ಸ್ವಂತ ಅತ್ತಿಗೆಯನ್ನೇ ಮದುವೆಯಾದ ತಮ್ಮ.. ಕಾರಣ ಕೇಳಿದ್ರೆ ಶಾಕ್ ಆಗ್ತೀರಾ.. ಅಣ್ಣ ಏನಾದ ಗೊತ್ತಾ.. ಮನಕಲಕುತ್ತದೆ..

0 views

ಸಂಬಂಧಗಳು ಬಾಂಧವ್ಯ ಬೆಸೆಯೋ ಸೇತುವೆಗಳು ಅನ್ನೋ ನಂಬಿಕೆ ಇದೆ.. ಅಪ್ಪ ಅಮ್ಮ ಅಣ್ಣ ತಮ್ಮ ಅಕ್ಕ ತಂಗಿ ಹೀಗೆ ಕೆಲವೊಂದು ಸಂಬಂಧಗಳು ಹುಟ್ಟಿದಾಗಿನಿಂದಲೂ ಜೊತೆಯಾದರೆ ದೊಡ್ಡವರಾಗುತ್ತಾ ಗಂಡ ಹೆಂಡತಿ ಅತ್ತಿಗೆ ನಾದಿನಿ ಭಾವ ಭಾಮೈದ ಅತ್ತೆ ಮಾವ ಹೀಗೆ ಮತ್ತಷ್ಟು ಸಂಬಂಧಗಳು ಜೀವನದ ಸಂತೋಷವನ್ನು ಹೆಚ್ಚು ಮಾಡುವುದರ ಜೊತೆಗೆ ಕುಟುಂಬವನ್ನು ದೊಡ್ಡದನ್ನಾಗಿ ಮಾಡುತ್ತವೆ.. ಅಂತಹ ಸಂಬಂಧಗಳು ಪವಿತ್ರತೆಯಿಂದಲೂ ಕೂಡಿರುತ್ತದೆ.. ಆದರೆ ಇಲ್ಲೊಬ್ಬ ಸ್ವಂತ ಅಣ್ಣನ ಹೆಂಡತಿಯನ್ನೇ ಮದುವೆಯಾದ ಘಟನೆ ನಡೆದಿದ್ದು ಕಾರಣ ಕೇಳಿ ಒಂದಿಷ್ಟು ಜನರು ಆತನನ್ನು ಪ್ರಶಂಸಿಸಿದರೆ ಮತ್ತೆ ಕೆಲವರು ಅಸಮಾಧಾನ ವ್ಯಕ್ತ ಪಡಿಸಿದ್ದೂ ಉಂಟು..

ಹೌದು ಈತನ ಹೆಸರು ಸಮಾಧಾನ್ ವಯಸ್ಸು ಇಪ್ಪತ್ತಾರು.. ಈತನ ಅಣ್ಣನ ಹೆಸರು ನೀಲೇಶ್ ಆತನ ವಯಸ್ಸು ಮೂವತ್ತೊಂದು ಇನ್ನು ನೀಲೇಶ್ ನ ಪತ್ನಿ ಈ ಹೆಣ್ಣು ಮಗಖ ಹೆಸರು ಪೂನಂ ವಯಸ್ಸು ಇಪ್ಪತ್ತಮೂರು ವರ್ಷ.. ಕೆಲ ವರ್ಷದ ಹಿಂದೆ ನೀಲೇಶ್ ಮತ್ತು ಪೂನಂ ನ ವಿವಾಹ ನಡೆದಿತ್ತು.. ಇವರಿಗೆ ಒಂದೂವರೆ ವರ್ಷದ ಪುಟ್ಟ ಕಂದಮ್ಮನೂ ಇದೆ.. ಸುಂದರ ಸಂಸಾರ ಇವರದ್ದಾಗಿತ್ತು.. ಜೀವನಕ್ಕೆ ಯಾವುದೇ ತೊಂದರೆ ಇರಲಿಲ್ಲ.. ಒಳ್ಳೆಯ ಕುಟುಂಬ.. ಪ್ರೀತಿ ತೋರುವ ಗಂಡ.. ಮುದ್ದು ಕಂದಮ್ಮನ ಆಗಮನ.. ಹೀಗೆ ಜೀವನ ಸುಗಮವಾಗಿ ಸಾಗುತಿತ್ತು.. ಆದರೆ ದುರ್ವಿಧಿ.. ಕಳೆದ ವರ್ಷ ಆಗಸ್ಟ್ ತಿಂಗಳಿನಲ್ಲಿ ನೀಲೇಶ್ ಗೆ ಕೊರೊನಾ ಸೋಂಕು ತಗುಲಿ ಜೀವ ಕಳೆದುಕೊಳ್ಳುವಂತಾಯಿತು..

