ಬಿಗ್ ಬಾಸ್ ನಿಂದ ರಾಜೀವ್ ಹೊರ ಬರಲು ನಿಜವಾದ ಕಾರಣ ಬೇರೆಯೇ ಇದೆ..

0 views

ಬಿಗ್ ಬಾಸ್ ಸೀಸನ್ ಎಂಟರಲ್ಲಿ ಸದ್ಯ ಎಂಟು ವಾರಗಳು ಮುಕ್ತಾಯಗೊಂಡಿದ್ದು ನಿನ್ನೆ ಎಲಿಮಿನೇಷನ್ ಪ್ರಕ್ರಿಯೆ ನಡೆದು ಮನೆಯಿಂದ ರಾಜೀವ್ ಹೊರ ಬಂದಿದ್ದಾರೆ.. ಹೌದು ಬಿಗ್ ಬಾಸ್ ಈ ಸೀಸನ್ ನ ಒಬ್ಬ ಪ್ರಬಲ ಸ್ಪರ್ಧಿ ಎನಿಸಿಕೊಂಡಿದ್ದ ರಾಜೀವ್ ಅವರು ಈ ಸೀಸನ್ನಿನ ಟಾಪ್ ಐದು ಸ್ಪರ್ಧಿಗಳಲ್ಲಿ ಒಬ್ಬರಾಗಿರುತ್ತಾರೆ ಎಂದು ಅಂದಾಜಿಸಲಾಗಿತ್ತು.. ಆದರೆ ಇದ್ದಕ್ಕಿದ್ದ ಹಾಗೆ ಎಂಟೇ ವಾರಕ್ಕೆ ರಾಜೀವ್ ಬಿಗ್ ಬಾಸ್ ಮನೆಯಿಂದ ಹೊರ ಬಂದಿದ್ದಕ್ಕೆ ಸಾಮಾಜಿಕ ಜಾಲತಾಣದಲ್ಲಿ ಬಹಳಷ್ಟು ಮಂದಿ ಅಸಮಾಧಾನ ವ್ಯಕ್ತ ಪಡಿಸಿದ್ದಾರೆ.. ರಾಜೀವ್ ಗಿಂತ ಅರ್ಹರಲ್ಲದ ಬಹಳಷ್ಟು ಸ್ಪರ್ಧಿಗಳು ಬಿಗ್ ಬಾಸ್ ಮನೆಯೊಳಗೇ ಇರುವಾಗ ರಾಜೀವ್ ಯಾಕೆ ಹೊರ ಬಂದರು.. ಟಾಸ್ಕ್ ಗಳಲ್ಲಿ ಭಾಗವಹಿಸದ ರಘು ಶಮಂತ್ ಇನ್ನೂ ಮನೆಯಲ್ಲಿಯೇ ಇದ್ದಾರೆ..

ಕೇವಲ ಅವರಿವರ ಬಗ್ಗೆ ಮಾತನಾಡುತ್ತಾ ಸಮಯ ಕಳೆಯುತ್ತಿರುವ ನಿಧಿ ಸುಬ್ಬಯ್ಯ ಹಾಗೂ ಶುಭ ಪೂಂಜಾ ಇನ್ನೂ ಬಿಗ್ ಬಾಸ್ ಮನೆಯಲ್ಲಿಯೇ ಇದ್ದಾರೆ.. ಆದರೆ ರಾಜೀವ್ ಮಾತ್ರ ಎಲಿಮಿನೇಟ್ ಆದರು ಎಂದು ಸಾಮಾಜಿಕ ಜಾಲತಾಣದಲ್ಲಿ ಮಾತುಗಳು ಕೇಳಿ ಬಂತು.. ಆದರೆ ರಾಜೀವ್ ಬಿಗ್ ಬಾಸ್ ಮನೆಯಿಂದ ಹೊರಬರಲು ನಿಜವಾದ ಕಾರಣ ಬೇರೆಯೇ ಇದೆ.. ಹೌದು ಬಿಗ್ ಬಾಸ್ ನಲ್ಲಿ ಪ್ರಬಲ ಸ್ಪರ್ಧಿಗಳ ಫಿಸಿಕಲ್ ಟಾಸ್ಕ್ ನಲ್ಲಿ ಮುಂಚೂಣಿಯಲ್ಲಿದ್ದ ಕೆಲ ಸ್ಪರ್ಧಿಗಳಲ್ಲಿ ರಾಜೀವ್ ಕೂಡ ಒಬ್ಬರಾಗಿದ್ದರು.. ಮೊದ ಮೊದಲು ಎಲ್ಲರಿಗೂ ಇಷ್ಟವಾಗುತ್ತಿದ್ದ ರಾಜೀವ್ ಬರುಬರುತ್ತಾ ಮನೆಯಲ್ಲಿ ಕೆಲವರು ಅವರನ್ನು ದ್ವೇಷಿಸಲು ಆರಂಭಿಸಿದರು.. ಒಂದಷ್ಟು ಗಲಾಟೆಗಳು ಮನಸ್ತಾಪಗಳು ಸಹ ಆದವು.. ಆದರೆ ಎಲ್ಲರಂತೆಯೇ ಇವರೂ ಸಹ ಆಟವಾಡಿಕೊಂಡು ಬಂದಿದ್ದರು..

