ದಯವಿಟ್ಟು ಎದೆ ಹಾಲು ದಾನ ಮಾಡಿ ಎಂದು ಕೇಳಿಕೊಂಡ ರಾಧಿಕಾ ಪಂಡಿತ್.. ಕಾರಣವೇನು ಗೊತ್ತಾ..

0 views

ರಾಧಿಕಾ ಪಂಡಿತ್.. ಸ್ಯಾಂಡಲ್ವುಡ್ ನ ರಾಕಿಂಗ್ ಜೋಡಿ ಯಶ್ ಹಾಗೂ ರಾಧಿಕಾ ಪಂಡಿತ್ ಕೆಲ ವರ್ಷಗಳ ಹಿಂದೆ ಮದುವೆಯಾಗಿ ಮುದ್ದಾದ ಎರಡು ಮಕ್ಕಳೂ ಸಹ ಆದವು.. ಮಕ್ಕಳಿಗೆ ಜನ್ಮ ನೀಡಿದ ಬಳಿಕ ನಟನೆಯಿಂದ ಸಂಪೂರ್ಣವಾಗಿ ದೂರ ಉಳಿದ ರಾಧಿಕಾ ಪಂಡಿತ್ ತಮ್ಮ ತಾಯ್ತನದ ಜವಾಬ್ದಾರಿಗಳನ್ನು ನಿಭಾಯಿಸುವಲ್ಲಿ ಬ್ಯುಸಿ ಆಗಿದ್ದು ಮುಂಬರುವ ದಿನಗಳಲ್ಲಿ ಸಿನಿಮಾದಲ್ಲಿ ಕಾಣಿಸಿಕೊಳ್ಳುವುದು ಅನುಮಾನವಾಗಿದೆ.. ಸಧ್ಯ ಇತ್ತ ಮಕ್ಕಳು ಸಹ ದೊಡ್ಡವರಾಗುತ್ತಿದ್ದು ಮಕ್ಕಳನ್ನು ನೋಡಿಕೊಂಡು ಮನೆ ಮಕ್ಕಳು ಕುಟುಂಬ ಎಂದು ಸಮಯ ಕಳೆಯುತ್ತಿದ್ದಾರೆ ರಾಧಿಕಾ.. ಆದರೆ ಇಂತಹ ಸಮಯದಲ್ಲಿ ಇದೀಗ ಎದೆ ಹಾಲಿನ ಬಗ್ಗೆ ಮಾತನಾಡಿ ಜನರಿಗೆ ಎದೆ ಹಾಲನ್ನು ದಾನ ಮಾಡುವಂತೆ ಮನವಿ ಮಾಡಿಕೊಂಡಿದ್ದಾರೆ..

ಹೌದು ರಾಧಿಕಾ ಪಂಡಿತ್ ಅವರು ಮಕ್ಕಳ ವಿಚಾರ ಅಂತ ಬಂದಾಗ ಬಹಳ ಕಾಳಜಿ ವಹಿಸುವರು.. ಯಾವುದಕ್ಕೂ ಸಹ ರಾಜಿ ಮಾಡಿಕೊಳ್ಳುವುದಿಲ್ಲ.. ಇನ್ನು ಮಕ್ಕಳ ಆರೋಗ್ಯದ ವಿಚಾರ ಅಂತ ಬಂದಾಗ ಎಲ್ಲಾ ತಾಯಿಯರಂತೆ ರಾಧಿಕಾ ಸಹ ಮಕ್ಕಳಿಗೆ ಮೊದಲ ಪ್ರಾಮುಖ್ಯತೆ ನೀಡುವರು.. ಈ ವಿಚಾರವನ್ನು ಒಮ್ಮೆ ಯಶ್ ಅವರೂ ಸಹ ಸಂದರ್ಶನವೊಂದರಲ್ಲಿ ಹಂಚಿಕೊಂಡಿದ್ದುಂಟು.. ಕೆಜಿಎಫ್ ಸಿನಿಮಾದಲ್ಲಿ ಬರುವ ಸಂಭಾಷಣೆ “ತಾಯಿಗಿಂತ ದೊಡ್ಡ ಯೋಧ ಮತ್ತೊಬ್ಬರಿಲ್ಲ” ಎಂಬ ಮಾತನ್ನು ರಾಧಿಕಾ ಅವರು ಒಂದು ಸನ್ನಿವೇಷದಲ್ಲಿ ಮಕ್ಕಳ ಬಗ್ಗೆ ನಡೆದುಕೊಂಡ ರೀತಿಯನ್ನು ನೋಡಿಯೇ ಬರೆದದ್ದು ಎಂದಿದ್ದರು..

