ಬಿಗ್ ಬಾಸ್ ಅನ್ನೋದು ಒಂದು ಮನರಂಜನೆಯ ಶೋ.. ಅದರಲ್ಲಿ ಟಾಸ್ಕ್ ಗಿಂತ ಹೆಚ್ಚು ಪೆಆಮುಖ್ಯತೆ ಇರುವುದೇ ಮನರಂಜನೆಗೆ.. ಆದರೆ ಅದನ್ನು ಸರಿಯಾಗಿ ಅರ್ಥ ಮಾಡಿಕೊಳ್ಳದ ಸ್ಪರ್ಧಿಗಳು ಒಮ್ಮೊಮ್ಮೆ ತಮ್ಮ ನಾಲಗೆಯನ್ನು ಹರಿಬಿಟ್ಟುಬಿಡುತ್ತಾರೆ.. ಟಾಸ್ಕ್ ನಲ್ಲಿ ಗೆದ್ದುಬಿಟ್ಟರೆ ನೇರವಾಗಿ ಐವತ್ತು ಲಕ್ಷ ಹಣವನ್ನು ಕೈಯಲ್ಲಿ ಕೊಟ್ಟು ಸನ್ಮಾನ ಮಾಡಿ ಬಿಡ್ತಾರೇನೋ ಎನ್ನುವಂತೆ ನಡೆದುಕೊಳ್ಳೋದು ನಿಜಕ್ಕೂ ನೋಡುಗರಿಗೆ ಅಸಹ್ಯ ಉಂಟು ಮಾಡೋದಂತೂ ಸತ್ಯ.. ಹೌದು ಇಂದೂ ಸಹ ಅದೇ ರೀತಿ ಬಿಗ್ ಬಾಸ್ ಮನೆಯಲ್ಲಿ ನಡೆದಿದೆ.. ಹೌದು ಕಿಚ್ಚ ಸುದೀಪ್ ಅವರಿಗೆ ಅನಾರೋಗ್ಯದ ಕಾರಣ ಈ ವಾರವು ಸಹ ವಾರಾಂತ್ಯದ ಕಾರ್ಯಕ್ರಮದಲ್ಲಿ ಭಾಗವಹಿಸಿಲ್ಲ.. ಕಳೆದ ವಾರದಂತೆ ಈ ವಾರವೂ ಸಹ ಬೇರೆ ಬೇರೆ ಚಟುವಟಿಕೆಗಳನ್ನು ನೀಡುವ ಮೂಲಕ ವಾರಾಂತ್ಯದ ಕಾರ್ಯಕ್ರಮವನ್ನು ಮಾಡಲಾಗುತ್ತಿದೆ..

ಜೊತೆಗೆ ವಿವಿಧ ಚಟುವಟಿಕೆಗಳನ್ನು ನೀಡುವ ಮೂಲಕ ಮನೆಯಿಂದ ಹೊರ ಹೋಗುವ ಸದಸ್ಯರ ಹೆಸರನ್ನು ತಿಳಿಸಲಾಗುತ್ತಿದೆ.. ಈ ನಡುವೆ ಮನೆಯ ಸದಸ್ಯ ರಾಜೀವ ನಡೆದುಕೊಂಡ ರೀತಿ ಮಾತ್ರ ಪ್ರೇಕ್ಷಕರಲ್ಲಿ ಅಸಹ್ಯವನ್ನುಂಟು ಮಾಡಿತು.. ಹೌದು ಇಂದು ಕ್ಯಾಪ್ಟನ್ಸಿ ಟಾಸ್ಕ್ ನೀಡಲಾಗಿತ್ತು.. ಮನೆಯ ಗಾರ್ಡನ್ ಏರಿಯಾದಲ್ಲಿ ಸುರಿಯುವ ಹೂಗಳನ್ನು ಹೆಚ್ಚು ಸಂಗ್ರಹಿಸುವ ಸ್ಪರ್ಧಿ ವಿಜೇತರಾಗಿ ಮನೆಯ ಈ ವಾರದ ಕ್ಯಾಪ್ಟನ್ ಆಗುವರು ಎಂದು ತಿಳಿಸಲಾಗಿತ್ತು.. ಕ್ಯಾಪ್ಟನ್ಸಿ ಟಾಸ್ಕ್ ನಲ್ಲಿ ಪ್ರಶಾಂತ್ ಸಂಬರ್ಗಿ ರಘು ರಾಜೀವ ಹಾಗೂ ಮಂಜು ಪಾವಗಡ ಭಾಗವಹಿಸಿದ್ದರು.. ಎಲ್ಲರೂ ಬಹಳಷ್ಟು ಹೂಗಳನ್ನು ಸಂಗ್ರಹ ಮಾಡಿದ್ದರು.. ಒಬ್ಬರಿಂದ ಒಬ್ಬರು ಹೂಗಳನ್ನು ಕಿತ್ತುಕೊಳ್ಳಬಹುದಾಗಿತ್ತು..

