ರಾಜರಾಜೇಶ್ವರಿ ನಗರದ ಅಭ್ಯರ್ಥಿ ಕುಸುಮಾ ಅವರು ಮಾಡಿರುವ ಕೆಲಸ ನೋಡಿ..

0 views

ಈ ವರ್ಷದ ನಾಡ ಹಬ್ಬ ದಸರಾ ಮುಕ್ತಾಯಗೊಂಡಿದೆ.. ಸರಳ ದಸರಾ ಮೂಲಕ ನಾಡ ದೇವತೆ ಚಾಮುಂಡೇಶ್ವರಿ ತಾಯಿಯನ್ನು ಕೊರೊನಾ ಮುಕ್ತಗೊಳಿಸಿ ನಾಡನ್ನು ಸುಭೀಕ್ಷ ಮಾಡುವಂತೆ ಪ್ರಾರ್ಥಿಸಲಾಗಿದೆ.. ಇನ್ನು ದಸರಾ ನಡುವೆಯೂ ರಾಜ್ಯದಲ್ಲಿ ನಡೆಯಲಿರುವ ವಿಧಾನಸಭಾ ಉಪಚುನಾವಣೆಯ ಪ್ರಚಾರ ಭರ್ಜರಿಯಾಗಿಯೇ ನಡೆಯುತ್ತಿದೆ.. ಅದರಲ್ಲೂ ರಾಜರಾಜೇಶ್ವರಿ‌ ನಗರದ ಚುನಾವಣಾ ರಂಗು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ..

ಅದಾಗಲೇ ಆರ್ ಆರ್ ನಗರದ ಉಪಚುನಾವಣೆಯ ಪ್ರಚಾರದ ಕಣದಲ್ಲಿ ಸ್ಟಾರ್ ನಟ ನಟಿಯರು ಭಾಗಿಯಾಗಲಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ.. ಮುನಿರತ್ನ ಅವರು ದರ್ಶನ್ ಅವರನ್ನು ಯಶ್ ಅವರನ್ನು ಜೊತೆಗೆ ಖ್ಯಾತ ಕಿರುತೆರೆ ಕಲಾವಿದರು ಸಹ ಮುನಿರತ್ನ ಅವರ ಪರವಾಗಿ ಪ್ರಚಾರ ಮಾಡಲಿದ್ದಾರೆ ಎನ್ನಲಾಗುತ್ತಿದೆ.. ಇತ್ತ ಕಾಂಗ್ರೆಸ್ ಪಕ್ಷದ ಅಧ್ಯಕ್ಷರಾದ ಡಿ ಕೆ ಶಿವಕುಮಾರ್ ಅವರು ಅದಾಗಲೇ ನಟ ನೆನಪಿರಲಿ ಪ್ರೇಮ್ ಹಾಗೂ ನಟ ವಿನೋದ್ ಪ್ರಭಾಕರ್ ಅವರನ್ನು ಖುದ್ದು ಮನೆಗೆ ತೆರಳಿ ಭೇಟಿಯಾಗಿದ್ದು ಕುಸುಮಾ ಅವರ ಪರವಾಗಿ ಚುನಾವಣಾ ಕಣದಲ್ಲಿ ಪ್ರಚಾರ ಮಾಡಬಹುದಾಗಿದೆ..

ಇನ್ನು ಇದೆಲ್ಲದರ ನಡುವೆ ಅತ್ತ ಬಿಜೆಪಿ ಅಭ್ಯರ್ಥಿ‌ ಮುನಿರತ್ನ ಅವರು ಸ್ಕೂಟರ್ ನಲ್ಲಿಯೇ ಮನೆಮನೆಗೂ ತೆರಳಿ ಪ್ರಚಾರ ನಡೆಸುತ್ತಿರುವುದು ಒಂದು ಕಡೆಯಾದರೆ ಇತ್ತ ಕುಸುಮಾ ಅವರೂ ಸಹ ಪ್ರಚಾರ ಆರಂಭಿಸಿ ವಾರಗಳೇ ಕಳೆದಿವೆ.. ಆದರೆ ಇಂದು ಕುಸುಮಾ ಅವರು‌ ವಿಜಯದಶಮಿ ಅಂಗವಾಗಿ ಉರುಳು ಸೇವೆಯ ಮೂಲಕ ತಾಯಿಯಲ್ಲಿ ಗೆಲುವಿನ ಮನವಿ ಮಾಡಿಕೊಂಡಿದ್ದಾರೆನ್ನಬಹುದು.. ಹೌದು ಅದಾಗಲೇ ಕ್ಷೇತ್ರದಲ್ಲಿ‌ ಮನೆಮನೆ ಪ್ರಚಾರ ಆರಂಭಿಸಿರುವ ಕುಸುಮಾ ಅವರು ವೃದ್ಧರು ಮಕ್ಕಳ ಜೊತೆ ಬಹಳಷ್ಟೂ ಫೊಟೋಗಳನ್ನು ಹಂಚಿಕೊಳ್ಳುತ್ತಾ ಜನರನ್ನು ಸೆಳೆಯುತ್ತಿರುವರು.. ಜೊತೆಗೆ ಇಂದು ದೇವಸ್ಥಾನದಲ್ಲಿ ಉರುಳು ಸೇವೆ ಸಲ್ಲಿಸುವ ಮೂಲಕ ಗಮನ ಸೆಳೆದಿದ್ದಾರೆ..

