ಪುನೀತ್ ರವರ ಹಣ ಆಸ್ತಿ ಹಾಗೂ ಕಾರ್ ಗಳ ಬಗ್ಗೆ ತಿಳಿಸಿದ ರಾಘಣ್ಣ.. ಕಾರಣವೇನು ಗೊತ್ತಾ..

0 views

ಪುನೀತ್ ರಾಜ್ ಕುಮಾರ್ ಅವರು ಅಗಲಿ ಇಂದಿಗೆ ಒಂದು ತಿಂಗಳು ಕಳೆದೇ ಹೋಯಿತು.. ಅಶ್ವಿನಿ ಪುನೀತ್ ಅವರು ಮಗಳು ವಂದಿತಾ ಹಾಗೂ ರಾಘಣ್ಣ, ಶಿವಣ್ಣ ಹಾಗೂ ಎಲ್ಲಾ ಕುಟುಂಬಸ್ಥರಿಂದ ಇಂದು ಸಮಾಧಿ ಬಳಿ ಪೂಜೆ ಸಲ್ಲಿಸಿ ತಿಂಗಳ ಕಾರ್ಯ ಮಾಡಲಾಗುತ್ತಿದೆ‌‌.. ಇನ್ನು ಎಷ್ಟೇ ನೋವಿದ್ದರೂ ಸಹ ಮನೆಯಲ್ಲಿಯೂ ಮಾಡಬೇಕಾದ ಎಲ್ಲಾ ಕಾರ್ಯಗಳನ್ನು ಮಾಡಲಾಗುತ್ತಿದ್ದು ಪುನೀತ್ ಅವರಿಗೆ ಶಾಂತಿ ಸಿಗಲೆಂದು ಪೂಜೆ ಸಲ್ಲಿಸಲಾಗುತ್ತಿದೆ.. ಇನ್ನು ಇತ್ತ ತಿಂಗಳು ಕಳೆದರೂ ಸಹ ಆ ನೋವು ಮನಸ್ಸಿನ ಅದೊಂದು ಸಂಕಟ ಕಡಿಮೆಯಾಗದೇ ಇರುವುದು ಒಬ್ಬ ಮನುಷ್ಯ ತಾನು ಹೋದ ನಂತರ ನಮಗೆ ಇಷ್ಟೆಲ್ಲಾ ನೋವಾಗಬಹುದಾ ಎಂದು ಅರಿವಾಗುವಂತೆ ಮಾಡಿದ್ದು ನಿಜಕ್ಕೂ ಅಪ್ಪುವಿನ ಅಗಲಿಕೆಯೆ.. ವಯಸ್ಸಾದ ಬಳಿಕ ಇನ್ನಷ್ಟು ವರ್ಷಗಳ ಕಾಲ ಬಾಳಿದ ನಂತದ ಅಗಲಿದಿದ್ದರೆ ಬಹುಶಃ ಈ ನೋವು ಕೊಂಚ ಕಡಿಮೆಯಾಗಿರುತಿತ್ತೋ ಅಥವಾ ಮತ್ತಷ್ಟು ಪುಣ್ಯ ಕಾರ್ಯ ಮಾಡಿ ಆತನೇ ದೇವರಾಗಿ ಬಿಡುವನೆಂದು ದೇವರು ಕರೆದುಕೊಂಡನೋ ಏನೋ ಒಟ್ಟಿನಲ್ಲಿ ತಿಂಗಳಾದರೂ ಸಹ ಮನಸ್ಸಿನ ಭಾರ ಮಾತ್ರ ಕಡಿಮೆಯಾಗದಂತಾಗಿದೆ..

