ಸಿಹಿಸುದ್ದಿ.. ಹಳೆಯ ಆ ದಿನಗಳು ನೆನಪಾಗುತ್ತಿವೆ ಎಂದು ಕೊನೆಗೂ ರಕ್ಷಿತ್ ಶೆಟ್ಟಿಯನ್ನು ನೆನೆಪಿಸಿಕೊಂಡ ರಶ್ಮಿಕಾ ಮಂದಣ್ಣ..

0 views

ರಕ್ಷಿತ್ ಶೆಟ್ಟಿ‌ ರಶ್ಮಿಕಾ ಮಂದಣ್ಣ.. ಸ್ಯಾಂಡಲ್ವುಡ್ ನ ಕಿರಿಕ್ ಜೋಡಿ.. ಎಲ್ಲವೂ ಸರಿ‌ ಇದ್ದಿದ್ದರೆ ಇಷ್ಟೊತ್ತಿಗೆ ಇಬ್ಬರ ಮದುವೆ ನಡೆದು ಒಂದೆರೆಡು ಮಕ್ಕಳು ಆಗಿರುತ್ತಿದ್ದವೇನೋ.. ಆದರೆ ಈ ಚೆಂದದ ಜೋಡಿ ಮ್ಯಾಲೆ ಅದ್ಯಾರ ಕಣ್ಣು ಬಿತ್ತೋ.. ರಶ್ಮಿಕಾ ಮಂದಣ್ಣ ಗೀತಾ ಗೋವಿಂದಂ ಸಿನಿಮಾದಲ್ಲಿ ಅಭಿನಯಿಸಿದ್ದೇ ಅಭಿನಯಿಸಿದ್ದು ರಕ್ಷಿತ್ ಹಾಗೂ ರಶ್ಮಿಕಾ ನಡುವಿನ ಸಂಬಂಧ ಮುರಿದುಬಿದ್ದಿತ್ತು.. ಆದರೆ ಇದೀಗ ಮತ್ತೆ ರಶ್ಮಿಕಾ ಮಂದಣ್ಣ ರಕ್ಷಿತ್ ಶೆಟ್ಟಿಯನ್ನು ನೆನಪಿಸಿಕೊಂಡಿದ್ದಾರೆ.. ಹೌದು ಆಶ್ಚರ್ಯವಾದರೂ ನಂಬಲೇಬೇಕಾದ ವಿಚಾರವಾಗಿದೆ.. ಕೆಲವರಿಗೆ ಶಾಕ್ ಕೂಡ ಆಗಬಹುದು.. ಆದರೆ ಇದು ಸತ್ಯ.. ರಶ್ಮಿಕಾ ಮಂದಣ್ಣ ಅಂತೂ ರಕ್ಷಿತ್ ಶೆಟ್ಟಿ ಅವರನ್ನು‌ ನೆನಪಿಸಿಕೊಂಡಿದ್ದಾರೆ..

ಹೌದು ಕಿರಿಕ್ ಪಾರ್ಟಿ ಸಿನಿಮಾ ಸಮಯದಲ್ಲಿ ರಿಂಗ್ ಕೊಟ್ಟು ಪ್ರಪೋಸ್ ಮಾಡಿದ್ದ ರಕ್ಷಿತ್ ಶೆಟ್ಟಿಗೆ ಬಹುಶಃ ಈ ವಿಚಾರ ಅರಗಿಸಿಕೊಳ್ಳಲು ಸಾಧ್ಯವಾಗದಾಗಿತ್ತು.. ಆತುರಾತುರವಾಗಿ ಕೊಡಗಿನಲ್ಲಿ ಅದ್ಧೂರಿಯಾಗಿ ನಿಶ್ಚಿತಾರ್ಥವೂ ನೆರವೇರಿತ್ತು.. ಆದರೆ ತೆಲುಗು ಸಿನಿಮಾಗೆ ಕಾಲಿಡುತ್ತಲೇ ಕನ್ನಡದ ಹುಡುಗನ ಪ್ರೀತಿ ಸಂಬಂಧ ಮುರಿದು ಇಬ್ಬರೂ ತಮ್ಮ ನಿಶ್ಚಿತಾರ್ಥದ ಉಂಗುರವನ್ನು ವಾಪಸ್ ನೀಡಿದ್ದರೆಂದು ಸುದ್ದಿಯಾಗಿತ್ತು.. ಆನಂತರ ಇಬ್ಬರೂ ತಮ್ಮ ಪಾಡಿಗೆ ತಾವು ಸಿನಿಮಾ ಕೆಲಸದಲ್ಲಿ ತೊಡಗಿಕೊಂಡಿದ್ದರು.. ಅತ್ತ ರಶ್ಮಿಕಾ ಮಂದಣ್ಣ ತೆಲುಗು ತಮಿಳು ಸಿನಿಮಾಗಳಲ್ಲಿ ಬ್ಯುಸಿ ಆದರೆ ಇತ್ತ ರಕ್ಷಿತ್ ಶೆಟ್ಟಿ‌ ಮಾತ್ರ ಸಾಮಾಜಿಕ ಜಾಲತಾಣದಲ್ಲಿ ಸಂಪೂರ್ಣ ದೂರ ಉಳಿದು ಅವನೇ ಶ್ರೀಮನ್ನಾರಾಯಣ ಸಿನಿಮಾದ ಕೆಲಸದಲ್ಲಿ ತೊಡಗಿಕೊಂಡಿದ್ದರು..

