ರಾಜಾ ರಾಣಿ ಶೋ ಗೆದ್ದ ನೇಹಾ ಚಂದನ್.. ಆದರೆ ಅವರಿಗೆ ನಿಜಕ್ಕೂ ಸಿಕ್ಕ ಹಣವೆಷ್ಟು ಗೊತ್ತಾ..

0 views

ರಾಜಾರಾಣಿ.. ಕನ್ನಡ ಕಿರುತೆರೆಯ ಖ್ಯಾತ ರಿಯಾಲಿಟಿ ಶೋಗಳಲ್ಲಿ ಒಂದಾಗಿದ್ದ ರಾಜಾರಾಣಿ ಶೋಗೆ ಇದೀಗ ತೆರೆ ಬಿದ್ದಿದೆ.‌ ಹೌದು ಕಿರುತೆರೆಯ ನಿಜ ಜೀವನದ ಜೋಡಿಗಳನ್ನು ಕರೆತಂದು ರಿಯಾಲಿಟಿ ಶೋ ಮೂಲಕ ಮನರಂಜನೆ ನೀಡಿದ ರಾಜಾ ರಾಣಿ ಸಾಕಷ್ಟು ಯಶಸ್ವಿಯಾಗಿತ್ತು.. ಹಿರಿಯ ನಟಿ ತಾರಾ ಹಾಗೂ ಸೃಜನ್ ಅವರು ತೀರ್ಪುಗಾರರಾಗಿದ್ದು ಶೋ ಉದ್ದಕ್ಕೂ ಇಬ್ಬರಿಂದಲೂ ಪ್ರೇಕ್ಷಕರಿಗೆ ಸಾಕಷ್ಟು ಮನರಂಜನೆ ದೊರೆತಿತ್ತು.. ಇದೀಗ ಶೋ ಮುಕ್ತಾಯ ಗೊಂಡಿದ್ದು ಚಂದನ್ ಹಾಗೂ ಲಕ್ಷ್ಮೀ ಬಾರಮ್ಮ ಖ್ಯಾತಿಯ ನೇಹಾ ಗೌಡ ಜೋಡಿ ವಿಜೇತರಾಗಿದ್ದಾರೆ..

ಹೌದು ಕಳೆದ ಮೂರು ತಿಂಗಳ ಹಿಂದೆ ಹನ್ನೆರೆಡು ಜೋಡಿಗಳಿಂದ ಶುರುವಾದ ರಾಜ ರಾಣಿ ಶೋ ವಾರಾಂತ್ಯದಲ್ಲಿ ಒಬ್ಬೊಬ್ಬರಾಗಿಯೇ ಎಲಿಮಿನೇಟ್ ಆಗಿ ಕೊನೆಗೆ ಆರು ಜೋಡಿಗಳು ಫಿನಾಲೆ ಹಂತಕ್ಕೆ ಬಂದು ತಲುಪಿದ್ದವು.. ಬಿಗ್ ಬಾಸ್ ಐದರ ವಿಜೇಟ ಚಂದನ್ ಹಾಗೂ ನಿವೇದಿತಾ ಗೌಡ ಜೋಡಿ, ಅಯ್ಯಪ್ಪ ಅನು ಜೋಡಿ, ದೀಪಿಕಾ ಆಕರ್ಶ್, ಹಿಶಿತಾ ಮುರುಗಾ ಜೋಡಿ.. ಲಕ್ಷ್ಮೀ ಬಾರಮ್ಮ ಖ್ಯಾತಿಯ ನೇಹಾ ಗೌಡ ಹಾಗೂ ಚಂದನ್ ಜೋಡಿ, ಸಮೀರ್ ಆಚಾರ್ಯ ಶ್ರಾವಣಿ ಜೋಡಿ ಹಾಗೂ ರಾಜು ತಾಳಿಕೋಟೆ ಕುಟುಂಬ ಹೀಗೆ ಒಟ್ಟು ಹನ್ನೆರೆಡು ಜೋಡಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದು ಕೊನೆಗೆ ಫಿನಾಲೆಚಾರು ಜೋಡಿಗಳಷ್ಟೇ ಉಳಿದುಕೊಂಡಿದ್ದರು..

