ಮೊದಲ ವಾರ ದಾಖಲೆ ಬರೆದಿದ್ದ ಪುಟ್ಟಕ್ಕನ ಮಕ್ಕಳು ಧಾರಾವಾಹಿಯ ರೇಟಿಂಗ್ ಎರಡನೇ ವಾರ ಏನಾಯ್ತು ನೋಡಿ..

0 views

ಕನ್ನಡ ಕಿರುತೆರೆಯಲ್ಲಿ ಹೊಸ ಧಾರಾವಾಹಿ ಹೊಸ ಶೋಗಳ ಪರ್ವ ಆರಂಭವಾಗಿದ್ದು ಅದಾಗಲೇ ಸಾಕಷ್ಟು ಹೊಸ ಹೊಸ ಧಾರಾವಾಹಿಗಳು ತನ್ನ ಪ್ರಸಾರವನ್ನು ಆರಂಭಿಸಿದೆ.. ಮತ್ತಷ್ಟು ಧಾರಾವಾಹಿಗಳು ತೆರೆ ಮೇಲೆ ಬರಲು ಸಜ್ಜಾಗಿದ್ದು.. ಹಲವಾರು ವರ್ಷಗಳಿಂದ ಪ್ರಸಾರವಾಗುತ್ತಿರುವ ಸಾಕಷ್ಟು ಧಾರಾವಾಹಿಗಳು ಮುಕ್ತಾಯಗೊಂಡು ಹೊಸ ಧಾರಾವಾಹಿಗಳಿಗೆ ಅವಕಾಶ ಮಾಡಿಕೊಡುತ್ತಿದೆ.. ಇನ್ನು ಎರಡು ವಾರದ ಹಿಂದಷ್ಟೇ ಶುರುವಾದ ಪುಟ್ಟಕ್ಕನ ಮಕ್ಕಳು ಧಾರಾವಾಹಿ ಮೊದಲ ವಾರವೇ ದಾಖಲೆಯ ಟಿವಿ ರೇಟಿಂಗ್ ಪಡೆದು ಯಶಸ್ಸನ್ನು ಕಂಡಿತ್ತು.. ಆದರೆ ಎರಡನೇ ವಾರದ ಟಿವಿಆರ್ ಎಷ್ಟು ಎನ್ನುವ ಕುತೂಹಲ ಧಾರಾವಾಹಿ ಪ್ರಿಯರಿಗೆ ಇದ್ದೇ ಇರುತ್ತದೆ..

ಹೌದು ಜೀ ಕನ್ನಡ ವಾಹಿನಿ ಹೊಸ ಹೊಸ ಧಾರಾವಾಹಿಗಳನ್ನು ತರುವುದು ಮಾತ್ರವಲ್ಲ.. ಆ ಧಾರಾವಾಹಿಗಳಿಗೆ ಪ್ರೇಕ್ಷಕರನ್ನು ಸೆಳೆಯುವುದರಲ್ಲಿ ನಂಬರ್ ಒನ್ ಎನ್ನಬಹುದು.. ಧಾರಾವಾಹಿ ಶುರು ಆಗುವ ಮುನ್ನವೇ ಧಾರಾವಾಹಿಯ ಬಗ್ಗೆ ಸಾಕಷ್ಟು ಶೋಗಳಲ್ಲಿ ತಿಳಿಸಿ ಮತ್ತಷ್ಟು ಧಾರಾವಾಹಿ ಕಲಾವಿದರಿಂದ ಪ್ರಚಾರ ಮಾಡಿಸಿ ಸುದ್ಧಿಗೋಷ್ಟಿಗಳನ್ನು ನಡೆಸಿ ನಂತರವಷ್ಟೇ ಹೊಸ ಧಾರಾವಾಹಿಯ ಪ್ರಸಾರವನ್ನು ಆರಂಭಿಸುವರು.. ಅದರಲ್ಲೂ ಧಾರಾವಾಹಿಗೆ ಸಿನಿಮಾ ರಂಗದ ಖ್ಯಾತ ಕಲಾವಿದರನ್ನು ಕರೆತಂದು ದೊಡ್ಡ ಮಟ್ಟದಲ್ಲಿ ಹಿಟ್ ಮಾಡುವರು.. ಅದೇ ರೀತಿ ಪುಟ್ಟಕ್ಕನ ಮಕ್ಕಳು ಧಾರಾವಾಹಿಗೆ ಅಭಿನಯ ಸರಸ್ವತಿಯಂತೆಯೇ ಕಾಣುವ ಹಿರಿಯ ನಟಿ ಉಮಾಶ್ರೀ ಅವರನ್ನು ಕರೆತಂದು ಹೊಸ ಅಧ್ಯಾಯ ಬರೆದರು.. ಇತ್ತ ರಾಜಕಾರಣದಿಂದ ಕೊಂಚ ಬ್ರೇಕ್ ಪಡೆದು ಸಿನಿಮಾ ಹಾಗೂ ಧಾರಾವಾಹಿಯಲ್ಲಿ ತೊಡಗಿಕೊಂಡಿರುವ ಉಮಾಶ್ರೀ ಅವರು ಮುಂದಿನ ಕೆಲ ವರ್ಷ ಧಾರಾವಾಹಿಯಲ್ಲಿ ಸಂಪೂರ್ಣವಾಗಿ ತೊಡಗಿಕೊಳ್ಳಲಿದ್ದಾರೆ ಎನ್ನಲಾಗಿದೆ‌..

