ಸರಿಗಮಪ ದಿಂದ ಹಂಸಲೇಖ ಹೊರಕ್ಕೆ..? ಇರೋ ವಿಚಾರ ತಿಳಿಸಿದ ಜೀ ಮುಖ್ಯಸ್ಥರಾದ ರಾಘವೇಂದ್ರ ಹುಣಸೂರ್ ಹೇಳಿದ ಮಾತು ನೋಡಿ..

0 views

ನಿನ್ನೆಯ ಸರಿಗಮಪ ಶೋನಲ್ಲಿ ಮಹಾಗುರುಗಳಾದ ಹಂಸಲೇಖ ಅವರು ಇಲ್ಲದಿರುವುದು ಸಾಕಷ್ಟು ಅನುಮಾನಗಳಿಗೆ ಕಾರಣವಾಗಿತ್ತು.. ಅದರಲ್ಲೂ ಹಂಸಲೇಖ ಅವರನ್ನು ಶೋನಿಂದ ಹೊರ ಕಳುಹಿಸಲಾಗಿದೆ ಎಂದೂ ಸಹ ಸುದ್ದಿ ಹಬ್ಬಿತು.. ಇತ್ತ ಹಂಸಲೇಖ ಅವರಿಲ್ಲದ ಶೋ ನಾವು ನೋಡೋದಿಲ್ಲ ಎಂದು ಕೆಲವರು ಹೇಳಿದರೆ.. ಮತ್ತೆ ಕೆಲವರು ಜೀ ಕನ್ನಡ ವಾಹಿನಿ ಸರಿಯಾದ ನಿರ್ಧಾರವನ್ನೇ ತೆಗೆದುಕೊಂಡಿದೆ ಎಂದರು.. ಆದರೆ ಇಲ್ಲಿ ಅಸಲಿ ವಿಚಾರ ಏನಿದೆ.. ಮಹಾಗುರುಗಳನ್ನು ನಿಜಕ್ಕೂ ಶೋನಿಂದ ಹೊರಕ್ಕೆ ಹಾಕಿದ್ರಾ ಇದೆಲ್ಲದರ ಬಗ್ಗೆ ಇರೋ ವಿಚಾರವನ್ನು ಜೀ ಕನ್ಮಡ ವಾಹಿನಿ ಮುಖ್ಯಸ್ಥರಾದ ರಾಘವೇಂದ್ರ ಹುಣಸೂರ್ ಅವರು ಖುದ್ದಾಗಿ ತಿಳಿಸಿ ಸ್ಪಷ್ಟನೆ ನೀಡಿದ್ದಾರೆ.‌

ಹೌದು ಕಳೆದ ಕೆಲ ದಿನಗಳಿಂದ ನಡೆಯುತ್ತಿರುವ ಹಂಸಲೇಖ ಅವರ ಹೇಳಿಕೆಯ ಪರ ವಿರೋಧದ ಚರ್ಚೆಯ ನಡುವೆ ಇದೀಗ ಹೊಸದೊಂದು ವಿಚಾರ ಹರಿದಾಡುತ್ತಿದೆ.. ಹೌದು ಹಂಸಲೇಖ ಅವರು ಪೇಜಾವರ ಶ್ರೀಗಳ ಬಗ್ಗೆ ಮಾತನಾಡಿ ಆನಂತರ ಕ್ಷಮೆಯನ್ನೂ ಕೇಳಿದ್ದರು.. ಆದರೆ ಆ ಬಳಿಕ ವಿಚಾರ ದೊಡ್ಡದಾಯಿತು.. ಹಂಸಲೇಖ ಅವರ ಹೇಳಿಕೆ ಸರಿಯಾಗಿದೆ ಎಂದು ಒಂದು ವರ್ಗದ ಜನತೆ.. ಇತ್ತ ಹಂಸಲೇಖ ಅವರ ಮಾತು ತಪ್ಪೆಂದು ಅವರ ಮೇಲೆ ದೂರು ನೀಡಿದ ಮತ್ತಷ್ಟು ಮಂದಿ.. ಆದರೆ ಇದೆಲ್ಲದರ ನಡುವೆ ಪೆಟ್ಟು ಬಿದ್ದದ್ದು ಸರಿಗಮಪ ಶೋಗೆ..

