ಮಗುವಿನ ಆಗಮನದ ಸಂತೋಷ ಹಂಚಿಕೊಂಡ ಕನ್ನಡ ಕಿರುತೆರೆಯ ಮತ್ತೊಂದು ಖ್ಯಾತ ಜೋಡಿ..

0 views

ಈ ವರ್ಷ ಧಾರಾವಾಹಿಗಳು ಕೆಲ ದಿನಗಳ‌ ಕಾಲ ನಿಂತವು.. ಚಿತ್ರೀಕರಣವಿಲ್ಲ.. ಹೀಗೆ ತೆರೆಯ ಮೇಲಿನ ಸುದ್ದಿಗಳಿಗಿಂತ ಹೆಚ್ಚಾಗಿ ಈ ವರ್ಷ ಕಿರುತೆರೆ ಕಲಾವಿದರ ಮನೆಗಳಲ್ಲಿ ಸಂಭ್ರಮದ ಸುದ್ದಿಗಳೇ ಹೆಚ್ಚಾಗಿದೆ.. ಹೌದು ಸಾಲು ಸಾಲು ಮದುವೆಗಳು.. ಕಲಾವಿದರ ಮನೆಯಲ್ಲಿ ಸಾಲು ಸಾಲು ಶುಭ ಸಮಾರಂಭಗಳು ನೆರವೇರುತ್ತಿದ್ದು ಇದೀಗ ಕನ್ನಡ ಕಿರುತೆರೆಯ ಖ್ಯಾತ ಜೋಡಿ ಮಗುವಿನ ಆಗಮನದ ನಿರೀಕ್ಷೆಯಲ್ಲಿದ್ದು ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಸಂತೋಷ ಹಂಚಿಕೊಂಡಿದ್ದಾರೆ..

ಹೌದು ಕೆಲ ದಿನಗಳ ಹಿಂದಷ್ಟೇ ಅಶ್ವಿನಿ ನಕ್ಷತ್ರ ಧಾರಾವಾಹಿ ಖ್ಯಾತಿಯ ಮಯೂರಿ ಹಾಗೂ ಅರುಣ್ ಅವರು ಮಗುವಿನ ಸಿಹಿ ಸುದ್ದಿ ಹಂಚಿಕೊಂಡಿದ್ದರು.. ಕಳೆದ ಜೂನ್ ನಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದ ಮಯೂರಿ ಹಾಗೂ ಅರುಣ್ ಕಳೆದ ನವೆಂಬರ್ ನಲ್ಲಿ‌ ಮಗುವಿನ ಆಗಮನದ ಸಂತೋಷ ಹಂಚಿಕೊಂಡಿದ್ದರು.. ನಂತರದಲ್ಲಿ ಬಿಗ್ ಬಾಸ್ ಸೀಸನ್ ಆರರ ಖ್ಯಾತಿಯ ಅಕ್ಷತಾ ಪಾಂಡವಪುರ ಅವರು ಸಹ ತಾಯಿಯಾಗುತ್ತಿದ್ದ್ಯ್ ಜನವರಿ 2021 ರಲ್ಲಿ ಹೊಸ ಜೀವ ನಮ್ಮ ಜೀವನಕ್ಕೆ ಆಗಮಿಸುತ್ತಿದೆ.. ಎಂದು ಸಂತೋಷ ಹಂಚಿಕೊಂಡಿದ್ದರು.. ಅಷ್ಟೇ ಅಲ್ಲದೇ ವಿಭಿನ್ನವಾಗಿ ಹಾಗೂ ವಿಶೇಷವಾಗಿ ಪ್ರೆಗ್ನೆನ್ಸಿ ಫೋಟೋ ಚಿತ್ರೀಕರಣ ಮಾಡಿಸಿ ಫೋಟೋಗಳನ್ನು ಹಂಚಿಕೊಂಡಿದ್ದರು..

