ಕುವೆಂಪು ಅವರ ಸೊಸೆ, ಪೂರ್ಣಚಂದ್ರ ತೇಜಸ್ವಿಯವರ ಪತ್ನಿ ರಾಜೇಶ್ವರಿ ಇನ್ನಿಲ್ಲ.. ಆದರೆ ಅವರಿಗೆ ಇದ್ದ ಇಬ್ಬರು ಹೆಣ್ಣು ಮಕ್ಕಳು ಸಹ ಅಂತ್ಯ ಸಂಸ್ಕಾರ ಮಾಡಲಿಲ್ಲ.. ಕಾರಣವೇನು ಗೊತ್ತಾ..

0 views

ರಾಷ್ಟ್ರಕವಿ ನಮ್ಮ‌ ನಾಡಿನ ಹೆಮ್ಮೆ ಕುವೆಂಪು ಅವರ ಮಗ ದಿವಂಗತ ಪೂರ್ಣಚಂದ್ರ ತೇಜಸ್ವಿ ಅವರ ಪತ್ನಿ ರಾಜೇಶ್ಬರಿ ತೇಜಸ್ವಿ ಅವರು ಇಂದು ಇಹಲೋಕ ತ್ಯಜಿಸಿದ್ದಾರೆ.. ಇತ್ತ ಪೂರ್ಣಚಂದ್ರ ತೇಜಸ್ವಿ ಹಾಗೂ ರಾಜೇಶ್ವರಿ ದಂಪತಿಗೆ ಇಬ್ಬರು ಹೆಣ್ಣು ಮಕ್ಕಳಿದ್ದು ಇಬ್ಬರೂ ಸಹ ತಾಯಿಯ ಅಂತ್ಯ ಸಂಸ್ಕಾರ ಮಾಡುತ್ತಿಲ್ಲ.. ಹೌದು ಕುವೆಂಪು ಅವರ ಮಗ ಪೂರ್ಣ ಚಂದ್ರ ತೇಜಸ್ವಿ ಅವರು 1938 ರಲ್ಲಿ ಸೆಪ್ಟೆಂಬರ್ ಎಂಟರಂದು ಜನಿಸಿದ್ದರು.. ಅಪ್ಪನಂತೆ ಪುಸ್ತಕ ಪ್ರೇಮಿಯಾಗಿದ್ದ ಪೂರ್ಣಚಂದ್ರ ತೇಜಸ್ವಿ ಅವರೂ ಸಹ ದೊಡ್ಡ ಕವಿಯಾಗಿ ಗುರುತಿಸಿಕೊಂಡರು.. ಬರಹಗಾರರಾಗಿದ್ದ ಪೂರ್ಣಚಂದ್ರ ತೇಜಸ್ವಿ ಅವರು ಸಾಕಷ್ಟು ಪುಸ್ತಕಗಳನ್ನು ಬರೆದು ಕುವೆಂಪು ಅವರಂತೆಯೇ ತಮ್ಮದೇ ಆದ ಅಭಿಮಾನಿ ಬಳಗವನ್ನು ಹೊಂದಿದ್ದರು.. ಇತ್ತ ಅದೆಷ್ಟೊ ಜನರಿಗೆ ಸ್ಪೂರ್ತಿಯಾಗಿದ್ದ ಪೂರ್ಣಚಂದ್ರತೇಜಸ್ವಿ ಅವರು ರಾಜೇಶ್ವರಿಯವರನ್ನು ಮದುವೆಯಾಗಿದ್ದು ಕುವೆಂಪು ಅವರ ಮಂತ್ರ ಮಾಂಗಲ್ಯ ಮಾಡಿಕೊಂಡ ಮೊದಲ ಜೋಡಿ ಇದಾಗಿತ್ತು..

