ಲೇಬರ್ ವಾರ್ಡ್ ನಲ್ಲಿ ತೆಗೆದ ಮಗನ ಮೊದಲ ಫೋಟೋ ಹಂಚಿಕೊಂಡ ರಾಧಿಕಾ ಪಂಡಿತ್.. ಮಗನಿಗೆ ಹೇಳಿದ್ದೇನು ಗೊತ್ತಾ?

0 views

ಸ್ಯಾಂಡಲ್ವುಡ್ ನ ರಾಕಿಂಗ್ ಜೋಡಿ ಯಶ್ ಹಾಗೂ ರಾಧಿಕಾ ಪಂಡಿತ್ ಅವರ ಮಗ ಯಥರ್ವ್ ಯಶ್ ನ ಮೊದಲ ವರ್ಷದ ಹುಟ್ಟುಹಬ್ಬವಿಂದು.. ಕೊರೊನಾ ಕಾರಣದಿಂದಾಗಿ ಅದ್ಧೂರಿ ಸಮಾರಂಭ ಮಾಡದೇ ಮನೆಯಲ್ಲಿಯೇ ಸ್ನೇಹಿತರು ಆಪ್ತರ ಜೊತೆ ಮಗನ ಹುಟ್ಟುಹಬ್ಬ ಆಚರಿಸಲು ಯಶ್ ಹಾಗೂ ರಾಧಿಕಾ ಪಂಡಿತ್ ಅವರು ನಿರ್ಧಾರ ಮಾಡಿದ್ದಾರೆ.. ಕಳೆದ ವರ್ಷ ಮಗಳು ಐರಾಳ ಮೊದಲ ವರ್ಷದ ಹುಟ್ಟುಹಬ್ಬವನ್ನು ಅದ್ಧೂರಿಯಾಗಿ ಸ್ಯಾಂಡಲ್ವುಡ್ ನ ಎಲ್ಲಾ ತಾರೆಯರನ್ನು ಆಹ್ವಾನಿಸಿ ಫನ್ ವರ್ಲ್ಡ್ ನಲ್ಲಿ ಮಗಳಿಗೆ ಸದಾ ನೆನಪಿನಲ್ಲಿರುವ ರೀತಿಯಲ್ಲಿ ಹುಟ್ಟುಹಬ್ಬ ಆಚರಿಸಿದ್ದರು.. ವಿಶೇಷ ವೀಡಿಯೋ ಮಾಡಿಸಿ ಸಾಮಾಜಿಕ ಜಾಲತಾಣದಲ್ಲಿ ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದರು..

ಅದೇ ರೀತಿ ಮಗನ ಹುಟ್ಟುಹಬ್ಬವನ್ನೂ ಸಹ ಅದ್ಧೂರಿಯಾಗಿ ಮಾಡಬೇಕೆಂಬ ಪ್ಲಾನ್ ನಲ್ಲಿದ್ದರು ಯಶ್ ಹಾಗೂ ರಾಧಿಕಾ ಪಂಡಿತ್ ಅವರು.. ಆದರೆ ಕೊರೊನಾ ಕಾರಣದಿಂದ ಆ ಎಲ್ಲಾ ಪ್ಲಾನ್ ಗಳನ್ನು ತೆಗೆದು ಹಾಕಿ ಕೆಲ ಸ್ನೇಹಿತರು ಹಾಗೂ ಕುಟುಂಬದವರ ನಡುವೆ ಹುಟ್ಟುಹಬ್ಬ ಆಚರಣೆ ಮಾಡುತ್ತಿದ್ದಾರೆ.. ಇನ್ನು ಈ ರಾಕಿಂಗ್ ಜೋಡಿ ತಮ್ಮ ಜೀವನದ ಪ್ರತಿಯೊಂದು ವಿಶೇಷ ವಿಚಾರವನ್ನೂ ಸಹ ಅಭಿಮಾನಿಗಳೊಂದಿಗೆ ವಿಶೇಷವಾಗಿಯೇ ಹಂಚಿಕೊಳ್ಳುತ್ತಾ ಬಂದಿದ್ದಾರೆ.. ಇದೀಗ ಮಗನ ಹುಟ್ಟುಹಬ್ಬಕ್ಕೂ ಸಹ ವಿಶೇಷವಾದ ಫೋಟೋ ಪೋಸ್ಟ್ ಮಾಡುವ ಮೂಲಕ ರಾಧಿಕಾ ಪಂಡಿತ್ ಅವರು ಮಗನಿಗೆ ಶುಭ ಕೋರಿದ್ದಾರೆ..

