ಲಾಜಿಕ್ ಮಿಸ್ ಮಾಡಿಕೊಂಡು ಯಡವಟ್ಟು‌ ಮಾಡಿದ ಪುಟ್ಟಕ್ಕನ ಮಕ್ಕಳು ಧಾರಾವಾಹಿ ತಂಡ..

0 views

ಪುಟ್ಟಕ್ಕನ ಮಕ್ಕಳು ಸಧ್ಯ ಕನ್ನಡ ಕಿರುತೆರೆಯ ಹೊಸ ಸೆನ್ಸೇಷನಲ್ ಧಾರಾವಾಹಿ ಎಂದರೂ ತಪ್ಪಾಗಲಾರದು.. ಕನ್ನಡ ಕಿರುತೆರೆಯ ಸ್ಟಾರ್ ನಿರ್ದೇಶಕ ಅಶ್ವಿನಿ ನಕ್ಷತ್ರ ಜೋಡಿ ಹಕ್ಕಿ ಜೊತೆಜೊತೆಯಲಿ ಹೀಗೆ ಸಾಲು ಸಾಲು ಹಿಟ್ ಧಾರಾವಾಹಿಗಳನ್ನು ನೀಡಿದ ಆರೂರು ಜಗದೀಶ್ ಅವರ ನಿರ್ದೇಶನ ಹಾಗೂ ನಿರ್ಮಾಣದಲ್ಲಿ ಮೂಡಿ ಬರುತ್ತಿರುವ ಹೊಸ ಧಾರಾವಾಹಿ ಪುಟ್ಟಕ್ಕನ ಮಕ್ಕಳು ಹೊಸತನದ ಜೊತೆಗೆ ಕಳೆದ ಒಂದು ವಾರದಿಂದ ಪ್ರಸಾರವಾಗುತ್ತಾ ದೊಡ್ಡ ಯಶಸ್ಸನ್ನು ಸಹ ಪಡೆದಿದೆ ಎನ್ನಬಹುದು.. ಆದರೆ ಇಂತಹ ಧಾರಾವಾಹಿಯಲ್ಲಿ ದೊಡ್ಡದೊಂದು ಯಡವಟ್ಟು ನಡೆದಂತೆ ಕಾಣುತ್ತಿದೆ.. ಹೌದು ಧಾರಾವಾಹಿಯ ಕತೆತಲ್ಲಿ ಲಾಜಿಕ್ ಇಲ್ಲದೇ ಸನ್ನಿವೇಶವನ್ನು ತೋರಿಸಲಾಗಿದೆ..

ಹೌದು ಎಲ್ಲರಿಗೂ ತಿಳಿದಿರುವಂತೆ ಪುಟ್ಟಕ್ಕನ ಮಕ್ಕಳು ಧಾರಾವಾಹಿಯಲ್ಲಿ ಪ್ರಮುಖ ಆಕರ್ಷಣೆ ಪುಟ್ಟಕ್ಕನ ಕುಟುಂಬ..‌ ಇನ್ನು ಈ ಕುಟುಂಬಕ್ಕೆ ಸಾಕಷ್ಟು ಕುಟುಂಬಗಳ ನೆಂಟು ಕಂಡು ಬರುತ್ತದೆ.. ಹೌದು ಪುಟ್ಟಕ್ಕನಿಗೆ ಮೂರು ಹೆಣ್ಣು ಮಕ್ಕಳು.. ಅತ್ತ ಪುಟ್ಟಕ್ಕನಿಂದ ದೂರಾದ ಗಂಡನಿಗೆ ಒಬ್ಬ ಗಂಡು ಮಗ.. ಆ ಕುಟುಂಬಕ್ಕೂ ಪುಟ್ಟಕ್ಕನಿಗೂ ಆಗಬಾರದೇ ಇದ್ದರೂ ಸಹ ಎರಡನೇ ಹೆಂಡತಿಯ ಮಗ ಒಳ್ಳೆಯ ಗುಣವುಳ್ಳವನಾಗಿದ್ದು ಪುಟ್ಟಕ್ಕ ಹಾಗೂ ಮಕ್ಕಳ ಜೊತೆ ಒಳ್ಳೆಯ ಬಾಂಧವ್ಯವನ್ನು ಹೊಂದಿದ್ದಾನೆ.. ಇತ್ತ ಕಥಾ ನಾಯಕ ಅಂದರೆ ಸ್ನೇಹಾಳ ಜೋಡಿಯಾಗುವ ನಾಯಕ ಕಂಠಿ ಕುಟುಂಬ ಅಂದರೆ ಬಡ್ಡಿ ಬಂಗಾರಮ್ಮನ ಕುಟುಂಬ ಸಧ್ಯ ಪುಟ್ಟಕ್ಕನ ಊರಿನ ಪಕ್ಕದ ಊರು ಎಂದು ತೋರಲಾಗಿದೆ..

