ನಿನ್ನಲ್ಲೇ ಜೀವವನ್ನು ಅಡವಿಟ್ಟಿದ್ದೇನೆ ಎಂದ ರಾಧಿಕಾ ಕುಮಾರಸ್ವಾಮಿ.. ಯಾರಿಗೆ ಗೊತ್ತಾ..

0 views

ಸ್ಯಾಂಡಲ್ವುಡ್ ನಲ್ಲಿ ಅದೊಂದು ಕಾಲವಿತ್ತು.. ರಮ್ಯ ರಕ್ಷಿತಾ ರಾಧಿಕಾರೇ ಕನ್ನಡದ ಟಾಪ್ ಹೀರೋಯಿನ್ ಗಳಾಗಿದ್ದ ಕಾಲ.. ಗ್ಲಾಮರಸ್ ಪಾತ್ರಗಳಲ್ಲಿ ರಕ್ಷಿತಾ ಅವರು ಕಾಣಿಸಿಕೊಂಡರೆ.. ಮೋಹಕ ತಾರೆಯಾಗಿ ರಮ್ಯಾ ಗುರುತಿಸಿಕೊಂಡಿದ್ದರು.. ಇನ್ನು ಇದೆಲ್ಲದರ ನಡುವೆ ನಿನಗಾಗಿ ಎನ್ನುತ್ತಲೇ ಬಂದ ರಾಧಿಕಾ ಕುಮಾರಸ್ವಾಮಿ ಅವರು ಕೊನೆಗೆ ತವರಿಗೆ ಬಾ ತಂಗಿ ಅಣ್ಣ ತಂಗಿ ಅಂತಹ ಸೆಂಟಿಮೆಂಟ್ ಸಿನಿಮಾಗಳಿಗೆ ಬ್ರ್ಯಾಂಡ್ ಆಗಿ ಹೋಗಿದ್ದರು.. ಇನ್ನು ಸಾಕಷ್ಟು ವರ್ಷಗಳ ಕಾಲ ರಮ್ಯಾ ಅವರು ಚಿತ್ರರಂಗದಲ್ಲಿದ್ದು ನಂತರದಲ್ಲಿ ರಾಜಕೀಯಕ್ಕೆ ತೆರಳಿ ಅಲ್ಲಿಯೂ ಸಹ ಹೆಸರು ಮಾಡಿ ಸಂಸದೆಯಾಗಿ ಸಧ್ಯ ಬೆಂಗಳೂರಿಗೆ ಬಂದು ರಿಲ್ಯಾಕ್ಸ್ ಮೂಡ್ ನಲ್ಲಿರುವ ರಮ್ಯಾ ಅವರು ಮತ್ತೆ ಚಿತ್ರರಂಗಕ್ಕೆ ಕಂಬ್ಯಾಕ್ ಮಾಡುವ ಪ್ಲ್ಯಾನ್ ನಲ್ಲಿದ್ದಾರೆ ಎನ್ನಲಾಗುತ್ತಿದೆ..

ಇನ್ನು ಇತ್ತ ರಕ್ಷಿತಾ ಅವರು ಪ್ರೇಮ್ ಅವರನ್ನು ಮದುವೆಯಾದ ನಂತರ ಚಿತ್ರರಂಗದಿಂದ ಅದರಲ್ಲೂ ನಟಿಯಾಗಿ ಅಭಿನಯಿಸುವುದರಿಂದ ದೂರ ಉಳಿದಿದ್ದು ಸಧ್ಯ ಸಿನಿಮಾಗಳ ನಿರ್ಮಾಪಕಿಯಾಗಿ ಹಾಗೂ ಕಿರುತೆರೆ ಶೋಗಳಲ್ಲಿ ತೀರ್ಪುಗಾರರಾಗಿ ಕಾಣಿಸಿಕೊಳ್ಳುತ್ತಿದ್ದಾರೆ.. ಇನ್ನು ರಾಧಿಕಾ ಕುಮಾರಸ್ವಾಮಿ ಅವರು ಚಿತ್ರರಂಗದಲ್ಲಿ ಸಕ್ರೀಯರಾಗಿರುವ ಸಮಯದಲ್ಲಿಯೇ ಚಿತ್ರರಂಗದಿಂದ ಮಾತ್ರವಲ್ಲದೇ ರಾಜ್ಯದಿಂದಲೇ ದೂರವಾಗಿ ಹೋಗಿದ್ದರು.. ಸಾಕಷ್ಟು ವರ್ಷಗಳ ಬಳಿಕ ಕುಮಾರಸ್ವಾಮಿ ಅವರನ್ನು ಮದುವೆಯಾಗಿರುವ ವಿಚಾರ ಬಹಿರಂಗವಾಯಿತು.. ನಂತರ ಮಗು ಇರುವ ವಿವಾರವೂ ಹೊರಬಿತ್ತು..