ಹೌದು ಕಳೆದ ಕೆಲ ವರ್ಷಗಳ ಹಿಂದೆ ಸರಿಗಮಪ ಶೋ ಮೂಲಕ ಕನ್ನಡ ಕಿರುತೆರೆಗೆ ಕಾಲಿಟ್ಟ ಹಂಸಲೇಖ ಅವರು ಮಹಾಗುರುಗಳೆಂದೇ ಖ್ಯಾತಿಯಾದರು.. ಅಷ್ಟೂ ದಿನ ಹಾಡು ಸಂಗೀತ ಸಾಹಿತ್ಯದ ಮೂಲಕ ಜನರ ಮನಗೆದ್ದಿದ್ದ ಹಂಸಲೇಖ ಅವರು ಜೀ ಕನ್ನಡ ವಾಹಿನಿ ಮೂಲಕ ಜನರಿಗೆ ಮತ್ತಷ್ಟು ಹತ್ತಿರವಾದರು.. ಸಧ್ಯ ಸರಿಗಮಪ ಚಾಂಪಿಯನ್ ಶಿಪ್ ಶೋ ನಡೆಯುತ್ತಿದ್ದು ವಿಜಯ್ ಪ್ರಕಾಶ್ ಅವರು ಅರ್ಜುನ್ ಜನ್ಯ ಅವರು ಹಾಗೂ ಹಂಸಲೇಖ ಅವರು ತೀರ್ಪುಗಾರರಾಗಿದ್ದು ಶೋ ಎಂದಿನಂತೆ ಒಳ್ಳೆಯ ರೇಟಿಂಗ್ ಪಡೆದು ಯಶಸ್ವಿಯಾಗಿದೆ.‌ ಆದರೆ ಈಗಿನ ವಿವಾದಗಳ ನಡುವೆ ಕೆಲವರು ಹಂಸಲೇಖ ಅವರನ್ನು ಸರಿಗಮಪ ದಿಂದ ಹೊರ ಹಾಕಿ ಎಂದಿದ್ದರೆ.. ಮತ್ತೆ ಕೆಲವರು ಹಂಸ ಲೇಖ ಅವರನ್ನು ಸರಿಗಮಪ ದಿಂದ ಹೊರ ಕಳುಹಿಸಿದರೆ ಜೀ ಕನ್ನಡ ವಾಹಿನಿಯನ್ನೇ ನೋಡುವುದಿಲ್ಲ ಎನ್ನುತ್ತಿದ್ದಾರೆ.. ಆದರೆ

ಆದರೆ ಈ ಚರ್ಚೆಗಳೆಲ್ಲಾ ನಡೆಯುತ್ತಿರುವ ಸಮಯದಲ್ಲಿಯೇ ನಿನ್ನೆ ಪ್ರಸಾರವಾದ ಸಂಚಿಕೆಯಲ್ಲಿ ಹಂಸಲೇಖ ಅವರು ಭಾಗವಹಿಸಿಲ್ಲ.. ಅವರನ್ನು ಹೊರ ಕಳುಹಿಸಲಾಗಿದೆ ಎನ್ನುವ ಮಾತುಗಳು ಕೇಳಿ ಬರುತ್ತಿದ್ದಂತೆ ಜೀ ಕನ್ನಡ ವಾಹಿನಿಯ ಮೇಲೆ ಸಾಕಷ್ಟು ಜನರು ಅಸಮಾಧಾನ ವ್ಯಕ್ತ ಪಡಿಸಿದ್ದಾರೆ.. ಆದರೆ ಈ ಬಗ್ಗೆ ಇದೀಗ ಜಿ ಕನ್ನಡ ವಾಹಿನಿಯ ಮುಖ್ಯಸ್ಥರಾದ ರಾಘವೇಂದ್ರ ಹುಣಸೂರ್ ಅವರು ಇರೋ ಸತ್ಯವನ್ನು ತಿಳಿಸಿ ಸ್ಪಷ್ಟನೆ ನೀಡಿದ್ದಾರೆ‌‌..

