ಮಾಧ್ಯಮದ ಮುಂದೆ ಬಂದು ರಘು ದೀಕ್ಷಿತ್ ಬಗ್ಗೆ ಸತ್ಯ ಬಿಚ್ಚಿಟ್ಟ ನಟ ಕೃಷ್ಣ.. ನಿಜಕ್ಕೂ ಶಾಕಿಂಗ್..

0 views

ಲವ್ ಮಾಕ್ಟೈಲ್.. ಕನ್ನಡ ಸಿನಿಮಾ ಇಂಡಸ್ಟ್ರಿಯಲ್ಲಿ ಕಲೇದ ವರ್ಷ ಬಿಡುಗಡೆಯಾದ ಕೆಲವೇ ಚಿತ್ರಗಳಾದರೂ ಸಹ ದೊಡ್ಡ ಮಟ್ಟದಲ್ಲಿ ಯಶಸ್ಸು ಪಡೆದ ಸಿನಿಮಾಗಳಲ್ಲಿ‌ ಲವ್ ಮಾಕ್ಟೈಲ್ ಸಿನಿಮಾ ಕೂಡ ಒಂದು.. ಇಷ್ಟು ವರ್ಷ ನಟನಾಗಿದ್ದ ಕೃಷ್ಣ ನಿರ್ದೇಶಕ ಹಾಗೂ ನಿರ್ಮಾಪಕನಾಗಿ ಯಶಸ್ಸು ಕಂಡ ಸಿನಿಮಾ.. ಮೊದ ಮೊದಲು ಜನರಿಗೆ ತಲುಪುವ ವರೆಗೂ ಆತಂಕವನ್ನೇ ಉಂಟು ಮಾಡಿದ್ದ ಲವ್ ಮಾಕ್ಟೈಲ್ ಒಮ್ಮೆ ಜನರಿಗೆ ತಲುಪಿದ ಮರುಕ್ಷಣದಿಂದಲೇ ಅದರ ದಿಕ್ಕೇ ಬದಲಾಗಿತ್ತು.. ಹೌದು ಕಳೆದ ವರ್ಷ ಲವ್ ಮಾಕ್ಟೈಲ್ ಹಾಗೂ ದಿಯಾ ಸಿನಿಮಾ ಜನರ ಮನಗೆದ್ದ ಸಿನಿಮಾಗಳಾದವು.. ಅದರಲ್ಲೂ ಓಟಿಟಿಯಲ್ಲಿ ಬಿಡುಗಡೆಯಾದ ನಂತರ ಸಾಮಾಜಿಕ ಜಾಲತಾಣದ ತುಂಬೆಲ್ಲಾ ಈ ಸಿನಿಮಾಗಳದ್ದೇ ಮಾತು ಶುರುವಾಗಿತ್ತು.. ದೊಡ್ಡ ಮಟ್ಟದಲ್ಲಿ ಯಶಸ್ಸು ಕಂಡ ಲವ್ ಮಾಕ್ಟೈಲ್ ಸಿನಿಮಾದ ಮುಂದುವರೆದ ಭಾಗವನ್ನು ಮಾಡಲು ಕೃಷ್ಣ ಹಾಗೂ ಮಿಲನಾ ನಾಗರಾಜ್ ನಿರ್ಧರಿಸಿದರು.. ಅದೇ ರೀತಿ ಲಾಕ್ ಡೌನ್ ಸಮಯದಲ್ಲಿ ಲವ್ ಮಾಕ್ಟೈಲ್‌ ಎರಡು ಸಿನಿಮಾ ತಯಾರಾಯಿತು.. ಇದೀಗ ಚಿತ್ರೀಕರಣವನ್ನೂ ಸಹ ಮುಗಿಸಿ ಬಿಡುಗಡೆಗೆ ಸಜ್ಜಾಗಿದೆ..