ಇನ್ನು ಎಷ್ಟೇ ದೊಡ್ಡ ಹೆಸರು ಮಾಡಿದರೂ ಸಹ ಪೂರ್ಣಚಂದ್ರ ತೇಜಸ್ವಿ ಅವರು ಮೂಡಿಗೆರೆಯ ನಿರುತ್ತರ ಮನೆಯಲ್ಲಿದ್ದುಕೊಂಡು ಅಲ್ಲಿಯೇ ತೋಟದಲ್ಲಿ ಕೃಷಿ ಕಾಯಕ ಮಾಡಿಕೊಂಡಿದ್ದರು.. ಇನ್ನು ಪೂರ್ಣ ಚಂದ್ರ ತೇಜಸ್ವಿ ಅವರ ಕೈ ಹಿಡಿದ ರಾಜೇಶ್ವರಿ ಅವರೂ ಸಹ ಮದುವೆಯ ನಂತರ ಪುಸ್ತಕ ಪ್ರೇಮ ಬೆಳೆಸಿಕೊಂಡು ಅನೇಕ ಪುಸ್ತಕಗಳನ್ನೂ ಸಹ ಬರೆದರು.. ನನ್ನ ತೇಜಸ್ವಿ, ನಮ್ಮ ಮನೆಗೂ ಬಂದರು ಗಾಂಧೀಜಿ ಹೀಗೆ ಕೆಲ ಪುಸ್ತಕಗಳನ್ನು ಬರೆದು ಖ್ಯಾತಿ ಗಳಿಸಿದ್ದರು.. ಇನ್ನು ಪೂರ್ಣ ಚಂದ್ರ ತೇಜಸ್ವಿ ಅವರು 2007 ರಲ್ಲಿ ಇಹಲೋಕ ತ್ಯಜಿಸಿದ ನಂತರ ರಾಜೇಶ್ವರಿ ಅವರು ಮೂಡಿಗೆರೆಯ ತೋಟದ ಮನೆ ನಿರುತ್ತರ ದಲ್ಲಿಯೇ ಇದ್ದುಕೊಂಡು ಪತಿಯ ಕನಸಾಗಿದ್ದ ಕೃಷಿ ಕಾಯಕವನ್ನು ಮುಂದುವರೆಸಿದ್ದರು..

ಅಷ್ಟೇ ಅಲ್ಲದೇ ಹೆಣ್ಣು ಮಕ್ಕಳಿಗೆ ಟೈಲರಿಂಗ್, ಮೊಮ್ಮಕ್ಕಳು ಮತ್ತು ಇತರ ಮಕ್ಕಳಿಗೆ ಸ್ಟಾಂಪ್ ಸಂಗ್ರಹ ಮಾಡೋದು ಹೀಗೆ ಅನೇಕ ಒಳ್ಳೊಳ್ಳೆ ಕೆಲಸಗಳನ್ನು ಕಲಿಸಿಕೊಡುತ್ತಿದ್ದರು.. ಇನ್ನು ಪೂರ್ಣಚಂದ್ರ ತೇಜಸ್ವಿ ಹಾಗೂ ರಾಜೇಶ್ವರಿ ದಂಪತಿಗೆ ಇಬ್ಬರು ಹೆಣ್ಣು ಮಕ್ಕಳಿದ್ದು ದೊಡ್ಡವರು ಸುಶ್ಮಿತಾ ತೇಜಸ್ವಿ, ಎರಡನೆಯವರು ಈಶಾನ್ಯೆ ತೇಜಸ್ವಿ.. ಇಲ್ಲಿಯವರೆಗೂ ಸಹ ಪೂರ್ಣ ಚಂದ್ರ ತೇಜಸ್ವಿ ಅವರ ಅಭಿಮಾನಿಗಳು ಮೂಡಿಗೆರೆಯ ತೋಟದ ಮನೆಗೆ ಭೇಟಿ ನೀಡಿ ರಾಜೇಶ್ವರಿ ಅವರನ್ನು ಭೇಟಿ ಮಾಡಿ ಪೂರ್ಣಚಂದ್ರ ತೇಜಸ್ವಿ ಅವರ ನೆನಪುಗಳನ್ನು ಮೆಲುಕು ಹಾಕಿ ಸಮಯ ಕಳೆದು ಬರುತ್ತಿದ್ದರು.. ಯಾರೇ ಬಂದರೂ ಪ್ರೀತಿಯಿಂದ ಮಾತನಾಡಿಸಿ ಅತಿಥಿ ಸತ್ಕಾರ ಮಾಡುತ್ತಿದ್ದರು ರಾಜೇಶ್ವರಿ ಅವರು‌‌..

