ಇಂಗ್ಲೀಷಲ್ಲಿ ಮಾತನಾಡಿ ಸ್ಕೋಪ್ ತೆಗೆದುಕೊಳ್ಳಲು ಹೋದ ನಿಧಿಗೆ ಮುಖಕ್ಕೆ ಹೊಡೆದಂತೆ ಇಂಗ್ಲೀಷಿನಲ್ಲಿಯೇ ಬೆವರಿಳಿಸಿದ ರಘು..

0 views

ಕೆಲವರಿಗೆ ಸ್ವಲ್ಪ ಫೇಮಸ್ ಆಗುತ್ತಿದ್ದಂತೆ.. ಸ್ವಲ್ಪ ಸ್ಟಾರ್ ಗಿರಿ ಬಂದಕೂಡಲೇ ಸಾಮಾನ್ಯರು ಜೊತೆಯಲ್ಲಿಯೇ ಇದ್ದರೂ ಸಹ ಆ ಸ್ಟಾರ್ ಗಿರಿ ತಲೆಯಿಂದ ಇಳಿಯೋದಿಲ್ಲ‌‌. ಸದ್ಯ ಬಿಗ್ ಬಾಸ್ ಮನೆಯಲ್ಲಿ ಆ ರೀತಿ ಸ್ಟಾರ್ ಗಿರಿಯನ್ನು ನಿಧಿ ಸುಬ್ಬಯ್ಯ ಮಾಡ್ತಾ ಇದ್ದಾರೆ ಎಂದು ಈ ಮೊದಲಿನಿಂದಲೂ ಬಹಳಷ್ಟು ಸ್ಪರ್ಧಿಗಳು ಹೇಳಿಕೆ ನೀಡಿದ್ದಾರೆ.. ಇನ್ನು ಹೊರಗಿನಿಂದ ನೋಡುವ ಮಂದಿಗೆ ನಿಧಿ ಕೊಂಚ ಒಳ್ಳೆಯವರ ರೀತಿಯೇ ಕಾಣುತ್ತಿರುವುದು ಉಂಟು.. ಆದರೆ ನಿನ್ನೆ ನಡೆದ ಘಟನೆ ಮಾತ್ರ ನಿಜಕ್ಕೂ ನಿಧಿ ಸುಬ್ಬಯ್ಯಗೆ ಬೆವರಿಳಿಯಿತೆನ್ನಬಹುದು.. ಹೌದು ನಿನ್ನೆ ಇಂಗ್ಲೀಷಿನಲ್ಲಿ ಮಾತನಾಡಿ ಸ್ಕೋಪ್ ತೆಗೆದುಕೊಳ್ಳಲು ಮುಂದಾದ ನಿಧಿ ಸುಬ್ಬಯ್ಯಗೆ ಅದೇ ಭಾಷೆಯಲ್ಲಿ ಸಖತ್ ಆಗಿಯೇ ಉತ್ತರ ಕೊಟ್ಟು ರಘು ಗ್ರಹಚಾರವನ್ನೇ ಬಿಡಿಸಿದ ಎನ್ನಬಹುದು..

