ಕೆಲವೇ ದಿನಗಳ ಹಿಂದೆ ಹಿಟ್ಲರ್ ಕಲ್ಯಾಣ ಧಾರಾವಾಹಿಯಲ್ಲಿ ಕಾಣಿಸಿಕೊಂಡಿದ್ದ ನಟಿ ರಜನಿ ಏನಾದರು ನೋಡಿ..

0 views

ನಟಿ ರಜನಿ ಯಾರಿಗೆ ತಾನೇ ಗೊತ್ತಿಲ್ಲಾ.. ರಜನಿ ಎಂದರೆ ಗೊತ್ತಾಗದೆ ಇರಬಹುದು, ಅಮೃತವರ್ಷಿಣಿ ಧಾರಾವಾಹಿಯ ಅಮೃತಾ ಎಂದರೆ ಥಟ್ ಎಂದು ಎಲ್ಲರಿಗೂ ಗೊತ್ತಾಗುತ್ತದೆ. ಈ ಧಾರವಾಹಿ ಬಂದು ಒಂದು ದಶಕ ಕಳೆದಿದೆ, ಆದರೆ ಇಂದಿಗೂ ಅಳುಮುಂಜಿ ಅಮೃತಾ ಪಾತ್ರವನ್ನು ಜನರು ಮರೆತಿಲ್ಲ. ಅಂತಹ ಇಂಪ್ಯಾಕ್ಟ್ ಕ್ರಿಯೇಟ್ ಮಾಡಿತ್ತು ಅಮೃತವರ್ಷಿಣಿ ಧಾರವಾಹಿ. ಆಗ ಸೋಷಿಯಲ್ ಮೀಡಿಯಾ ಕ್ರೇಜ್ ಇಷ್ಟರ ಮಟ್ಟಿಗೆ ಇರಲಿಲ್ಲ. ಆದರೆ ಧಾರವಾಹಿ ಎಲ್ಲರ ಮನಸ್ಸಿನಲ್ಲಿ ಉಳಿದಿತ್ತು. ಅಮೃತವರ್ಷಿಣಿ ನಟಿ ರಜನಿ ಇತ್ತೀಚೆಗೆ ಹಿಟ್ಲರ್ ಕಲ್ಯಾಣ ಧಾರವಾಹಿಯಲ್ಲಿ ನಟಿಸಿದ್ದರು..‌ಅದಾದ ಬಳಿಕ ಮತ್ತೆ ಕಿರುತೆರೆಗೆ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎನ್ನುವ ಮಾತು ಕೇಳಿ ಬಂದಿತ್ತು.. ಆದರೆ ಅಲ್ಲಿಂದ ಹೊರಬಂದ ಬಳಿಕ ಇವರಿಗೆ ಏನಾಯ್ತು.. ಬೇರೆಲ್ಲೂ ಕಾಣಿಸಿಕೊಳ್ಳಲಿಲ್ಲ.. ಅವರು ಏನು ಮಾಡುತ್ತಿದ್ದಾರೆ ಎಂಬ ಕುತೂಹಲ ಕಿರುತೆರೆ ಪ್ರಿಯರಲ್ಲಿ ಮೂಡಿದ್ದು ಸತ್ಯ..