ಅದೇ ರೀತಿ ರಾಧಿಕಾ ಇದೀಗ ಬೇರೆ ಮಕ್ಕಳಿಗೂ ಸಹ ನೆರವಾಗಲಿ ಎಂದು ಭಾವಿಸಿ ಬೇರೆ ಮಕ್ಕಳ ಆರೋಗ್ಯದ ಕಾಳಜಿ ವಹಿಸುವ ಸಲುವಾಗಿ ಹೊಸದೊಂದು ಹೆಜ್ಜೆ ಇಟ್ಟಿದ್ದಾರೆ.. ಹೌದು ಮಕ್ಕಳ ಆರೋಗ್ಯಯುತ ಬೆಳವಣಿಗೆಗೆ ತಾಯಿಯ ಎದೆ ಹಾಲು ಬಹಳ ಮುಖ್ಯ.. ಪ್ರತಿದಿನ ಲಕ್ಷಾಂತರ ಮಕ್ಕಳು ಎದೆ ಹಾಲಿನಿಂದ ವಂಚಿತರಾಗುತ್ತಿರುವುದು ನಿಜ.. ಇನ್ನು ಮತ್ತೊಂದು ಕಡೆ ಅದೆಷ್ಟೋ ತಾಯಂದಿರಿಗೆ ಅಗತ್ಯಕ್ಕಿಂತ ಹೆಚ್ಚು ಎದೆ ಹಾಲು ಇದ್ದು ತಮ್ಮ ಮಕ್ಕಳಿಗೆ ಸಾಕಾಗಿ ವ್ಯರ್ಥವಾಗುತ್ತಿರುವುದು ಸಹ ಅಷ್ಟೇ ಸತ್ಯ.. ಅಂತಹ ತಾಯಂದಿರು ತಮ್ಮಲ್ಲಿ ಸಿಗುವ ಅಮೃತದಂತಹ ಆ ಎದೆ ಹಾಲನ್ನು ದಾನ ಮಾಡಿದರೆ ಅದೆಷ್ಟೋ ಮಕ್ಕಳ ಜೀವವನ್ನು ಸಹ ಉಳಿಸಬಹುದಾಗಿದೆ..

ಇನ್ನು ಈಗಲೂ ಸಹ ಬೆಂಗಳೂರು ಹಾಗೂ ಇನ್ನಿತರ ದೊಡ್ಡ ದೊಡ್ಡ ಮಹನಾಗರಗಳಲ್ಲಿ ಎಗ್ಗಿಲ್ಲದೇ ಎದೆ ಹಾಲನ್ನು ಹೆಚ್ಚೆಚ್ಚು ಹಣಕ್ಕಾಗಿ ಮಾರಾಟವೂ ಮಾಡಲಾಗುತ್ತಿದೆ.. ಇತ್ತ ವಿಧಿಯಿಲ್ಲದೇ ತಮ್ಮ ಮಕ್ಕಳನ್ನು ಉಳಿಸಿಕೊಳ್ಳುವ ಸಲುವಾಗಿ ಕೆಲವರು ಕೇಳಿದಷ್ಟು ಹಣ ಕೊಟ್ಟು ಎದೆ ಹಾಲನ್ನು‌ ಪಡೆಯೋದುಂಟು.. ಈಗಿನ ಸಿಟಿ ಜೀವನ ಶೈಲಿಗೆ ಹೊಂದಿಕೊಂಡು ಆಹಾರ ಪದ್ಧತಿ ಸರಿಯಾಗಿ ಇರದ ಎಷ್ಟೋ ತಾಯಂದಿರಿಗೆ ಎದೆ ಹಾಲು ಸರಿಯಾಗಿ ಬರದ ಕಾರಣ ಮಕ್ಕಳು ಅಪೌಷ್ಟಿಕತೆಗೆ ಗುರಿಯಾಗಬಹುದಾಗಿದೆ.. ಈ ಕಾರಣಕ್ಕಾಗಿ ಎದೆ ಹಾಲನ್ನು ದಾನ ಮಾಡಿ ಎಂಬ ಅಭಿಯಾನ ಆಗಾಗ ಮಾಡುತ್ತಿದ್ದು ಇದೀಗ ರಾಧಿಕಾ ಪಂಡಿತ್ ಅವರೂ ಸಹ ವೀಡಿಯೋ ಮೂಲಕ ಮನವಿ ಮಾಡಿಕೊಂಡಿದ್ದಾರೆ..