ಹೌದು ಎರಡು ದಿನದ ಹಿಂದೆಯಷ್ಟೇ ಅದಾಗಲೇ ಮನೆಗೆ ಮಾತಿನ ಮಲ್ಲ ಚಂದ್ರಚೂಡ ಅವರ ಆಗಮನವಾಗಿದೆ.‌ ಮಾತಿನ ಮೂಲಕವೇ ಮುಖಕ್ಕೆ ಹೊಡೆದಂತೆ ಸ್ಪರ್ಧಿಗಳ ಗುಣದ ಬಗ್ಗೆ ಮನೆಯಲ್ಲಿ ಅವರುಗಳು ಯಾವ ರೀತಿ ನಡೆದುಕೊಳ್ಳುತ್ತಿದ್ದಾರೆ ಎಂಬುದರ ಬಗ್ಗೆ ಎಲ್ಲರ ಬಳಿಯೂ ಹೋಗಿ ತಿಳಿಸುತ್ತಿದ್ದಾರೆ.. ಅದೇ ರೀತಿ ಬಿಗ್ ಮನೆಯಲ್ಲಿ ಎರಡೇ ದಿನಕ್ಕೆ ಕೆಲ ಸ್ಪರ್ಧಿಗಳು ಚಂದ್ರಚೂಡ ಅವರ ಜೊತೆ ಕ್ಲೋಸ್ ಆಗಿದ್ದೂ ಉಂಟು.. ಅಂತವರಲ್ಲಿ ಕೆಲವರು ನಿಧಿ ಸುಬ್ಬಯ್ಯ.. ರಘು.. ವಿಶ್ವನಾಥ್.. ವೈಷ್ಣವಿ.. ಹೀಗೆ ಕೆಲವರು ಚಂದ್ರಚೂಡ ಅವರ ಜೊತೆ ಆತ್ಮೀಯವಾಗಿ ಮಾತನಾಡುತ್ತಾ ಕುಳಿತಿದ್ದರು.. ಈ ಸಮಯದಲ್ಲಿ ಮಾತು ಶುರು ಮಾಡಿದ ನಿಧಿ ಸುಬ್ಬಯ್ಯ.. ಮನೆಯಲ್ಲಿ ಹೊಡಿಬಡಿ ಆಟ ಆಡಿದರೆ ಮಾತ್ರ ಉಳಿಗಾಲ..

ಇಲ್ಲವಾದರೆ ಕಳಪೆ ಅಂತ ಬೋರ್ಡ್ ಕೊಟ್ಟುಬಿಡುತ್ತಾರೆ ಎಂದು ಮಾತನಾಡುತ್ತಿದ್ದರು.. ಈ ಬಗ್ಗೆಯೇ ರಘು ಚಂದ್ರಚೂಡರ ಬಳಿ ಏನನ್ನೋ ಹೇಳಲು ಮುಂದಾದರು.. ಆದರೆ ನಿಧಿ ಸುಬ್ಬಯ್ಯ ತನ್ನ ಮಾತು ನಿಲ್ಲಿಸದೇ ಮುಂದುವರೆಸಿದರು.. ಇದೇ ರೀತಿ ಮತ್ತೆ ಮೂರು ಬಾರಿ ಆಯಿತು.. ಮೂರು ಬಾರಿಯೂ ರಘು ಮಾತು ನಿಲ್ಲಿಸಿ ನಿಧಿಗೆ ಮಾತನಾಡಲು ಅನುವು ಮಾಡಿಕೊಟ್ಟರು.. ಆದರೆ ನಿಧಿ ಮಾತನ್ನು ಮುಗಿಸಲೇ ಇಲ್ಲ ನಾಲ್ಕನೇ ಬಾರಿ ರಘು ಮಾತನಾಡಲು ಶುರು ಮಾಡಿದರು.. ಅಲ್ಲಿಗೆ ಶುರುವಾಯಿತು ನಿಧಿಯ ಇಂಗ್ಲೀಷ್ ಮಾತುಗಳು.. ನಾನ್ ಮಾತಾಡ್ತಾ ಇದ್ದೀನಿ ಅಂತ ಗೊತ್ತಿಲ್ವಾ? ನಾನ್ ಮಾತು ಮುಗ್ಸೋವರೆಗೂ ಕಾಯಿ.. ನಾನ್ ಏನ್ ಹೇಳ್ತಾ ಇದ್ದೀನಿ ಅಂತ ಅರ್ಥ ಆಗ್ತಾ ಇದ್ದೀಯಾ? ಹೀಗೆ ಇನ್ನಷ್ಟು ಇಂಗ್ಲೀಷಿನಲ್ಲಿಯೇ ರಘುಗೆ ಮುಖಕ್ಕೆ ಹೊಡೆದಂತೆ ಮಾತನಾಡಿದರು..