ನಟಿ ರಜನಿ ಮೂಲತಃ ತುಮಕೂರಿನವರು. ಇವರು ಹುಟ್ಟಿ ಬೆಳೆದದ್ದು ಅಲ್ಲಿಯೇ. ಅಚಾನಕ್ ಆಗಿ ಖ್ಯಾತ ಕಿರುತೆರೆ ನಿರ್ದೇಶಕ ರವಿ ಗರಣಿ ಅವರು ನಿರ್ದೇಶಕ ಮಾಡಲಿದ್ದ ಅಮೃತವರ್ಷಿಣಿ ಧಾರವಾಹಿಯಲ್ಲಿ ನಟಿಸುವ ಅವಕಾಶ ರಜನಿ ಅವರಿಗೆ ಸಿಕ್ಕಿತು, ಅಮೃತಾ ಪಾತ್ರ ಮುಗ್ಧತೆಯಿಂದ ಕೂಡಿದ್ದ, ಅನಕ್ಷರಸ್ಥ ಹುಡುಗಿಯ ಪಾತ್ರ ಆಗಿತ್ತು. ಇದು ಒಂದು ಅಳುಮುಂಜಿಯ ಪಾತ್ರದಂತೆ ಶುರುವಾದರು, ಬರುಬರುತ್ತಾ, ಅಮೃತಾ ಎಲ್ಲವನ್ನು ಕಲಿತು, ಕುಟುಂಬವನ್ನು ನಿಭಾಯಿಸುತ್ತಾಳೆ. ಮೊದಲ ಧಾರವಾಹಿಯಲ್ಲೇ ರವಿ ಗರಣಿ ಅವರಂತಹ ನಿರ್ದೇಶಕರ ಜೊತೆಗೆ ಕೆಲಸ ಹಾಗೂ, ಹೇಮಾ ಚೌಧರಿ, ಕಿಶೋರಿ ಬಲ್ಲಾಳ್ ಅವರಂತಹ ಹಿರಿಯ ಕಾಲಾವಿದರ ಜೊತೆಗೆ ಕೆಲಸ ಮಾಡುವ ಅವಕಾಶ ಪಡೆದರು ರಜನಿ.

ಹಿರಿಯ ಕಲಾವಿದರಿಂದ ಸಾಕಷ್ಟು ಕಲಿತುಕೊಂಡರು. ಬಳಿಕ ರಜನಿ ಅವರು ಮತ್ತೊಂದು ಧಾರವಾಹಿ ಒಪ್ಪಿಕೊಳ್ಳಲು ದೊಡ್ಡ ಗ್ಯಾಪ್ ಪಡೆದರು. ನಡುವಿನ ಸಮಯದಲ್ಲಿ ಕಲರ್ಸ್ ಕನ್ನಡ ವಾಹಿನಿಯ ಡ್ಯಾನ್ಸಿಂಗ್ ಸ್ಟಾರ್ ಡ್ಯಾನ್ಸ್ ರಿಯಾಲಿಟಿ ಶೋನಲ್ಲಿ ಸ್ಪರ್ಧಿಯಾಗಿ ಬಂದರು ರಜನಿ. ಅದ್ಭುತವಾಗಿ ಡ್ಯಾನ್ಸ್ ಪರ್ಫಾರ್ಮೆನ್ಸ್ ನೀಡುತ್ತಾ ಜಡ್ಜ್ ಗಳನ್ನು ಇಂಪ್ರೆಸ್ ಮಾಡಿದ್ದ ರಜನಿ ವಿನ್ನರ್ ಆಗುತ್ತಾರೆ ಎಂದೇ ಎಲ್ಲರೂ ಅಂದುಕೊಂಡಿದ್ದರು. ಆದರೆ ದುರದೃಷ್ಟವಶಾತ್, ಇನ್ನೇನು ಫಿನಾಲೆ ಬರುವ ಸಮಯದಲ್ಲಿ ರಜನಿ ಅವರ ಕಾಲಿಗೆ ಪೆಟ್ಟಾಗಿ, ಡ್ಯಾನ್ಸ್ ಮಾಡಲು ಸಾಧ್ಯವಾಗದೆ ಶೋ ಇಂದ ಹೊರಬರುವ ಹಾಗಾಯಿತು.