ಇತ್ತ ಕುಮಾರಸ್ವಾಮಿ ಅವರೂ ಸಹ ಈ ವಿಚಾರವನ್ನು ಬಹಿರಂಗವಾಗಿ ಒಪ್ಪಿಕೊಂಡು ಮದುವೆಯಾಗಿರುವ ವಿಚಾರ ತಿಳಿಸಿದ್ದರು.. ನಂತರದಲ್ಲಿ ಮತ್ತೆ ಬೆಂಗಳೂರಿಗೆ ಬಂದು ನೆಲೆಸಿದ ರಾಧಿಕಾ ಅವರು ತಮ್ಮ ಹೆಸರನ್ನು ರಾಧಿಕಾ ಕುಮಾರಸ್ವಾಮಿ ಎಂದು ಬದಲಿಸಿಕೊಂಡು ಸಿನಿಮಾ ನಿರ್ಮಾಣಕ್ಕೆ ಕೈ ಹಾಕಿದರು.. ರಮ್ಯ ಹಾಗೂ ಯಶ್ ಅವರ ಅಭಿನಯದ ರಾಕಿ ಸಿನಿಮಾ ನಿರ್ಮಾಣ‌ ಮಾಡಿ ಯಶಸ್ವಿ ನಿರ್ಮಾಪಕಿಯಾಗಿಯೂ ಹೆಸರು ಮಾಡಿದರು..

ನಂತರದಲ್ಲಿ ಸಾಕಷ್ಟು ವಿಚಾರದಲ್ಲಿ ಸದ್ದು ಮಾಡಿ ಸುದ್ದಿಯಾದ ರಾಧಿಕಾ ಅವರು ನಟಿಯಾಗಿಯೂ ಚಿತ್ರರಂಗಕ್ಕೆ ಕಂಬ್ಯಾಕ್‌ ಮಾಡಿ ಗ್ಲಾಮರಸ್ ಪಾತ್ರದಲ್ಲಿಯೇ ಕಾಣಿಸಿಕೊಂಡರು.. ನಂತರದಲ್ಲಿ ಮಹಿಳಾ ಪ್ರಧಾನ ಸಿನಿಮಾಗಳಲ್ಲಿ ಮಾತ್ರ ಅಭಿನಯಿಸಿದ ರಾಧಿಕಾ ಅವರು ಇದೀಗ ಮತ್ತೆ ಚಿತ್ರರಂಗದಲ್ಲಿ ಸಕ್ರೀಯರಾಗುವತ್ತ ಗಮನ ನೀಡಿದ್ದಾರೆ ಎನ್ನಲಾಗಿದೆ.. ಇನ್ನು ಈ ನಡುವೆ ನಿನ್ನಲ್ಲೇ ಜೀವವನ್ನು ಅಡವಿಟ್ಟು ಬಂದೆ ನಾನು ಎನ್ನುತ್ತಾ ಸುಂದರ ಸಮಯ ಕಳೆಯುತ್ತಿದ್ದಾರೆ.. ಹೌದು ಕೆಲ ತಿಂಗಳುಗಳಿಂದ ಸಾಮಾಜಿಕ ಜಾಲತಾಣದಲ್ಲಿ ಅಧಿಕೃತವಾಗಿ ಸಕ್ರೀಯರಾಗಿ ಆಗಾಗ ತಮ್ಮ ಜೀವನದ ಆಗುಹೋಗುಗಳನ್ನು ಹಂಚಿಕೊಳ್ಳುತ್ತಿದ್ದಾರೆ..