ಇನ್ನು ಇತ್ತ ಮೊನ್ನೆಮೊನೆಯಷ್ಟೇ ಲಾಯರ್ ಪಾತ್ರದ ಎಂಟ್ರಿಯಾಗಿದ್ದು ಲಾಯರ್ ಅನ್ನು ಸ್ನೇಹ ಅಣ್ಣನೆಂದು ಕರೆದಳು.. ಇತ್ತ ಪುಟ್ಟಕ್ಕನೂ ಸಹ ಆತನನ್ನು ಪ್ರೀತಿಯಿಂದಲೇ ಮಾತನಾಡಿಸಿ ಕಳುಹಿಸಿದರು.. ಇನ್ನು ಆ ಲಾಯರ್ ಸಂಬಂಧದಲ್ಲಿ ಸ್ನೇಹಾಳ ಅಣ್ಣನೂ ಇರಬಹುದು ಅಥವಾ ಅಣ್ಣ ಎನ್ನುವಷ್ಟು ಆತ್ಮೀಯನೆಂದು ತೋರಿಸಲಾಗಿದೆ ಸರಿ.. ಇತ್ತ ಮೊನ್ನೆಯ ಸಂಚಿಕೆಯಲ್ಲಿ ಸ್ನೇಹಾಳಿಗೆ ಬಡ್ಡಿ ಬಂಗಾರಮ್ಮ ಯಾರು ಎಂಬ ವಿಚಾರವೇ ತಿಳಿದಿಲ್ಲ.. ಆಕೆ ಯಾರು ಎಂದು ಶಾಂತಮ್ಮನ ಬಳಿ‌ ಕೇಳಿ ತಿಳಿದುಕೊಂಡಳು ಸರಿ..

ಪಕ್ಕದ ಊರಿನಲ್ಲಿಯೇ ಬಹಳ ಫೇಮಸ್ ಆಗಿರುವ ಬಡ್ಡಿ ಬಂಗಾರಮ್ಮ ಯಾರೆಂಬುದೇ ಸ್ನೇಹಾಳಿಗೆ ಗೊತ್ತಿಲ್ಲ ಎನ್ನುವಂತೆ ತೋರಿದ್ದಾರೆ ಅದೂ ಸರಿ.. ಆದರೆ ಇಂದಿನ ಸಂಚಿಕೆಯಲ್ಲಿ ನಿರ್ದೇಶಕರು ಇದರಲ್ಲೊಂದು ತಿರುವು ನೀಡಿದ್ದು ಬಡ್ಡಿ ಬಂಗಾರಮ್ಮ ಅವರ ಅಳಿಯ ಸ್ನೇಹಾಳ ಅಣ್ಣ ಲಾಯರ್ ಎಂಬುದನ್ನು ತೋರಿದ್ದಾರೆ.. ಹೌದು ಬಡ್ಡಿ ಬಂಗಾರಮ್ಮನ ಮಗಳು ಅಂದರೆ ಕಂಠಿ ತಂಗಿಗೂ ಹಾಗೂ ಸ್ನೇಹಾಳ ಅಣ್ಣ ಲಾಯರ್ ಗೂ ಮದುವೆಯಾಗಿದ್ದು ಆಕೆ ಗರ್ಭಿಣಿಯಾಗಿದ್ದು ನಂತರ ಎರಡೂ ಕುಟುಂಬದ ನಡುವೆ ಮನಸ್ತಾಪ ಮೂಡಿದಂತೆ ತೋರಿದ್ದಾರೆ.. ಆದರೆ ಇದರಲ್ಲೇ ಪ್ರೇಕ್ಷಕರಿಗೆ ಸಣ್ಣದೊಂದು ಲಾಜಿಕ್ ಮಿಸ್ಸಾಗಿದೆ ಎನಿಸುತ್ತಿದೆ..

