ಮುಖ ಮುಚ್ಚಿಕೊಂಡು ಬೆಂಗಳೂರಿನ ಬೀದಿ ಬೀದಿ ಸುತ್ತುತ್ತಿರುವ ಕನ್ನಡದ ಸ್ಟಾರ್ ನಟಿ..

0 views

ಈ ಸೆಲಿಬ್ರೆಟಿಗಳ ಜೀವನವೇ ಹೀಗೆ.. ಹಣವಿಲ್ಲದಿದ್ದಾಗ..‌ ಹೆಸರಿಲ್ಲದಿದ್ದಾಗ ಅವರುಗಳ ಜೀವನ ಒಂದು ರೀತೊಯಾದರೆ.. ಅದೆರೆಡು ಬಂದ ನಂತರ ಅವರ ಜೀವನವೇ ಬೇರೆ ರೀತಿಯಾಗಿ ಹೋಗುತ್ತದೆ.. ಇನ್ನು ಜನರ ನಡುವೆ ಸ್ಟಾರ್ ಗಳು ಓಡಾಡುವುದು ಕಷ್ಟವೂ ಹೌದು.. ಆದರೆ ಕನ್ನಡದ ಸ್ಟಾರ್ ನಟಿಯೊಬ್ಬರು ಇದೀಗ ಮುಖ ಮುಚ್ಚಿಕೊಂಡು ಬೆಂಗಳೂರಿನ ಬೀದಿ ಬೀದಿಗಳಲ್ಲಿ ಓಡಾಡುತ್ತಿದ್ದಾರೆ.. ಹೌದು ಈ ಮುನ್ನವೂ ಅನೇಕ ನಟರು ಈ ರೀತಿಯಾಗಿ ಮಾಡಿದ್ದುಂಟು.ಮ್ ಜಗ್ಗೇಶ್ ಅವರು ಮುಖ ಮುಚ್ಚಿಕೊಂಡು ಲುಂಗಿ ಉಟ್ಟು ಸಿನಿಮಾ ಥಿಯೇಟರ್ ಗೆ ತೆರಳಿ‌ ಸಿನಿಮಾ ನೋಡಿ ಬಂದ ಉದಾಹರಣೆಯೂ ಇದೆ..

ಇನ್ನು ಸತೀಶ್ ನೀನಾಸಂ ಅವರೂ ಸಹ ಮಾಸ್ಕ್ ಹಾಕಿಕೊಂಡು ಮೈಸೂರಿನ ದಸರಾ ಸಮಯದಲ್ಲಿ ರಸ್ತೆ ಬದಿಗಳಲ್ಲಿ ತಿರುಗಾಡಿದ್ದರು.. ಇದೀಗ ಕನ್ನಡದ ಮತ್ತೊಬ್ಬ ಖ್ಯಾತ ನಟಿ ಬೆಂಗಳೂರಿನ ರಸ್ತೆಗಳಲ್ಲಿ ತಿರುಗಾಡುತ್ತಿದ್ದಾರೆ.. ಹೌದು ಅವರು ಮತ್ಯಾರೂ ಅಲ್ಲ ಸ್ಯಾಂಡಲ್ವುಡ್ ನ ಡಿಂಪಲ್ ಕ್ವೀನ್ ನಟಿ ರಚಿತಾ ರಾಮ್.. ಹೌದು ನಟಿ ರಚಿತಾ ರಾಮ್ ಅವರು ನಿನ್ನೆ ಬೆಂಗಳೂರಿನ ಬೀದಿ ಬೀದಿಗಳಲ್ಲಿ ತಿರುಗಾಡಿದ್ದು ಅಕ್ಕಪಕ್ಕದಲ್ಲಿನ ಯಾರೂ ಸಹ ಗುರುತು ಹಿಡಿಯಲಿಲ್ಲವೆಂದು ಅವರೇ ಹೇಳಿಕೊಂಡಿದ್ದಾರೆ..

