ರಶ್ಮಿಕಾಗಿಂತ ಇಪ್ಪತ್ತು ಪಟ್ಟು ಹೆಚ್ಚು ಸಂಭಾವನೆಯನ್ನು ನಾಯಿಗೆ ಕೊಟ್ಟ ರಕ್ಷಿತ್ ಶೆಟ್ಟಿ.. ನಿಜಕ್ಕೂ ಚಾರ್ಲಿಗೆ ಕೊಟ್ಟ ಸಂಭಾವನೆ ಎಷ್ಟು ಗೊತ್ತಾ.. ಶಾಕ್ ಆಗ್ತೀರಾ..

0 views

ಸ್ಯಾಂಡಲ್ವುಡ್ ನಲ್ಲಿ ಕೆಜಿಎಫ್ ನಂತರ ತನ್ನದೇ ಆದ ವಿಭಿನ್ನ ಶೈಲಿಯಲ್ಲಿ ಮೂಡಿ ಬಂದ ಚಾರ್ಲಿ ಸಧ್ಯ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಯಶಸ್ವಿಯಾಗಿದ್ದು ಮೂರೇ ದಿನಕ್ಕೆ ನಲವತ್ತು ಕೋಟಿ ಗಳಿಕೆ ಕಂಡು ಮುಂದೆ ಸಾಗುತ್ತಿದೆ.. ಇನ್ನು ಸಧ್ಯ ಇದೀಗ ಚಾರ್ಲಿ ಸಿನಿಮಾದಲ್ಲಿ ನಾಯಿಗೆ ಕೊಟ್ಟಿರುವ ಸಂಭಾವನೆಯ ಬಗ್ಗೆ ದೊಡ್ಡ ಚರ್ಚೆಯೇ ನಡೆಯುತ್ತಿದ್ದು ಚಾರ್ಲಿಗೆ ಕೊಟ್ಟಿರುವ ಸಂಭಾವನೆ ಈ ಹಿಂದೆ ರಶ್ಮಿಕಾ ಮಂದಣ್ಣಗೆ ಕೊಟ್ಟ ಸಂಭಾವನೆಗಿಂತಲೂ ಹೆಚ್ಚಾಗಿದ್ದು ಸಾಮಾಜಿಕ ತಾಲತಾಣದಲ್ಲಿ ರಶ್ಮಿಕಾರನ್ನು ಟ್ರೋಲ್ ಮಾಡಲಾಗುತ್ತಿದೆ.. ಹೌದು ರಕ್ಷಿತ್ ಶೆಟ್ಟಿ ಹಾಗೂ ರಶ್ಮಿಕಾ ಮಂದಣ್ಣ ಅವರ ನಿಶ್ಚಿತಾರ್ಥ ಮುರಿದು ಬಿದ್ದ ನಂತರ ಸಾಮಾಜಿಕ ಜಾಲತಾಣದಲ್ಲಿ ರಶ್ಮಿಕಾರನ್ನು ಅತಿ ಹೆಚ್ಚು ಟ್ರೋಲ್ ಮಾಡಲಾಗಿತ್ತು.. ಈಗಲೂ ಸಾಕಷ್ಟು ವಿಚಾರಗಳಿಗೆ ರಶ್ಮಿಕಾ ಮಂದಣ್ಣ ಆಗಾಗ ಟ್ರೋಲ್ ಆಗುತ್ತಲೇ ಇರುತ್ತಾರೆ..

ಸಧ್ಯ ಇದೀಗ ರಕ್ಷಿತ್ ಶೆಟ್ಟಿ ಅವರ ಚಾರ್ಲಿ ಸಿನಿಮಾ ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತಿದ್ದು ಗಳಿಕೆಯಲ್ಲಿಯೂ ಹೊಸ ದಾಖಲೆ ಬರೆಯುತ್ತಿದೆ.. ಈ ಸಮಯದಲ್ಲಿ ಸಂಭಾವನೆಯ ವಿಚಾರವಾಗಿ ಮತ್ತೆ ರಶ್ಮಿಕಾರನ್ನು ಟ್ರೋಲ್ ಮಾಡಲಾಗುತ್ತಿದ್ದು ರಶ್ಮಿಕಾಗಿಂತ ನಾಯಿಗೇ ಹೆಚ್ಚು ಸಂಭಾವನೆ ನೀಡಲಾಗಿದ್ದು ನಿಜಕ್ಕೂ ಆಶ್ಚರ್ಯವನ್ನುಂಟು‌ ಮಾಡಿದೆ.. ಹೌದು ರಕ್ಷಿತ್ ಶೆಟ್ಟಿ ಅವರು ನಟನೆಯ ಜೊತೆಗೆ ಮೊದಲಿನಿಂದಲೂ ನಿರ್ಮಾಪಕನಾಗಿ ಗುರುತಿಸಿಕೊಂಡವರು.. ಕಿರಿಕ್ ಪಾರ್ಟಿ ಸಿನಿಮಾ ನಿರ್ಮಾಣ ಮಾಡಿ ಐವತ್ತು ಕೋಟಿ ಗಳಿಕೆ ಕಂಡು ಬಾಕ್ಸ್ ಆಫೀಸಿನಲ್ಲಿ ತಮ್ಮ ಹೆಸರು ಬರೆದಿದ್ದ ರಕ್ಷಿತ್ ಅವರು ಅವನೇ ಶ್ರೀಮನ್ನಾರಾಯಣ ಸಿನಿಮಾದಲ್ಲಿ ಹಣ‌ ಕಳೆದುಕೊಂಡದ್ದೂ ಉಂಟು.. ಆದರೆ ಸಿನಿಮಾವನ್ನು ಪ್ರೀತಿಸುವ ರಕ್ಷಿತ್ ಶೆಟ್ಟಿ ಮತ್ತೆ ಚಾರ್ಲಿ ಮೂಲಕ ಗೆದ್ದು ಬೀಗಿದರು.. ಅವನೇ ಶ್ರೀಮನ್ನಾರಾಯಣ ಸಿನಿಮಾದಲ್ಲಿ ಆದ ನಷ್ಟವನ್ನೆಲ್ಲಾ ಚಾರ್ಲಿ ಲಾಭ ಮಾಡಿಕೊಟ್ಟಿದೆ ಎನ್ನಬಹುದು..

