ಬುಲೆಟ್ ಪ್ರಕಾಶ್ ಮಗನಿಗೆ ಅಪ್ಪು ಐದು ಲಕ್ಷ ಹಣ ಕೊಟ್ಟಿದ್ರಾ? ಸ್ಪಷ್ಟನೆ ಕೊಟ್ಟ ಬುಲೆಟ್ ಪ್ರಕಾಶ್ ಮಗ ರಕ್ಷಕ್ ಹೇಳಿದ್ದೇನು ಗೊತ್ತಾ..

0 views

ಪುನೀತ್ ರಾಜ್ ಕುಮಾರ್ ಅವರ ಕುರಿತು ಕಳೆದ ಇಪ್ಪತ್ತು ದಿನಗಳಿಂದ ಸಾಕಷ್ಟು ವಿಚಾರಗಳು ಹೊರಬರುತ್ತಿದೆ.. ಅದರಲ್ಲೂ ಇದ್ದಷ್ಟು ದಿನ ಎಲ್ಲಿಯೂ ಹೇಳಿಕೊಳ್ಳದೇ ಮಾಡಿದ ದಾನ ಧರ್ಮಗಳ ಬಗ್ಗೆ ಇದೀಗ ಅಪ್ಪು ಅವರಿಂದ ಸಹಾಯ ಪಡೆದವರೇ ಸಾಲು ಸಾಲಾಗಿ ಬಂದು ನಮಗೆ ಆ ಸಹಾಯ ಮಾಡಿದ್ದರು. ನಮಗೆ ಈ ಸಹಾಯ ಮಾಡಿದ್ದರು.. ನನ್ನ ಮಗಳನ್ನು ಹದಿನೆಂಟು ಲಕ್ಷ ಕೊಟ್ಟು ಉಳಿಸಿದ್ದರು.. ನಮ್ಮ ಮಕ್ಕಳ ವಿಧ್ಯಾಭ್ಯಾಸ ನೋಡಿಕೊಳ್ಳುತ್ತಿದ್ದರು.. ನಮ್ಮ ಕುರಿ ಕಳೆದು ಹೋಯಿತೆಂದು ದಾರಿಯಲ್ಲಿ ಸಿಕ್ಕಾಗ ಹೇಳಿದ್ದಕ್ಕೆ ನಲವತ್ತು ನಾಲ್ಕು ಸಾವಿರ ರೂಪಾಯಿ ಹಣ ಕೊಟ್ಟು ನಮ್ಮ ಕುರಿಗಾಹಿ ಮನೆಗೆ ಬಂದು ನೆಲದ ಮೇಲೆ ಕೂತು ಊಟ ಮಾಡಿದ್ದರು.. ಹೀಗೆ ಹೇಳುತ್ತಾ ಹೋದರೆ ಸಮಯ ಸಾಲದು ಅಷ್ಟು ಒಳ್ಳೆಯ ಕೆಲಸಗಳನ್ನು ಮಾಡಿ ಇದ್ದ ಕೆಲವೇ ದಿನದಲ್ಲಿ ದೇವರನ್ನು ಮೆಚ್ಚಿಸಿ ಅವರಿಲ್ಲವಾದರೆ ಕೋಟ್ಯಾಂತರ ಜನರು ಕಣ್ಣೀರಿಡುವೆವು ಎಂಬುದನ್ನು ಮರೆತು ಅಪ್ಪು ಹೊರಟು ಬಿಟ್ಟರು.. ಪುನೀತ್ ಅವರಿಗಾಗಿ ಕರುನಾಡಿನಲ್ಲಿ ಕಣ್ಣೀರಿಡದವರಿಲ್ಲ..

ಇಪ್ಪತ್ತು ದಿನ ಕಳೆದರು ಅವರಿಲ್ಲ ಎಂಬ ವಿಚಾರವನ್ನು ಅರಗಿಸಿಕೊಳ್ಳಲು ಇನ್ನೂ ಸಹ ಕಷ್ಟವಾಗುತ್ತಿದೆ.. ಅವರು ನಡೆದ ಆದರ್ಶವಾದ ದಾರಿಯಲ್ಲಿ ನಡೆಯಬೇಕೆಂದು ಸಾಕಷ್ಟು ಮಂದಿ ತಮ್ಮ ಜೀವನವನ್ನೇ ಬದಲಿಸಿಕೊಂಡದ್ದೂ ಉಂಟು.. ಆದರೀಗ ಬೇರೆಯದ್ದೇ ರೀತಿಯ ವಿಚಾರವೊಂದು ನಡೆದಿದೆ.. ಹೌದು ಕಳೆದ ಕೆಲ ದಿನಗಳಿಂದ ಪುನೀತ್ ರಾಜ್ ಕುಮಾರ್ ಅವರು ನನ್ನ ತಂದೆ ಹೋದಾಗ ಮನೆಗೆ ಬಂದು ಐದು ಲಕ್ಷ ರೂಪಾಯಿ ಹಣ ಕೊಟ್ಟರು ಎಂದು ಬುಲೆಟ್ ಪ್ರಕಾಶ್ ಅವರ ಮಗ ರಕ್ಷಕ್ ಹೇಳಿಕೊಂಡಿದ್ದಾರೆ ಎಂಬ ಪೋಸ್ಟ್ ಒಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.. ಆದರೆ ಇದೀಗ ಈ ಬಗ್ಗೆ ಖುದ್ದು ಬುಲೆಟ್ ಪ್ರಕಾಶ್ ಅವರ ಮಗ ರಕ್ಷಕ್ ಮಾತನಾಡಿ ಸ್ಪಷ್ಟನೆ ನೀಡಿದ್ದಾರೆ..

