ಪುಟ್ಟ ಗೌರಿ ಮದುವೆ ಧಾರಾವಾಹಿಯ ಬಾಲ ನಟಿ ಹೇಗಾಗಿದ್ದಾರೆ ನೋಡಿ..

0 views

ಪುಟ್ಟ ಗೌರಿ‌ ಮದುವೆ.. ಕೆಲ ವರ್ಷಗಳ ಹಿಂದೆ ಕಿರಿತೆರೆಯಲ್ಲಿ ಸಂಚಲನ ಮೂಡಿಸಿದ್ದ ಧಾರಾವಾಹಿ.. ಕಲರ್ಸ್ ಕನ್ನಡದಲ್ಲಿ ಪರಮೇಶ್ವರ್ ಗುಂಡ್ಕಲ್ ಅವರು ವಾಹಿನಿಯಲ ಪ್ರೋಗ್ರಾಮಿಂಗ್ ಹೆಡ್ ಆಗಿ ಬಂದ ಸಂದರ್ಭದಲ್ಲಿ ಮೊದಲು ಶುರು ಮಾಡಿದ ಧಾರಾವಾಹಿ ಪುಟ್ಟ ಗೌರಿ ಮದುವೆ..

ಹಿಂದಿ ಧಾರಾವಾಹಿಯ ರೀಮೇಕ್ ಆದರೂ ಸಹ ಕನ್ನಡದ ನೇಟಿವಿಟಿಗೆ ಹೊಂದಾಣಿಕೆ ಆಗುವಂತೆ ಕತೆಯನ್ನು ಬದಲಿಸಿಕೊಂಡು ದೊಡ್ಡ ಯಶಸ್ಸು ಪಡೆದರು.. ಸಂಜೆ ಏಳು ಗಂಟೆ ಆಯಿತೆಂದರೆ ಸಾಕು ಬಹುತೇಕರ ಮನೆಯ ಟಿವಿಗಳಲ್ಲಿ ಇದು ಪುಟ್ಟ ಗೌರಿ ಮದುವೆ ಎಂಬ ಹಾಡು ಕೇಳಿ ಬರುತಿತ್ತು.. ಇನ್ನು ಪುಟ್ಟ ಗೌರಿ ಮದುವೆ ಧಾರಾವಾಹಿ ಮೂಲಕ ಕನ್ನಡ ಕಿರುತೆರೆಗೆ ಎಂಟ್ರಿ ಕೊಟ್ಟ ಗೌರಿ ಹಾಗೂ ಮಹೇಶ ಇಬ್ಬರೂ ಸಹ ಸಿಕ್ಕಾಪಟ್ಟೆ ಫೇಮಸ್ ಆದರು.. ರಾಜ್ಯದಲ್ಲಿ ಎಲ್ಲಿಯೇ ಹೋದರು ಅವರನ್ನು ಗುರುತಿಸಿ ತಮ್ಮ ಮನೆಯ ಮಕ್ಕಳಂತೆ ನೋಡುತ್ತಿದ್ದರು..

ಇನ್ನು ಪುಟ್ಟ ಗೌರಿ ಮದುವೆ ಆ ಕಾಲಕ್ಕೆ ದೊಡ್ಡ ರೇಟಿಂಗ್ ಅನ್ನೇ ಪಡೆದು ದಾಖಲೆ ಬರೆದಿತ್ತು.. ನಂತರ ಪುಟ್ಟ ಗೌರಿ ದೊಡ್ಡ ಗೌರಿಯಾದಳು.. ಪಾತ್ರಧಾರಿಗಳು ಬದಲಾದರು.. ಆಗಲೂ ಸಹ ಬಹಳಷ್ಟು ವರ್ಷಗಳ ಕಾಲ ಧಾರಾವಾಹಿ ಪ್ರಸಾರಗೊಂಡು ಮನೆ ಮಾತಾಗಿತ್ತು.. ಇನ್ನು ಸಾಮಾಜಿಕ ಜಾಲತಾಣದಲ್ಲಿ ಟ್ರೋಲ್ ಗಳಾಗಿದ್ದೂ ಉಂಟು.. ಆ ಧಾರಾವಾಹಿಯ ಯಶಸ್ಸು ಎಷ್ಟರ ಮಟ್ಟಕ್ಕಿತ್ತು ಎಂದರೆ ಆ ಧಾರಾವಾಹಿ ಮುಗಿದರೂ ಕೂಡ ಮಂಗಳ ಗೌರಿ ಎಂಬ ಧಾರಾವಾಹಿಯನ್ನು ಅದೇ ಸಮಯಕ್ಕೆ ಪಾತ್ರಗಳನ್ನು ಬದಲಿಸಿ ಪ್ರಸಾರ ಮಾಡಲಾಗುತ್ತಿದ್ದು ಈಗಲೂ ಸಹ ಕಲರ್ಸ್ ಕನ್ನಡ ವಾಹಿನಿಯ ನಂಬರ್ ಒನ್ ಧಾರಾವಾಹಿ ಅದೇ ಆಗಿದೆ..