ಇನ್ನು ದೊಡ್ಡ ಮಟ್ಟದ ಪ್ರಚಾರ ಮಾಡಿ ನಿರೀಕ್ಷೆ ಹುಟ್ಟು ಹಾಕಿದ್ದ ಪುಟ್ಟಕ್ಕನ ಮಕ್ಕಳು ಧಾರಾವಾಹಿ ತನ್ನ ನಿರೀಕ್ಷೆಯನ್ನು ಹುಸಿಗೊಳಿಸಲಿಲ್ಲ.. ಹೊಸ ಕತೆ, ಹಳ್ಳಿಯ ವಾತಾವರಣ.. ಹಳ್ಳಿ ಸೊಗಡಿನ ಮಾತುಗಳು ಹೀಗೆ ಮೊದಲ ದಿನದಿಂದಲೂ ಜನರಲ್ಲಿ ಒಳ್ಳೆಯ ಪ್ರತಿಕ್ರಿಯೆಯನ್ನು ಪಡೆಯಿತು.. ಇನ್ನು ಎಲ್ಲರೂ ಮಾಡುವುದು ಹೊಟ್ಟೆ ಪಾಡಿಗಾಗಿ ಎನ್ನುವಂತೆ ಪ್ರತಿಯೊಂದು ಧಾರಾವಾಹಿಯ ಲಾಭ ತೀರ್ಮಾನವಾಗುವುದೂ ಸಹ ಅದು ಪಡೆಯುವ ಟಿ ವಿ ಆರ್ ನಿಂದ.. ಬಹಳಷ್ಟು ನಿರೀಕ್ಷೆ ಹುಟ್ಟುಹಾಕಿದ್ದ ಪುಟ್ಟಕ್ಕನ ಮಕ್ಕಳು ಧಾರಾವಾಹಿ ನಿರೀಕ್ಷೆಯಂತೆಯೇ ದಾಖಲೆಯ ಟಿ ಆರ್ ಪಿ ಪಡೆದಿತ್ತು.. ಹೌದು ಈ ಹಿಂದೆ ಪುಟ್ಟಕ್ಕನ ಮಕ್ಕಳು ಧಾರಾವಾಹಿಯ ನಿರ್ದೇಶಕರಾಗಿರುವ ಆರೂರು ಜಗದೀಶ್ ಅವರದ್ದೇ ಮತ್ತೊಂದು ಧಾರಾವಾಹಿ ಜೊತೆಜೊತೆಯಲಿ ತನ್ನ ಪ್ರಸಾರ ಶುರು ಮಾಡಿದ ಮೊದಲ ವಾರ ಇಂತಹದೊಂದು ದಾಖಲೆ ಬರೆದಿತ್ತು..