ಹೌದು ಈ ಹಿಂದೆ ಕೂಡ ನಟಿ ರಚಿತಾ ರಾಮ್ ಅವರು ಮುಖಕ್ಕೆ ಬಟ್ಟೆ ಕಟ್ಟಿಕೊಂಡು ಮೆಟ್ರೋದಲ್ಲಿ ಓಡಾಡಿದ್ದರು.. ಆ ವೀಡಿಯೋವನ್ನು ಸಹ ಹಂಚಿಕೊಂಡು ಸಂತೋಷ ವ್ಯಕ್ತಪಡಿಸಿದ್ದರು.. ಆದರೆ ಇದೀಗ ಮತ್ತೊಮ್ಮೆ ಮುಖಕ್ಕೆ ಬಟ್ಟೆ ಹಾಕಿಕೊಂಡು ಬೆಂಗಳೂರಿನ ಶಿವಾಜಿನಗರದಲ್ಲಿ ಶಾಪಿಂಗ್ ಮಾಡಿದ್ದಾರೆ.. ಹೌದು ಪ್ರಜ್ವಲ್ ದೇವರಾಜ್ ಅವರೊಟ್ಟಿಗೆ ರಚಿತಾ ರಾಮ್ ವೀರಂ ಎಂಬ ಸಿನಿಮಾದಲ್ಲಿ ಅಭಿನಯಿಸುತ್ತಿದ್ದು ಈ ಸಿನಿಮಾದ ಸಲುವಾಗಿ ಕಾಸ್ಟ್ಯೂಮ್ ಅನ್ನು ಖರೀದಿ ಮಾಡಲು ಖುದ್ದು ಚಿತ್ರತಂಡದವರ ಜೊತೆ ರಚಿತಾ ರಾಮ್ ಅವರೂ ಸಹ ಶಾಪಿಂಗ್ ಗೆ ಆಗಮಿಸಿದ್ದು ಈ ಸಮಯದಲ್ಲಿ ವೀಡಿಯೋ ಮಾಡಿ ಹಂಚಿಕೊಂಡಿದ್ದಾರೆ..

ಹೌದು ಜನರ ನಡುವೆ ತಮ್ಮ ಶಾಪಿಂಗ್ ಅನುಭವವನ್ನು ಹಂಚಿಕೊಂಡಿರುವ ರಚಿತಾರಾಮ್ ಅವರು ಈ ಬಗ್ಗೆ ಮಾತನಾಡಿದ್ದಾರೆ.. “ಏನ್ ಗೊತ್ತಾ.. ನಾವೀಗ ಕಮರ್ಷಿಯಲ್ ಸ್ಟ್ರೀಟ್ ಗೆ ಬಂದಿದ್ದೀವಿ.. ಬಟ್ಟೆ ಎಲ್ಲಾ ನಾವೇ ಶಾಪ್ ಮಾಡ್ತಿದ್ದೀವಿ.. ಇದೊಂದು ರೀತಿ ಹೊಸ ಎಕ್ಸ್ಪೀರಿಯನ್ಸ್.. ಸಖತ್ ಮಜಾ ಇದೆ.. ಎಂಟೈರ್ ಟೀಮ್ ಬಂದಿದ್ದೀವಿ.. ಯಾರಿಗೂ ಸಹ ಗೊತ್ತಾಗ್ತಾ ಇಲ್ಲ.. ಎಲ್ಲರೂ ಮಾಸ್ಕ್ ನಲ್ಲಿ ಇರೋದ್ರಿಂದ ಯಾರಿಗೂ ತಿಳಿತಿಲ್ಲ.. ಬಹಳ ಚೆನ್ನಾಗಿದೆ” ಎಂದಿದ್ದಾರೆ..”

ಸದ್ಯ ಕೊರೊನಾ ಕಾರಣದಿಂದ ಜನರೆಲ್ಲರೂ ತಮ್ಮ ಪಾಡಿಗೆ ತಾವು ಮಾಸ್ಕ್ ಹಾಕಿಕೊಂಡು ತಮ್ಮ ದಿನನಿತ್ಯದ ಕೆಲಸ ಕಾರ್ಯಗಳಲ್ಲಿ ತೊಡಗಿಕೊಂಡಿದ್ದರಿಂದ ರಚಿತಾ ರಾಮ್ ಪಕ್ಕದಲ್ಲಿಯೇ ಇದ್ದರೂ.‌. ಅವರಿಗೆ ಬಟ್ಟೆ ನೀಡಿದ ಅಂಗಡಿಯವರೂ ಸಹ ರಚಿತಾರಾಮ್‌ ರನ್ನು ಗುರುತಿಸದಾದರು.. ಒಟ್ಟಿನಲ್ಲಿ ಸಾಮಾನ್ಯರಾಗಿದ್ದಾಗ ಸ್ವತಂತ್ರವಾಗಿ ಹಕ್ಕಿಯಂತೆ ಹಾರಾಡುತ್ತಿದ್ದವರು ಇದೀಗ ಸ್ಟಾರ್ ಗಳಾದ ನಂತರ ಮುಖ ಮುಚ್ಚಿಕೊಂಡು ಓಡಾಡುವಂತಾಯಿತು.. ಒಂದು ಬೇಕೆಂದರೆ ಮತ್ತೊಂದು ಬಿಡಲೇಬೇಕಷ್ಟೇ..