾಯ ಕೊಡಿಸುವಂತೆ ಮನವಿ ಮಾಡಿಕೊಂಡಿದ್ದಾಳೆ.. ಹೌದು ನನಗೆ ಮಹೇಶನೇ ಬೇಕು.. ಅವನ ಜೊತೆ ಬಾಳಲು ಅವಕಾಶ ಮಾಡಿಕೊಡಿ ಎಂದು ಚಾಮರಾಜನಗರ ಮಹಿಳಾ ಠಾಣೆಯ ಮೆಟ್ಟಿಲೇರಿದ್ದಾಳೆ.. ವಿಚಾರ ತಿಳಿದು ಮಹೇಶ್ ನನ್ನು ಹಿಡಿದು ತಂದು ಆತ ಮಾಡಿದ ತಪ್ಪಿಗೆ ಜೈ ಲಿಗೆಕಳುಹಿಸಿದ್ದಾರೆ.. ಒಂದು ಹೆಣ್ಣಿಗೆ ಗಂಡಿನ ಆಸರೆ ಬೇಕು ನಿಜ.. ಆದರೆ ಅದೇ ಕಾರಣಕ್ಕಾಗಿ ಈರೀತಿ ಯಾರೋ ತಿಳಿಯದವರನ್ನು ನಂಬಿ ಆತನೊಂದಿಗೆ ಸಂಬಂಧ ಹೊಂದುವ ಮುನ್ನ ಬುದ್ದಿ ತನ್ನ ಕೈಯಲ್ಲಿರಬೇಕು.. ಮಗುವಿನ ಮುಖ ನೋಡಿ ನಿರ್ಧಾರ ಮಾಡಿದಿದ್ದರೆ ಇಂದು ಈ ರೀತಿ ಮಹೇಶನೇ ಬೇಕೆಂದು ಅಲೆಯುವ ಪರಿಸ್ಥಿತಿ ಬರುತ್ತಿರಲಿಲ್ಲವೇನೋ.. ಒಟ್ಟಿನಲ್ಲಿ ಅತ್ತ ಗಂಡನೂ ಇಲ್ಲ.. ಇತ್ತ ಇವನೂ ಇಲ್ಲ ಎನ್ನುವಂತಾಯಿತು..