ಪ್ರತಿ ಸಂಚಿಕೆಯಲ್ಲಿಯೂ ಒಂದಲ್ಲಾ ಒಂದು ವಿಶೇಷತೆಗಳನ್ನು ಹೊತ್ತು ಬರುತ್ತಿದ್ದ ಕಾರ್ಯಕ್ರಮ ಪ್ರೇಕ್ಷಕರಲ್ಲಿ ಅದರಲ್ಲೂ ದಾಂಪತ್ಯದಲ್ಲಿ ಒಬ್ಬರ ಮೇಲೊಬ್ಬರಿಗೆ ಪ್ರೀತಿ ಗೌರವ ಹೆಚ್ಚಾಗಲೂ ಸಹ ಕಾರಣವಾಗಿತ್ತು.. ತಮ್ಮ ನಿಜ ಜೀವನದಲ್ಲಿ ಸಾಕಷ್ಟು ಕಷ್ಟಗಳನ್ನು ಎದುರಿಸಿ ಬಂದಿದ್ದ ಸಾಕಷ್ಟು ಜೋಡಿಗಳು ಜೀವನದಲ್ಲಿ ಸೋತ ಹಲವರಿಗೆ ಸ್ಪೂರ್ತಿಯೂ ಸಹ ಆದರು.. ಇನ್ನು ಸೃಜನ್ ಹಾಗೂ ತಾರಮ್ಮ ಅವರ ಜೋಡಿ ತಮ್ಮ ಆನ್ ಸ್ಪಾಟ್ ಮಾತುಗಳ ಮೂಲಕ ಪ್ರೇಕ್ಷಕರನ್ನು ಮೋಡಿ ಮಾಡಿತ್ತು..

ಇನ್ನು ಕೊನೆಯದಾಗಿ ನಿನ್ನೆ ರಾಜ ರಾಣಿ ಶೋನ ಫಿನಾಲೆ ಪ್ರಸಾರವಾಗಿದ್ದು ಕಾರ್ಯಕ್ರಮಕ್ಕೆ ತೆರೆ ಬಿದ್ದಿದೆ.. ಒಟ್ಟು ಆರು ಜೋಡಿಗಳಿಗೂ ನಗದು ಬಹುಮಾನ ದೊರೆತಿದ್ದು ಚಂದನ್ ಹಾಗೂ ನೇಹಾ ಗೌಡ ಶೋ ನ ವಿಜೇತರಾಗಿದ್ದಾರೆ.. ಹೌದು ಆರನೇ ಸ್ಥಾನ ಪಡೆದ ಪವನ್ ವೇಣುಗೋಪಾಲ್ ಹಾಗೂ ಸುಮನ್ ಜೋಡಿಗೆ ಎಪ್ಪತ್ತೈದು ಸಾವಿರ ರೂಪಾಯಿ ಬಹುಮಾನ ದೊರೆತಿದೆ.. ಇನ್ನು ಐದನೇ ಸ್ಥಾನ ಪಡೆದ ಜೋಡಿ ರೂಪಾ ಪ್ರಭಾಕರ್ ಜೋಡಿಗೂ ಸಹ ಎಪ್ಪತ್ತೈದು ಸಾವಿರ ರೂಪಾಯಿ ನಗದು ಬಹುಮಾನ ದೊರೆತಿದೆ.

