ಮನೆ ಮಾರುವ ನಿರ್ಧಾರ ಮಾಡಿದ್ದ ಅಪ್ಪ ಅಮ್ಮ.. ಆದರೆ ರಾಗಿಣಿ ಮಾಡಿರುವ ಕೆಲಸ ನೋಡಿ..

0 views

ನಟಿ ರಾಗಿಣಿ.. ಕಳೆದ ವರ್ಷ ಬಹುಶಃ ಸ್ಯಾಂಡಲ್ವುಡ್ ಪಾಲಿಕೆ ಕೊಂಚ ಕೆಟ್ಟ ದಿನಗಳೇ ಎನ್ನಬಹುದು.. ಒಂದು ಕಡೆ ಕೊರೊನಾ ಅಲೆ ಬಂದು ಹೋಗಿದ್ದರೂ ಸಹ ಚಿತ್ರರಂಗ ಚೇತರಿಕೆಯನ್ನು ಕಂಡಿರಲಿಲ್ಲ.. ಮತ್ತೊಂದು ಕಡೆ ಆಗಸ್ಟ್ ತಿಂಗಳ ವೇಳೆ ಸ್ಯಾಂಡಲ್ವುಡ್ ನಲ್ಲಿ ವಿಚಾರ ವೊಂದು ದೊಡ್ಡ ಮಟ್ಟದಲ್ಲಿ ಸುದ್ದಿಯಾಯಿತು.. ಅದೇ ವಿಚಾರವಾಗಿ ನಟಿ ರಾಗಿಣಿ ಹಾಗೂ ನಟಿ ಸಂಜನಾ ಇಬ್ಬರೂ ಪರಪ್ಪನ ಅಗ್ರಹಾರದಲ್ಲಿ ಇರುವ ಹಾಗಾಯಿತು.. ಮೂರು ತಿಂಗಳ ಬಳಿಕ ಸಂಜನಾ ಹೊರ ಬಂದರೆ.. ಇತ್ತ ಜಾಮೀನಿ ಸಿಗದೆ ಐದು ತಿಂಗಳ ನಂತರ ರಾಗಿಣಿ ಹೊರ ಬಂದರು.. ಆದರೆ ರಾಗಿಣಿ ಒಳಗಿದ್ದ ಅಷ್ಟೂ ಸಮಯ ನೋವು ಅನುಭವಿಸಿದವರು ಮಾತ್ರ ಅವರ ಅಪ್ಪ ಅಮ್ಮ.. ಹೌದು ಮಗಳ ಜಾಮೀನಿಗಾಗಿ ಮನೆಯನ್ನು ಸಹ ಮಾರಲು ಮುಂದಾಗುದ್ದರು.. ಆದರೆ ಇಂದು ರಾಗಿಣಿ‌ ಮಾಡುತ್ತಿರುವ ಕೆಲಸವೇ ಬೇರೆ‌‌.. ಹೌದು ರಾಗಿಣಿ ಪರಪ್ಪನ ಅಗ್ರಹಾರದಲ್ಲಿ ಇದ್ದ ಸಮಯದಲ್ಲಿ ಆಕೆಯ ಅಪ್ಪ ಅಮ್ಮ ಅಕ್ಷರಶಃ ಪರದಾಡಿದರೆನ್ನಬಹುದು..

ಮಗಳನ್ನು ಹೇಗಾದರೂ ಮಾಡಿ ಹೊರಗೆ ಕರೆತರಲೇ ಬೇಕೆಂದು ಹಗಲು ರಾತ್ರಿ ಕೋರ್ಟು ಕಚೇರಿಗಳಿಗೆ ಅಲೆದಿದ್ದರು.. ಒಂದು ದಿನ ರಾತ್ರಿ ಪೂರ ಮಗಳನ್ನು ನೋಡುವ ಸಲುವಾಗಿ ಪರಪ್ಪನ ಅಗ್ರಹಾರದ ಗೇಟ್ ಬಳಿಯೇ ಆ ವಯಸ್ಸಾದ ಅಪ್ಪ ಅಮ್ಮ ನಿಂತಿದ್ದು ಬೇಸರವನ್ನುಂಟು ಮಾಡಿತ್ತು.. ಆದರೆ ಮಗಳ ಬಗ್ಗೆ ಯಾರು ಏನೇ ಅಂದರೂ ಸಹ ಅದರ ಬಗ್ಗೆ ಯೋಚಿಸದೇ.. ಇತ್ತ ಮಗಳನ್ನು ಹೊರಗೆ ಕರೆದುಕೊಂಡು ಬರಬೇಕೆಂದು ಛಲ ಬಿಡದೆ ಪ್ರಯತ್ನ ಮಾಡುತ್ತಲೇ ಇದ್ದರು.. ಇತ್ತ ಹೈಕೋರ್ಟ್ ನಲ್ಲಿ ಮಗಳಿಗೆ ಜಾಮೀನು ದೊರೆಯಲಿಲ್ಲ ಎಂಬ ಕಾರಣಕ್ಕೆ ಸುಪ್ರಿಂ ಕೋರ್ಟ್ ಮೆಟ್ಟಿಲೇರಿದರು.. ಆದರೆ ಅಷ್ಟರಲ್ಲಾಗಲೇ ರಾಗಿಣಿಯ ತಂದೆ ತಾಯಿ ಆರ್ಥಿಕವಾಗಿ ಹೈರಾಣಾಗಿ ಹೋಗಿದ್ದರು.. ಅತ್ತ ದುಡಿಯುತ್ತಿದ್ದ ಮಗಳು ಒಳಗೆ ಕೂತಿದ್ದಾಳೆ.. ಇತ್ತ ಲೋನ್ ನಲ್ಲಿ‌ ತೆಗೆದುಕೊಂಡಿದ್ದ ಮನೆಯ ಇ ಎಂ ಐ ಕಟ್ಟಬೇಕು.. ಇತ್ತ ಮಗಳ ಜಾಮೀನಿಗೆ..