ಇದೀಗ ಕನ್ನಡ ಕಿರುತೆರೆಯ ಖ್ಯಾತ ಜೋಡಿಯೂ ಸಹ ಮಗುವಿನ ಆಗಮನದ ಸಿಹಿ ಸಮಾಚಾರವನ್ನು ಹಂಚಿಕೊಂಡಿದ್ದಾರೆ.. ಹೌದು ನಟ ಶ್ರವಂತ್ ಹಾಗೂ ನಟಿ ರಾಧಿಕಾ ಶ್ರವಂತ್ ತಂದೆ ತಾಯಿಯಾಗುತ್ತಿದ್ದು ಸೀಮಂತ ಶಾಸ್ತ್ರದ ಫೋಟೋ ಹಂಚಿಕೊಂಡಿದ್ದಾರೆ.. ಮಂಗಳ ಗೌರಿ‌ ಮದುವೆ ಧಾರಾವಾಹಿಯಲ್ಲಿ ಅಭಿನಯಿಸಿದ್ದ ರಾಧಿಕಾ ಹಾಗೂ ಚಿಕ್ಕಮಗಳೂರು ಚಿಕ್ಕಮಲ್ಲಿಗೆ, ನಾವಿಕ.. ಪರಾರಿ ಸೇರಿದಂತೆ ಹಲವಾರು ಸಿನಿಮಾ ಮತ್ತು ಧಾರಾವಾಹಿಗಳಲ್ಲಿಯೂ

ಅಭಿನಯಿಸಿ ನಂತರ ರಂಗನಾಯಕಿ ಧಾರಾವಾಹಿಯನ್ನು ನಿರ್ದೇಶನ ಮಾಡುವ ಮೂಲಕ ಯಶಸ್ಸು ಪಡೆದ ನಟ ಹಾಗೂ ನಿರ್ದೇಶಕನಾಗಿ ಗುರುತಿಸಿಕೊಂಡಿದ್ದ ಶ್ರವಂತ್ ಅವರು ಕಳೆದ ಫೆಬ್ರವರಿಯಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು.. ಪ್ರೀತಿಸಿ‌ ಮನೆಯವರ ಒಪ್ಪಿಗೆ ಪಡೆದು ನೂತನ ಜೀವನಕ್ಕೆ ಕಾಲಿಟ್ಟ ಈ ಜೋಡಿ ಆಗಾಗ ಫೋಟೋಗಳನ್ನು ಹಂಚಿಕೊಳ್ಳುತ್ತಿದ್ದರು.

ಇದೀಗ ಮಗುವಿನ ಆಗಮನದ ನಿರೀಕ್ಷೆಯಲ್ಲಿರುವ ಬಗ್ಗೆ ರಾಧಿಕಾ ಶ್ರವಂಯ್ ಇಬ್ಬರೂ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡುವ ಮೂಲಕ ಸಂತೋಷ ಹಂಚಿಕೊಂಡಿದ್ದಾರೆ.. ಮಂಗಳ ಗೌರಿ‌ಮದುವೆ ಹಾಗೂ ವಿಷ್ಣು ದಶವತಾರ ಧಾರಾವಾಹಿಯಲ್ಲಿ ಅಭಿನಯಿಸಿದ್ದ ರಾಧಿಕಾ ಅವರು ಮದುವೆಯ ನಂತರ ಧಾರಾವಾಹಿಯಿಂದ ದೂರ ಉಳಿದಿದ್ದರು.. ಆದರೆ ವಿನಯ್ ರಾಜ್ ಕುಮಾರ್ ಅವರ ಗ್ರಾಮಾಯಣ ಸಿನಿಮಾದಲ್ಲಿ ಅಭಿನಯಿಸಿದ್ದು ಬಿಡುಗಡೆಯಾಗಬೇಕಿದೆ.. ಸದ್ಯ ತಮ್ಮ ಜೀವನಕ್ಕೆ ಹೊಸ ಜೀವವನ್ನು ಬರಮಾಡಿಕೊಳ್ಳುತ್ತಿರುವ ಈ ಜೋಡಿಗೆ ಸ್ನೇಹಿತರು ಶುಭ ಕೋರಿ ಹಾರೈಸಿದ್ದಾರೆ..