ಇನ್ನು ನಿನ್ನೆಯಷ್ಟೇ ಕಿರುತೆರೆ ಕಲಾವಿದರು ತಂತ್ರಜ್ಞರು ಹಾಗೂ ಸಂಪೂರ್ಣ ಕಿರುತೆರೆ ಮಂದಿಯಿಣ್ದ ನಿನ್ನೆ ಅಪ್ಪುವಿಗೆ ಶ್ರದ್ಧಾಂಜಲಿ ಕಾರ್ಯಕ್ರನವನ್ನು ಏರ್ಪಡಿಸಿದ್ದರು.. ರಾಘಣ್ಣನ ಕುಟುಂಬ ಹಾಗೂ ಪುನೀತ್ ಅವರ ಅಕ್ಕ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.. ಇದೇ ಸಮಯದಲ್ಲಿ ಕಿರುತೆರೆಯ ಸಾಕಷ್ಟು ಕಲಾವಿದರು ಅಪ್ಪು ಅವರ ಜೊತೆಯ ಒಡನಾಟವನ್ನು ತಿಳಿಸಿ ಭಾವುಕರಾದರು.. ಅದೆಷ್ಟೋ ಕಿರುತೆರೆ ಕಲಾವಿದರಿಗೆ ಅಪ್ಪು ಸಹಾಯ ಮಾಡಿದ್ದರ ಬಗ್ಗೆಯೂ ಹೇಳಿಕೊಂಡರು.. ಪುಣ್ಯಾತ್ಮ ಇದ್ದದ್ದು ನಲವತ್ತಾರು ವರ್ಷ ಆದರೆ ನಮ್ಮ ತಲೆಮಾರುಗಳು ಇರುವವರೆಗೂ ಆತನ ಪುಣ್ಯ ಕಾರ್ಯಗಳನ್ನು ಹೇಳುವಷ್ಟು ಮಾಡಿ ಹೋಗಿದ್ದಾರೆ.. ಹೌದು ಕಿರುತೆರೆಯಲ್ಲಿ ಸಾಕಷ್ಟು ಕಾರ್ಯಕ್ರಮಗಳನ್ನು ಮಾಡಿದ್ದ ಪುನೀತ್ ರಾಜ್ ಕುಮಾರ್ ಅವರು ಸ್ವಲ್ಪವೂ ಅಹಂಕಾರವಿಲ್ಲದೇ ತಮ್ಮನ್ನು ಕರೆದ ಶೋಗಳಿಗೆಲ್ಲಾ ಅತಿಥಿಯಾಗಿ ಹೋಗುತ್ತಿದ್ದರು.. ಆ ಕಾರ್ಯಕ್ರಮ ಮಕ್ಕಳದ್ದೋ ಅಥವಾ ಮತ್ತೊಬ್ಬರಿಗೆ ಸಹಾಯ ವಾಗಲೋ ಮಾಡುತ್ತಿದ್ದ ಕಾರ್ಯಕ್ರಮವಾದರೆ ಒಂದು ರೂಪಾಯಿ ಸಂಭಾವನೆಯನ್ನೂ ಸಹ ಪಡೆಯುತ್ತಿರಲಿಲ್ಲ..

ಪುನೀತ್ ಅವರು ತಮ್ಮಗಳ ಜೊತೆ ನಡೆದುಕೊಳ್ಳುತ್ತಿದ್ದ ರೀತಿ ತಮ್ಮಗಳ ಜೊತೆ ತೋರುತ್ತಿದ್ದ ಸರಳತೆ ಮಾಡುತ್ತಿದ್ದ ಸಹಾಯ ಎಲ್ಲವನ್ನೂ ಸಹ ಕಿರುತೆರೆ ಮಂದಿ ನೆನಪಿಸಿಕೊಂಡರು.. ಇನ್ನು ಇದೇ ಸಮಯದಲ್ಲಿ ರಾಘಣ್ಣನವರು ಸಹ ಮಾತನಾಡಿದ್ದು ನಿಜಕ್ಕೂ ಅವರ ಮಾತುಗಳು ಮನಕಲಕುವಂತಿತ್ತು.. ಅಷ್ಟೇ ಅಲ್ಲದೇ ಪುನೀತ್ ಅವರ ಹಣ ಆಸ್ತಿಯ ಬಗ್ಗೆಯೂ ಮಾತನಾಡಿದ್ದಾರೆ.. ಹೌದು ಅಪ್ಪು ಹೋದ ನಂತರ ಬಹಳ ಗಟ್ಟಿ ಮನಸ್ಸು ಮಾಡಿಕೊಂಡು ಪುನೀತ್ ರನ್ನು ಚೆನ್ನಾಗಿ ಕಳುಹಿಸಿಕೊಡಬೇಕೆಂದು