ಅದಾದ ಬಳಿಕ ಜೀಕನ್ನಡ ವಾಹಿನಿಯ ಆತ್ಮಬಂಧನ ಧಾರಾವಾಹಿಯಲ್ಲಿ ಕಾಣಿಸಿಕೊಂಡರು, ಇದು ಹಾರರ್ ಸ್ಟೋರಿ ಆಗಿತ್ತು. ಆತ್ಮಬಂಧನ ಬಳಿಕ, ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುವ ಮಜಾ ಟಾಕೀಸ್ ಶೋನಲ್ಲೂ ಕಾಣಿಸಿಕೊಂಡರು ರಜನಿ. ಹಾಸ್ಯ ಸನ್ನಿವೇಶಗಳನ್ನು ಅಚ್ಚುಕಟ್ಟಾಗಿ ನಿಭಾಯಿಸುತ್ತಿದ್ದರು. ಬಳಿಕ ಮತ್ತೊಂದು ಬ್ರೇಕ್ ಪಡೆದು, ಈಗಾಗಲೇ ಬಹಳ ಖ್ಯಾತಿ ಪಡೆದಿರುವ ಹಿಟ್ಲರ್ ಕಲ್ಯಾಣ ಧಾರವಾಹಿಯಲ್ಲಿ ಅಂತರ ಪಾತ್ರದಲ್ಲಿ ನಟಿಸಿದ್ದರು. ಆದರೆ ಹಿಟ್ಲರ್ ಕಲ್ಯಾಣ ಧಾರಾವಾಹಿಯಿಂದ ಹೊರಬಂದರು ರಜನಿ. ಹೆಚ್ಚಾಗಿ ಅಳುಮುಂಜಿ ಪಾತ್ರಗಳೇ ಬರುತ್ತಿವೆ, ಚಾಲೆಂಜಿಂಗ್ ಆಗಿರುವಂತಹ ಪಾತ್ರಗಳು ಬೇಕು, ಮಾಡರ್ನ್ ಹುಡುಗಿಯಾಗು ಕಾಣಿಸಿಕೊಳ್ಳಬೇಕು ಎನ್ನುವುದು ರಜನಿ ಅವರ ಆಸೆ.

ನಟಿ ರಜನಿ ಅವರಿಗೆ ಕೆಲವರು ಮೂಗು ದಪ್ಪ ಇದೆ ಎಂದು ಹೇಳಿದ್ದ ಕಾರಣ, ಸರ್ಜರಿ ಮಾಡಿಸಿಕೊಂಡು, ಇನ್ನು ಸುಂದರವಾಗಿ ಆದರು. ಕಿರುತೆರೆ ಜೊತೆಗೆ ಈಗ ಬೆಳ್ಳಿತೆರೆಗೂ ಎಂಟ್ರಿ ಕೊಡಲು ರಜನಿ ಅವರು ಸಜ್ಜಾಗಿದ್ದಾರೆ. ಶುಭಾ ಪೂಂಜಾ ಅವರು ಮುಖ್ಯ ಪಾತ್ರದಲ್ಲಿ ನಟಿಸಿರುವ, ಅಂಬುಜಾ ಸಿನಿಮಾದಲ್ಲಿ ರಜನಿ ಸಹ ಮುಖ್ಯಪಾತ್ರದಲ್ಲಿ ನಟಿಸಿದ್ದು, ಇದೊಂದು ನೈಜ ಘಟನೆ ಆಧಾರಿತ ಸಿನಿಮಾ ಆಗಿದೆ. ಸೋಷಿಯಲ್ ಮೀಡಿಯಾದಲ್ಲಿ ಬಹಳ ಆಕ್ಟಿವ್ ಆಗಿರುವ ರಜನಿ, ಇನ್ಸ್ಟಾಗ್ರಾಮ್ ನಲ್ಲಿ ಸಾಕಷ್ಟು ಫೋಟೋಗಳನ್ನು ಮತ್ತು ಇನ್ಸ್ಟಾಗ್ರಾಮ್ ರೀಲ್ಸ್ ವಿಡಿಯೋಗಳನ್ನು ಶೇರ್ ಮಾಡಿಕೊಳ್ಳುತ್ತಾರೆ. ಮುಂದಿನ ದಿನಗಳಲ್ಲಿ ಇವರಿಗೆ ಇಷ್ಟ ಆಗುವಂತಹ ಒಳ್ಳೆಯ ಪಾತ್ರಗಳು ಸಿಗಲಿ ಎಂದು ನಾವು ಕೂಡ ಹಾರೈಸೋಣ..