ಹೌದು ಇಂದು ವಿಜಯದಶಮಿ ಅಂಗವಾಗಿ ಬೆಳ್ಳಂಬೆಳಿಗ್ಗೆ ಆರ್ ಆರ್ ನಗರದ ರಾಜರಾಜೇಶ್ವರಿ ತಾಯಿ ದೇವಸ್ಥಾನದಲ್ಲಿ ಕುಸುಮಾ ಅವರು ಉರುಳು ಸೇವೆ ಸಲ್ಲಿಸುವ ಮೂಲಕ ವಿಶೇಷ ಪ್ರಾರ್ಥನೆ ಸಲ್ಲಿಸಿದ್ದಾರೆ.. ಈ ಮೂಲಕ ತಮ್ಮ ಗೆಲುವಿಗೆ ದೇವರ ಮೊರೆ ಹೋಗಿದ್ದು ಕುಸುಮಾ ಅವರಿಗೆ ಆಪ್ತರು ಸಾಥ್ ನೀಡಿದರು.. ಉರುಳು ಸೇವೆಯ ನಂತರ ಮಾದ್ಯಮದ ಜೊತೆ ಮಾತನಾಡಿರುವ ಕುಸುಮಾ ಅವರು ಈ ಉರುಳು ಸೇವೆ ಜನರಿಗಾಗಿ ಎಂದಿದ್ದಾರೆ..

ಹೌದು ಮಾದ್ಯಮಕ್ಕೆ ಪ್ರತಿಕ್ರಿಯೆ ನೀಡಿದ ಕುಸುಮಾ ಅವರು “ರಾಜರಾಜೇಶ್ವರಿ ನಗರದ ಒಳಿತಿಗಾಗಿ ನಾನು ಉರುಳು ಸೇವೆ ಮಾಡಿದ್ದೇನೆ.. ದೇಶ ಹಾಗೂ ರಾಜ್ಯದ ಒಳಿತಿಗಾಗಿ ಮತ್ತು ಲೋಕ ಕಲ್ಯಾಣಕ್ಕಾಗಿ ನಾನು ಈ ಸೇವೆಯನ್ನು ಮಾಡಿರುವೆ.. ದೇಶದಲ್ಲಿ ಕೊರೊನಾ ನಿಯಂತ್ರಣಗೊಂಡು ಎಲ್ಲರಿಗೂ ಒಳ್ಳೆಯದಾಗಬೇಕು ಎಂದು ಪ್ರಾರ್ಥಿಸಿದ್ದೇನೆ ಎಂದರು.. ಒಟ್ಟಿನಲ್ಲಿ ಜನರ ಸೇವೆಯ ದೊಡ್ಡ ಆಕಾಂಕ್ಷೆ ಹೊತ್ತ ಕುಸುಮಾ ಅವರು ಇಂದು ರಾಜರಾಜೇಶ್ವರಿ ತಾಯಿಯ ಸೇವೆಯನ್ನು ಸಲ್ಲಿಸಲಾಯಿತು.. ಆದರೆ ಅದಾಗಲೇ ಮುನಿರತ್ನ ಅವರ ಕೈ ಹಿಡಿದಿರುವ ತಾಯಿ ಈ ಬಾರಿ ವಿಜಯ ಪತಾಕೆಯನ್ನು ಯಾರ ಪರವಾಗಿ ಹಾರಿಸುವರೋ ಕಾದು ನೋಡಬೇಕಿದೆ.. ಕ್ಷೇತ್ರದ ಜನರು ಎಂದಿನಂತೆ ಮುನಿರತ್ನ ಅವರಿಗೆ ಮತ ಚಲಾಯಿಸುವರೋ ಅಥವಾ ಕುಸುಮಾ ಅವರ ಕೈ ಹಿಡಿಯುವರೋ ಚುನಾವಣೆಯ ನಂತರ ತಿಳಿಯಲಿದೆ..