ಆದರೆ ಕಳೆದ ವಾರದಿಂದ ರಾಜೀವ್ ಟಾಸ್ಕ್ ವಿಚಾರದಲ್ಲಿ ನಡೆದುಕೊಳ್ಳುತ್ತಿದ್ದ ರೀತಿ ಕೊಂಚ ಸ್ವಾರ್ಥಿಯಂತೆ ಕಂಡಿತ್ತು.. ಸಾಮಾಜಿಕ ಜಾಲತಾಣದಲ್ಲಿ ಬಹಳಷ್ಟು ಟೀಕೆಗಳು ವ್ಯಕ್ತವಾಗಿದ್ದವು.. ಅದರಲ್ಲಿಯೂ ಗೋಲ್ಡನ್ ಪಾಸ್ ಪಡೆಯುವ ಸಮಯದಲ್ಲಿ ಬಳಸಿದ ಟ್ರಿಕ್ಸ್ ಪ್ರೇಕ್ಷಕರಿಗೆ ಬಹಳ ಚೀಪ್ ಆಗಿ ಕಂಡಿತ್ತು.. ಮತ್ತೊಬ್ಬರಿಗೆ ಸಿಗಬೇಕಾದ ಗೋಲ್ಡನ್ ಪಾಸ್ ತನ್ನ ಕೈವಶಮಾಡಿಕೊಂಡಿದ್ದ ರಾಜೀವ್ ಹೊರಗೆ ಪ್ರೇಕ್ಷಕರ ಕಣ್ಣಲ್ಲಿ ಬಹಳ ಸಣ್ಣವರಾಗಿ ಕಂಡರು.. ಅಷ್ಟೇ ಅಲ್ಲದೇ ಬಿಗ್ ಬಾಸ್ ತಂಡಕ್ಕೂ ರಾಜೀವ್ ನಡೆದುಕೊಂಡ ರೀತಿ ಅಷ್ಟಾಗಿ ಸರಿ ಕಾಣಿಸಿಲ್ಲ..

ಇಷ್ಟಾದರೂ ಕಳೆದ ವಾರ ನಾಮಿನೇಟ್ ಆಗಿದ್ದ ರಾಜೀವ್ ತನ್ನ ಬಳಿ ಇದ್ದ ಗೋಲ್ಡನ್ ಪಾಸ್ ಅನ್ನು ಬಳಸಿ ಸೇವ್ ಆಗಬಹುದಾಗಿತ್ತು.. ಆದರೆ ಓವರ್ ಕಾನ್ಫಿಡೆನ್ಸ್ ನಲ್ಲಿದ್ದ ರಾಜೀವ್ ತಾನು ಗೋಲ್ಡನ್ ಪಾಸ್ ಬಳಸದೆಯೂ ಸೇವ್ ಆಗಿಬಿಡುತ್ತೇನೆಂಬ ನಂಬಿಕೆಯಲ್ಲಿದ್ದರು.. ರಾಜೀವ್ ಅವರ ಈ ನಿರ್ಧಾರ ಸಹ ಬಿಗ್ ಬಾಸ್ ತಂಡಕ್ಕೆ ಅತಿಯಾಗಿ ಕಾಣಿಸಿತ್ತು.. ಜೊತೆಗೆ ಪ್ರೇಕ್ಷಕರಿಗೂ ಅಷ್ಟಾಗಿ ಹಿಡಿಸಲಿಲ್ಲ.. ತಾನೊಬ್ಬ ಪ್ರಬಲ ಸ್ಪರ್ಧಿ ಅನ್ನೋದು ನಿಜ.. ಆದರೆ ಅದೃಷ್ಟ ಅನ್ನೋದು ಎಲ್ಲಾ ಸಮಯದಲ್ಲಿಯೂ ಜೊತೆ ಇರುವುದಿಲ್ಲ..

ತನ್ನ ಕೈಯಲ್ಲೇ ಇದ್ದ ಗೋಲ್ಡನ್ ಪಾಸ್ ಬಳಸಿ ಮನೆಯಲ್ಲಿಯೇ ಉಳಿದುಕೊಳ್ಳುವ ಅವಕಾಶ ಸಿಕ್ಕರೂ ಸಹ ತಾನು ಓವರ್ ಕಾನ್ಫಿಡೆನ್ಸ್ ತೋರಿದ್ದು ತನ್ನನ್ನು ತಾನೇ ಹಳ್ಳಕ್ಕೆ ತಳ್ಳಿಕೊಂಡತಾಗಿತ್ತು.. ಮುಖ್ಯವಾಗಿ ಅವರ ಬಂಡ ಧೈರ್ಯವೇ ಅವರ ಎಲಿಮಿನೇಷನ್ ಗೆ ಮುಖ್ಯ ಕಾರಣವೆನ್ನಬಹುದು.. ಜೊತೆಗೆ ಗೋಲ್ಡನ್ ಪಾಸ್ ಪಡೆಯುವ ಸಮಯದಲ್ಲಿ ರಾಜೀವ್ ನಡೆದುಕೊಂಡ ರೀತಿಯ ಕಾರಣಕ್ಕಾಗಿಯೇ ಹೆಚ್ಚು ಜನರು ವೋಟ್ ಮಾಡದೇ ಇದ್ದು ಮನೆಯಿಂದ ಹೊರ ಬಂದರು ಎನ್ನಲಾಗುತ್ತಿದೆ..