ಹೌದು ಆಗ ಜೊತೆಜೊತೆಯಲಿ ಮೊದಲ ವಾರವೇ 11.8 ರೇಟಿಂಗ್ ಪಡೆದಿತ್ತು.. ಆದರೆ ಈ ದಾಖಲೆಯನ್ನು ಮುರಿದ ಪುಟ್ಟಕ್ಕನ ಮಕ್ಕಳು ಧಾರಾವಾಹಿ ಮೊದಲ ವಾರ ಬರೋಬ್ಬರಿ 13.5 ರೇಟಿಂಗ್ ಪಡೆದು ಹೊಸ ಆರಂಭ ಮಾಡಿತು.. ಇನ್ನು ಮೊದಲ ವಾರ ಇಷ್ಟು ರೇಟಿಂಗ್ ಪಡೆದ ಧಾರಾವಾಹಿಯ ಕತೆ ಎರಡನೇ ವಾರ ಏನಾಯಿತು ಎಂಬ ಕುತೂಹಲ ಇದ್ದೇ ಇರುತ್ತದೆ.. ಹೌದು ಸಧ್ಯ ಕಳೆದ ವಾರದ ಟಿವಿಆರ್ ಇದೀಗ ಬಿಡುಗಡೆಯಾಗಿದ್ದು ಎರಡನೇ ವಾರವೂ ಸಹ ಪುಟ್ಟಕ್ಕನ ಮಕ್ಕಳು ಧಾರಾವಾಹಿ ಕನ್ನಡ ಕಿರುತೆರೆಯ ನಂಬರ್ ಒನ್ ಧಾರಾವಾಹಿಯಾಗಿಯೇ ಮುಂದುವರೆದಿದೆ.. ಆದರೆ ರೇಟಿಂಗ್ ನಲ್ಲಿ ಕೊಂಚ ಕಡಿಮೆಯಾಗಿದ್ದು 13.5 ಇದ್ದ ರೇಟಿಂಗ್ 12.2 ಆಗಿದೆ. ಆದರೆ ಈಗಲೂ ಸಹ ಪುಟ್ಟಕ್ಕನ ಮಕ್ಕಳು ತನ್ನ ನಂಬರ್ ಒನ್ ಸ್ಥಾನವನ್ನು ಉಳಿಸಿಕೊಂಡಿದೆ..

ಇನ್ನುಳಿದಂತೆ ಜೀ ಕನ್ನಡ ವಾಹಿನಿಯ ಗಟ್ಟಿಮೇಳ ಧಾರಾವಾಹಿ ಎರಡನೇ ಹಿಟ್ಲರ್ ಕಲ್ಯಾಣ ಮೂರನೇ ಪಾರು ನಾಲ್ಕನೇ ಜೊತೆಜೊತೆಯಲಿ ಐದನೇ ಹಾಗೂ ಸತ್ಯ ಆರನೇ ಸ್ಥಾನ ಪಡೆದುಕೊಂಡಿದೆ.. ಇತ್ತ ಕಲರ್ಸ್ ಕನ್ನಡ ವಾಹಿನಿಯ ಮಂಗಳ ಗೌರಿ ಮದುವೆ ಏಳನೇ ಸ್ಥಾನದಲ್ಲಿದೆ.. ನಾಗಿಣಿ ಎಂಟನೇ ಸ್ಥಾನ ಗೀತಾ, ನನ್ನರಸಿ ರಾಧೆ ಹಾಗೂ ಗಿಣಿರಾಮ ಧಾರಾವಾಹಿ ಒಂಭತ್ತನೇ ಸ್ಥಾನ ಕನ್ನಡತಿ ಹತ್ತನೇ ಸ್ಥಾನದಲ್ಲಿದೆ..

ಇನ್ನು ಇತ್ತ ಸುವರ್ಣ ವಾಹಿನಿಯ ಮರಳಿ ಮನಸ್ಸಾಗಿದೆ ಧಾರಾವಾಹಿ ಹನ್ನೊಂದನೇ ಸ್ಥಾನದಲ್ಲಿದ್ದರೆ ಲಕ್ಷಣ ಹನ್ನೆರಡನೇ ಸ್ಥಾನ.. ಕಮಲಿ ಹದಿಮೂರು ದೊರೆಸಾನಿ ಹದಿನಾಲ್ಕು, ನಂಬರ್ ಒನ್ ಸೊಸೆ ಹದಿನಾಲ್ಕು, ಗೌರಿಪುರದ ಗಯ್ಯಾಳಿಗಳು ಹದಿನಾಲ್ಕು, ತ್ರಿನಯನಿ ಹದಿನೈದನೇ ಸ್ಥಾನದಲ್ಲಿದೆ.. ಒಟ್ಟಿ‌ನಲ್ಲಿ ಸಧ್ಯ ಜೀ ಕನ್ನಡ ವಾಹಿನಿ ನಂಬರ್ ಸ್ಥಾನದಲ್ಲಿದ್ದರೆ ಕಲರ್ಸ್ ಕನ್ನಡ ವಾಹಿನಿ ಎರಡನೇ ಸ್ಥಾನದಲ್ಲಿ ಮುಂದುವರೆಯುತ್ತಿದೆ..