ಆದರೆ ಈ ನಡುವೆ ಲವ್ ಮಾಕ್ಟೈಲ್ ೨ ಸಿನಿಮಾ ವಿಚಾರವೊಂದಕ್ಕೆ ಸುದ್ದಿಯಾಗಿತ್ತು.. ಹೌದು ಸಂಗೀತ ನಿರ್ದೇಶನದ ವಿಚಾರವೊಂದಕ್ಕೆ ಸುದ್ದಿಯಾಗಿತ್ತು.. ಎಲ್ಲರಿಗೂ ತಿಳಿದಿರುವಂತೆ ಲವ್ ಮಾಕ್ಟೈಲ್ ಸಿನಿಮಾದಲ್ಲಿ ರಘು ದೀಕ್ಷಿತ್ ಅವರ ಹಾಡುಗಳು ಮೋಡಿ ಮಾಡಿದ್ದವು.. ನನ್ನಲ್ಲೇ ನೀನು ಹಾಡು ಜನರು ಗುನುಗುವಂತೆ ಮಾಡಿದ್ದರು.. ಲವ್ ಮಾಕ್ಟೈಲ್ ಸಿನಿಮಾದ ಸಂಗೀತದ ಬಗ್ಗೆ ಪ್ರಶಂಸೆ ವ್ಯಕ್ತವಾಗಿತ್ತು.. ಆದರೆ ಲವ್ ಮಾಕ್ಟೈಲ್ ೨ ಸಿನಿಮಾಗೆ ರಘು ದೀಕ್ಷಿತ್ ಸಂಗೀತ ನೀಡುತ್ತಿಲ್ಲ ಎಂಬ ವಿಚಾರ ಜನರಲ್ಲಿ ಬೇಸರವನ್ನು ಉಂಟು ಮಾಡಿದ್ದು ಸತ್ಯ.. ಆದರೆ ಇದಕ್ಕೆ ನಿಜವಾದ ಕಾರಣವೇನು.. ಸಿನಿಮಾದಿಂದ ರಘು ದೀಕ್ಷಿತ್ ದೂರ ಉಳಿಯಲು ನಿಜವಾದ ಕಾರಣವೇನು ಎಂಬ ಸಾಕಷ್ಟು ಕುತೂಹಲ ಮೂಡಿತ್ತು.. ಕೆಲ ದಿನಗಳ ಹಿಂದೆ ಮಾದ್ಯಮದ ಸಂದರ್ಶನವೊಂದರಲ್ಲಿ ಮಾತನಾಡಿದ್ದ ರಘು ದೀಕ್ಷಿತ್ ಅವರು ಲವ್ ಮಾಕ್ಟೈಲ್ ೧ ಸಿನಿಮಾಗೆ ನನಗೆ ಕೊಟ್ಟಿದ್ದು ಹನ್ನೆರೆಡು ಲಕ್ಷ ರೂಪಾಯಿ ಅಷ್ಟೇ.. ಖರ್ಚೆಲ್ಲಾ ಕಳೆದು ಎರಡು ಲಕ್ಷ ಉಳಿಯಿತು.. ಎಂಟತ್ತು ತಿಂಗಳು ಸಿನಿಮಾಗಾಗಿ ಕೆಲಸ ಮಾಡಿದ್ದೆ.. ಎರಡನೇ ಭಾಗಕ್ಕೆ ಸ್ವಲ್ಪ ಹೆಚ್ಚು ಹಣ ಕೇಳಿದೆ.. ಆದರೆ ನೀಡಲಿಲ್ಲ ಅದಕ್ಕೆ ಸಿನಿಮಾದಿಂದ ದೂರ ಉಳಿದೆ ಎನ್ನುವ ಮಾತನ್ನು ಆಡಿದ್ದರು..

