ಟಿ ಆರ್ ಪಿ ಯನ್ನು ಚಿಂದಿ ಮಾಡಿದ ಪುಟ್ಟಕ್ಕನ ಮಕ್ಕಳು.. ಮೊದಲ ವಾರ ಪಡೆದ ರೇಟಿಂಗ್ ಎಷ್ಟು ಗೊತ್ತಾ.. ಬೆಚ್ಚಿಬಿದ್ದ ಕಿರುತೆರೆ ಮಂದಿ..

0 views

ಕನ್ನಡ ಕಿರುತೆರೆ ನಿಜಕ್ಕೂ ಬೇರೆ ಲೆವಲ್ ಗೆ ಹೋಗುತ್ತಿದೆ ಎಂಬುದು ಅಕ್ಷರಶಃ ಸತ್ಯದ ಮಾತು.. ಕಳೆದ ಎರಡು ವರ್ಷದ ಹಿಂದೆ ಜೊತೆಜೊತೆಯಲಿ ಧಾರಾವಾಹಿ ಇದೇ ರೀತಿ ಟಿ ಆರ್ ಪಿ ವಿಚಾರದಲ್ಲಿ ದೊಡ್ಡ ಮಟ್ಟದಲ್ಲಿಯೇ ಸದ್ದು ಮಾಡಿ ದಾಖಲೆ ಬರೆದಿತ್ತು.. ಅಷ್ಟೇ ಅಲ್ಲದೆ ಕನ್ನಡ ಮಾತ್ರವಲ್ಲದೇ ಅಕ್ಕ ಪಕ್ಕದ ಕಿರುತೆರೆ ಇಂಡಸ್ಟ್ರಿಯವರೂ ಸಹ ಕನ್ನಡ ಕಿರುತೆರೆ ಕಡೆಗೆ ತಿರುಗಿ ನೋಡುವಂತಾಗಿತ್ತು.. ಇನ್ನು ಇದೀಗ ಆ ಎಲ್ಲಾ ದಾಖಲೆಗಳನ್ನು ಪುಟ್ಟಕ್ಕನ ಮಕ್ಕಳು ಚಿಂದಿ ಮಾಡಿದ್ದು ಕಿರುತೆರೆ ಮಂದಿ ಪುಟ್ಟಕ್ಕನ ಮಕ್ಕಳು ಧಾರಾವಾಹಿಯ ಮೊದಲ ವಾರದ ಟಿ ಆರ್ ಪಿ ನೋಡಿ ಆಶ್ಚರ್ಯ ಪಟ್ಟಿರೋದಂತೂ ಸತ್ಯ.. ಹೌದು ಜೊತೆಜೊತೆಯಲಿ ನಿರ್ದೇಶಕರಾದ ಆರೂರು ಜಗದೀಶ್ ಅವರ ನಿರ್ದೇಶನದಲ್ಲಿ ಮೂಡಿ ಬರುತ್ತಿರುವ ಹೊಸ ಧಾರಾವಾಹಿ ಪುಟ್ಟಕ್ಕನ ಮಕ್ಕಳು ಜನರ ಮನಗೆಲ್ಲುವಲ್ಲಿ ಯಶಸ್ವಿಯಾಗಿದೆ.. ಕಳೆದ ವಾರ ತನ್ನ ಪ್ರಸಾರವನ್ನು ಶುರು ಮಾಡಿದ ಪುಟ್ಟಕ್ಕನ ಮಕ್ಕಳು ಜನರಿಂದ ಒಳ್ಳೆಯ ಪ್ರತಿಕ್ರಿಯೆಯನ್ನೇ ಪಡೆದಿತ್ತು..