ಹೌದು ಸ್ನೇಹಾಳಿಗೆ ತನ್ನ ಅಣ್ಣ ಲಾಯರ್ ನ ಹೆಂಡತಿ ಯಾರೆಂಬುದೇ ತಿಳಿದಿಲ್ಲವಾ.. ತನ್ನ ಅಣ್ಣನ ಹೆಂಡತಿ ಬಡ್ಡಿ ಬಂಗಾರಮ್ಮನ ಮಗಳು ಎಂಬುದೇ ತಿಳಿದಿಲ್ಲವಾ ಅನ್ನೋದೆ ಪ್ರೇಕ್ಷಕರ ಪ್ರಶ್ನೆ.. ತನ್ನ ಅಣ್ಣನ ಮದುವೆಗೆ ಹೋಗದಿದ್ದರೂ ಆನಂತರ ಅತ್ತಿಗೆಯನ್ನು ಭೇಟಿಯೇ ಮಾಡಿಲ್ಲವಾ.. ಅತ್ತಿಗೆಯ ಕುಟುಂಬದ ಬಗ್ಗೆ ಸಣ್ಣ ಮಾಹಿತಿಯೂ ಇಲ್ಲವಾ.. ಅದೂ ಸಹ ಹಳ್ಳಿಗಳಲ್ಲಿ ದೂರದ ಸಂಬಂಧಗಳ ನೆಂಟರನ್ನೇ ಸರಾಗವಾಗಿ ಹೇಳುವಾಗ ಹಳ್ಳಿಯ ಕತೆಯುಳ್ಳ ಪುಟ್ಟಕ್ಕನ ಮಕ್ಕಳಲ್ಲಿ ಹತ್ತಿರದ ಸಂಬಂಧದ ಕುಟುಂಬದ ಬಗ್ಗೆಯೇ ಅದರಲ್ಲಿಯೂ ಅಣ್ಣನ ಹೆಂಡತಿಯ ಕುಟುಂವದ ಬಗ್ಗೆಯೇ ಗೊತ್ತಿಲ್ಲದಂತೆ ತೋರಿಸಲಾಗಿದೆ..

ಅದೂ ಸಹ ಅಪರಿಚಿತರು ಯಾರದ್ದೋ ಬಗ್ಗೆ ಕೇಳುವಂತ ದೃಶ್ಯ ತೋರಿಸಲಾಗಿದ್ದು ಮುಂದೆ ಈ ಲಾಜಿಕ್ಕನ್ನು ಯಾವ ರೀತಿ ಮ್ಯಾಚ್ ಮಾಡುವರೋ ಕಾದು ನೋಡಬೇಕಿದೆಯಷ್ಟೇ.. ಸಧ್ಯ ಇಂದಿನ ಸಂಚಿಕೆ ನೋಡಿರುವ ಪ್ರೇಕ್ಷಕರು ಸಾಕಷ್ಟು ಮಂದಿಗೆ ಈ ವಿಚಾರ ಮನದಟ್ಟಾಗಿದ್ದು ವೀಡಿಯೋಗಳಲ್ಲಿ ಕಮೆಂಟ್ ಮಾಡಿದ್ದೂ ಉಂಟು.. ಇಂತಹ ವಿಚಾರ ನಿರ್ದೇಶಕರ ಅರಿವಿಗೆ ಬಂದಿಲ್ಲ ಎನ್ನಲು ಅಸಾಧ್ಯ.. ಬಹುಶಃ ಮಿಸ್ಸಾಗಿರುವ ಲಾಜಿಕ್ ಅನ್ನು ಮುಂದೆ ಯಾವುದಾದರೂ ಟ್ವಿಸ್ಟ್ ಕೊಟ್ಟು ಸರಿ ಮಾಡುವರಾ ಅಥವಾ ಇದರಲ್ಲೂ ನಿಜವಾಗಿ ಯಾವುದಾದರೂ ತಿರುವು ಇದೆಯಾ ಕಾದು ನೋಡಬೇಕಷ್ಟೇ..