ಈ ನೋವಿನಿಂದ ಹೊರ ಬರಲು ಬಹಳಷ್ಟು ಕಷ್ಟ ಪಟ್ಟರೆಂದು ಅವರ ಸ್ನೇಹಿತರ ವಲಯ ಹೇಳುವುದುಂಟು.. ಹೊರಗೆ ಯಾವುದೇ ಕಾರ್ಯಕ್ರಮದಲ್ಲಿ ಕಾಣಿಸಿಕೊಳ್ಳುತ್ತಿರಲಿಲ್ಲ.. ಕೊನೆಗೆ ರಿಶಭ್ ಶೆಟ್ಟಿ ಮಗುವಿನ ಕಾರ್ಯಕ್ರಮವೊಂದರಲ್ಲಿ ಹೊರಗೆ ಕಾಣಿಸಿಕೊಂಡು ನಂತರ ನಾರ್ಮಲ್ ಆದದ್ದೂ ಉಂಟು.. ಇನ್ನು ಅವನೇ ಶ್ರೀಮನ್ನಾರಾಯಣ ಸಿನಿಮಾ ಬಳಿಕ ರಕ್ಷಿತ್ ಕೂಡ ಇದೀಗ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿ ಆಗಿದ್ದಾರೆ.. ಅತ್ತ ರಶ್ಮಿಕಾ ಕೂಡ ತೆಲುಗು ನಂತರ ತಮಿಳು ನಂತರ ಇದೀಗ ಬಾಲಿವುಡ್ ಗೂ ಸಹ ಎಂಟ್ರಿ ನೀಡಿದ್ದು ಸ್ಟಾರ್ ನಟರ ಸಿನಿಮಾಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.. ಇನ್ನು ಕನ್ನಡದಲ್ಲಿ ಧೃವ ಸರ್ಜಾರ ಪೊಗರು ಸಿನಿಮಾದಲ್ಲಿಯೂ ಅಭಿನಯಿಸಿದ್ದು ಬಿಡುಗಡೆಗೆ ಸಜ್ಜಾಗಿದೆ..