ಕನ್ನಡ ಸಿನಿಮಾ ಇಂಡಸ್ಟ್ರಿಯ ಕಲಾದೇವತೆಯೇ ಎನ್ನಬಹುದಾದ ಉಮಾಶ್ರೀ ಅವರು ಕಿರುತೆರೆಗೆ ಕಾಲಿಟ್ಟ ಧಾರಾವಾಹಿ ಪುಟ್ಟಕ್ಕನ ಮಕ್ಕಳು.. ಸಾಕಷ್ಟು ದೊಡ್ಡ ದೊಡ್ಡ ಕಲಾವಿದರ ಜೊತೆಗೆ ಬಹಳಷ್ಟು ಹೊಸ ಕಲಾವಿದರ ತಂಡದ ಜೊತೆಗೆ ಕಳೆದ ಒಂದು ವರ್ಷದಿಂದ ಸಕಲ ಪೂರ್ವ ತಯಾರಿ ಮಾಡಿಕೊಂಡು ಕಳೆದ ವಾರ ತೆರೆ ಮೇಲೆ ಬಂದ ಆರೂರು ಜಗದೀಶ್ ಅವರಿಗೆ ಪುಟ್ಟಕ್ಕನ ಮೆಸ್ ಟಿ ಆರ್ ಪಿಯಲ್ಲಿ ಹಬ್ಬದೂಟವನ್ನೇ ನೀಡಿದೆ ಎನ್ನಬಹುದು.. ಹೌದು ಪುಟ್ಟಕ್ಕನ ಮಕ್ಕಳು ಧಾರಾವಾಹಿ ಶುರು ಮಾಡುವ ಮುನ್ನ ಒಂದು ವರ್ಷದ ಹಿಂದೆಯೇ ಧಾರಾವಾಹಿಗಾಗಿ ಉಮಾಶ್ರೀ ಅವರನ್ನು ಹಾಗೂ ಮುಖ್ಯ ಪಾತ್ರದ ಕಲಾವಿದರನ್ನು ಆಯ್ಕೆ ಮಾಡಿಕೊಳ್ಳಲಾಗಿತ್ತು..

ಒಂದು ವರ್ಷದಿಂದ ಧಾರಾವಾಹಿಯ ಕತೆ ಹಾಗೂ ಚಿತ್ರಕತೆಯ ಬಗ್ಗೆ ಸಾಕಷ್ಟು ಚರ್ಚೆಗಳು ನಡೆದು ಜೀ ವಾಹಿನಿಯ ಫಿಕ್ಷನ್ ತಂಡ ರಾಘವೇಂದ್ರ ಹುಣಸೂರು ಅವರು ಹಾಗೂ ಆರೂರು ಜಗದೀಶ್ ಅವರು ಎಲ್ಲರೂ ಸಹ ಕೂತು ದೊಡ್ಡ ಮಟ್ಟದ ಸಕ್ಸಸ್ ತರಲೆಂದೇ ಎಲ್ಲಾ ರೀತಿ ಯೋಚನೆ ಮಾಡಿ ಕತೆಯನ್ನು ತಯಾರಿಸಿದರು.. ಇನ್ನು ಕೆಲ ತಿಂಗಖ ಹಿಂದೆ ದೇವಸ್ಥಾನವೊಂದರಲ್ಲಿ ಧಾರಾವಾಹಿಯ ಮುಹೂರ್ತ ನೆರವೇರಿಸಿ ಕಳೆದ ವಾರದಿಂದ ಪ್ರಸಾರ ಶುರು ಮಾಡಿದರು.. ಜನರಿಂದ ಒಳ್ಳೆಯ ಮಾತು ಕೇಳಿ ಬಂದರೂ ಸಹ ರೇಟಿಂಗ್ ನೋಡುವವರೆಗೆ ಧಾರಾವಾಹಿ ತಂಡಕ್ಕೆ ಹಾಗೂ ವಾಹಿನಿಯವರಿಗೆ ಕುತೂಹಲ ಇದ್ದೇ ಇರುತ್ತದೆ.. ಇದೀಗ ಆ ಎಲ್ಲಾ ಕುತೂಹಲಕ್ಕೂ ತೆರೆ ಬಿದ್ದಿದ್ದು ಪುಟ್ಟಕ್ಕನ ಮಕ್ಕಳು ಧಾರಾವಾಹಿಯ ಮೊದಲ ವಾರದ ರೇಟಿಂಗ್ ಪ್ರಕಟವಾಗಿದೆ..

