ರಕ್ಷಿತ್ ರನ್ನು ತುಳಿಯಲು ಪ್ರಯತ್ನ ಪಟ್ಟ ಆ ಕಾಣದ ಕೈ ಯಾವುದು.. ನೇರವಾಗಿ ಮಾತನಾಡಿದ ರಕ್ಷಿತ್..

0 views

ಕನ್ನಡ ಚಿತ್ರರಂಗ ಸೇರಿದಂತೆ ಎಲ್ಲಾ ಭಾಷೆಯ ಚಿತ್ರರಂಗದಲ್ಲಿಯೂ ಈ ರಾಜಕೀಯ ಶೀತಲ ಸಮರಗಳು.. ಹೊಟ್ಟೆ ಕಿಚ್ಚುಗಳು ಎಲ್ಲವೂ ಸಾಮಾನ್ಯವಾಗಿ ಇದ್ದೇ ಇದೆ.. ಅದರಲ್ಲೂ ತೆರೆ ಮೇಲೆ ಎಲ್ಲರ ಮನಗೆಲ್ಲುವ ಕೆಲಸ ಮಾಡಿ ಹೀರೋಗಳು ಎನಿಸಿಕೊಂಡವರೇ ನಿಜ ಜೀವನದಲ್ಲಿ ಮತ್ತೊಬ್ಬರನ್ನು ತುಳಿಯಲು ಪ್ರಯತ್ನ ಪಡುವುದು ನಿನಕ್ಕೂ ಜೀವನದ ಮೌಲ್ಯಗಳು ತೆರೆ ಮೇಲೆ ಮಾತ್ರ ಸೀಮಿತವೇ ಎನಿಸುವಂತೆ ಮಾಡಿದೆ. ಅದರಲ್ಲೂ ಬೆಳೆಯುತ್ತಿರುವ ಸಾಕಷ್ಟು ಪ್ರತಿಭೆಗಳಿಗೆ ಬೆನ್ನು ತಟ್ಟುವ ಸಾಕಷ್ಟು ಸ್ಟಾರ್ ಗಳು ನಮ್ಮ ಕನ್ನಡ ಇಂಡಸ್ಟ್ರಿಯಲ್ಲಿ ಇರುವುದು ನಿಜಕ್ಕೂ ಮೆಚ್ಚುವ ವಿಚಾರ.. ಅದೇ ರೀತಿ ನಮ್ಮ ಚಿತ್ರರಂಗದವರೇ ಕೆಲವರನ್ನು ಬೆಳೆಯುತ್ತಿದ್ದಾರೆ ಎಂದು ಸಹಿಸದೇ ತುಳಿಯುವ ವಿಚಾರ ನಿಜಕ್ಕೂ ಬೇಸರವನ್ನುಂಟು ಮಾಡುತ್ತದೆ.. ಇದೀಗ ಆ ಬೇಸರವನ್ನು ಖುದ್ದು ರಕ್ಷಿತ್ ಶೆಟ್ಟಿ ಅವರೇ ತುಂಬಿದ ವೇದಿಕೆಯಲ್ಲಿ ಹೊರ ಹಾಕಿದ್ದಾರೆ..

ಹೌದು ಸಧ್ಯ ರಕ್ಷಿತ್ ಶೆಟ್ಟಿ ಅವರ ಹೊಸ ಸಿನಿಮಾ ಚಾರ್ಲಿ ಬಿಡುಗಡೆಗೆ ಸಿದ್ಧವಾಗಿದ್ದು ಪ್ರಚಾರದ ಕಾರ್ಯ ಭರದಿಂದ ಸಾಗಿದೆ.. ಅದರಲ್ಲೂ ಕೆಜಿಎಫ್ ಸಿನಿಮಾದ ನಂತರ ನಮ್ಮ ಕನ್ನಡದ ಸಿನಿಮಾಗಳ ಮೇಲೆ ಅಕ್ಕ ಪಕ್ಕದ ರಾಜ್ಯದ ಸಿನಿ ಪ್ರೇಕ್ಷಕರಿಗೂ ಸಹ ನಿರೀಕ್ಷೆ ಹೆಚ್ಚಾಗಿದ್ದು ಚಾರ್ಲಿ ಸಿನಿಮಾ ಕೂಡ ಪ್ಯಾನ್ ಇಂಡಿಯಾ ಸಿನಿಮಾ ಆಗಿದ್ದು ದೊಡ್ಡ ಯಶಸ್ಸು ಪಡೆಯುವ ನಿರೀಕ್ಷೆ ಮೂಡಿಸಿದೆ..

ಇನ್ನು ಮೊನ್ನೆಯಷ್ಟೇ ಟ್ರೈಲರ್ ಸಹ ಬಿಡುಗಡೆಯಾಗಿದ್ದು ಕೆಜಿಎಫ್ ಸಿನಿಮಾ ನಂತರದ ದಾಖಲೆಗಳನ್ನು ತನ್ನ ಹೆಸರಿಗೆ ಪಡೆದಿದ್ದು ಸಿನಿಮಾ ಹಿಟ್ ಆಗೋದ್ರಲ್ಲಿ ಅನುಮಾನವಿಲ್ಲ ಎನ್ನಲಾಗುತ್ತಿದೆ.. ನಾಯಿ ಹಾಗೂ ಹೀರೋ ನಡುವಿನ ಬಾಂಧವ್ಯದ ಸಿನಿಮಾ ಇದಾಗಿದ್ದು ಎಮೋಷನಲಿ ಜನರನ್ನು ಕಟ್ಟಿಹಾಕಬಹುದಾಗಿದೆ.. ಇನ್ನು ಇದೇ ಕಾರ್ಯಕ್ರಮದಲ್ಲಿ ಮಾತನಾಡಿರುವ ರಕ್ಷಿತ್ ಶೆಟ್ಟಿ ಅವರು ಕೆಲವೊಂದು ವಿಚಾರಗಳ ಬಗ್ಗೆ ಹೇಳಿಕೊಂಡಿದ್ದಾರೆ..