ಅದೇ ರೀತಿ ಇದೀಗ ತಮ್ಮ ಸುಂದರವಾದ ವೀಡಿಯೋವೊಂದನ್ಮು ಹಂಚಿಕೊಂಡು ತನ್ಮಯಳಾದೆನು ಎನ್ನುತ್ತಾ ಭಾವನೆಗಳನ್ನು ಹಂಚಿಕೊಂಡಿದ್ದಾರೆ.. ಹೌದು ಸಧ್ಯ ಹಾಲಿಡೇ ಮೂಡ್ ನಲ್ಲಿರುವ ರಾಧಿಕಾ ಕುಮಾರಸ್ವಾಮಿ ಅವರು ಬೋಟ್ ಬೋಟ್ ನಲ್ಲಿ ಹೋಗುತ್ತಿರುವ ವೀಡಿಯೋವನ್ನು ಹಂಚಿಕೊಂಡು ಅದಕ್ಕೆ ರೊಮ್ಯಾಂಟಿಕ್ ಹಾಡೊಂದನ್ನು ಹಾಕಿ ತಮ್ಮ ಭಾವನೆಗಳನ್ನು ಹಂಚಿಕೊಂಡಿದ್ದಾರೆ.. ಹೌದು “ತನ್ಮಯಳಾದೆನು.. ತಿಳಿಯುವ ಮುನ್ನವೇ.. ಕಣ್ಮರೆಯಾಗಲೇ ಹೇಳು ಮರೆಯುವ ಮುನ್ನವೇ.. ನಿನ್ನಲ್ಲೇ ಜೀವವನ್ನು ಅಡವಿಟ್ಟು ಬಂದೆ ನಾನು.. ಕಣ್ಮುಚ್ಚಿಯೇ ನಾನೋದಲೇ ಪುಟವೊಂದನು ಹರಿಯುವ ಮುನ್ನವೇ.. ” ಎಂದು ಪರಮಾತ್ಮ ಸಿನಿಮಾದ ಹಾಡನ್ನು ಹಾಕಿಕೊಂಡಿದ್ದಾರೆ..

ಇನ್ನು ಇತ್ತ ಸಾಮಾಜಿಕ ಜಾಲತಾಣದಲ್ಲಿ ವೀಡಿಯೋ ಪೋಸ್ಟ್ ಮಾಡುತ್ತಿದ್ದಂತೆ ಅಭಿಮಾನಿಗಳು ರಾಧಿಕಾ ಕುಮಾರಸ್ವಾಮಿ ಅವರ ಚೆಲುವಿಗೆ ಮನಸೋತಿದ್ದು ಮತ್ತೆ ಒಳ್ಳೆಯ ಪಾತ್ರದ ಮೂಲಕ ಸಿನಿಮಾಗಳಲ್ಲಿ‌ ಕಾಣಿಸಿಕೊಳ್ಳಿ ಎನ್ನುತ್ತಿದ್ದಾರೆ.. ಇನ್ನು ಸಧ್ಯ ರಾಧಿಕಾ ಕುಮಾರಸ್ವಾಮಿ ಅವರು ರಜೆಗಾಗಿ ಹೊರದೇಶಕ್ಕೆ ತೆರಳಿದ್ದು ರಜೆ ಮುಗಿದ ಬಳಿಕ ಬೆಂಗಳೂರಿಗೆ ಬಂದು ಸಿನಿಮಾ ನಿರ್ಮಾಣದ ಕೆಲಸಗಳಲ್ಲಿ ತೊಡಗಿ ಕೊಳ್ಳಲಿದ್ದಾರೆ ಎನ್ನಲಾಗಿದೆ..