ಹಿರಿಯ ನಟಿ ಬಿ ಜಯಾ ಅವರ ಪಾರ್ಥೀವ ಶರೀರ ಬೀದಿಯಲ್ಲಿ ಹಾಕಿದವರು ಯಾರು.. ಸತ್ಯ ಬಿಚ್ಚಿಟ್ಟ ತಮ್ಮನ ಮಗಳು.. ಅಸಲಿ ಕತೆ ಏನು ಗೊತ್ತಾ?

0 views

ಕನ್ನಡ ಸಿನಿಮಾ ರಂಗದಲ್ಲಿ ಅದೆಷ್ಟೋ ಕಲಾವಿದರು ಕಲಾ ಸೇವೆ ಮಾಡಿ ತೆರೆ ಮರೆಯಲ್ಲಿಯೇ ಕಾಣದಂತೆ ಮಾಯವಾಗಿ ಹೋಗಿದ್ದರೆ.. ಇತ್ತೀಚಿಗೆ ಸಾಮಾಜಿಕ ಜಾಲತಾಣಗಳ ಬಳಕೆ ಹೆಚ್ಚಾದ ನಂತರವಷ್ಟೇ ಎಲ್ಲೋ ಆಗೊಮ್ಮೆ ಈಗೊಮ್ಮೆ ಹಿರಿಯ ಕಲಾವಿದರ ಕುರಿತ ಲೇಖನಗಳೋ ಫೋಟೋಗಳೋ ಕಾಣಸಿಗುತ್ತವಷ್ಟೇ.. ಹಿರಿಯ ಕಲಾವಿದರು ಸೇವೆಗಷ್ಟೇ ತಮ್ಮ ಜೀವನವನ್ನು ಮುಡಿಪಾಗಿಟ್ಟು ಬಿಟ್ಟರು.. ಆಗಿನ ಕಾಲದಲ್ಲಿ ಹೇಳಿಕೊಳ್ಳುವಂತಹ ಸಂಭಾವನೆಯೂ ದೊರೆಯದ ಕಾರಣ ಬಹುತೇಕ ತೊಂಭತ್ತರಷ್ಟು ಕಲಾವಿದರು ಆರ್ಥಿಕವಾಗಿ ಈಗಲೂ ಸಹ ಸಂಕಷ್ಟದಲ್ಲಿಯೇ ಇದ್ದಾರೆನ್ನಬಹುದು.. ಈಗ ಒಂದು ಸಿನಿಮಾ ಮಾಡಿದರೂ ಸಾಕು ತಲೆಯಲ್ಲಿಯೇ ನಡೆಯುವ ಕೆಲ ಕಲಾವಿದರು ಇದ್ದಾರೆ.. ಆದರೆ ಹಿಂದೆ ಮುನ್ನೂರು ನಾನೂರು ಸಿನಿಮಾಗಳಲ್ಲಿ ಅಭಿನಯಿಸಿದ್ದರೂ ಸಹ ತಲೆ ಎಂದೂ ಆಕಶವನ್ನು ನೋಡುತ್ತಿರಲಿಲ್ಲ..

ಅಂತಹ ದೊಡ್ಡಗುಣದ ಕಲಾವುದರಲ್ಲಿ ಒಬ್ಬರು ಬಿ ಜಯಾ ಅವರು.. ಮುನ್ನೂರಕ್ಕೂ ಹೆಚ್ಚು ಸಿನಿಮಾಗಳಲ್ಲಿ ಅಭಿನಯಿಸಿ ಮೂರು ತಲೆಮಾರುಗಳ ಕಲಾವಿದರ ಜೊತೆಗೂ ನಟಿಸಿ.. ಧಾರಾವಾಹಿಗಳಲ್ಲಿಯೂ ಅಭಿನಯಿಸಿ ಹೆಸರು ಮಾಡಿದ್ದ ಬಿ ಜಯಾ ಅವರು ನಿನ್ನೆಯಷ್ಟೇ ಇಹಲೋಕ ತ್ಯಜಿಸಿದ್ದರು.. ಚಿತ್ರರಂಗದ ಬಹುತೇಕ ಎಲ್ಲರೂ ಕಿರುತೆರೆಯ ಕಲಾವಿದರುಗಳು ಎಲ್ಲರೂ ಸಹ ಬಿ ಜಯಾ ಅವರ ಅಗಲಿಕೆಗೆ ಕಂಬನಿ‌ ಮಿಡಿದು ಸಂತಾಪ ಸೂಚಿಸಿದ್ದರು.. ಆದರೆ ಇಂದು ಇದ್ದಕ್ಕಿದ್ದ ಹಾಗೆ ವೀಡಿಯೋವೊಂದು ವೈರಲ್ ಆಗಿತ್ತು.. ಬಿ ಜಯಾ ಅವರ ಪಾರ್ಥೀವ ಶರೀರವನ್ನು ಫುಟ್ ಪಾತಿನಲ್ಲಿ ಮಲಗಿಸಿದ್ದ ದೃಶ್ಯಗಳನ್ನು ಸೆರೆ ಹಿಡಿದು ಅಲ್ಲಿನ ಕೆಲವರು ವೀಡಿಯೋ ಮಾಡಿದ್ದರು.. ಕಸದ ತೊಟ್ಟಿಯಲ್ಲಿ ಬಿ ಜಯಾ ಅವರ ಪಾರ್ಥೀವವಿದೆ.. ಯಾರಾದ್ರು ಬಂದು ಅಂತ್ಯಕ್ರಿಯೆ ಮಾಡ್ರೋ.. ಸಿನಿಮಾ ಮಂದಿ ಎಲ್ಲೋಗಿದ್ದೀರಾ.. ಹಣ ಇದ್ದವರು ಜೀವ ಕಳೆದುಕೊಂಡರೆ ರೆಡ್ ಕಾರ್ಪೆಟ್ ನಲ್ಲಿ ಹೋಗಿ ಮೀಡಿಯಾ ಮುಂದೆ ಮಾತನಾಡ್ತೀರಾ..