ಇನ್ನು ಕಾರ್ಯಕ್ರಮದ ಟಾಪ್ ನಾಲ್ಕನೇ ಜೋಡಿಯಾಗಿದ್ದು ಶೋ ಉದ್ದಕ್ಕೂ ಸಿಕ್ಕಾಪಟ್ಟೆ ಮನರಂಜನೆ ಕೊಟ್ಟ ಹರಿಣಿ ಹಾಗೂ ಶ್ರೀಕಾಂತ್ ಜೋಡಿ.. ಇವರಿಗೂ ಸಹ ಎಪ್ಪತ್ತೈದು ಸಾವಿರ ರೂಪಾಯಿ ನಗದು ಬಹುಮಾನ ದೊರೆತಿದೆ.. ಇನ್ನು ಮೂರನೇ ಸ್ಥಾನ ಪಡೆದ ಚಂದನ್ ಶೆಟ್ಟಿ ಹಾಗೂ ನಿವೇದಿತಾ ಗೌಡ ಜೋಡಿಗೆ ಒಂದೂವರೆ ಲಕ್ಷ ರೂಪಾಯಿ ನಗದು ಬಹುಮಾನ ದೊರೆತಿದೆ.. ಇಷ್ಟೇ ಅಲ್ಲದೇ ಕಾರ್ಯಕ್ರಮದಲ್ಲಿ ಭಾಗವಹಿಸಿದ ಪ್ರತಿಯೊಂದು ಜೋಡಿಗಳಿಗೂ ಸಹ ವ್ಯಯಕ್ತಿಕವಾಗಿ ವಾರದ ಸಂಭಾವನೆಯನ್ನು ನೀಡಲಾಗಿದೆ.. ಹೌದು ಬಹುಮಾನದ ಮೊತ್ತ ಮಾತ್ರವಲ್ಲ ಪ್ರತಿಯೊಂದು ಸಂಚಿಕೆಗಳಿಗೂ ಸಹ ಸ್ಪರ್ಧಿಗಳಿಗೆ ಸಂಭಾವನೆ ನೀಡಲಾಗಿದೆ..

ಇನ್ನು ಟಾಪ್ ಎರಡನೇ ಸ್ಥಾನ ಪಡೆದು ರನ್ನರ್ ಅಪ್ ಆದ ಜೋಡಿ ಕಿರುತೆರೆ ನಟಿ ಇಶಿತಾ ಹಾಗೂ ಡ್ಯಾನ್ಸ್ ಕೋರಿಯೋಗ್ರಾಫರ್ ಮುರುಗಾನಂದ.. ಹೌದು ಈ ಜೋಡಿ ಎರಡನೇ ಸ್ಥಾನ ಪಡೆದು ರನ್ನರ್ ಅಪ್ ಆಗಿದ್ದು ಅವರಿಗೆ ಎರಡೂವರೆ ಲಕ್ಷ ರೂಪಾಯಿ ನಗದು ಬಹುಮಾನ ನೀಡಲಾಗಿದೆ.. ಇನ್ನುಳಿದಂತೆ ಟಾಪ್ ಒಂದರ ಸ್ಥಾನ ಅಂದರೆ ಶೋ ನ ವಿಜೇತರಾಗಿ ರಾಜಾ ರಾಣಿಯಾಗಿ ಹೊರ ಬಂದ ಜೋಡಿ ಚಂದನ್ ಹಾಗೂ ನೇಹಾ ಗೌಡ ಜೋಡಿ.. ಈ ಜೋಡಿಗೆ ಬರೋಬ್ಬರಿ ಐದು ಲಕ್ಷ ರೂಪಾಯಿ ನಗದು ಬಹುಮಾನ ದೊರೆತಿದೆ.. ಫಿನಾಲೆಗೆ ಆಗಮಿಸಿದ ಆರೂ ಜೋಡಿಗಳಿಗೂ ಸಹ ನಗದು ಬಹುಮಾನಗಳನ್ನು ಕೊಟ್ಟು ವಾಹಿನಿ ಗೌರವಿಸಿದೆ.. ಇನ್ನು ಇಪ್ಪತ್ತೈದು ವರ್ಷ ಪ್ರೀತಿಸಿ ಜೀವನದಲ್ಲಿ ಸೆಟಲ್ ಆಗಿ ನಂತರ ಮದುವೆಯಾದ ಬೊಂಬೆ ಹಾಗೂ ಚಂದನ್ ವಿಜೇತರಾಗಿದ್ದು ಅಭಿಮಾನಿಗಳಿಗೆ ಸಂತೋಷ ತಂದಿದೆ..