ಬಿಗ್ ಬಾಸ್ ನಿಂದ ಹೊರ ಬಂದ ರಘುಗೆ ಆಗಿರುವ ಗತಿ ನೋಡಿ..

0 views

ಸಾಮಾಜಿಕ‌ ಜಾಲತಾಣದಲ್ಲಿ ಕಳೆದ ಲಾಕ್ ಡೌನ್ ಸಮಯದಲ್ಲಿ ಕಾಮಿಡಿ ವೀಡಿಯೋಗಳ ಮೂಲಕ ಸಿಕ್ಕಾಪಟ್ಟೆ ಫೇಮಸ್ ಆಗಿದ್ದ ರಘು ಅವರಿಗೆ ಬಿಗ್ ಬಾಸ್ ಸೀಸನ್ ಎಂಟರಲ್ಲಿ ಭಾಗವಹಿಸಲು ಅವಕಾಶ ಸಿಕ್ಕಿತು.. ರಘು ಬಿಗ್ ಬಾಸ್ ಮನೆಗೆ ಬಂದದ್ದಕ್ಕೆ ಸಾಮಾಜಿಕ ಜಾಲತಾಣದಲ್ಲಿ ಭಾರಿ ಮೆಚ್ಚುಗೆ ವ್ಯಕ್ತವಾಗಿತ್ತು.. ರಘು ಅವರಿಂದ ಬಹಳಷ್ಟು ಮನರಂಜನೆಯನ್ನು ನಿರೀಕ್ಷೆ ಮಾಡಲಾಗಿತ್ತು.. ಆದರೆ ರಘು ಕಡೆಯಿಂದ ಪ್ರೇಕ್ಷಕರು ನಿರೀಕ್ಷಿಸಿದಷ್ಟು ಮನರಂಜನೆ ನೀಡಲು ಸಾಧ್ಯವಾಗಲಿಲ್ಲ.. ಈ ಕುರಿತು ರಘು ಬಗ್ಗೆ ಸಾಕಷ್ಟು ಟ್ರೋಲ್ ಗಳು ಕೂಡ ಆಗಿದ್ದವು..

ಇನ್ನು ಬಿಗ್ ಬಾಸ್ ಮನೆಯಲ್ಲಿ ಸದಾ ಹೆಣ್ಣು ಮಕ್ಕಳ ಜೊತೆ ಮಾತನಾಡುತ್ತಾ ಸಮಯ ಕಳೆಯುತ್ತಿದ್ದ ರಘು ಅವರಿಗೆ ಅದಾಗಲೇ ಮದುವೆಯಾಗಿರುವ ವಿಚಾರ ಎಲ್ಲರಿಗೂ ತಿಳಿದೇ ಇತ್ತು.. ಇನ್ನು ಹೊಸದಾಗಿ ವೈಲ್ಡ್ ಕಾರ್ಡ್ ಮೂಲಕ ಬಿಗ್ ಬಾಸ್ ಮನೆಗೆ ಎಂಟ್ರಿ ಕೊಟ್ಟಿದ್ದ ಪ್ರಿಯಾಂಕ ಅವರ ಜೊತೆ ತಮಾಷೆಗಾಗಿ ಬಹಳ ಕ್ಲೋಸ್ ಆಗಿ ನಡೆದುಕೊಳ್ಳುತ್ತಿದ್ದ ರಘುಗೆ ಅದೇ ಸಮಯದಲ್ಲಿ ಪತ್ನಿಯಿಂದ ಫೋನ್ ಕರೆಯೊಂದು ಬಂದಿತ್ತು.. ಮಜಾ ಮಾಡ್ತಿದ್ದೀಯಾ.. ಆಯ್ತು ಮಾಡ್ಕೊಂಡ್ ಬಾ ಎಂದು ಸ್ಪೋರ್ಟಿವ್ ಆಗಿಯೇ ತೆಗೆದುಕೊಂಡಿದ್ದರು.. ರಘು ಕೂಡ ಹೆಂಡತಿಯ ಮಾತಿನಂತೆ ಸಿಕ್ಕಾಪಟ್ಟೆ ಮಜವನ್ನೇ ಮಾಡಿದರು ಎನ್ನಬಹುದು..