ಇನ್ನು ಇದೀಗ ತಮ್ಮ ಎಂಭತ್ತೈದನೇ ವರ್ಷ ವಯಸ್ಸಿನಲ್ಲಿ ಅನಾರೋಗ್ಯಕ್ಕೆ ತುತ್ತಾಗಿದ್ದ ರಾಜೇಶ್ವರಿ ಅವರು ಇಂದು ಇಹಲೋಕ ತ್ಯಜಿಸಿದ್ದಾರೆ.. ಹೌದು ಕಳೆದ ಕೆಲ ದಿನಗಳಿಂದ ತೀವ್ರ ಜ್ವರದಿಂದ ಬಳಲುತ್ತಿದ್ದ ರಾಜೇಶ್ವರಿ ಅವರನ್ನು ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು.. ಆದರೆ ಚಿಕಿತ್ಸೆ ಫಲಕಾರಿಯಾಗದೇ ಇಂದು ಬೆಳಿಗ್ಗೆ ಆಸ್ಪತ್ರೆಯಲ್ಲಿಯೇ ಕೊನೆಯುಸಿರೆಳೆದಿದ್ದಾರೆ.. ಇನ್ನು ರಾಜೇಶ್ವರಿ ಅವರ ಅಗಲಿಕೆ ಸಾಹಿತ್ಯ ಪ್ರೇಮಿಗಳಿಗೆ ತೇಜಸ್ವಿ ಅವರು ಹಾಗೂ ರಾಜೇಶ್ವರಿ ಅಭಿಮಾನಿಗಳಿಗೆ ಬಹಳ ನೋವನ್ನುಂಟು ಮಾಡಿದೆ.. ಇನ್ನು ಇಹಲೋಕ ತ್ಯಜಿಸಿದ ರಾಜೇಶ್ವರಿ ಅವರನ್ನು ಇಂದು ದೊಡ್ಡ ಮಗಳು ಸುಶ್ಮಿತಾ ಅವರ ಮನೆಯಲ್ಲಿರಿಸಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿತ್ತು..

ಸಾಕಷ್ಟು ಅಭಿಮಾನಿಗಳು ಆಗಮಿಸಿ ರಾಜೇಶ್ವರಿ ಅವರ ಅಂತಿಮ ದರ್ಶನ ಪಡೆದು ಸಂತಾಪ ಸೂಚಿಸಿದರು.. ಆದರೆ ಇತ್ತ ರಾಜೇಶ್ವರಿ ಅವರ ಅಂತಿಮ ಸಂಸ್ಕಾರವನ್ನು ಇಬ್ಬರೂ ಹೆಣ್ಣು ಮಕ್ಕಳು ಮಾಡಲಿಲ್ಲ. ಆದರೆ ಇದಕ್ಕೆ ಕಾರಣವೂ ಇದೆ..ಹೌದು ರಾಜೇಶ್ವರಿ ಅವರಿಗೆ ಮೊದಲಿನಿಂದಲೂ ರಕ್ತದಾನ ನೇತ್ರದಾನ ಇಂತಹ ಕೆಲಸಗಳಲ್ಲಿ ಬಹಳ ಆಸಕ್ತಿ ಇತ್ತು.. ಅವರು ತಮ್ಮ ಜೀವನದಲ್ಲಿ ಸಾಕಷ್ಟು ಬಾರಿ ರಕ್ತದಾನವನ್ನೂ ಸಹ ಮಾಡಿದ್ದರು.. ಇನ್ನು ಇದೀಗ ಇಹಲೋಕ ತ್ಯಜಿಸಿದ ನಂತರ ಅಮ್ಮನ ಆಸೆಯನ್ನು ಈಡೇರಿಸುವ ಸಲುವಾಗಿ ಇಬ್ಬರೂ ಹೆಣ್ಣು ಮಕ್ಕಳು ಸೇರಿ ನಿರ್ಧಾರ ಮಾಡಿದ್ದು ಅಂತ್ಯ ಸಂಸ್ಕಾರವನ್ನು ನೆರವೇರಿಸದೇ ಇರಲು ನಿರ್ಧರಿಸಿದರು.. ಹೌದು ಅಮ್ಮನ ಆಸೆ ನೆರವೇರಿಸುವ ಸಲುವಾಗಿ ಸುಶ್ಮಿತಾ ಹಾಗೂ ಈಶಾನ್ಯೆ ಅವರು ರಾಜೇಶ್ವರಿ ಅವರ ಪಾರ್ಥೀವವನ್ಮು ಬೆಂಗಳೂರಿನ ಬೌರಿಂಗ್ ಆಸ್ಪತ್ರೆಗೆ ದಾನ ಮಾಡಿದ್ದಾರೆ..‌