ಹೌದು ಅಪ್ಪು ಬಗ್ಗೆ ಅಪ್ಪು ಹಣ ಕೊಟ್ಟಿದ್ದಾರೆ ಎಂಬ ವಿಚಾರದ ಬಗ್ಗೆ ಮಾತನಾಡಿದ ರಕ್ಷಕ್ “ನನಗೆ ಪುನೀತ್ ರಾಜ್ ಕುಮಾರ್ ಹಾಗೂ ಅಣ್ಣಾವ್ರ ಕುಟುಂಬದ ಮೇಲೆ ತುಂಬಾ ಗೌರವ ಹಾಗೂ ಪ್ರೀತಿ ಇದೆ.. ಆದರೆ ಅಪ್ಪ ಹೋದಾಗ ನಮ್ಮ ಮನೆಗೆ ಪುನೀತ್ ಅವರು ಬಂದು ಐದು ಲಕ್ಷ ಹಣ ಕೊಟ್ಟಿದ್ದಾರೆ ಎಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ವಿಚಾರ ಸುಳ್ಳೆಂದು ತಿಳಿಸಿದ್ದಾರೆ.. ಅಲ್ರಯ್ಯಾ ಪುನೀತ್ ಅವರು ಮಾಡಿರೋ ಒಳ್ಳೆ ಕೆಲಸಗಳನ್ನು ಬರೆಯೋಕೆ ನಮಗೆ ಸಮಯ ಸಾಲುತ್ತಿಲ್ಲ.. ಎಷ್ಟು ಬರೆದರೂ ಮುಗಿಯುತ್ತಿಲ್ಲ.. ಅಂತಹುದರಲ್ಲಿ ಇದೆಲ್ಲಾ ಯಾಕೆ.. ಇದ್ದಷ್ಟು ದಿನ ತನ್ನ ಕುಟುಂಬ ಹಾಗೂ ಸಮಾಜ ಎರಡಕ್ಕೂ ಸಹ ಹೇಳಲಾಗದಷ್ಟು ಪ್ರೀತಿ ನೀಡಿ ಹೋದ ಪುಣ್ಯಾತ್ಮನ ಬಗ್ಗೆ ಇಲ್ಲಸಲ್ಲದ ವಿಚಾರಗಳನ್ನು ದಯವಿಟ್ಟು ಯಾರೂ ಹಬ್ಬಿಸಬೇಡಿ.

ಪುನೀತ್ ಅವರು ಸಹಾಯ ಮಾಡುವಾಗ ಈ ಕೆಲಸವನ್ನು ಪುನೀತ್ ಮಾಡಿದ್ದು ಎಂದು ಎಲ್ಲಿಯೂ ಹೇಳಕೂಡದು ಎಂದು ತಾಕೀತು ಮಾಡಿ ನಂತರ ಸಹಾಯ ಮಾಡುತ್ತಿದ್ದ ಪುಣ್ಯಾತ್ಮ ಆತ.. ಅವರಿಂದ ಸಹಾಯ ಪಡೆದ ಸಾಕಷ್ಟು ಮಂದಿ ಖುದ್ದಾಗಿ ಹೇಳಿದ ಮಾತಿದು.. ಕೊಟ್ಟಿದ್ದನ್ನೇ ಹೇಳಿಕೊಳ್ಳದ ದೊಡ್ಡತನದ ಮನುಷ್ಯನ ಬಗ್ಗೆ ಸುಮ್ಮನೆ ಇಲ್ಲಸಲ್ಲದ್ದನ್ನು ಹೇಳಿದರೆ ನಮ್ಮ ಜೊತೆ ಇಲ್ಲದ ಆ ಜೀವ ಮೇಲೆಲ್ಲೋ ನಿಂತು ನೋಡುವಾಗ ನೊಂದುಕೊಳ್ಳುವುದು.. ದಯವಿಟ್ಟು ಯಾರೂ ಸಹ ಇಂತಹ ಕೆಲಸ ಮಾಡಬೇಡಿ.. ಗೋಶಾಲೆಗಳಿಗೆ ಅನಾಥ ಆಶ್ರಮಗಳಿಗೆ ವೃದ್ಧಾಶ್ರಮಗಳಿಗೆ ಶಾಲೆಗಳಿಗೆ ಅದಾಗಲೇ ಪುನೀತ್ ಅವರು ಸಾಕಷ್ಟು ಮಾಡಿದ್ದಾರೆ..