ಈಗ ಎಲ್ಲಿ ಹೋಗಿದ್ದೀರಾ ಎಂದು ಕೆಲವರು ವೀಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದರು.. ಕ್ಷಂಅ ಮಾತ್ರದಲ್ಲಿ ವೀಡಿಯೋ ವೈರಲ್ ಆಗಿತ್ತು.. ಸಾಮಾಜಿಕ ಜಾಲತಾಣದಲ್ಲಿ ಬಿ ಜಯಾ ಅವರ ಪರಿಸ್ಥಿತಿ ಕಂಡು ಮರುಗಿದ್ದರು.. ಆದರೆ ಅಲ್ಲಿ ಅಸಲಿ ವಿಚಾರ ಬೇರೆಯೇ ಇತ್ತು..ಹೌದು ವೀಡಿಯೋ ಕುರಿತಾಗಿ ಜಯಾ ಅವರ ತಮ್ಮನ ಮಗಳು ರಾಜೇಶ್ವರಿ ಅವರು ಈ ಕುರಿತು ಸ್ಪಷ್ಟನೆ ನೀಡಿ ಇರೋ ಸತ್ಯವನ್ನು ತಿಳಿಸಿದ್ದಾರೆ.. ಹೌದು “ನಮಸ್ಕಾರ ನಾನು ನುರ್ದೇಶಕ ಬಿ ಮಲ್ಲೇಶ್ ಅವರ ಮಗಳು.. ಬಿ ಜಯಾ ಅವರ ತಮ್ಮನ ಮಗಳು.. ಸಾಮಾಜಿಕ ಜಾಲತಾಣದಲ್ಲಿ ಜಯಮ್ಮ ಅವರ ವೀಡಿಯೋವನ್ನು ಯಾರೋ ಹಾಕಿದ್ದರು.. ಅದರ ಬಗ್ಗೆ ಮಾತನಾಡಬೇಕು.. ಮುಖ್ಯವಾಗಿ ಸ್ಪಷ್ಟನೆ ನೀಡಬೇಕು.. ದಯವಿಟ್ಟು ಯಾರೂ ಸಹ ಅವರುಗಳ ಮಾತನ್ನು ನಂಬಬೇಡಿ..