ಹೌದು ಕೆಲ ದಿನಗಳ ಹಿಂದಷ್ಟೇ ಯಶ್ ಹಾಗೂ ರಾಧಿಕಾ ತಮ್ಮ ಫಾರ್ಮ್ ಹೌಸ್ ನಲ್ಲಿ ಮಗನಿಗೆ ನಾಮಕರಣ ಸಮಾರಂಭ ಏರ್ಪಡಿಸಿ ಯಥರ್ವ್ ಯಶ್ ಎಂಬ ಹೆಸರನ್ನಿಟ್ಟಿದ್ದರು.. ಮಗಳಿಗೆ ವಿಶೇಷ ಹಾಡಿನ ಮೂಲಕ ಹೆಸರಿಟ್ಟ ರೀತಿಯಲ್ಲಿಯೇ ಮಗನಿಗೂ ಹಾಡೊಂದನ್ನು ಕಂಪೋಸ್ ಮಾಡಿಸಿ ರಾರಾಜಿಸುತ ಬದುಕು ಮಗನೇ ಎಂದು ಹಾರೈಸಿದ್ದರು.. ಇದೀಗ ಹುಟ್ಟು ಹಬ್ಬದ ದಿನ ರಾಧಿಕಾ ಪಂಡಿತ್ ಅವರು ತಮ್ಮ ಮಗ ಹುಟ್ಟಿದ ದಿನ ತೆಗೆದ ಮೊದಲ ಫೋಟೋ ಹಂಚಿಕೊಂಡು ಮಗನಿಗೆ ಶುಭಾಶಯ ತಿಳಿಸಿದ್ದಾರೆ..

ಹೌದು ಯಥರ್ವ್ ಯಶ್ ನ ಹುಟ್ಟುಹಬ್ಬದ ಪ್ರಯುಕ್ತ ರಾಧಿಕಾ ಪಂಡಿತ್ ಅವರು ಸಾಮಾಜಿಕ ಜಾಲತಾಣದಲ್ಲಿ ಮಗನ ಕೆಲ ವಿಶೇಷ ಫೋಟೋಗಳನ್ನು ಅದರಲ್ಲೂ ಮಗ ಹುಟ್ಟಿದ ದಿನ ಲೇಬರ್ ವಾರ್ಡ್ ನಲ್ಲಿ ತೆಗೆದ ಮೊದಲ ಫೋಟೋವನ್ನು ಕೊಲಾಜ್ ಮಾಡಿ ಜೊತೆಗೆ.. “ಸದಾ ಎಂದೆಂದಿಗೂ ನನ್ನ ಬೇಬಿ ಬಾಯ್ ಆಗಿರುವ ನನ್ನ ಮಗನಿಗೆ ಹುಟ್ಟುಹಬ್ಬದ ಶುಭಾಶಯ.. ಲವ್ ಯು” ಎಂದು ಬರೆದು ಪೋಸ್ಟ್ ಮಾಡಿದ್ದಾರೆ..

ಇನ್ನು ಅಭಿಮಾನಿಗಳು ಕಮೆಂಟ್ ಗಳ ಮೂಲಕ ಜೂನಿಯರ್ ಯಶ್ ಗೆ ಶುಭಾಶಯ ತಿಳಿಸಿದ್ದಾರೆ.. ಸದ್ಯ ಯಥರ್ವ್ ಯಶ್ ನ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು ಜೂನಿಯರ್ ಗೆ ಶುಭಾಶಯಗಳ ಮಹಾಪೂರವೇ ಹರಿದು ಬಂದಿದೆ..