“ಜೀವನದ ಅತ್ಯಮೂಲ್ಯ ಉಡುಗೊರೆಗಳಲ್ಲಿ ಎದೆ ಹಾಲು ಕೂಡ ಒಂದು.. ಎದೆ ಹಾಲಿನಲ್ಲಿ ಇರುವ ಅಂಶಗಳನ್ನು ಮತ್ಯಾವುದಕ್ಕೂ ಹೋಲಿಸಲು ಸಾಧ್ಯವಿಲ್ಲ.. ಆಗಷ್ಟೇ ಹುಟ್ಟಿರುವ ಮಕ್ಕಳಿಗೆ ಎದೆ ಹಾಲು ತುಂಬಾನೆ ಮುಖ್ಯ.. ಪೋಷಕಾಂಶಗಳು ಹಾಗೂ ರೋಗ ನಿರೋಧಕ ಶಕ್ತಿಯ ಗುಣಗಳು ಈ ಎದೆ ಹಾಲಿನಲ್ಲಿ ಮಾತ್ರ ಇದೆ.. ಎಳೆ ಮಕ್ಕಳಿಗೆ ಎದೆ ಹಾಲು ತುಂಬಾನೇ ಮುಖ್ಯ‌. ಭಾರತದಲ್ಲಿ ಅದೆಷ್ಟೋ ಮಕ್ಕಳು ಎದೆ ಹಾಲು ಸಿಗದೇ ವಂಚಿತರಾಗುತ್ತಿದ್ದಾರೆ.. ಅಂತಹ ಮಕ್ಕಳಿಗಾಗಿ ಎದೆ ಹಾಲು ದಾನ ಮಾಡಿ.. ಅವರಿಗೆಲ್ಲಾ ಇದರಿಂದಾಗಿ ಸಹಾಯವಾಗುತ್ತದೆ.. ಈಗ ಎಲ್ಲಾ ಜಿಲ್ಲೆಗಳಲ್ಲಿಯೂ ಮಿಲ್ಕ್ ಬ್ಯಾಂಕ್‌ ಅನ್ನು ಶುರು ಮಾಡಿದ್ದಾರೆ.. ಯಾವ ತಾಯಂದಿರಿಗೆ ಅಗತ್ಯಕ್ಕಿಂತ ಹೆಚ್ಚಾಗಿ ಎದೆ ಹಾಲು ಇದೆ.. ಯಾವ ತಾಯಂದಿರು ಎದೆ ಹಾಲನ್ನು ದಾನ ಮಾಡಬಹುದು ಅಂತಹವರಿಂದ ತುಂಬಾನೇ ಸಹಾಯವಾಗುತ್ತದೆ…

ಇದರ ಜೊತೆಗೆ ಎದೆ ಹಾಲು ದಾನ ಮಾಡಿ ಜೀವಗಳನ್ನು ಉಳಿಸಿ ಎಂಬ ಉದ್ದೇಶದಿಂದ ಮಾರ್ಚ್ 27 ರಂದು ಎದೆ ಹಾಲು ದಾನದ ಬಗ್ಗೆ ಮಾಹಿತಿ ನೀಡಲು ಬೆಂಗಳೂರಿನಲ್ಲಿ ಕಾಲ್ನಡಿಗೆ ಜಾಥಾವನ್ನು ಹಮ್ಮಿಕೊಳ್ಳಲಾಗಿದೆ.. ಅದರಲ್ಲಿ ಭಾಗವಹಿಸುವಂತೆಯೂ ರಾಧಿಕಾ ಪಂಡಿತ್ ಮನವಿ ಮಾಡಿಕೊಂಡಿದ್ದಾರೆ.. ಸ್ಟಾರ್ ಗಳಾದ ಬಳಿಕ ತಾವಾಯ್ತು ತಮ್ಮ ಕುಟುಂಬವಾಯ್ತು ಎಂದು ಇರುವ ಅದೆಷ್ಟೋ ಜನರ ನಡುವೆ ಸಾಮಾಜಿಕ ಕಾಳಜಿ ತೋರುವ.. ರಾಧಿಕಾ ಹಾಗೂ ಯಶ್ ಜೋಡಿ ನಿಜಕ್ಕೂ ಗ್ರೇಟ್ ಎನ್ನಬಹುದು.. ಇವರ ಈ ಸಮಾಜ ಪರ ಕೆಲಸಗಳು ಹೀಗೆ ಮುಂದುವರೆಯಲಿ..