ವಾದ ಮಾಡುತ್ತಿರುವ ವಕೀಲರಿಗೆ.. ತಾವು ಓಡಾಡಲು ಸಹ ಹಣದ ಅವಶ್ಯಕತೆ ಇತ್ತು.. ಆರ್ಥಿಕವಾಗಿ ಆದಾಯದ ಎಲ್ಲಾ ಮೂಲಗಳು ಮುಚ್ವಿದ್ದರಿಂದ ಕೊನೆಗೆ ವಿಧಿ ಇಲ್ಲದೇ ತಾವಿದ್ದ ಮನೆಯನ್ನೇ ಮಾರುವ ನಿರ್ಧಾರಕ್ಕೆ ಬಂದಿದ್ದರು.. ಎರಡು ಕೋಟಿ ರೂಪಾಯಿಗಳಿಗೆ ಮನೆ ಮಾರಾಟಕ್ಕಿದೆ ಎಂದು ಜಾಹಿರಾತನ್ನು ಸಹ ನೀಡಿದ್ದರು.. ಆದರೆ ಮನೆ ಮಾರಾಟವಾಗಲಿಲ್ಲ.. ಅತ್ತ ಮಗಳು ಸಹ ನಾಲ್ಕು ತಿಂಗಳಾದರೂ ಹೊರ ಬರಲಿಲ್ಲ.. ಕೊನೆಗೆ ಬೇರೆ ದಾರಿ ಕಾಣದೆ ತಮ್ಮ ಬಳಿ‌ ಇದ್ದ ಕಾರ್ ಗಳನ್ನು ಮಾರಲು ಮುಂದಾದರು.. ಹೌದು ಮಗಳ ಬಳಿ ಇದ್ದ ಐಶಾರಾಮಿ ಎರಡು ಕಾರುಗಳನ್ನು ರಾಗಿಣಿ ತಂದೆ ತಾಯಿ ಮಾರಲು ಮುಂದಾದರು.. ಕೊನೆಗೆ ಹೇಗೋ ಮಾಡಿ ಮಗಳಿಗೆ ಸುಪ್ರಿಂ ಕೋರ್ಟಿನಲ್ಲಿ ಜಾಮೀನು ಕೊಡಿಸುವಲ್ಲಿಯೂ ಸಹ ಅವರು ಯಶಸ್ವಿಯಾದರು..