ಇನ್ನು ಈ ಹಿಂದೆ ಕಿರಿಕ್ ಪಾರ್ಟಿ ಸಿನಿಮಾ ನಿರ್ಮಾಣ ಮಾಡುವಾಗ ರಶ್ಮಿಕಾ ಮಂದಣ್ಣ ಅವರಿಗೆ ಕಡಿಮೆ ಸಂಭಾವನೆಯನ್ನು ನೀಡಲಾಗಿತ್ತು.. ಆದರೆ ಈಗ ರಶ್ಮಿಕಾ ಅವರ ಸಂಭಾವನೆಯ ಇಪ್ಪತ್ತು ಪಟ್ಟು ಸಂಭಾವನೆಯನ್ನು ನೀಡುವ ಮೂಲಕ ರಶ್ಮಿಕಾಗಿಂತ ನಾಯಿಗೆ ಬೆಲೆ ಜಾಸ್ತಿ ಎಂದು ಸಾಮಾಜಿಕ ಜಾಲತಾಣದಲ್ಲಿ ಟ್ರೋಲ್ ಮಾಡಲಾಗುತ್ತಿದೆ.. ಹೌದು ಕಿರಿಕ್ ಪಾರ್ಟಿ ಸಿನಿಮಾ ರಶ್ಮಿಕಾ ಮಂದಣ್ಣ ಅವರ ಸಿನಿ ಬದುಕಿನ ಮೊದಲ ಸಿನಿಮಾ ಆಗಿದ್ದು ಆ ಸಿನಿಮಾ ಮೂಲಕ ದೊಡ್ಡ ಯಶಸ್ಸು ಪಡೆದ ರಶ್ಮಿಕಾ ಮಂದಣ್ಣ ಹಿಂತಿರುಗಿ ನೋಡಿದ್ದೇ ಇಲ್ಲ.. ಜೀವನದಲ್ಲಿ ವೃತ್ತಿ ಬದುಕಲ್ಲಿ ಹಾಗೂ ಇನ್ನಿತರ ವಿಚಾರಗಳಲ್ಲಿಯೂ ಸಹ ರಶ್ಮಿಕಾ ಮಂದಣ್ಣ ಹಿಂತಿರುಗಿ ನೋಡಲೇ ಇಲ್ಲ..

ಆದರೆ ಕಿರಿಕ್ ಪಾರ್ಟಿ ಸಿನಿಮಾದಲ್ಲಿ ರಶ್ಮಿಕಾ ಅವರ ಮೊದಲ ಸಿನಿಮಾ ಆದ್ದರಿಂದ ಸಂಭಾವನೆಯೂ ಕೊಂಚ ಕಡಿಮೆಯೇ ಇತ್ತು.. ಹೌದು ಆ ಸಮಯದಲ್ಲಿ ರಶ್ಮಿಕಾ ಅವರಿಗೆ ಐದು ಲಕ್ಷ ರೂಪಾಯಿಯನ್ನು ಸಂಭಾವನೆಯಾಗಿ ನೀಡಲಾಗಿತ್ತು.. ಆದರೆ ಈಗ ಚಾರ್ಲಿ ಸಿನಿಮಾದಲ್ಲಿ ಚಾರ್ಲಿ ಪಾತ್ರ ಮಾಡಿರುವ ನಾಯಿಗೆ ರಶ್ಮಿಕಾ ಗಿಂತ ಇಪ್ಪತ್ತು ಪಟ್ಟು ಸಂಭಾವನೆಯನ್ನು ಹೆಚ್ಚು ನೀಡಲಾಗಿದೆ.. ಹೌದು ಈ ಬಗ್ಗೆ ಸಂದರ್ಶನವೊಂದರಲ್ಲಿ ಖುದ್ದು ರಕ್ಷಿತ್ ಶೆಟ್ಟಿ ಅವರೇ ಹೇಳಿಕೆ ನೀಡಿದ್ದಾರೆ.. ಚಾರ್ಲಿ ಸಿನಿಮಾ ಕುರಿತು ಸಾಕಷ್ಟು ಸಂದರ್ಶನಗಳಲ್ಲಿ ಪಾಲ್ಗೊಂಡಿರುವ ನಟ ರಕ್ಷಿತ್ ಶೆಟ್ಟಿ ಹಾಗೂ ತಂಡ ಅನುಶ್ರೀ ಅವರ ಸಂದರ್ಶನದಲ್ಲಿ ಚಾರ್ಲಿ ಸಂಭಾವನೆಯ ಬಗ್ಗೆ ಮಾತನಾಡಿದ್ದಾರೆ..