ಇನ್ನು ಇದೆಲ್ಲವನ್ನು ಹೊರತು ಪಡಿಸಿ ಇಂದು ಬೆಳ್ಳಂಬೆಳಿಗ್ಗೆ ಸಾಮಾಜಿಕ ಜಾಲತಾಣದಲ್ಲಿ ರಶ್ಮಿಕಾ ಮಂದಣ್ಣ ರಕ್ಷಿತ್ ಶೆಟ್ಟಿಯನ್ನು ನೆನೆದಿದ್ದಾರೆ.. ಹೌದು ಇದಕ್ಕೆ ಕಾರಣ ಮತ್ತೆ ತಮ್ಮ ಪ್ರೀತಿಗೆ ಕಾರಣವಾದ ಅದೇ ಕಿರಿಕ್ ಪಾರ್ಟಿ ಸಿನಿಮಾ.. ಹೌದು ಕಿರಿಕ್ ಪಾರ್ಟಿ ಸಿನಿಮಾದ ಬೆಳಗೆದ್ದು ಯಾರ ಮುಖವ ನಾನು ನೋಡಲಿ ಹಾಡು ಒಂದು ಮಿಲಿಯನ್ ವೀಕ್ಷಣೆ ಪಡೆದುಕೊಂಡಿದ್ದು ಈ ಬಗ್ಗೆ ರಶ್ಮಿಕಾ ಮಂದಣ್ಣ ರಕ್ಷಿತ್ ಶೆಟ್ಟಿ ಬಗ್ಗೆ ಮಾತನಾಡಿದ್ದಾರೆ.. ಹೌದು “ಬೆಳಗೆದ್ದು ಯಾರ ಮುಖವ ನಾನು ನೋಡಲಿ.. ಇದು ನನ್ನ ಮೊಟ್ಟ ಮೊದಲ ಹಾಡು.. ನಾನು ತುಂಬಾ ಇಷ್ಟ ಪಡುವ ಹಾಡು.. ಇದೀಗ ಈ ಹಾಡು ನೂರು ಮಿಲಿಯನ್ ವೀಕ್ಷಣೆ ಪಡೆದುಕೊಂಡಿದೆ.. ಈಗಲೂ ನನಗೆ ಆ ಕ್ಷಣಗಳು ನೆನಪಿದೆ.. ಆ ಹಾಡು ಚಿತ್ರೀಕರಿಸಿದ ಪ್ರತಿ ಕ್ಷಣವೂ ನನ್ನ ಕಣ್ಣೆದುರಿದೆ.. ನನ್ನೊಳಗೆ ನಾನು ಮತ್ತೆ ಸಾನ್ವಿಯನ್ನು ಹುಡುಕುತ್ತಿರುವೆ.. ಎಂಥ ಜರ್ನಿ” ಎಂದು ಬರೆದು ಪೋಸ್ಟ್ ಮಾಡಿದ್ದಷ್ಟೇ ಅಲ್ಲದೇ ರಕ್ಷಿತ್ ಶೆಟ್ಟಿಯನ್ನೂ ಸಹ ಆ ಪೋಸ್ಟ್ ಗೆ ಟ್ಯಾಗ್ ಮಾಡಿದ್ದಾರೆ..

ಸದ್ಯ ಅಭಿಮಾನಿಗಳು ಇದನ್ನು ನೋಡಿ ಕನ್ಫ್ಯೂಸ್ ಆದರೂ ಸಹ ಸಿಕ್ಕಾಪಟ್ಟೆ ಸಂತೋಷ ಪಟ್ಟಿದ್ದು ಈ ಜೋಡಿ ಮತ್ತೆ ಒಂದಾಗೋ ಮನಸ್ಸು ಮಾಡಿದ್ದಾರಾ ಎಂಬ ಕುತೂಹಲವಂತೂ ಮೂಡಿದೆ.. ಅಷ್ಟೇ ಅಲ್ಲದೇ ನೀವಿಬ್ಬರು ಮತ್ತೆ ಒಂದಾಗಿ.. ಅದೇ ಕರ್ಣ ಸಾನ್ವಿ ಜೋಡಿ ನಿಜ ಜೀವನದಲ್ಲಿಯೂ ಒಂದಾಗಲಿ ಎಂದು ನೇರವಾಗಿಯೇ ಕಮೆಂಟ್ ಮೂಲಕ ಅಭಿಮಾನಿಗಳು ತಿಳಿಸಿತ್ತಿದ್ದಾರೆ.. ಆದರೆ ಸದ್ಯ ಇದೀಗ ರಶ್ಮಿಕಾ ಮಂದಣ್ಣ ರಕ್ಷಿತ್ ಶೆಟ್ಟಿ ಅವರನ್ನು ತಮ್ಮ ಪೋಸ್ಟ್ ಗೆ ಟ್ಯಾಗ್ ಮಾಡಿ ಹಳೆಯ ದಿನಗಳನ್ನು ನೆನೆದಿದ್ದು ರಕ್ಷಿತ್ ಶೆಟ್ಟಿ ಅವರು ಯಾವ ರೀತಿ ಪ್ರತಿಕ್ರಿಯೆ ನೀಡುವರೋ ಕಾದು ನೋಡಬೇಕಿದೆ..