ಆದರೆ ಬಹುಶಃ ಆಕೆಗೆ ಗೊತ್ತಿಲ್ಲ.. ರಘು ಕೂಡ ಐ ಟಿ ಕಂಪನಿಯಲ್ಲಿ ಆರೇಳು ವರ್ಷ ಇಂಜಿನಿಯರ್ ಆಗಿದ್ದವನೆಂದು.. ನಿಧಿ ಮಾತಿಗೆ ಈಕಡೆಯಿಂದ ರಘು ಕೂಡ ಇಂಗ್ಲೀಷ್ ನಲ್ಲಿಯೇ ಪ್ರತ್ಯುತ್ತರ ಕೊಟ್ಟನು.. ನನಗೂ ಇಂಗ್ಲೀಷ್ ಬರತ್ತೆ.‌ ನನಗೂ ಎಲ್ಲವೂ ಅರ್ಥ ಆಗತ್ತೆ.. ಬೇರೆಯವರು ಏನ್ ಹೇಳ್ತಾರೆ ಅನ್ನೋದನ್ನ ಸಹ ಕೇಳಿಸ್ಕೋಬೇಕು ಎಂದಿದ್ದಾನೆ.. ಎಲ್ಲರ ಮುಂದೆ ನಿಧಿಗೆ ಸರಿಯಾಗಿಯೇ ಮುಜುಗರವಾಗಿದೆ.. ಹೀಗೆ ನಿಧಿಯ ಮಾತಲ್ಲಿ ಹೀರೋಯಿನ್ ಎಂಬ ಅಹಂ ಕೊಂಚ ಕಾಣುತಿತ್ತು.. ಆದರೆ ಅತ್ತ ಯಾವಾಗ್ಲೂ ರೂಡ್ ಆಗಿ ಮಾತನಾಡ್ಬಿಟ್ಟು ಕೊನೆಯಲ್ಲಿ ಈ ರೀತಿ ಮಾತನಾಡೋದು ಎಂದಿದ್ದಾನೆ ರಘು.. ಕೊನೆಗೆ ಎಲ್ಲರ ಮುಂದೆ ಕಣ್ಣೀರಿಡುವ ಮೂಲಕ ನಿಧಿ ತನ್ನ ತಪ್ಪಿಲ್ಲ ಎಂದು ಹೊಸ ಕತೆ ಶುರು ಮಾಡುವಷ್ಟರಲ್ಲಿ ಅವಳ ಕಣ್ಣೀರು ನೋಡಲಾಗದೆ ರಘುನೇ ಸಮಾಧಾನ ಮಾಡಿ ಸಂದರ್ಭದ ಸಮಾಪ್ತಿ ಮಾಡಿದನು.‌

ಸ್ಟಾರ್ ಆಗಲಿ ಸಾಮಾನ್ಯನಾಗಲಿ ಒಮ್ಮೆ ಬಿಗ್ ಬಾಸ್ ಮನೆಗೆ ಬಂದಮೇಲೆ ಮುಗಿಯಿತು ಅವರೆಲ್ಲರೂ ಬಿಗ್ ಬಾಸ್ ಸ್ಪರ್ಧಿಗಳು ಅಷ್ಟೇ.. ಇದನ್ನರಿತು ಬಿಗ್ ಬಾಸ್ ಮನೆಯಲ್ಲಿ ನಡೆದುಕೊಂಡರೆ ಬಹುಶಃ ಹೆಚ್ಚು ದಿನ ಬಿಗ್ ಬಾಸ್ ಮನೆಯಲ್ಲಿ‌ ಉಳಿಯಬಹುದೇನೋ.. ಒಟ್ಟಿನಲ್ಲಿ ದಿನಗಳು ಕಳೆಯುತ್ತಿದ್ದಂತೆ ಎಲ್ಲರೂ ಸಹ ತಮ್ಮ ತಮ್ಮ ಅಭಿಪ್ರಾಯಗಳನ್ನು ವ್ಯಕ್ತ ಪಡಿಸಲು ಹಿಂಜರಿಕೆಯಿಲ್ಲದೆ ಮುನ್ನುಗ್ಗುತ್ತಿರುವುದು ಒಳ್ಳೆಯ ವಿಚಾರವೇ.. ಆದರೆ ಸ್ಟಾರ್ ಆಗಲಿ ಸಾಮಾನ್ಯ ಸ್ಪರ್ಧಿಯಾಗಲು ಆಡಿಸುವವ ಬಿಗ್ ಬಾಸ್.. ಮನರಂಜನೆಗಾಗಿ ಆಟ ಆಡುವವರು ಮಾತ್ರ ಅವರುಗಳು ಎಂಬುದೇ ಅಸಲಿ ಸತ್ಯ..