ಕೊರೊನಾದಿಂದ ಜೀವ ಕಳೆದುಕೊಂಡ ತಾಯಿಯನ್ನು ಮಲಗಿಸಿ ಆಕೆಯ ಮುಂದೆಯೇ ಮಗ ಮಾಡಿರುವ ಕೆಲಸ ನೋಡಿ‌‌..

0 views

ಭೂಮಿ‌ ಮೇಲೆ ಯಾರಿಗೆ ಬೇಕಾದರೂ ಯಾವುದಕ್ಕೆ ಬೇಕಾದರೂ ಬೆಲೆ ಕಟ್ಟಬಹುದೋ ಏನೋ.. ಆದರೆ ತಾಯಿಯ ಪ್ರೀತಿಗೆ ಆಕೆ ಮಕ್ಕಳಿಗೆ ತೋರುವ ಮಮತೆಗೆ ಸರಿಸಾಟಿ ಏನೂ ಇಲ್ಲ.. ಆಕೆಯ ಪ್ರೀತಿ ಅನನ್ಯ.. ಆಕೆಯ ಮಮತೆ ಅನಂತ.. ತಾಯಿಯನ್ನು ಕಳೆದುಕೊಳ್ಳುವುದಕ್ಕಿಂತ ಹೆಚ್ಚಿನ ನೋವು ಬಹುಶಃ ಬೇರೆ ಯಾವುದೂ ಸಹ ಇರೋದಕ್ಕೆ ಸಾಧ್ಯವೇ ಇಲ್ಲ‌.‌. ಆ ನೋವು ಅನುಭಬಿಸಿದವರಿಗಷ್ಟೇ ಗೊತ್ತು.. ಕನಸು ಮನಸಿನಲ್ಲೂ ಮಕ್ಕಳಿಗೆ ಕೆಟ್ಟದ್ದು ಬಯಸದೇ ಇರೋಳು ಎಂದರೆ ಅದು ತಾಯಿ ಮಾತ್ರವೇ.. ಪ್ರತಿ ಕ್ಷಣವೂ ಮಕ್ಕಳ ಸಂತೋಷವನ್ನೇ ಕಾಣಬಯಸುತ್ತಾಳೆ.. ಅದೇ ರೀತಿ ಮಗನ ಸುಖವನ್ನೇ ಬಯಸುತ್ತಿದ್ದ ತಾಯಿಯೊಬ್ಬಳು ಕೊರೊನಾದಿಂದ ಜೀವ ಕಳೆದುಕೊಂಡಿದ್ದು ಆಕೆಯ ಮುಂದೆಯೇ ಮಗ ಮಾಡಿರುವ ಕೆಲಸ ನಿಜಕ್ಕೂ ಮನಕಲಕುವಂತಿದೆ..

ಹೌದು ತಾಯಿಯನ್ನು ಕಳೆದುಕೊಂಡ ಮಗನ ನೋವಿನ ಕರುಣಾಜನಕ ಕತೆಯಿದು.. ಹೌದು ಆತನ ಹೆಸರು ರಾಕೇಶ್.. ಚೆನ್ನಾಗಿ ಓದಿ ಅಮೇರಿಕಾದಲ್ಲಿ ಕೆಲಸ ಮಾಡಿಕೊಂಡಿದ್ದ.. ಇದೇ ಮೇ 21ನೇ ತಾರೀಕಿನಂದು ಆತನ ಮದುವೆ ನಿಶ್ಚಯವಾಗಿತ್ತು.. ಅಮ್ಮನ ಆಶೀರ್ವಾದ ಪಡೆದು ಮದುವೆಯಾಗಬೇಕೆಂಬ ಮಹಾದಾಸೆ ಅವನದ್ದಾಗಿತ್ತು.. ಅದೇ ರೀತಿ ಅಮೇರಿಕಾದಿಂದ ಭಾರತಕ್ಕೆ ಮರಳಿದ್ದ.. ಆದರೆ ಇಲ್ಲಿ ತನ್ನ ತಾಯಿಗೆ ಕೊರೊನಾ ಸೋಂಕು ತಗುಲಿದ್ದು ಹಿಂದೆ ಮುಂದೆ ಯೋಚಿಸದೇ ತನ್ನ ಮದುವೆಯನ್ನು ಕ್ಯಾನ್ಸಲ್ ಮಾಡಿದ.. ತಾಯಿಯನ್ನು ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ಕೊಡಿಸಿದ.. ಆದರೆ ದುರ್ಧೈವ ಆತನ ತಾಯಿ ಗುಣಮುಖಳಾಗಲೇ ಇಲ್ಲ.. ಚಿಕಿತ್ಸೆ ಫಲಕಾರಿಯಾಗದೇ ರಾಕೇಶ್ ನ ತಾಯಿ ಕೊನೆಯುಸಿರೆಳೆದುಬಿಟ್ಟರು‌‌..