ಹೌದು ಕಳೆದ ಎರಡು ವರ್ಷದ ಹಿಂದೆ ಶುರುವಾದ ಜೊತೆಜೊತೆಯಲಿ ಮೊದಲ ವಾರ 11.8 ಟಿ ಆರ್ ಪಿ ಪಡೆದುಕೊಂಡಿತ್ತು.. ಅದು ದಾಖಲೆಯೂ ಆಗಿತ್ತು.. ಮೊದಲ ವಾರ ಯಾವ ಧಾರಾವಾಹಿಯೂ ಆ ಮಟ್ಟದ ರೇಟಿಂಗ್ ಪಡೆದುಕೊಂಡಿರಲಿಲ್ಲ.. ಆದರೀಗ ಪುಟ್ಟಕ್ಕನ ಮಕ್ಕಳು ಎಲ್ಲಾ ದಾಖಲೆಗಳನ್ನು ಚಿಂದಿ ಮಾಡಿದೆ.. ಹೌದು ಪುಟ್ಟಕ್ಕನ ಮಕ್ಕಳು ಧಾರಾವಾಹಿ ಮೊದಲ ವಾರವೇ ಬರೋಬ್ಬರಿ 13.5 ಟಿವಿಆರ್ ಪಡೆದುಕೊಂಡಿದ್ದು ಹೊಸ ದಾಖಲೆ ಸೃಷ್ಟಿಸಿದೆ. ಹೌದು ಆರೂರು ಜಗದೀಶ್ ಅವರು ತಮ್ಮದೇ ದಾಖಲೆಯನ್ನು ತಾವೇ ಹೊಸ ಧಾರಾವಾಹಿಯ ಮೂಲಕ ಮುರಿದಂತಾಗಿದೆ..

ಇನ್ನು ಪುಟ್ಟಕ್ಕನ ಮಕ್ಕಳು 13.5 ಟಿವಿಆರ್ ಪಡೆದು ಮೊದಲ ಸ್ಥಾನದಲ್ಲಿದ್ದರೆ.. ಗಟ್ಟಿಮೇಳ ಎರಡನೇ ಸ್ಥಾನ, ಹಿಟ್ಲರ್ ಕಲ್ಯಾಣ ಮೂರನೇ ಸ್ಥಾನ, ಪಾರು ಹಾಗೂ ಜೊತೆಜೊತೆಯಲಿ ನಾಲ್ಕನೇ ಸ್ಥಾನ, ಸತ್ಯ ಐದನೇ ಸ್ಥಾನ, ಮಂಗಳ ಗೌರಿ ಮದುವೆ ಆರನೇ ಸ್ಥಾನ, ನಾಗಿಣಿ ಏಳು, ನನ್ನರಸಿ ರಾಧೆ ಎಂಟು, ಗಿಣಿರಾಮ ಒಂಭತ್ತು, ಗೀತಾ ಹತ್ತು, ಕನ್ನಡತಿ ಹಾಗೂ ಲಕ್ಷಣ ಹನ್ನೊಂದನೇ ಸ್ಥಾನ, ನಂಬರ್ ಒನ್ ಸೊಸೆ ಹನ್ನೆರಡನೇ ಸ್ಥಾನ, ನಮ್ಮನೆ ಯುವರಾಣಿ ಹಾಗೂ ಮರಳಿ ಮನಸಾಗಿದೆ ಹದಿಮೂರನೇ ಸ್ಥಾನ, ಕೃಷ್ಣ ತುಳಸಿ ಹದಿನಾಲ್ಕು, ಕಮಲಿ ಹದಿನೈದು, ನೇತ್ರಾವತಿ ಹದಿನಾರು, ಅಣ್ಣ ತಂಗಿ ಹದಿನೇಳು, ತ್ರಿನಯನಿ ಹದಿನೆಂಟು, ನಯನತಾರ ಹಾಗೂ ಪುನರ್ ವಿವಾಹ ಹತ್ತೊಂಭತ್ತು ಹಾಗೂ ಸುಂದರಿ ಧಾರಾವಾಹಿ ಇಪ್ಪತ್ತನೇ ಸ್ಥಾನ ಪಡೆದುಕೊಂಡಿದೆ..