ಹೌದು ಈ ಬಗ್ಗೆ ಮಾತನಾಡಿದ ಮಗಳು ಸುಶ್ಮಿತಾ ಅವರು ಅಮ್ಮನ ಆಸೆಯೂ ಆಸಕ್ತಿಯೂ ಎಲ್ಲವೂ ಅದೇ ಆಗಿದ್ದ ಕಾರಣ ನಾವು ಈ ನಿರ್ಧಾರವನ್ನು ತೆಗೆದುಕೊಂಡಿದ್ದೇವೆ.. ಬೌರಿಂಗ್ ಆಸ್ಪತ್ರೆಯಲ್ಲಿ ಅಮ್ಮನ ಪಾರ್ಥೀವವನ್ನು ನೀಡಲಾಗಿದೆ.. ಅಲ್ಲಿ ವೈದ್ಯಕೀಯ ಉದ್ದೇಶಗಳಿಗಾಗಿ ಅದನ್ನು ಬಳಸಿಕೊಳ್ಳಲಾಗುವುದು ಎಂದು ತಿಳಿಸಿದ್ದಾರೆ.. ಇದ್ದಾಗ ಮಾತ್ರವಲ್ಲ ಹೋದ ನಂತರವೂ ಕುವೆಂಪು ಅವರ ಕುಟುಂಬದ ಸದಸ್ಯರು ವಿಶ್ವಮಾನವ ಸಂದೇಶ ಸಾರುತ್ತಿರುವುದು ನಿಜಕ್ಕೂ ಮಾತುಗಳು ಹೇಳಲಷ್ಟೇ ಅಲ್ಲ ಮೊದಲಿಗೆ ನಾವುಗಳು ಪಾಲಿಸಬೇಕು ಎನ್ನುವ ಪಾಠವನ್ನು ಕಲಿಸುತ್ತಿದೆ.. ತಾಯಿಯ ಅಂತ್ಯ ಸಂಸ್ಕಾರ ನಡೆಸದೇ ಅವರ ಆಸೆಯ ಪ್ರಕಾರ ಆಸ್ಪತ್ರೆಗೆ ಪಾರ್ಥೀವವನ್ನು ದಾನ ಮಾಡಿದ ಇಬ್ಬರೂ ಹೆಣ್ಣು ಮಕ್ಕಳ ನಡೆಗೆ ಸಾಮಾಜಿಕ ಜಾಲತಾಣದಲ್ಲಿ ಮೆಚ್ಚುಗೆ ವ್ಯಕ್ತವಾಗುತ್ತಿದೆ.. ಆ ಇಬ್ಬರೂ ಹೆಣ್ಣು ಮಕ್ಕಳಿಗೆ ತಾಯಿ ಇಲ್ಲದ ನೋವನ್ನು ತಡೆಯುವ ಶಕ್ತಿ ನೀಡಲಿ ಭಗವಂತ..