ಆದರೆ ಕೊರೊನಾದಿಂದ ಜೀವ ಕಳೆದುಕೊಂಡ ತಾಯಿಯನ್ನು ಆಂಬ್ಯುಲೆನ್ಸ್ ಮೂಲಕ ಗ್ರಾಮಕ್ಕೆ ತರಲಾಯಿತು.. ತಂದ ನಂತರ ಜೀವ ಇಲ್ಲವಾದರೇನು ಆಕೆ ನನ್ನ ತಾಯಿಯೇ ಎಂದು ಅಮ್ಮನ ಮುಂದೆಯೇ ಮಗ ತನಗೆ ನಿಶ್ವಯವಾಗಿದ್ದ ಹುಡುಗಿಯ ಜೊತೆ ಮದುವೆಯಾಗಿ ಕಣ್ಣೀರಿಟ್ಟಿದ್ದಾನೆ.. ಹೌದು ಮುಂದೆ ನನ್ನ ಅಮ್ಮ ಮತ್ತೆ ಬರೋದಿಲ್ಲ ಎಂದು ಬಿಕ್ಕಿ ಬಿಕ್ಕಿ ಅತ್ತ ಅವಳಿಲ್ಲದೇ ನಾನು ಹೇಗೆ ಮದುವೆಯಾಗಲೆಂದು ತನ್ನ ಮದುವೆಯನ್ನು ಅಮ್ಮ ನೋಡಬೇಕೆಂದು ಚಿರ ನಿದ್ರೆಗೆ ಜಾರಿದ್ದ ಅಮ್ಮನ ಮುಂದೆಯೇ ರಾಕೇಶ್ ಮದುವೆಯಾಗಿದ್ದಾನೆ.. ಹೌದು‌ ಇಂತಹ ಮನಕಲಕುವ ಘಟನೆ ನಡೆದಿದ್ದು ತೆಲಂಗಾಣದ ಸಂಗಾರೆಡ್ಡಿ ಜಿಲ್ಲೆಯ ಇಸ್ಮಾಯಿಲ್ ಖಾನ್ ಪೇಟ್ ಎಂಬ ಗ್ರಾಮದಲ್ಲಿ ನಡೆದಿದೆ..

ಆ ತಾಯಿಯ ಹೆಸರು ರೇಣುಕಾ ವಯಸ್ಸಿನ್ನು ಕೇವಲ ನಲವತ್ತೊಂಭತ್ತು. ಮಗ ರಾಕೇಶ್ ಓದಿಕೊಂಡು ಅಮೇರಿಕಾದಲ್ಲಿ ಕೆಲಸದಲ್ಲಿ ಇದ್ದನು.. ಇನ್ನು ಮಗನಿಗೆ ಮದುವೆ ಮಾಡಬೇಕೆಂಬ ಬಹಳ ಆಸೆ ಇಟ್ಟುಕೊಂಡಿದ್ದ ತಾಯಿ ರೇಣುಕಾ ಇಲ್ಲೇ ಮಗನಿಗಾಗಿ ಹುಡುಗಿಯನ್ನು ಹುಡುಕಿ ಮದುವೆ ನಿಶ್ಚಯ ಮಾಡಿದ್ದರು.. ಮಗನ ಮದುವೆಗೆ ಎಲ್ಲಾ ತಯಾರಿ ಮಾಡಿಕೊಂಡಿದ್ದ ರೇಣುಕಾ ಅವರಿಗೆ ಮುಂದೆ ಮಗನ ಮದುವೆಯನ್ನು ನೋಡಲು ತಾನೇ ಇರೋದಿಲ್ಲ ಎಂಬ ಸಣ್ಣ ಸುಳಿವೂ ಸಿಗದಾಯಿತು‌.. ಕೊರೊನಾ ಎಂಬ ಕಾಣದ ಕೈಗೆ ಅತಿಯಾಗಿ ಪ್ರೀತಿಸುತ್ತಿದ್ದ ಮಗನಿಂದ ದೂರವಾಗುವಂತಾಗಿ ಹೋಯ್ತು.‌. ಮಗನ ಮದುವೆ ನೋಡೊ ಕೊನೆಯ ಆಸೆಯನ್ನು ಇದೀಗ ಮಗ ಈಡೇರಿಸಿದ್ದಾನೆ.. ಜೀವ ವಿಲ್ಲದೇ ಮಲಗಿದ್ದ ತಾಯಿಯ ಮುಂದೆ ಕಣ್ಣೀರಿಡುತ್ತಕೇ ಪಾದ ಮುಟ್ಟಿ ನಮಸ್ಕಾರ ಮಾಡಿಕೊಂಡು ಅಮ್ಮನೇ ನಿಶ್ಚಯ ಮಾಡಿದ್ದ ಹುಡುಗಿ ಜೊತೆ ಸಪ್ತಪದಿ ತುಳಿದಿದ್ದಾನೆ.. ಈ ಮನಕಲಕುವ ಘಟನೆಗೆ ಆಪ್ತರು ಸಾಕ್ಷಿಯಾಗಿದ್ದು ಅಮ್ಮ ಮಗನ ಬಾಂಧವ್ಯ ನೋಡಿ ಮರುಗಿದ್ದಾರೆ..