ಜಯಮ್ಮ ಅವರಿಗೆ 29ನೇ ತಾರೀಕು ಆರೋಗ್ಯ ಕೆಟ್ಟಾಗಿನಿಂದಲೂ ನಾವು ಪ್ರತಿದಿನ ಆಸ್ಪತ್ರೆಯಲ್ಲಿಯೇ ಇದ್ದೇವೆ.. ಅವರಿಗಾಗಿ ಲಕ್ಷ ಲಕ್ಷ ಹಣವನ್ನು ಕಟ್ಟಿದ್ದೇವೆ.‌ ಆದರೆ ನಿನ್ನೆ ಚಿಕಿತ್ಸೆ ಫಲಕಾರಿ ಆಗದೆ ಕೊನೆಯುಸಿರೆಳೆದರು.. ಇಂದು ಬೆಳಿಗ್ಗೆ ಕರುಣಾಮೃತ ಆಸ್ಪತ್ರೆಯಿಂದ ಅವರನ್ನು ಕರೆ ತಂದೆವು.. ಈಗಿನ ಪರಿಸ್ಥಿತಿ ಎಲ್ಲರಿಗೂ ಗೊತ್ತೇ ಇದೆ.. ಅದೇ ಕಾರಣಕ್ಕೆ ನಾವೇ ಯಾರನ್ನೂ ಸಹ ಬರಬೇಡಿ ಎಂದೆವು.. ಬಂದರೆ ಅವರಿಗೂ ಹಾಗೂ ನಮಗೂ ಇಬ್ಬರಿಗೂ ಸಹ ತೊಂದರೆ ಆಗಬಹುದು ಎಂಬ ಕಾರಣಕ್ಕೆ ನಾವೇ ಯಾರಿಗೂ ಬರಹೇಳಲಿಲ್ಲ.. ಫೋನ್ ಮಾಡಿದವರಿಗೆಲ್ಕಾ ಬರಬೇಡಿ ಎಂದೇ ಹೇಳಿದ್ದೆವು..ನಂತರ ಅಂತ್ಯ ಸಂಸ್ಕಾರ ಮಾಡುವ ಜಾಗಕ್ಕೆ ಹೋದೆವು.. ಅಲ್ಲಿ ಈಗ ಕೆಲವೊಂದಿಷ್ಟು ನಿಯಮಗಳನ್ನು ಮಾಡಿದ್ದಾರೆ.. ಪ್ರತಿಯೊಬ್ಬರಿಗೂ ಸಹ ಒಂದು ಜಾಗ ಅಂತ ನಿಗದಿ ಮಾಡಿದ್ದಾರೆ.ಮ್ ನಾವು ಅಲಿಯೇ ಮಲಗಿಸಿ ಪೂಜೆ ಮಾಡಬೇಕಿದೆ.ಮ್ ಅದೇ ರೀತಿ ಅವರು ತೀರಿಸಿದ ಜಾಗದಲ್ಲಿಯೇ ನಾವು ಮಲಗಿಸಿ ಪೂಜೆ ಮಾಡಿದೆವು.. ನಂತರ ಒಳಗೂ ಸಹ ಕೆಲವರಿಗೆ ಮಾತ್ರವೇ ಪ್ರವೇಶ ಇತ್ತು..

ಕೊರೊನಾ ನಿಯಮ ಇದ್ದುದ್ದರಿಂದ ನಾವು ಹತ್ತರಿಂದ ಹನ್ನೊಂದು ಮಂದಿ ಕುಟುಂಬಸ್ಥರು ಮಾತ್ರವೇ ಸೇರಿದ್ದೆವು‌‌.. ಅಲ್ಲಿ ಸ್ಥಳಿಯ ನಾಯಕರು ಕೊರೊನಾ ಕಿಟ್ ನೀಡುವ ಕಾರ್ಯಕ್ರಮ ಸಹ ನಡೆಯುತಿತ್ತು.. ಅವರುಗಳು ನಾವು ಬಂದ ವಿಚಾರ ತಿಳಿದು ಬೇಗನೇ ತಮ್ಮ ಕಾರ್ಯಕ್ರಮವನ್ನೂ ಸಹ ಮುಗಿಸಿಕೊಂಡರು.. ಆದರೆ ಕೆಲವರು ಅಲ್ಲಿ ಮಲಗಿಸಿ ಪೂಜೆ ಮಾಡಿದ್ದ ಜಾಗದಲ್ಲಿ ಜನ ಇಲ್ಲದ ಕಾರಣ ಅದನ್ನೇ ವೀಡಿಯೋ ಮಾಡಿಕೊಂಡು ಅದನ್ನಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ.. ಅದನ್ನು ದಯಮಾಡಿ ಯಾರೂ ನಂಬಬೇಡಿ.. ನಂತರ ಅಲ್ಲಿ ಕಾರ್ಯಕ್ರಮ ಮಾಡುತ್ತಿದ್ದವರು ಸಹ ನಮ್ಮ ಜೊತೆ ಬಂದು ಜಯಮ್ಮನಿಗೆ ಹೆಗಲು ಕೊಟ್ಟರು.. ನಮ್ಮ ಕೈನಲ್ಲಿ ಹೊರೆಸಲೂ ಇಲ್ಲ.. ಅವರೇ ಮುಂದೆ ನಿಂತು ಎಲ್ಲವನ್ನೂ ಮಾಡಿಕೊಟ್ಟರು.. ನಂತರವಷ್ಟೇ ನಾವು ಎಲ್ಲಾ ಕಾರ್ಯ ಮುಗಿಸಿ ಮನೆಗೆ ಬಂದೆವು.. ಎಂದು ಸ್ಪಷ್ಟನೆ ನೀಡಿದ್ದಾರೆ..