ಇದ್ದಕಿದ್ದ ಹಾಗೆ ನಟಿ ರಾಗಿಣಿಗೆ ಏನಾಗಿದೆ ನೋಡಿ.. ಮಗಳ ಬಳಿಗೆ ದೌಡಾಯಿಸಿದ ಅಪ್ಪ ಅಮ್ಮ..

0 views

ನಟಿ ರಾಗಿಣಿ.. ಸದ್ಯ ಸ್ಯಾಂಡಲ್ವುಡ್ ನಲ್ಲಿ ನಾಲ್ಕು ತಿಂಗಳ ಹಿಂದೆ ಅತಿ ಹೆಚ್ಚು ಸದ್ದು ಮಾಡಿದ್ದ ಸುದ್ದಿಯಲ್ಲಿ ಕೇಳಿಬಂದ ಪ್ರಮುಖ ಹೆಸರು.. ಹೆಸರು ಕೇಳಿದ್ದಷ್ಟೇ ಅಲ್ಲದೆ ಅದೇ ವಿಚಾರವಾಗಿ ಸದ್ಯ ಪರಪ್ಪನ ಅಗ್ರಹಾರದಲ್ಲಿರುವ ನಟಿ.. ಆದರೆ ಇದೀಗ ಇದ್ದಕ್ಕಿದ್ದ ಹಾಗೆ ಪರಪ್ಪನ ಅಗ್ರಹಾರದಲ್ಲಿ ಬೇರೆಯೇ ಘಟನೆ ನಡೆದಿದೆ.. ಹೌದು ನಟಿ ರಾಗಿಣಿಯ ಜೊತೆಗೆ ನಟಿ ಸಂಜನಾ ಕೂಡ ಅವರ ಕಷ್ಟ ಸುಖಗಳಲ್ಲಿ ಭಾಗಿಯಾಗಿದ್ದರು.. ಆದರೆ ಕೆಲ ದಿನಗಳ ಹಿಂದಷ್ಟೇ ನಟಿ ಸಂಜನಾಗೆ ನ್ಯಾಯಲಯದಲ್ಲಿ ಜಾಮೀನು ಮಂಜೂರಾಗಿ ಹೊರ ಬಂದಿದ್ದರು.. ಆದರೆ ನಟಿ ರಾಗಿಣಿಗೆ ಮಾತ್ರ ಸುಪ್ರಿಂ ಕೋರ್ಟ್ ಮೆಟ್ಟಿಲೇರಿದರು ಬಿಡುಗಡೆಯ ಭಾಗ್ಯ ಮಾತ್ರ ದೊರೆಯಲಿಲ್ಲ..

ಹೌದು ನಟಿ ರಾಗಿಣಿ ಹಾಗೂ ಸಂಜನಾ ಇಬ್ಬರೂ ಸಹ ಸ್ಯಾಂಡಲ್ವುಡ್ ನ ಆ ವಿಚಾರಕ್ಕೆ ಸಂಬಂಧ ಪಟ್ಟಂತೆ ಪರಪ್ಪನ ಅಗ್ರಹಾರದಲ್ಲಿದ್ದರು.. ಇಬ್ಬರೂ ಸಹ ಮುಖ್ಯ ನ್ಯಾಯಾಲಯದಲ್ಲಿ ಜಾಮೀನಿಗಾಗಿ ಅರ್ಜಿ ಸಲ್ಲಿಸಿದ್ದರು.. ಇಬ್ಬರ ಅರ್ಜಿ ಕೂಡ ವಜಾ ಆಗಿತ್ತು.. ಆದರೆ ಆನಂತರ ರಾಗಿಣಿ ಸುಪ್ರಿಂ ಕೋರ್ಟ್ ನಲ್ಲಿ ಜಾಮೀನಿಗೆ ಅರ್ಜಿ ಸಲ್ಲಿಸಿದರೆ ಇತ್ತ ಸಂಜನಾ ಮಾತ್ರ ಹೈಕೋರ್ಟ್ ನಲ್ಲಿಯೇ ಮತ್ತೊಮ್ಮೆ ಮೇಲ್ಮನವಿ ಸಲ್ಲಿಸಿದ್ದರು.. ಆರೋಗ್ಯ ಸರಿ ಇಲ್ಲವೆಂದು ತಿಳಿಸಿಶ ಸ್ತ್ರಚಿಕಿತ್ಸೆಗೆ ಒಳಗಾಗಬೇಕೆಂದಿದ್ದರು.. ವಿಚಾರಣೆ ನಡೆಸಿದ ಏಕಸದಸ್ಯ ನ್ಯಾಯಾ ಪೀಠ ಸಂಜನಾರನ್ನು ವೈದ್ಯಕೀಯ ತಪಾಸಣೆಗೆ ಒಳಪಡಿಸಿ ವರದಿ ಪರಿಶೀಲಿಸಿ ನಂತರ ಹತ್ತು ದಿನಗಳ ಹಿಂದಷ್ಟೇ ಸಂಜನಾಗೆ ಜಾಮೀನು‌ ಮಂಜೂರು ಮಾಡಿತ್ತು..