ಇನ್ನು ಪುಟ್ಟ ಗೌರಿ ಮದುವೆ ಧಾರಾವಾಹಿಯಲ್ಲಿ ಕಾಣಿಸಿಕೊಂಡ ಬಾಲ ಕಲಾವಿದರೆಲ್ಲಾ ಸದ್ಯ ಏನಾಗಿದ್ದಾರೆ ಎಂಬ ಕುತೂಹಲ ಎಲ್ಲರಿಗೂ ಇದ್ದೇ ಇದೆ.. ಬಹಳಷ್ಟು ವರ್ಷಗಳಾದ್ದರಿಂದ ಮಹೇಶ ಹಾಗೂ ಗೌರಿ ಪಾತ್ರಧಾರಿ ಸಾನಿಯಾ ಐಯರ್ ಇಬ್ಬರೂ ಇದೀಗ ತಮ್ಮ ವಿಧ್ಯಾಭ್ಯಾಸ ಮುಗಿಸಿದ್ದು ವೃತ್ತಿ ಜೀವನ ಪ್ರಾರಂಭ ಮಾಡುವ ಹಂತದಲ್ಲಿದ್ದಾರೆ..

ಹೌದು ಮಹೇಶ ಸದ್ಯ ತನ್ನ ವಿದ್ಯಾಭ್ಯಾಸ ಮುಗಿಸಿ ಸಿನಿಮಾದಲ್ಲಿ ಹೀರೋ ಆಗಬೇಕೆಂಬ ಕನಸಿಟ್ಟುಕೊಂಡು ತಯಾರಿ‌ ನಡೆಸುತ್ತಿದ್ದಾರೆ.. ಇತ್ತ ಗೌರಿ ಪಾತ್ರಧಾರಿ ಸಾನಿಯಾ ಐಯರ್ ಕೂಡ ತಮ್ಮ ವಿಧ್ಯಾಭ್ಯಾಸ ಮುಗಿಸಿದ್ದು ಮತ್ತೆ ಬಣ್ಣ ಹಚ್ಚಲು ಸಿದ್ಧರಾಗಿದ್ದಾರೆ.. ಹೌದು ಸಾನಿಯಾ ಪುಟ್ಟ ಗೌರಿ ಧಾರಾವಾಹಿ ಬಿಟ್ಟರೆ ಆಲ್ಬಂ ಸಾಂಗ್ ಒಂದರಲ್ಲಿ ನಟಿಸಿದ್ದರು.. ಆನಂತರ ತನ್ನ ವಿಧ್ಯಾಭ್ಯಾಸದ ಕಡೆ ಗಮನ ಕೊಟ್ಟು ಬೇರೆ ಎಲ್ಲಿಯು ಕಾಣಿಸಿಕೊಂಡಿರಲಿಲ್ಲ…

ಇದೀಗ ಗುಲಾಬ್ ಜಾಮೂನ್ ಎಂಬ ಮೈಕ್ರೋ ಸಿನಿಮಾವೊಂದರಲ್ಲಿ ಬಣ್ಣ ಹಚ್ಚಿದ್ದು ತೆರೆ ಮೇಲೆ ಬರಲು ಸಿದ್ಧರಾಗಿದ್ದಾರೆ.. ಗುಲಾಬ್ ಜಾಮೂನ್ ಸಿನಿಮಾ ಪ್ರೇಮ ಕತೆಯಾಗಿದ್ದು ಯುವ ಜನತೆಗೆ ಸಂದೇಶವೂ ಇದೆ ಎನ್ನುತ್ತಾರೆ ಸಿನಿಮಾದ ನಾಯಕ ಸಂದೀಪ್.. ಒಟ್ಟಿನಲ್ಲಿ ಇನ್ನೂ ಪುಟ್ಟ ಗೌರಿ ಧಾರಾವಾಹಿ ಕಣ್ಣ ಮುಂದೆಯೇ ಇದ್ದ ಹಾಗೆ ಇದೆ.‌ ಅದಾಗಲೇ ಕಲಾವಿದರೆಲ್ಲಾ ದೊಡ್ಡವರಾಗಿ ತೆರೆ ಮೇಲೆ ಬರುತ್ತಿದ್ದು ಸಮಯ ಇಷ್ಟು ವೇಗವಾಗಿ ಸಾಗುತ್ತಿದೆಯಾ ಎನಿಸುತ್ತಿದೆ.. ಅದೇನೇ ಇರಲಿ ಸದ್ಯ ಹೀರೋಯಿನ್ ಆಗಿ ತೆರೆ ಮೇಲೆ ಬರಲು ಸಿದ್ಧರಾಗಿರುವ ಪುಟ್ಟ ಗೌರಿ ಸಾನಿಯಾ ಗೆ ಶುಭವಾಗಲಿ..