ಹೌದು ನಿನ್ನೆಯ ಸರಿಗಮಪ ಸಂಚಿಕೆಯಲ್ಲಿ ಹಂಸಲೇಖ ಅವರು ಭಾಗವಹಿಸಿಲ್ಲ.. ಅವರನ್ನು ಶೋನಿಂದ ಹೊರ ಕಳುಹಿಸಲಾಗಿದೆಯೋ ಅಥವಾ ಬೇರೆ ಏನು ಕಾರಣ ಎಂಬುದಕ್ಕೆ ಪ್ರತಿಕ್ರಿಯೆ ನೀಡಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿರುವ ರಾಘವೇಂದ್ರ ಹುಣಸೂರ್ ಅವರು “ಮಹಾಗುರುಗಳು ತಮ್ಮ ಆರೋಗ್ಯ ಹಾಗೂ ವ್ಯಯಕ್ತಿಕ ಕಾರಣಗಳಿಂದ ಒಂದು ವಾರ ಶೋನಿಂದ ಹೊರಗುಳಿಯಲು ನಿರ್ಧರಿಸಿದರು.‌ ನಾವು ಅವರ ನಿರ್ಧಾರವನ್ನು ಗೌರವಿಸಿ, ವಿರಾಮ ತೆಗೆದುಕೊಳ್ಳಲು ಒಪ್ಪಿದ್ದೇವೆ.. ಮುಂದಿನ ವಾರದಿಂದ ಎಂದಿನಂತೆ ಗುರುಗಳು ನಮ್ಮೊಂದಿಗಿರುತ್ತಾರೆ..” ಎಂದು ಬರೆದು ಪೋಸ್ಟ್ ಮಾಡಿದ್ದಾರೆ..

ಹೌದು ಹಂಸಲೇಖ ಅವರ ಮನೆಯಲ್ಲಿ ಯಾವುದೋ ಕಾರ್ಯಕ್ರಮ ಸಹ ಇತ್ತು ಎಂದು ತಿಳಿದುಬಂದಿದೆ.. ಹಾಗೂ ವಿಚಾರಣೆಗೂ ಸಹ ಹಾಜರಾಗಬೇಕಿದ್ದರಿಂದ ಹಂಸಲೇಖ ಅವರು ಒಂದು ವಾರಗಳ ಕಾಲ ವಿರಾಮ ಪಡೆದಿದ್ದಾರೆ ಎಂದು ತಿಳಿದುಬಂದಿದೆ.. ಮುಂದಿನ ವಾರದ ಶೋನಲ್ಲಿ ಹಂಸಲೇಖ ಅವರು ಭಾಗವಹಿಸಲಿದ್ದಾರೆ.. ಅದಾಗಲೇ ಮುಂದಿನ ವಾರದ ಶೋನ ಚಿತ್ರೀಕರಣ ನಡೆಯುತ್ತಿದ್ದು ಅದರಲ್ಲಿ ಹಂಸಲೇಖ ಅವರು ಭಾಗಿಯಾಗಿದ್ದಾರೆ ಎಂದು ತಿಳಿದು ಬಂದಿದೆ.. ಒಟ್ಟಿನಲ್ಲಿ ವ್ಯಯಕ್ತಿಕ ಅಭಿಪ್ರಾಯಗಳು ಒಂದು ಮನರಂಜನೆಯ ಶೋ ಮೇಲೆ ಪರಿಣಾಮ ಬೀಳುವಂತಾಯಿತು..