ರಾಜೀವ ರಘು ನಿಂದ ಸಾಕಷ್ಟು ಹೂಗಳನ್ನು ಕಸಿದುಕೊಂಡನು.. ಇತ್ತ ಮಂಜು ರಘು ಪ್ರಶಾಂತ್ ಕೂಡ ಅಲ್ಪ ಸ್ವಲ್ಪ ಹೂಗಳನ್ನು ಮತ್ತೊಬ್ಬರಿಂದ ಕಸಿದುಕೊಂಡರು.. ಆದರೆ ಇಷ್ಟು ವಾರಗಳಲ್ಲಿ ರಘು ಕ್ಯಾಪ್ಟನ್ ಆಗದ ಕಾರಣ ಅವನಿಗೆ ಅವಕಾಶ ಸಿಗಲೆಂದು ಪ್ರಶಾಂತ್ ಸಂಬರ್ಗಿ ತನ್ನ ಬಳಿಯಿದ್ದ ಹೂಗಳನ್ನೆಲ್ಲಾ ರಘುಗೆ ನೀಡಿದರು.. ಕೊನೆಗೆ ಅತಿ ಹೆಚ್ಚು ಹೂ ಸಮ್ಘ್ರಹ ಮಾಡಿದ ರಘು ಮನೆಯ ಕ್ಯಾಪ್ಟನ್ ಸಹ ಆದರು.. ಆದರೆ ಟಾಸ್ಕ್ ಮಧ್ಯೆ ನಡೆದ ಮಾತುಗಳು ಮಾತ್ರ.. ಈ ಟಾಸ್ಕ್ ಗೆದ್ದರೆ ಯಾವುದೋ ರಾಜ್ಯ ಸಿಕ್ಕ ಹಾಗೆ ಅನ್ನೋ ರೀತಿ ರಾಜೀವ ನಡೆದುಕೊಂಡಿದ್ದು ಮಾತ್ರ ವಿಚಿತ್ರವಾಗಿತ್ತು.. ಹೌದು ಪ್ರಶಾಂತ್ ಸಂಬರ್ಗಿ ತನ್ನ ಹೂಗಳನ್ನು ರಘುಗೆ ನೀಡಿದ ಕೂಡಲೇ ಇದು ನಮಕ್ ಹರಾಮ್ ಕೆಲಸ.. ನಿನ್ನ ಹೂ ಯಾಕೆ ಅವನಿಗೆ ಕೊಟ್ಟೆ ಎಂದು ಪ್ರಶ್ನಿಸಿದನು..