ಗಟ್ಟಿಯಾಗಿ ನಿಂತದ್ದು ರಾಘಣ್ಣ ಅವರೇ.. ತಮ್ಮ ಭಾವನೆಗಳನ್ನು ವ್ಯಕ್ತ ಪಡಿಸದೇ ಮನಸ್ಸಿನಲ್ಲಿಯೇ ಇಟ್ಟುಕೊಂಡು ಜನರ ಮುಂದೆ ಗಟ್ಟಿಯಾಗಿ ನಿಂತು ಪುನೀತ್ ರ ಕಾರ್ಯ ಸುಸೂತ್ರವಾಗಿ ನೆರವೇರುವಂತೆ ನೋಡಿಕೊಂಡರು.. ಆದರೆ ಕಳೆದ ಪುನೀತ್ ಗೀತ ನಮನ ಕಾರ್ಯಕ್ರಮದಲ್ಲಿಯೇ ತಮ್ಮ ದುಃಖವನ್ನು ವೇದಿಕೆ ಮೇಲೆ ಹಂಚಿಕೊಂಡು ನನ್ನನ್ನು ಕರೆದುಕೊಂಡು ನನ್ನ ತಮ್ಮನನ್ನು ಕರೆಸಿಕೊಳ್ಳಿ ಎಂದು ಕಣ್ಣೀರಿಟ್ಟಿದ್ದರು..

ಇನ್ನು ನಿನ್ನೆ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ರಾಘಣ್ಣ.. ಸಾಕಷ್ಟು ವಿಚಾರಗಳನ್ನು ಹಂಚಿಕೊಂಡರು.. “ನೀವು ಸಾಕಷ್ಟು ದೊಡ್ಡ ದೊಡ್ಡ ಮನುಷ್ಯರನ್ನ ನೋಡಿ ಶಂಕರಾಚಾರ್ಯರು ವಿವೇಕಾನಂದರು ಎಲ್ಲರೂ ಅಷ್ಟೇ ಎಪ್ಪತ್ತು ಎಂಭತ್ತು ವರ್ಷದಲ್ಲಿ ಮಾಡಬೇಕಾದನ್ನು ಮೂವತ್ತು ನಲವತ್ತು ವರ್ಷದಲ್ಲಿ ಮಾಡಿ ಹೋಗ್ತಾರೆ.. ಅವರಿಗೆ ಇದ್ದ ಆಯಸ್ಸು ಅಷ್ಟೇ.. ದೇವರು ಯೋಚನೆ ಮಾಡ್ತಾನೆ.. ನೀನ್ ಯಾರಯ್ಯಾ ನನ್ನ್ ಕೆಲಸನಾ ನೀನ್ ಮಾಡ್ತಿದ್ದೀಯಾ ಸಾಕ್ ಬಾ ಅಂತಾನೆ.. ಅವನು ಏನ್ ಕಲಿಸಿಕೊಟ್ಟು ಹೋದ ಅಂದ್ರೆ ನೂರಾರು ವರ್ಷ ಹಂದಿಯಾಗಿ ಬದುಕೋದಕ್ಕಿಂತ ಕೆಲವು ವರ್ಷ ನಂದಿಯಾಗಿ ಬದುಕಿಬಿಟ್ಟು ಹೋಗು ಅನ್ನೋದನ್ನ ಕಲಿಸಿದ.. ಅವನು ಹೋದಾಗಿನಿಂದ ಸಮಾಜದಲ್ಲಿ ಸಾಕಷ್ಟು ಬದಲಾವಣೆ ಆಗಿದೆ.. ಅದು ನನಗೆ ಕಾಣ್ತಾ ಇದೆ.. ನನ್ನಲ್ಲೂ ಸಾಕಷ್ಟು ಬದಲಾವಣೆ ಆಗಿದೆ.. ಜನರು ಒಂದು ರೂಪಾಯಿ ಕೊಡ್ತಾ ಇದ್ದ ಜಾಗದಲ್ಲಿ ಎರಡು ರೂಪಾಯಿ ಕೊಟ್ಟು ಹೋಗ್ತಾ ಇದ್ದಾರೆ.. ನಮಗೆ ಪುಣ್ಯ ಇಲ್ಲ ಅಷ್ಟೇ.. ಅವನ ಜೊತೆ ಮತ್ತಷ್ಟು ದಿನ ಇರೋದು.. ನಮ್ಮ ತಂದೆ ಅಂದುಕೊಂಡಿದ್ದನ್ನೆಲ್ಲಾ ಅವನು ಮಾಡಿ ತೋರಿಸಿಬಿಟ್ಟು ಹೋದ ಅಷ್ಟೇ ಎಂದರು..