ಆದರೀಗ ಈ ಬಗ್ಗೆ ಖುದ್ದು ಲವ್ ಮಾಕ್ಟೈಲ್ ಸಿನಿಮಾದ ನಿರ್ಮಾಪಕನಾಗಿದ್ದ ಕೃಷ್ಣ ಅವರು ರಘು ದೀಕ್ಷಿತ್ ಅವರ ಬಗ್ಗೆ ಸತ್ಯ ಬಿಚ್ಚಿಟ್ಟಿದ್ದಾರೆ.. ಹೌದು ಮಾದ್ಯಮದ ಸಂದರ್ಶನವೊಂದರಲ್ಲಿ ಮಾತನಾಡಿರುವ ಕೃಷ್ಣ ಅವರು ಇರೋ ವಿಚಾರವನ್ನು ತೆರೆದಿಟ್ಟಿದ್ದಾರೆ.. “ಸರ್ ನಾನು ಮದರಂಗಿ ಸಿನಿಮಾದಲ್ಲಿಯೇ ಪ್ರೊಡಕ್ಷನ್ ಹೌಸ್ ತೆರೆದು ಆ ಸಿನಿಮಾದ ಸಾಲಗಳನ್ನು ಒಟ್ಟು ಏಳು ವರ್ಷಗಳ ಕಾಲ ಅಂದರೆ ಕಳೆದ ವರ್ಷದವರೆಗೂ ತೀರಿಸಿಕೊಂಡು ಬಂದಿದ್ದೇನೆ.. ಸಿನಿಮಾದಲ್ಲಿ ಏನೇನಾಗುತ್ತದೆ ಎಂದು ನನಗೆ ಚೆನ್ನಾಗಿ ಅರ್ಥ ಆಗಿದೆ.. ಅದೇ ಕಾರಣಕ್ಕೆ ನಾನು ಒಂದು ಬಡ್ಜೆಟ್ ಅಂತ ಇಟ್ಟುಕೊಂಡು ಅಷ್ಟರಲ್ಲೇ ಸಿನಿಮಾ ಮುಗಿಯಬೇಕು ಎಂದುಕೊಂಡು ನಂತರವಷ್ಟೇ ಲವ್ ಮಾಕ್ಟೈಲ್ ಸಿನಿಮಾ ಶುರು ಮಾಡಿದೆ.. ಆ ಸಮಯದಲ್ಲಿ ರಘು ದೀಕ್ಷಿತ್ ಅವರ ಬಳಿ ಸಂಗೀತ ಮಾಡಿಕೊಡಿ ಎಂದು ಹೋದಾಗ ಅವರನ್ನು ಎಂಟು ಲಕ್ಷಕ್ಕೆ ಕೇಳಿದೆವು.. ಅವರು ಆಗಲ್ಲ ಹತ್ತು ಲಕ್ಷ ಕೊಡಿ ಎಂದರು.. ನಾವು ಸರಿ ಎಂದು ಒಪ್ಪಿಕೊಂಡೆವು.. ಮಾತನಾಡಿದ್ದು ಹತ್ತು ಲಕ್ಷಕ್ಕೆ ಮಾತ್ರವೇ.. ಆದರೆ ಆನಂತರ ಸಿನಿಮಾ ದೊಡ್ಡ ಸಕ್ಸಸ್ ಕಂಡರೆ ಎರಡು ಲಕ್ಷ ಸೇರಿಸಿ ಕೊಡಿ ಎಂದರು.. ಸರಿ ಆಯಿತು ಎಂದಿದ್ದೆವು..