ಆದರೆ ಶೋ ರದ್ದಾಗುತ್ತಿದ್ದಂತೆ ಮನೆಗೆ ಹೋಗಲು ರಘು ಬಹಳ ಹಿಂಜರಿಕೆ ತೋರುತ್ತಿದ್ದರು… ಈ ಬಗ್ಗೆ ಬಿಗ್ ಬಾಸ್ ಕೇಳಿದಾಗ.. ಹೆಂಡತಿ ಹೇಳಿದ್ಳು ಅಂತ ಮಜಾ ಏನೋ ಮಾಡ್ಬಿಟ್ಟೆ.. ಆದರೆ ಹೆಂಡತಿ ಮನೆಗೆ ಸೇರ್ಸ್ತಾಳೋ ಇಲ್ವೋ ಗೊತ್ತಾಗ್ತಾ ಇಲ್ಲ.. ನನ್ನ ಬಳಿ ಹಣ ಬೇರೆ ಇಲ್ಲ.. ಎಟಿಎಂ ಎಲ್ಲಾ ಅವಳ ಹತ್ತಿರವೇ ಇದೆ.. ಕೈಯಲ್ಲಿ‌ ಒಂದು ರೂಪಾಯಿ ಇಲ್ಲ.. ಎಲ್ಲಿ ಹೋಗಲಿ ಎಂದು ಹೇಳಿದ್ದರು.. ಉಳಿದ ಸ್ಪರ್ಧಿಗಳು ಸಹ ರಘು ಅವರನ್ನು ಸಿಕ್ಕಾಪಟ್ಟೆ ಕಿಚ್ಚಾಯಿಸಿದರೆನ್ನಬಹುದು.. ಆದರೆ ಇದೀಗ ಬಿಗ್ ಬಾಸ್ ನಿಂದ ಹೊರ ಬಂದ ನಂತರ ರಘು ಅವರಿಗೆ ಆಗಿರುವ ಗತಿ ನೋಡಿ ನೆಟ್ಟಿಗರು ಮರುಗಿದ್ದಾರೆ.. ಹೌದು ಬಿಗ್ ಬಾಸ್ ನಲ್ಲಿ ವೈಷ್ಣವಿ ಜೊತೆಯೇ ಇರುತ್ತಿದ್ದ ರಘು ಅವರು ಹೊರ ಬಂದ ಬಳಿಕ ಅವರ ಮುಖದ ಶೇಪ್ ಸಂಪೂರ್ಣವಾಗಿ ಬದಲಾಗಿದೆ..

ಈ ಬಗ್ಗೆ ಖುದ್ದು ರಘು ಅವರೇ ಫೋಟೋ ಹಂಚಿಕೊಂಡಿದ್ದು ಪಕ್ಕದಲ್ಲಿ ರಘು ಅವರ ಪತ್ನಿ ವಿದ್ಯಾಶ್ರೀ ಲಟ್ಟಣಿಗೆ ಹಾಗೂ ಸೌಟ್ ಅನ್ನಿ ಹಿಡಿದು ನಿಂತಿದ್ದಾರೆ.. ನಾನು ಸೇಫ್ ಆಗಿ ಮನೆಯಲ್ಲಿದ್ದೇನೆ.. ಥ್ಯಾಂಕ್ ಯು ದಿವ್ಯಾ ಇದೆಲ್ಲವನ್ನು ಸ್ಪೋರ್ಟಿವ್ ಆಗಿ ತೆಗೆದುಕೊಂಡದ್ದಕ್ಕೆ ಎಂದು ಬರೆದು ಪೋಸ್ಟ್ ಮಾಡಿದ್ದಾರೆ.. ಈ ಪೋಸ್ಟ್ ನಲ್ಲಿಯೂ ಸಹ ಹೆಂಡತಿ ವಿದ್ಯಾರ ಹೆಸರನ್ನು ದಿವ್ಯಾ ಎಂದು ಬರೆದು ಪೋಸ್ಟ್ ಮಾಡಿದ್ದು.. ಸದ್ಯ ರಘು ಸ್ಥಿತಿ ನೋಡಿ ನೆಟ್ಟಿಗರು ಹಾಗೂ ಬಿಗ್ ಬಾಸ್ ನ ಉಳಿದ ಸ್ಪರ್ಧಿಗಳು.. ಕಳೆದ ಸೀಸನ್ ನ ಶೈನ್ ಶೆಟ್ಟಿ ಎಲ್ಲರೂ ನಕ್ಕಿದ್ದಾರೆ..

ರಘು ಹಾಗೂ ವಿದ್ಯಾರ ಫೋಟೋಗೆ ಕಮೆಂಟ್ ಮಾಡಿರುವ ಶೈನ್ ಶೆಟ್ಟಿ “ಇದೇ ರೀತಿ ಗಂಡ ಹೆಂಡತಿ ಸ್ಪೋರ್ಟಿವ್ ಆಗಿರಿ” ಎಂದು ನಕ್ಕಿದ್ದರೆ.. ಇತ್ತ ನಿಧಿ ಸುಬ್ಬಯ್ಯ ಕೂಡ ಕಮೆಂಟ್ ಮಾಡಿದ್ದು “ವಿದ್ಯಾ ಸ್ಪೋರ್ಟಿವ್ ಆಗೇ ತಗೊಂಡಿದ್ದರೆ” ಎಂದು ಕಾಲೆಳೆದಿದ್ದಾರೆ.. ಒಟ್ಟಿನಲ್ಲಿ ಸಾಮಾಜಿಕ ಜಾಲತಾಣದಲ್ಲಿ ಮನರಂಜನೆ ನೀಡುತ್ತಿದ್ದ ರಘು ಬಿಗ್ ಬಾಸ್ ನಲ್ಲಿ ಅಷ್ಟಾಗಿ ಮನರಂಜನೆ ನೀಡದಿದ್ದರೂ ಸಹ ಇದೀಗ ವಾಪಸ್ ಬಂದ ಮೇಲೆ ಮರಳಿ ಫಾರ್ಮ್ ಗೆ ಬಂದಿದ್ದಾರೆನ್ನಬಹುದು..