ಕೊನೆಗೆ ರಾಗಿಣಿ ಹೊರ ಬಂದ ಬಳಿಕ ಮಗಳಿಗಾಗಿ ವಿಶೇಷ ಪೂಜೆ ಹೋಮಗಳನ್ನು ನೆರವೇರಿಸಿ ತಾವು ಮಗಳಿಗಾಗಿ ಕಟ್ಟಿಕೊಂಡಿದ್ದ ಹರಕೆಗಳನ್ನು ತೀರಿಸಿದ್ದರು.. ಆದರೆ ರಾಗಿಣಿ ಅವರು ಹೊರ ಬಂದ ಮೇಲೆ ಮಾಡುತ್ತಿರುವ ಕೆಲಸಗಳೇ ಬೇರೆಯಾಗಿದೆ.. ಹೌದು.. ರಾಗಿಣಿ ಅವರು ಹೊರ ಬಂದ ನಂತರ ಬಹುಶಃ ಯಾರ ಬಳಿಯೂ ಮಾತನಾಡದೇ ಯಾರ ಕೈಗೂ ಸಿಗದೇ ಸುಮ್ಮನಾಗಬಹುದು ಎನ್ನಲಾಗುತಿತ್ತು.. ಆದರೆ ರಾಗಿಣಿ ಹೊರ ಬಂದ ಮೊದಲ ದಿನವೇ ಮಾದ್ಯಮದ ಮುಂದೆ ಬಂದು ಪ್ರತಿಕ್ರಿಯೆ ನೀಡಿದ್ದರು.. ಸತ್ಯಕ್ಕೆ ಜಯ ಸಿಕ್ಕಿದೆ ಎಂಬ ಮಾತನ್ನಾಡಿ ಎಂದಿನಂತೆ ತಮ್ಮ ಕೆಲಸದಲ್ಲಿ ತೊಡಗಿದ್ದರು.. ನಂತರದಲ್ಲಿ ಪ್ಯಾನ್ ಇಂಡಿಯಾ ಸಿನಿಮಾವೊಂದರಲ್ಲಿಯೂ ಅಭಿನಯಿಸುವ ಅವಕಾಶ ಪಡೆದು ಸಿನಿಮಾದಲ್ಲಿ ತನಿಖಾಧಿಕಾರಿಯ ಪಾತ್ರ ಮಾಡುತ್ತಿರುವುದಾಗಿ ತಿಳಿಸಿದ್ದರು..

ಆದರೆ ಇದೀಗ ಮತ್ತೆ ಕೊರೊನಾ ಎರಡನೇ ಅಲೆ ಬಂದಿದೆ.. ಇಂತಹ ಸಮಯದಲ್ಲಿ ರಾಗಿಣಿ ಮಾಡುತ್ತಿರುವ ಕೆಲಸ ನಿಜಕ್ಕೂ ಮೆಚ್ಚುವಂತದ್ದು.. ಹೌದು ರಾಗಿಣಿ ಕಳೆದ ವರ್ಷ ಮೊದಲನೆ ಅಲೆಯ ಸಮಯದಲ್ಲಿಯೂ ಅನೇಕ ಫ್ರಂಟ್ ಲೈನ್ ವರ್ಕರ್ ಗಳಿಗೆ ಪ್ರತಿದಿನ ಮಧ್ಯಾಹ್ನದ ಊಟದ ವ್ಯವಸ್ಥೆಯನ್ನು ಮಾಡುತ್ತಿದ್ದರು.. ಬಹಳಷ್ಟು ಜನರಿಗೆ ನೆರವಾಗಿದ್ದರು.. ಇದೀಗ ಎರಡನೇ ಅಲೆಯ ಸಮಯದಲ್ಲಿಯೂ ತಮ್ಮ ಕೆಲಸಕ್ಕೆ ಮರಳಿದ್ದಾರೆ.. ಹೌದು ಈಗಲೂ ಸಹ ಅನೇಕ ಪೊಲೀಸರಿಗೆ ಹಾಗೂ ನರ್ಸ್ ಗಳಿಗೆ ವೈದ್ಯರುಗಳಿಗೆ ಪೌರ ಕಾರ್ಮಿಕರುಗಳಿಗೆ ಊಟದ ವ್ಯವಸ್ಥೆಯನ್ನು ಮಾಡುತ್ತಿದ್ದಾರೆ.. ಹೌದು ಅಂದು ಮಗಳಿಗಾಗಿ ಮನೆ ಕಾರುಗಳನ್ನು ಮಾರಲು ಅಪ್ಪ ಅಮ್ಮ ಮುಂದಾಗಿದ್ದರು.. ಆದರೀಗ ಪರಿಸ್ಥಿತಿ ಬದಲಾಗಿದೆ.. ಮಗಳು ಹೊರ ಬಂದು ಬಹಳಷ್ಟು ಜನರಿಗೆ ನೆರವಾಗುತ್ತಿದ್ದು ರಾಗಿಣಿ ಅವರ ಕೆಪಸಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.. ಅಷ್ಟೇ ಅಲ್ಲದೇ ಸಮಾಜ ಸೇವೆ ಮಾಡುವ ನಿಟ್ಟಿನಲ್ಲಿ ಸಂಸ್ಥೆಯೊಂದನ್ನು ಸಹ ಸ್ಥಾಪನೆ ಮಾಡಿಕೊಂಡಿದ್ದು ಮುಂದೆಯೂ ಸಹ ನನ್ನ ಈ ಕೆಲಸ ಮುಂದುವರೆಯಲಿದೆ ಎಂದಿದ್ದಾರೆ..