ಪ್ರಶಾಂತ್ ಬಗ್ಗೆ ಹೇಳಲೇ ಬೇಕಿಲ್ಲ ಅವರೂ ಸಹ ಮಾತಿನಲ್ಲಿಯೇ ತಿರುಗೇಟು ನೀಡಿದ್ದು ಅವನಿಗೆ ಕ್ಯಾಪ್ಟನ್ ಆಗಲು ಅವಕಾಶ ಸಿಗಲಿ ಅಂತ ಕೊಟ್ಟೆ.. ನನ್ನಿಷ್ಟ ಎಂದರು.. ಇತ್ತ ಅವರಿಷ್ಟ ಅವರ ಹೂ ಯಾರಿಗಾದರು ಕೊಟ್ಟುಕೊಳ್ತಾರೆ ಅಂದುಕೊಂಡು ಸುಮ್ಮನಾಗದ ರಾಜೀವ ರಘು ಗೂ ಕೂಡ ನಮಕ್ ಹರಾಮ್ ಕೆಲಸ ಇದು.. ನೇರವಾಗಿ ನಿಂತು ಗೆಲ್ಬೇಕು.. ಅದನ್ನು ಬಿಟ್ಟು ಈ ರೀತಿ ಕ್ಯಾಪ್ಟನ್ ಆಗಬೇಕಾ ಎಂದೆಲ್ಲಾ ಮಾತನಾಡಿದ್ದು ರಘು ಇನ್ನೇನು ಕಣ್ಣೀರು ಹಾಕುವಂತಿತ್ತು ಸಂದರ್ಭ.. ಇನ್ನು ರಾಜೀವನ ನಡೆಗೆ ಸಾಮಾಜಿಕ ಜಾಲತಾಣದಲ್ಲಿ ಟೀಕೆಗಳು ವ್ಯಕ್ತವಾಗಿದ್ದು ಕ್ಯಾಪ್ಟನ್ ಅವಕಾಶ ಸಿಗಲಿಲ್ಲ ಅನ್ನೋ ಹೊಟ್ಟೆ ಉರಿಗೆ ಈ ರೀತಿ ಎಲ್ಲಾ ಮಾತನಾಡಬೇಕಾ ಎಂದಿದ್ದಾರೆ.. ಅಷ್ಟೇ ಅಲ್ಲದೇ ಬಿಗ್ ಬಾಸ್ ಮನೆ ಯಾರಿಗೂ ಶಾಶ್ವತವಲ್ಲ..

ಅದನ್ನು ಅರ್ಥ ಮಾಡಿಕೊಳ್ಳದೇ ಒಂದು ಟಾಸ್ಕ್ ಕೈ ತಪ್ಪಿ ಹೋದದ್ದಕ್ಕೆ ಅಂತಹ ಮಾತುಗಳನ್ನು ಆಡುವ ಮೂಲಕ ಮತ್ತೊಬ್ಬರ ಮನಸ್ಸು ನೋಯಿಸುವ ರಾಜೀವನ ನಿಜ ಬಣ್ಣವೇ ಇದು ಎಂದಿದ್ದಾರೆ.. ಅಷ್ಟೇ ಅಲ್ಲದೇ ಮೊದಮೊದಲು ಮಂಜು ಮತ್ತು ರಾಜೀವ ಕನ್ಸನ್ನೆಯಲ್ಲಿಯೇ ಒಂದು ಆರ್ಟಿಯಾಗಿ ಆಟ ಆಡಿಬಿಟ್ಟು ನಂತರ ಸೋತೆ ಎಂಬ ಕಾರಣಕ್ಕೆ ಮತ್ತೊಬ್ಬರನ್ನು ನಮಕ್ ಹರಾಮ್ ಅನ್ನೋದು ಎಷ್ಟು ಸರಿ.. ಇದೊಂದು ಟಾಸ್ಕ್ ಅಷ್ಟೇ.. ಅವನು ಗೆದ್ದು ಕ್ಯಾಪ್ಟನ್ ಆದರೆ ಆಗಲಿ ಮುಂದಿನ ಬಾರಿ ಪ್ರಯತ್ನ ಮಾಡೋಣ ಅನ್ನುವ ಮಾತು ಆಡಿದ್ದರೆ ಬಹುಶಃ ರಾಜೀವ ಎಲ್ಲರ ಮನಸ್ಸು ಗೆಲ್ಲುತ್ತಿದ್ದರೇನೋ.. ಆದರೆ ಟಾಸ್ಕ್ ಮುಗಿದ ಬಳಿಕವೂ ಬಹಳಷ್ಟು ಸಮಯ ಇದೇ ವಿಚಾರವನ್ನು ಮಾತನಾಡಿ ಕ್ಯಾಪ್ಟನ್ ಅವಕಾಶ ಕೈ ತಪ್ಪಿದ್ದಕ್ಕೆ ಪದೇ ಪದೇ ಇದನ್ನೆ ಮಾತನಾಡಿ ಪ್ರಶಾಂತ್ ಹಾಗೂ ರಘುವನ್ನು ದೂಷಿಸಿದ್ದು ರಾಜೀವನ ಸಣ್ಣತನವನ್ನು ತೋರಿತೆನ್ನುತ್ತಿದ್ದಾರೆ ಪ್ರೇಕ್ಷಕರು..