ಇನ್ನು ಮನುಷ್ಯನಿಗೆ ಎಷ್ಟೇ ಹಣವಿದ್ದರೂ ಆಸ್ತಿ ಇದ್ದರೂ ಕಾರು ಬಂಗಲೆ ಇದ್ದರೂ ನಮ್ಮ ಸಮಯ ಮುಗಿದ ಕೂಡಲೇ ಹೊರಡಬೇಕೆಂಬುದು ವಾಸ್ತವ.. ಅದನ್ನು ಅಪ್ಪು ವಿಚಾರದಲ್ಲಿಯೂ ಹೇಳಿದ ರಾಘಣ್ಣ ಪುನೀತ್ ಅವರ ಬಳಿ ಇದ್ದ ಕಾರ್ ಗಳು ಮನೆಗಳು ಹಣ ಎಲ್ಲವೂ ಇತ್ತು ಆದರೆ ಪ್ರಯೋಜನವಿಲ್ಲ ಎಂದಿದ್ದಾರೆ.. ಹೌದು ” ನಾವ್ ಯಾರನ್ನ ಏನ್ ಹೇಳಕ್ಕಾಗತ್ತೆ.. ಯಾರದ್ದೂ ತಪ್ಪು ಅಂತಿಲ್ಲ.. ಆದರೆ ನನಗೆ ಏನ್ ಕಾಡ್ತಾ ಇದೆ ಅಂದ್ರೆ.. ಅಪ್ಪುಗೆ ಅವತ್ತು ಎಲ್ಲವೂ ಇತ್ತು.. ಕೋಟ್ಯಾಂತರ ರೂಪಾಯಿ ದುಡ್ಡಿತ್ತು.. ಆರು ಏಳು ಕಾರ್ ಇತ್ತು.. ಮನೆ ಇತ್ತು.. ಜನ ಇದ್ರು.. ಕುಟುಂಬ ಇತ್ತು.. ಎಲ್ಲವೂ ಇತ್ತು.. ಆದರೆ ಅವನ ಬಳಿ ನಾಲ್ಕು ನಿಮಿಷ ಸಮಯ ಇರ್ಲಿಲ್ಲ.. ಯಾರಿಗ್ ಹೇಳ್ಕೊಳ್ಳಿ.. ಯಾರನ್ನ ದೂರೋದು ನಾನು.. ಪಕ್ಕದಲ್ಲಿ ನಾನಿದ್ದೆ.. ಪಕ್ಕದ ಮನೆಯಲ್ಲೇ ಇದ್ದೆ.. ನನ್ನ್ ಜೊತೆಲೇ ಇದ್ದ.. ಆದರೆ ಏನೂ ಮಾಡೋಕೆ ಆಗ್ಲಿಲ್ಲ.. ಎಂದಿದ್ದಾರೆ.. ಅಷ್ಟೇ ಅಲ್ಲದೇ ನಾವ್ ಗಳು ಬದಲಾಗಬೇಕು ನಮ್ಮಿಂದಲೇ ಕೆಲಸಗಳು ಆಗ್ಬೇಕು.. ಆವತ್ತು ಆಂಬ್ಯುಲೆನ್ಸ್ ಗೆ ಫೋನ್ ಮಾಡಿ ಕರ್ಸೋಣ ಅಂದ್ರೆ.. ಆಂಬ್ಯುಲೆನ್ಸ್ ಬಂದು ನಾವ್ ಕರ್ಕೋಂಡ್ ಹೋಗೋದ್ರೊಳಗೆ ತಡವಾಗತ್ತೆ ಅಂದುಕೊಂಡ್ವಿ.. ಅವತ್ತು ಬಹಳ ಟ್ರಾಫಿಕ್ಕು.. ಅದೊಂದು ಕಾರಣದಿಂದ ಅವನು ನಮ್ಮನ್ನ ಬಿಟ್ಟು ಹೋಗಿದ್ದಾನೆ‌‌. ಈಗ ನಾವು ಸರಿ ಹೋಗ್ಬೇಕು.. ನೂರಾರು ಜನ ಅಪ್ಪುಗಳನ್ನ ಈ ರೀತಿ ಕಳೆದುಕೊಳ್ಳಬಾರದು..