ಅಷ್ಟೇ ಅಲ್ಲದೇ ತಮ್ಮ ಕಣ್ಣಿಗೆ ಕಾಣುವ ಕಷ್ಟದಲ್ಲಿರುವ ಪ್ರತಿಯೊಬ್ಬರಿಗೂ ಸಹ ಲೆಕ್ಕ ಹಾಕದೇ ಕೈತುಂಬಾ ಹಣ ನೀಡಿದ್ದಾರೆ.. ಜಿಮ್ ನ ಕಾವಲುಗಾರರಿಂದ ಹಿಡಿದು ಪಾರ್ಕ್ ನ ಸ್ವಚ್ಛ ಮಾಡುವ ಸಿಬ್ಬಂದಿಗಳು.. ಕಂಠೀರವ ಸ್ಟುಡಿಯೋ ದಲ್ಲಿ ಅಣ್ಣಾವ್ರು ಹಾಗೂ ಪಾರ್ವತಮ್ಮ ಅವರ ಸಮಾಧಿಯನ್ನು ನೋಡಿಕೊಳ್ಳುತ್ತಿದ್ದ ಎರಡು ಕುಟುಂಬದ ಜವಾಬ್ದಾರಿ, ಅವರಿಗೆ ಪ್ರತಿ ತಿಂಗಳು ಕೈತುಂಬಾ ಹಣ.. ಹೀಗೆ ಹೇಳುತ್ತಾ ಹೋದರೆ ಆ ಪುಣ್ಯಾತ್ಮನ ದಾನ ಧರ್ಮಗಳು ಲೆಕ್ಕಕ್ಕೆ ಸಿಗದು..

ಇರೋದನ್ನೂ ಸಹ ಹೇಳಿಕೊಳ್ಳದೇ ಹೋದ ಮುಗ್ಧ ಮನಸ್ಸಿಗೆ ಇಲ್ಲದನ್ನು ಹೇಳಿ ನೋವು ನೀಡಬೇಡಿ.. ಸುಮ್ಮನೆ ಲೈಕ್ಸು ಕಮೆಂಟ್ ಗಳಿಗಾಗಿ ಇಲ್ಲದನ್ನು ಹಾಕಬೇಡಿ.. ಪುನೀತ್ ಅವರು ತಾವು ಸ್ವಂತವಾಗಿ ದುಡಿದ ಕೋಟ್ಯಾಂತರ ರೂಪಾಯಿಯನ್ನು ಸಮಾಜಕ್ಕಾಗಿ ವಿನಿಯೋಗಿಸಿದ್ದಾರೆ.. ಇನ್ನು ಮುಂದೆ ಅಪ್ಪು ಅವರು ಇಷ್ಟ ಪಟ್ಟು ಮಾಡುತ್ತಿದ್ದ ಕೆಲಸಗಳನ್ನು ಪತ್ನಿ ಅಶ್ವಿನಿ ಅವರು ಬಿಡದೇ ಮುಂದುವರೆಸುವುದು ಸಹ ಖಚಿತವಾಗಿದೆ.. ದೇವರು ಹಾಗೂ ಪುನೀತ್ ರಾಜ್ ಕುಮಾರ್ ಅವರು ಅಶ್ವಿನಿ ಅವರಿಗೆ ಮತ್ತಷ್ಟು ಶಕ್ತಿ ನೀಡಲಿ.. ಧೈರ್ಯವಾಗಿ ಜೀವನವನ್ನು ಮುನ್ನಡೆಸುವ ಧೈರ್ಯ ಆ ಹೆಣ್ಣು ಮಗಳಿಗೆ ನೀಡಲೆಂದು ಪ್ರಾರ್ಥಿಸೋಣ.. ಅದನ್ನು ಬಿಟ್ಟು ಸುಮ್ಮನೆ ಇಲ್ಲಸಲ್ಲದನ್ನು ಹಾಕಿ ನಮ್ಮ ಮನೆ ಮಗನಿಗೆ ನಾವುಗಳೇ ನೋವು ಕೊಡುವುದು ಬೇಡ ದಯವಿಟ್ಟು..