ಇನ್ನು ಜಾಮೀನಿನ ಮೇಲೆ ಹೊರ ಬಂದ ಸಂಜನಾ ಮಾತ್ರ ಮಾದ್ಯಮದ ಕಣ್ಣಿಗೆ ಕಾಣಿಸಿಕೊಳ್ಳದೆ ಅದ್ಯಾವ ಮಾಯದಿಂದ ಪರಪ್ಪನ ಅಗ್ರಹಾರದಿಂದ ಹೊರ ಬಂದರೋ ಎನ್ನುವಂತಾಗಿತ್ತು.. ಯಾವ ಮಾದ್ಯಮದ ಕ್ಯಾಮರಾ ಕಣ್ಣಿಗೂ ಸಂಜನಾ ಮಾತ್ರ ಬೀಳಲಿಲ್ಲ.. ಜಾಮೀನು ಪಡೆದು ಬೆಂಗಳೂರಿನ ಹೊರ ವಲಯದಲ್ಲಿನ ಐಶಾರಾಮಿ ರೆಸಾರ್ಟ್ ಒಂದಕ್ಕೆ ಸಂಜನಾರನ್ನು ಸ್ನೇಹಿತರ ತಂಡವೊಂದು ಕರೆದುಕೊಂಡು ಹೋಯಿತೆನ್ನಲಾಗಿದೆ..

ಇನ್ನು ಇತ್ತ ರಾಗಿಣಿಗೆ ಮಾತ್ರ ಜಾಮೀನಿನ ಭಾಗ್ಯ ದೊರೆಯಲಿಲ್ಲ.. ಅತ್ತ ಜೊತೆಗಿದ್ದ ಸಂಜನಾ ಹೊರ ಹೋಗಾಯ್ತು.. ಆದರೆ ರಾಗಿಣಿಗೆ ಮಾತ್ರ ಅದೇ ಗತಿಯಾಯಿತು.. ಆದರೆ ಹೊರಗೆ ರಾಗಿಣಿಯ ಅಪ್ಪ ಅಮ್ಮ ಪಡುತ್ತಿರುವ ಪಾಡಂತೂ ನಿಜಕ್ಕೂ ಮನಕಲಕುವಂತಿದೆ.. ಮಗಳಿಗೆ ಜಾಮೀನು ಕೊಡಿಸುವ ಸಲುವಾಗಿ ಪ್ರತಿದಿನ ಕೋರ್ಟು ಕಚೇರಿ ಅಲೆಯುತ್ತಲೇ ಇದ್ದಾರೆ.. ಖರ್ಚಿಗೆ ಹಣಕ್ಕಾಗಿ ಮನೆ ಮಾರಾಟ ಮಾಡಲೂ ಮುಂದಾದರು.. ಕಾರುಗಳನ್ನು ಮಾರಾಟ ಮಾಡಲು ಮುಂದಾದರು.. ಒಟ್ಟಿನಲ್ಲಿ ವಯಸ್ಸಾದ ಜೀವಗಳು ಮಗಳನ್ನು ಹೊರ ಕರೆತರಲು ಇನ್ನಿಲ್ಲದ ಪ್ರಯತ್ನವನ್ನಂತೂ ಮಾಡುತ್ತಲೇ ಇದ್ದಾರೆ..

ಆದರೆ ಈ ನಡುವೆ ಪರಪ್ಪನ ಅಗ್ರಹಾರದಲ್ಲಿ ಬೇರೆಯದ್ದೇ ಘಟನೆ ನಡೆದಿದೆ.. ಹೌದು ರಾಗಿಣಿ ಆರೋಗ್ಯದಲ್ಲಿ ಏರುಪೇರಾಗಿದ್ದು ರಾಗಿಣಿಯನ್ನು ಪರಪ್ಪನ ಅಗ್ರಹಾರದಿಂದ ಆಸ್ಪತ್ರೆಗೆ ಶಿಫ್ಟ್ ಮಾಡಲಾಗಿದೆ.. ತೀವ್ರ ಉಸಿರಾಟ ತೊಂದರೆ ಹಾಗೂ ಹೊಟ್ಟೆ ನೋವಿನಿಂದ ರಾಗಿಣಿ ಬಳಲುತ್ತಿದ್ದು ರಾಗಿಣಿಯನ್ನು ಖಾಸಗಿ ಆಸ್ಪತ್ರೆಗೆ ಶಿಫ್ಟ್ ಮಾಡಿ ಚಿಕಿತ್ಸೆ ಕೊಡಿಸಲಾಗುತ್ತಿದೆ..

ನಿನ್ನೆಯ ಅಧಿಕಾರಿಗಳ ಬಳಿ ತಮ್ಮ ಆರೋಗ್ಯ ಸಮಸ್ಯೆಯನ್ನು ಹೇಳಿಕೊಂಡಿದ್ದರು.. ಜೊತೆಗೆ ಅಪ್ಪ ಅಮ್ಮನ ಬಳಿಯೂ ಅತ್ತುಕೊಂಡು ತಮ್ಮ ನೋವನ್ನು ಹೇಳಿಕೊಂಡಿದ್ದರಂತೆ.. ಅದೇ ಕಾರಣಕ್ಕೆ ನಿನ್ನೆ ಅಲ್ಲಿನ ಆಸ್ಪತ್ರೆಯಲ್ಲಿಯೇ ಚಿಕಿತ್ಸೆ ನೀಡಲಾಗಿತ್ತು.. ಆದರೆ ಇಂದು ಬೆಳಿಗ್ಗೆ ಆರೋಗ್ಯ ತೀವ್ರ ಹದಗೆಟ್ಟ ಕಾರಣ ಬೆಳಿಗ್ಗೆ ಹತ್ತು ಗಂಟೆ ವೇಳೆಗೆ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು ಚಿಕಿತ್ಸೆ ನೀಡುತ್ತಿದ್ದಾರೆ..