ಚಾರ್ಲಿಗೆ ಕೊಟ್ಟ ಸಂಭಾವನೆ ಎಷ್ಟು ಎಂದು ಕೇಳಿದಾಗ ಉತ್ತರಿಸಿದ ರಕ್ಷಿತ್ ಶೆಟ್ಟಿ.. ಆಗಿದೆ ಚಾರ್ಲಿಗೆ ಕೋಟಿ ದಾಟಿದೆ ಎಂದಿದ್ದಾರೆ.. ಇನ್ನು ಈ ಮಾತು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು ಈ ಹಿಂದೆ ರಶ್ಮಿಕಾಗೂ ಅಷ್ಟು ಸಂಭಾವನೆ ನೀಡಿಲ್ಲ.. ರಶ್ಮಿಕಾಗಿಂತ ನಯೈಗೆ ಬೆಲೆ ಜಾಸ್ತಿ ಎಂದಿದ್ದಾರೆ.. ಅಷ್ಟೇ ಅಲ್ಲದೇ ಸಿನಿಮಾ ನೋಡಿದ ಕೆಲವರು “ಈ ಹಿಂದೆ ನಿಯತ್ತಿಲ್ಲದ ನಾಯಿಯನ್ನು ಹಾಕಿಕೊಂಡು ರಕ್ಷಿತ್ ಶೆಟ್ರು ಸಿನಿಮಾ ಮಾಡಿದ್ರು.. ಈಗ ನಿಯತ್ತಿರೋ ಜಾತಿ ನಾಯಿ ಹಾಕೊಂಡ್ ಸಿನಿಮಾ‌ ಮಾಡವ್ರೆ ಎಲ್ಲಾ ಬಂದ್ ನೋಡಿ” ಎಂದು ಸಹ ಹೇಳಿಕೆ ನೀಡಿದ್ದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು..

ಒಟ್ಟಿನಲಿ ರಕ್ಷಿತ್ ಹಾಗೂ ರಶ್ಮಿಕಾ ಇಬ್ಬರೂ ತಮ್ಮ ಸಂಬಂಧ‌ ಮುರಿದುಕೊಂಡು ದೂರಾದರೂ ಸಹ ಅವರಿಬ್ಬರ ವಿಚಾರವಾಗಿ ಅಭಿಮಾನಿಗಳು‌ ಮಾತ್ರ ಟ್ರೋಲ್‌ ಮಾಡೋದು ನಿಲ್ಲಿಸಿಲ್ಲ.. ಬಹುಶಃ ಇಬ್ಬರೂ ತಮ್ಮ ತಮ್ಮ ವ್ಯಯಕ್ತಿಕ ಜೀವನದಲ್ಲಿ ತಾವು ಮೆಚ್ಚಿದವರನ್ನು ಮದುವೆ ಆಗುವವರೆಗೂ ಈ ಟೀಕೆಗಳು ಟ್ರೋಲ್ ಗಳು ನಿಲ್ಲುವಂತೆ ಕಾಣುತ್ತಿಲ್ಲ.. ಇನ್ನು ರಶ್ಮಿಕಾ ಬಗ್ಗೆ ರಕ್ಷಿತ್ ಶೆಟ್ಟಿ ಅವರೇ ಮಾತನಾಡಿ ಸುಮ್ಮನೆ ಒಬ್ಬರ ಬಗ್ಗೆ ದ್ವೇಷ ಸಾಧಿಸಬೇಕಾದರೆ ಅವರ ಬಗ್ಗೆ ಅವರ ವಿಚಾರಗಳನ್ನು ಮನಸ್ಸಿನಲ್ಲಿ ಇಟ್ಟುಕೊಳ್ಳಬೇಕಾಗುತ್ತದೆ.. ಅದರ ಬದಲು ಮನಸ್ಸಿನಲ್ಲಿ ಏನೂ ಇಟ್ಟುಕೊಳ್ಳದೇ ಮುಂದೆ ಸಾಗೋದೇ ಉತ್ತಮ ಎಂದಿದ್ದಾರೆ.