ಇತ್ತ ಪುಟ್ಟ ಮಗುವನ್ನು ಪೂನಂ ನೋಡಿಕೊಳ್ಳುತ್ತಿದ್ದಳು.. ಕೇವಲ ಇಪ್ಪತ್ತ ಮೂರು ವರ್ಷದ ಪೂನಂ ಗಂಡನನ್ನು ಕಳೆದುಕೊಂಡು ಪುಟ್ಟ ಮಗುವಿನ ಜವಾಬ್ದಾರಿ ಹೊತ್ತು ಸಾಕಷ್ಟು ನೋವು ಅನುಭಬಿಸುತ್ತಿದ್ದಳು.. ಇದನ್ನೆಲ್ಲಾ ನೋಡಿದ ನೀಲೇಶ್ ನ ತಮ್ಮ ಸಮಾಧಾನ್ ತನ್ನ ಅತ್ತಿಗೆಯನ್ನೇ ಮದುವೆಯಾಗುವ ನಿರ್ಧಾರ ಮಾಡಿದನು.. ಹೌದು ಪುಟ್ಟ ಮಗು ಇರುವ ಅತ್ತಿಗೆಗೆ ಹೊಸ ಜೀವನ ಕೊಡುವ ನಿರ್ಧಾರ ಮಾಡಿದ ಸಮಾಧಾನ್ ತನ್ನ ನಿರ್ಧಾರವನ್ನು ತನ್ನ ಕುಟುಂಬಕ್ಕೆ ಹಾಗೂ ಅತ್ತಿಗೆಯ ಕುಟುಂಬಕ್ಕೆ ತಿಳಿಸಿದನು..

ಎರಡೂ ಕುಟುಂಬಗಳು ಸಮ್ಮತಿ ನೀಡಿದವು.. ಎರಡು ದಿನಗಳ ಹಿಂದೆ ಸಮಾಧಾನ್ ಹಾಗೂ ಪೂನಂ ನ ವಿವಾಹ ಗ್ರಾಮದ ದೇವಸ್ಥಾನವೊಂದರಲ್ಲಿ ಸರಳವಾಗಿ ನೆರವೇರಿದ್ದು ಇಬ್ಬರೂ ನೂತನ ಜೀವನಕ್ಕೆ ಕಾಲಿಟ್ಟಿದ್ದಾರೆ.. ಈ ಘಟನೆ ಮಹಾರಾಷ್ಟ್ರದ ಅಹಮದ್ ನಗರದ ಅಕೋಲೆ ತಾಲೂಕಿನ ಧೋಕ್ರಿಯ ಎಂಬ ಗ್ರಾಮದಲ್ಲಿ ನಡೆದಿದ್ದು ಅತ್ತಿಗೆಯ ಕೈಹಿಡಿದು ಹೊಸ ಜೀವನ ಕೊಟ್ಟು ಆದರ್ಶ ಮದುವೆಯಾದ ಸಮಾಧಾನ್ ನ ನಡೆಗೆ ಸಾಕಷ್ಟು ಜನ ಮೆಚ್ಚುಗೆ ವ್ಯಕ್ತ ಪಡಿಸಿದರೆ ಮತ್ತೆ ಕೆಲವರು ಅತ್ತಿಗೆಯನ್ನು ಬೇರೆ ಯಾರದ್ದಾದರು ಜೊತೆ ಮದುವೆ ಮಾಡಿಸಬಹುದಿತ್ತು..

ಅತ್ತಿಗೆ ತಾಯಿಯ ಸಮಾನ.. ಅವರನ್ನು ಮದುವೆಯಾಗಬಾರದಿತ್ತು ಎಂದಿದ್ದಾರೆ.. ಒಟ್ಟಿನಲ್ಲಿ ಅಣ್ಣನಿಲ್ಲದ ಅತ್ತಿಗೆಯ ಬಾಳಿಗೆ ಹೊಸ ಜೀವನ ಕೊಟ್ಟ ಸಮಾಧಾನ್ ಹಾಗೂ ಪೂನಂ ನ ಈ ಮದುವೆ ವಿಚಾರ ಸಾಮಾಜಿಕ ಜಾಲತಾಣದಲ್ಲಿ ಬಹಳಷ್ಟು ವೈರಲ್ ಆಗಿದ್ದು ಪುಟ್ಟ ಕಂದನಿಗೆ ಹಾಗೂ ಪೂನಂ ಗೆ ಹೊಸ ಜೀವನ ಕೊಟ್ಟಂತಾಗಿದೆ.. ಅದೇ ಮನೆಯಾದ ಕಾರಣ ಯಾವುದೇ ಚುಚ್ಚು ಮಾತುಗಳಿಲ್ಲದೇ ಎರಡನೇ ಮದುವೆಯಾದಳು ಎಂದು ಹಂಗಿಸುವವರಿಲ್ಲದೇ ನೆಮ್ಮದಿಯಾಗಿ ಮುಂದಿನ ಜೀವನ ಸಾಗಿಸಬಹುದಾಗಿದ್ದು ಪೂನಂ ಹಾಗೂ ಸಮಾಧಾನ್ ನ ಮುಂದಿನ ಜೀವನ ಚೆನ್ನಾಗಿರಲಿ ಎಂದು ನೆಟ್ಟಿಗರು ಶುಭ ಹಾರೈಸಿದ್ದಾರೆ..