ಹೌದು ಸಧ್ಯ ರಕ್ಷಿತ್ ಶೆಟ್ಟಿ ಅವರು ಮಾಡುತ್ತಿರುವ ಎಲ್ಲಾ ಸಿನಿಮಾಗಳು ಸಹ ತಮ್ಮ ಹೋಂ ಬ್ಯಾನರ್ ನ ಸಿನಿಮಾಗಳೇ ಆಗಿದ್ದು ತಮ್ಮ ಸ್ನೇಹಿತರುಗಳೇ ನಿರ್ದೇಶಕರಾಗಿದ್ದಾರೆ.. ಹೌದು ಕಿರಿಕ್ ಪಾರ್ಟಿ ಸಮಯದಿಂದಲೂ ರಕ್ಷಿತ್ ಶೆಟ್ಟಿ ಅವರ ಸ್ನೇಹಿತರ ಗುಂಪಿನಲ್ಲಿ ಇದ್ದ ಅಸೋಸಿಯೇಟ್ ಗಳೇ ಒಂದೊಂದು ಸಿನಿಮಾ ನಿರ್ದೇಶನ ಮಾಡುತ್ತಿದ್ದು ರಕ್ಷಿತ್ ಅವರು ನಾಯಕನಾಗಿ ಹಾಗೂ ನಿರ್ಮಾಪಕನಾಗಿಯೂ ಕಾಣಿಸಿಕೊಳ್ಳಬೇಕಾದ ಅನಿವಾರ್ಯತೆ ಇದೆ.. ಕಳೆದ ಅವನೇ ಶ್ರೀಮನ್ನಾರಾಯಣ ಸಿನಿಮಾ ಕೂಡ ರಕ್ಷಿತ್ ಶೆಟ್ಟಿ ಅವರೇ ನಿರ್ಮಾಣ ಮಾಡಿದ್ದು ಇದೀಗ ಚಾರ್ಲಿ ಸಿನಿಮಾ ಕೂಡ ಇವರೇ ನಿರ್ಮಾಪಕರಾಗಿದ್ದಾರೆ..

ಇದರ ಜೊತೆಗೆ ಮುಂಬರುವ ಸಪ್ತ ಸಾಗರದಾಚೆ ಎಲ್ಲೋ ಸಿನಿಮಾಗೂ ಕೂಡ ರಕ್ಷಿತ್ ಅವರೇ ನಿರ್ಮಾಪಕರಾಗಿದ್ದಾರೆ.. ಇನ್ನು ಈ ಬಗ್ಗೆ ಮಾದ್ಯಮದವರು ಕೇಳಲಾಗಿ.. ಬೇರೆ ಯಾರ ಸಿನಿಮಾ ಒಪ್ಪಿಕೊಂಡಿದ್ದೀರಾ ಎನ್ನಲಾಗಿ.. ನನಗೆ ಬೇರೆ ಯಾರೂ ಸಿನಿಮಾ ಮಾಡಲ್ಲ.. ಬೇರೆಯವರಿಂದ ನನಗೆ ಅವಕಾಶ ಬರಲ್ಲ.. ನಮ್ಮ ಸಿನಿಮಾವನ್ನು ನಾವೇ ಮಾಡಿಕೊಳ್ಳಬೇಕು ಎಂದಿದ್ದಾರೆ..

ಹೌದು ರಕ್ಷಿತ್ ಶೆಟ್ಟಿ ಸಾಕಷ್ಟು ಏರು ಪೇರುಗಳ ನಡುವೆಯೂ ಕಿರಿಕ್ ಪಾರ್ಟಿಯಂತಹ ಸಕ್ಸಸ್ ಸಿನಿಮಾ ಕೊಟ್ಟೂ ಯಶಸ್ವಿ ನಟನಾಗಿ ಗುರುತಿಸಿ ಕೊಂಡರೂ ಸಹ ಅವರಿಗೆ ಬೇರೆ ಯಾವ ನಿರ್ಮಾಪಕರಿಂದಲೂ ಅವಕಾಶ ದೊರೆತಿಲ್ಲ.. ಆ ಕಾರಣಕ್ಕೆ ತಮ್ಮ ಸಿನಿಮಾಗಳನ್ನು ತಾವೇ ಮಾಡಿಕೊಳ್ಳಬೇಕು ಎಂದಿದ್ದಾರೆ.. ಈ ಮೂಲಕ ಚಿತ್ರರಂಗದಲ್ಲಿ ರಾಜಕೀಯ ಇರುವ ಬಗ್ಗೆ ಸೂಕ್ಷ್ಮವಾಗಿ ತಿಳಿಸಿದ್ದು ಏನೂ ಮಾಡಲು ಸಾಧ್ಯವಿಲ್ಲ ಎನ್ನುವಂತಾಗಿದೆ..