ಒಟ್ಟಿನಲ್ಲಿ ಟಾಪ್ ಐದು ಸ್ಥಾನಗಳನ್ನು ಜೀ ಕನ್ನಡ ವಾಹಿನಿಯ ಧಾರಾವಾಹಿಗಳೇ ಪಡೆದಿದ್ದು ಕನ್ನಡ ಕಿರುತೆರೆಯ ನಂಬರ್ ಒನ್ ವಾಹಿನಿಯಾಗಿ ತನ್ಮ ಯಶಸ್ಸಿನ ಪಯಣವನ್ನು ಮುಂದುವರೆಸುತ್ತಿದೆ.. ಇನ್ನು ಇತ್ತ ಪುಟ್ಟಕ್ಕನ ಮಕ್ಕಳು ಮೊದಲ ವಾರವೇ ಭರ್ಜರಿ ರೇಟಿಂಗ್ ಪಡೆದು ಸಿಕ್ಕಾಪಟ್ಟೇ ಖುಷಿಯಲ್ಲಿದ್ದು ಧಾರಾವಾಹಿ ತಂಡ ಸಂಭ್ರಮ ಆಚರಿಸಿದೆ.. ಇನ್ನೂ ಧಾರಾವಾಹಿಯಲ್ಲಿ ಎಲ್ಲರ ಮನಗೆದ್ದಿರುವ ಧಾರಾವಾಹಿಯ ನಾಯಕ ಹಾಗೂ ನಾಯಕಿ ಪಾತ್ರಧಾರಿ ಕಂಠಿ ಹಾಗೂ ಸ್ನೇಹ ಜೋಡಿ ಸಧ್ಯ ಸಿಕ್ಕಾಪಟ್ಟೆ ಖುಷಿಯಲ್ಲಿದ್ದು ಸಂತೋಷ ಹಂಚಿಕೊಂಡಿದ್ದಾರೆ.. ವಿಶೇಷ ಎಂದರೆ ಸ್ನೇಹ ಪಾತ್ರದ ನಟಿ ಈ ಹಿಂದೆ ಅಭಿನಯಿಸಿದ್ದ ಲಗ್ನ ಪತ್ರಿಕೆ ಧಾರಾವಾಹಿ ರೇಟಿಂಗ್ ಕಡಿಮೆ ಎಂಬ ಕಾರಣಕ್ಕೆ ಕೆಲವೇ ತಿಂಗಳಿಗೆ ಮುಕ್ತಾಯವಾಗಿತ್ತು..

ಆದರೆ ಸೋಲನ್ನು ಸಕಾರಾತ್ಮಕವಾಗಿ ತೆಗೆದುಕೊಂಡು ಮತ್ತೆ ಪುಟ್ಟಕ್ಕನ ಮಕ್ಕಳು ಮೂಲಕ ತೆರೆ ಮೇಲೆ ಬಂದು ಮೊದಲ ವಾರವೇ ಜನಮೆಚ್ಚುಗೆ ಪಡೆದು ಅದೇ ರೇಟಿಂಗ್ ವಿಚಾರದಲ್ಲಿ ಎಲ್ಲಾ ದಾಖಲೆಗಳನ್ನು ಮುರಿದಿದೆ.. ಬಹುಶಃ ಇದಕ್ಕೇ ಹೇಳೋದು ಕಾಲ ಒಂದೇ ರೀತಿ ಇರುವುದಿಲ್ಲ.. ಸಮಯ ಎಲ್ಲರಿಗೂ ಒಂದು ಅವಕಾಶ ನೀಡೇ ನೀಡುತ್ತದೆ ಎಂದು.. ಇನ್ನು ಸಧ್ಯ ಪುಟ್ಟಕ್ಕನ ಮಕ್ಕಳು ಧಾರಾವಾಹಿ ಮಿಕ್ಕೆಲ್ಲಾ ಧಾರಾವಾಹಿಗಳಂತೆ ಶುರುವಿನಲ್ಲಿ ದೊಡ್ಡ ಮಟ್ಟದಲ್ಲಿಯೇ ನಿರೀಕ್ಷೆ ಹುಟ್ಟುಹಾಕಿದ್ದು ಮುಂವರುವ ದಿನಗಳಲ್ಲಿ ಕತೆ ಯಾವ ರೀತಿ ಮುಂದುವರೆಯುವುದು ಕಾದು ನೋಡಬೇಕಿದೆ..