ಸಿನಿಮಾ ಬಿಡುಗಡೆಯಾಗಿ ನನ್ನ ಕೈಗೆ ಎಲ್ಲಾ ಹಣ ಸೇರಿದ್ದು ಮಾರ್ಚ್ ತಿಂಗಳಾಗಿತ್ತು.. ಮಾರ್ಚ್ ತಿಂಗಳಲ್ಲಿ ನಾನೇ ರಘು ದೀಕ್ಷಿತ್ ಅವರಿಗೆ ಫೋನ್ ಮಾಡಿ ಹದಿನಾಲ್ಕು ಲಕ್ಷಕ್ಕೆ ಬಿಲ್ ರೈಸ್ ಮಾಡಿ ಎಂದು ಜಿ ಎಸ್ ಟಿ ಎಲ್ಲಾ ಸೇರಿ ಹದಿನಾರು ಲಕ್ಷ ಹಣವನ್ನು ರಘು ದೀಕ್ಷಿತ್ ಅವರಿಗೆ ನೀಡಿದ್ದೇನೆ.. ಅಷ್ಟೇ ಅಲ್ಲ.. ಈಗಲೂ ಯೂಟ್ಯೂಬ್ ನಲ್ಲಿ ಹೋಗಿ ನೋಡಿ ಲವ್ ಮಾಕ್ಟೈಲ್ ಸಿನಿಮಾದ ಹಾಡುಗಳು ಓಡುತ್ತಿರುವುದು ರಘು ದೀಕ್ಷಿತ್ ಅವರ ಚಾನಲ್ ನಲ್ಲಿಯೇ.. ಆಡಿಯೋ ರೈಟ್ಸ್ ಅನ್ನು ನಾನು ಅವರಿಗೆ ಕೊಡಲು ಒಂದು ರೂಪಾಯಿಯೂ ಪಡೆದಿಲ್ಲ.. ಲವ್ ಮಾಕ್ಟೈಲ್ ೨ ಸಿನಿಮಾದ ಆಡಿಯೋ ರೈಟ್ಸ್ ಮೂವತ್ತೈದು ಲಕ್ಷಕ್ಕೆ ಬೆಲೆ ಬಾಳುತ್ತಿದೆ.. ಆದರೆ ಲವ್ ಮಾಕ್ಟೈಲ್ ೧ ಸಿನಿಮಾ ಸಮಯದಲ್ಲಿ ಅದು ಮೂರರಿಂದ ನಾಲ್ಕು ಲಕ್ಷಕ್ಕಾದರೂ ಹೋಗುತ್ತಿತ್ತು.. ಆದರೆ ಅದನ್ನೂ ಸಹ ನಾನು ಪಡೆಯಲಿಲ್ಲ.. ರಘು ದೀಕ್ಷಿತ್ ಅವರಿಗೆ ಉಚಿತವಾಗಿಯೇ ನೀಡಿದೆ.. ಅದರಿಂದಲೇ ಈಗಾಗಲೇ ಮೂವತ್ತರಿಂದ ನಲವತ್ತು ಲಕ್ಷ ಹಣವನ್ನು ಅವರು ಗಳಿಸಿದ್ದಾರೆ..

ಇನ್ನು ಲವ್ ಮಾಕ್ಟೈಲ್ ೨ ಸಿನಿಮಾ ಮಾಡಲು ನಿರ್ಧಾರ ಮಾಡಿದಾಗ ಮತ್ತೆ ಅವರ ಬಳಿ ಹೋದೆವು.. ಆಗ ನಾವು ಹದಿನೈದು ಲಕ್ಷಕ್ಕೆ ಕೇಳಿದೆವು.. ಅವರು ಇಪ್ಪತ್ತು ಲಕ್ಷ ಕೊಡಿ ಎಂದರು.. ಸರಿ ಆಯ್ತು ಎಂದು ಒಪ್ಪಿಕೊಂಡೆವು.. ಆದರೆ ಆನಂತರ ಆಡಿಯೋ ಕೂಡ ನಾನೇ ಇಟ್ಟುಕೊಳ್ತೇನೆ ಎಂದರು.. ಒಬ್ಬ ನಿರ್ಮಾಪಕನಾಗಿ ಆಡಿಯೋವನ್ನು ಉಚಿತವಾಗಿ ಕೊಟ್ಟು ಆಡಿಯೋ ಮಾಡಲು ಸಹ ಇಪ್ಪತ್ತು ಲಕ್ಷ ಕೊಡೋದು ನನಗೆ ಕಷ್ಟವಾಗಿತ್ತು.. ಆಗ ನಾನು ಸರ್ ಆಡಿಯೋ ರೈಟ್ಸ್ ಅನ್ನು ಕೇಳಬೇಡಿ ಅದು ಮೂವತ್ತರಿಂದ ನಲವತ್ತು ಲಕ್ಷಕ್ಕೆ ಹೋಗತ್ತೆ.. ಅದು ನಿರ್ಮಾಪಕನಾಗಿ ನನ್ನ ನಿರ್ಧಾರಕ್ಕೆ ಬಿಟ್ಟುಬಿಡಿ.. ನೀವು ಬೇಕಿದ್ದರೆ ಇಪ್ಪತ್ತೈದು ಲಕ್ಷ ರೂಪಾಯಿ ತೆಗೆದುಕೊಂಡು ಆಡಿಯೋ ಮಾಡಿಕೊಡಿ ಎಂದೆ.. ಆದರೆ ಅವರು ಅದಕ್ಕೆ ಒಪ್ಪಲಿಲ್ಲ.. ಆಡಿಯೋ ನನಗೇ ಬೇಕು ಎಂದರು..