ಒಂದೊಂದ್ ಆಂಬ್ಯುಲೆನ್ಸ್ ಗಳಿಗೆ ಮೇಲ್ಗಡೆ ಡಿಜಿಟಲ್ ಬೋರ್ಡ್ ಬರಬೇಕು.. ಇಂತ ಆಪತ್ರೆಗೆ ಹೋಗ್ತಾ ಇದ್ದೀವಿ ಅಂತ ಬೋರ್ಡ್ ಇದ್ರೆ ಅದನ್ನ ನೋಡಿ ಪೋಲೀಸರು ಜಾಗ ಬಿಡಿಸಿ ಅನುವು ಮಾಡಿ ಕೊಡ್ತಾರೆ.. ಆಗ ಸಾಕಷ್ಟು ಜನರ ಜೀವ ಉಳಿಯುತ್ತದೆ.. ಎಂದಿದ್ದಾರೆ.‌ ಇಷ್ಟೇ ಜೀವನ ಹಣವಿದ್ದರೂ ಆಸ್ತಿಯಿದ್ದರೂ ಕಾರ್ ಗಳಿದ್ದರೂ ಮನೆಗಳಿದ್ದರೂ ನಮ್ಮ ಸಮಯ ಬಂದಾಗ ಹೋಗಬೇಕು.. ಆದರೆ ಇದ್ದಷ್ಟು ದಿನ ಅಪ್ಪು ಜೀವನ ಮಾಡಿದ ರೀತಿ ನಿಜಕ್ಕೂ ಸಾರ್ಥಕ ಜೀವನವದು.. ದೂರದಲ್ಲೆಲ್ಲೋ ಇದ್ದ ರಾಜ ಕುಮಾರನೊಬ್ಬ ಬಾರದೂರಿಗೆ ಪಯಣ ಬೆಳೆಸಿದನೆಂದು ಕಣ್ಣೀರಿಟ್ಟವು ಕೋಟ್ಯಾಂತರ ಹೃದಯಗಳು.. ಸಂತೈಸಲು ಆ ರಾಜಕುಮಾರನೇ ಬರಬೇಕೆಂದು ಪಟ್ಟು ಹಿಡಿದವು ಪುಟ್ಟ ಮನಸ್ಸುಗಳು.. ಕೋಟಿ ಜನರು ಕೂಗಿಕೊಂಡರು ಲಕ್ಷ ಜನರು ಪ್ರಾರ್ಥಿಸಿದರು ಹತ್ತಾರು ಜನರು ಜೀವವನ್ನೇ ಕೊಟ್ಟರೂ ಒಬ್ಬನನ್ನು ಮರಳಿ ಕೊಡಲಾಗದು ಆ ಭಗವಂತನಿಗೆ.. ನಿಜಕ್ಕೂ ಇದೇ ಜೀವನದ ಸತ್ಯ.. ಇದ್ದಷ್ಟು ದಿನ ನಮ್ಮವರು ತಮ್ಮವರು ಎನ್ನುತ್ತಾ ಎಲ್ಲರೊಟ್ಟಿಗೆ ಸಂತೋಷದಿಂದ ಬದುಕ ಪಯಣ ಮುಗಿಸಿ ಹೊರಡುತ್ತಿರಬೇಕಷ್ಟೇ. ಸಮಯ ಕಳೆದುಹೋಗುತ್ತಿದೆ.. ಹೋಗಿ ಒರತಿ ಕ್ಷಣವೂ ನಿಮ್ಮವರ ಜೊತೆ ಸಂತೋಷವಾಗಿರಿ‌..