ಆನಂತರ ಅದಕ್ಕೂ ಸಹ ನಾನು ಸರಿ ಎಂದು.. ಆಡಿಯೋ ನೀವೇ ಇಟ್ಟುಕೊಳ್ಳಿ ಆದರೆ ಸಂಭಾವನೆ ಕೇಳಬೇಡಿ ಸಂಗೀತ ಮಾಡಿಕೊಡಿ ಎಂದು ಕೇಳಿದೆ.. ಆದರೆ ಅದಕ್ಕೆ ಒಪ್ಪಲಿಲ್ಲ.. ಮಾತು ಹೀಗೆ ಯಾವುದೇ ನಿರ್ಧಾರಕ್ಕೂ ಬರಲಿಲ್ಲ.. ಕೊನೆಗೆ ವ್ಯವಹಾರ ಸರಿ ಬಾರದ ಕಾರಣ ಇರಲಿ ಬಿಡಿ ಸರ್.. ಇದನ್ನು ಇಲ್ಲಿಗೆ ಬಿಡೋಣ ಎಂದು ನಾವು ಬೇರೆತವರಿಂದ ಸಂಗೀತ ಮಾಡಿಸಿಕೊಂಡೆವು.. ಇಷ್ಟೇ ನಡೆದಿರುವ ವಿಚಾರ.. ಆದರೆ ಅವರು ಹನ್ನೆರೆಡು ಲಕ್ಷ ಮಾತ್ರ ಕೊಟ್ಟಿದ್ದಾರೆ ಎಂದಿದ್ದಾರೆ.. ಅದು ಸುಳ್ಳು.. ನಾವು ಕೊಟ್ಟಿರೋದು ಒಟ್ಟು ಹದಿನಾಲು ಲಕ್ಷ ರೂಪಾಯಿ.. ಹಾಗೂ ಉಚಿತವಾಗಿ ಆಡಿಯೋ ರೈಟ್ಸ್ ಕೊಟ್ಟಿದ್ದೇವೆ.. ಅದರಿಂದ ಮೂವತ್ತರಿಂದ ನಲವತ್ತು ಲಕ್ಷ ಸಿಕ್ಕಿದೆ.. ಈ ವಿಚಾರವನ್ನು ನಾನು ರಘು ದೀಕ್ಷಿತ್ ಅವರು ಮಾತನಾಡಿದ ದಿನವೇ ಹೇಳುತ್ತಿದ್ದೆ.. ಆದರೆ ಅವರು ನಿನ್ನ ಸನಿಹಕೆ ಸಿನಿಮಾ ಬಿಡುಗಡೆಗೆ ಒಂದು ದಿನ ಮುಂಚೆಯಾಗಿ ನನ್ನ ಬಗ್ಗೆ ಮಾತನಾಡಿದ್ರು.. ಆ ಸಮಯದಲ್ಲಿ ನಾನು ಮಾತನಾಡೋದು ತಪ್ಪಾಗಿತ್ತು.. ಕಷ್ಟ ಪಟ್ಟು ಸಿನಿಮಾ ಮಾಡಿದ್ರು.. ಆ ಸಿನಿಮಾ ಬಿಡುಗಡೆ ಸಮಯದಲ್ಲಿ ನಾನು ಇದನ್ನೆಲ್ಲಾ ಹೇಳೋದು ಒಳ್ಳೆಯ ಗುಣ ಅಲ್ಲ ಎಂದು ಸುಮ್ಮನಾದೆ.. ಇವತ್ತು ಸಮಯ ಬಂದಿದೆ ಅದಕ್ಕೆ ಹೇಳುತ್ತಿದ್ದೇನೆ ಎಂದಿದ್ದಾರೆ..