ರಶ್ಮಿಕಾ ಬಗ್ಗೆ ಕೆಟ್ಟದಾಗಿ ಕಮೆಂಟ್ ಮಾಡಿದವನಿಗೆ ರಕ್ಷಿತ್ ಮಾಡಿದ್ದೇನು ಗೊತ್ತಾ? ಇದು ನಿಜವಾದ ದೊಡ್ಡತನ ಎಂದರೆ.. ರಕ್ಷಿತ್ ಪ್ರೀತಿ ಎಷ್ಟಿತ್ತು ಎಂಬುದು ಇದರಲ್ಲಿಯೇ ತಿಳಿಯುತ್ತದೆ..

0 views

ರಕ್ಷಿತ್ ರಶ್ಮಿಕಾ ವಿಚಾರ ಎಲ್ಲರಿಗೂ ತಿಳಿದಿರುವಂತದ್ದೇ.. ಅದರಲ್ಲೂ ರಕ್ಷಿತ್ ರಶ್ಮಿಕಾ ಇಬ್ಬರ ನಡುವಿನ ನಿಶ್ಚಿತಾರ್ಥ ಮುರಿದು ಬಿದ್ದು ವರ್ಷಗಳೇ ಕಳೆದು ಹೋದವು.. ಆದರೆ ಈಗಲೂ ಸಹ ಅಭಿಮಾನಿಗಳು ರಕ್ಷಿತ್ ಹಾಗೂ ರಶ್ಮಿಕಾ ಇಬ್ಬರೂ ಒಂದಾಗಲಿ ಎಂಬ ಸಣ್ಣ ಆಸೆಯೊಂದನ್ನು ಇಟ್ಟುಕೊಂಡಿದ್ದಾರೆ.. ಆದರೆ ಇದೀಗ ರಶ್ಮಿಕಾ ಅವರ ವಿಚಾರದಲ್ಲಿ ರಕ್ಷಿತ್ ಮಹತ್ವದ ನಿರ್ಧಾರವೊಂದನ್ನು ತೆಗೆದುಕೊಂಡಿದ್ದು ಅಭಿಮಾನಿಗಳೊಟ್ಟಿಗೆ ಅದೇ ವಿಚಾರವಾಗಿ ಮಾತನಾಡಿದ್ದಾರೆ.. ಹೌದು ನಿನ್ನೆಯಷ್ಟೇ ರಕ್ಷಿತ್ ಶೆಟ್ಟಿ ಅವರು ಸರಳವಾಗಿ ತಮ್ಮ ಹುಟ್ಟುಹಬ್ಬ ಆಚರಿಸಿಕೊಂಡಿದ್ದು ಅದೇ ದಿನ ರಶ್ಮಿಕಾ ಮಂದಣ್ಣ ಅವರ ಕುರಿತು ಮಾತನಾಡಿದ್ದಾರೆ..

ಹೌದು ಸಧ್ಯ ಹುಟ್ಟುಹಬ್ಬದ ವಿಶೇಷವಾಗಿ ರಕ್ಷಿತ್ ಶೆಟ್ಟಿ ಅವರ ಮುಂದಿನ ಸಿನಿಮಾ ಚಾರ್ಲಿ ಸಿನಿಮಾದ ಟೀಸರ್ ಅನ್ನು ಐದು ಭಾಷೆಗಳಲ್ಲಿ ಬಿಡುಗಡೆ ಮಾಡಿದ್ದು ಸಧ್ಯ ಮಿಲಿಯನ್ ಗಟ್ಟಲೇ ವೀಕ್ಷಣೆ ಪಡೆದು ಯಶಸ್ವಿಯಾಗಿದ್ದು ಜನರ ಮೆಚ್ಚುಗೆ ಗಳಿಸಿದೆ.. ಇನ್ನೂ ನಿನ್ನೆ ಹುಟ್ಟುಹಬ್ಬದ ಪ್ರಯುಕ್ತ ಸಾಮಾಜಿಕ ಜಾಲತಾಣದಲ್ಲಿ ಲೈವ್ ಬರುವ ಮೂಲಕ ಅಭಿಮಾನಿಗಳ ಜೊತೆ ಮಾತನಾಡಿರುವ ರಕ್ಷಿತ್ ಶೆಟ್ಟಿ ಅವರು ಅದೇ ಸಮಯದಲ್ಲಿ ರಶ್ಮಿಕಾ ಮಂದಣ್ಣ ಅವರ ಕುರಿತು ಸಹ ಮಾತನಾಡುವ ಸಂದರ್ಭ ಸೃಷ್ಟಿಯಾಗಿ ಹೋಯ್ತು.. ಹೌದು ಚಾರ್ಲಿ ಸಿನಿಮಾ ಬಗ್ಗೆ ಮಾತನಾಡುತ್ತಿದ್ದ ಸಮಯದಲ್ಲಿ ಬಹಳಷ್ಟು ಅಭಿಮಾನಿಗಳು ರಶ್ಮಿಕಾ ಮಂದಣ್ಣ ಅವರ ಕುರಿತು ಕಮೆಂಟ್ ಮಾಡಿದ್ದು ರಕ್ಷಿತ್ ಶೆಟ್ಟಿ ಅವರನ್ನು ಪ್ರಶ್ನಿಸಿದ್ದಾರೆ..

ಅಷ್ಟೇ ಅಲ್ಲದೇ ಕೆಲವರಂತೂ ರಶ್ಮಿಕಾಳನ್ನೇ ಫೇಮಸ್ ಮಾಡುದವರು ನೀವು ಇನ್ನು ಈ ನಾಯಿ ಫೇಮಸ್ ಆಗದೇ ಇರತ್ತಾ ಎಂದು ಕಮೆಂಟ್ ಮಾಡಿದ್ದೂ ಸಹ ಹಳೆಯ ವಿಚಾರಗಳು ರಕ್ಷಿತ್ ಅವರಿಗೆ ಕೊಂಚ ಮುಜುಗರ ಉಂಟು ಮಾಡಿದ್ದೂ ನಿಜ.. ಆದರೆ ಸಂದರ್ಭವನ್ನು ಬಹಳ ಪ್ರಬುದ್ಧವಾಗಿ ಹ್ಯಾಂಡಲ್ ಮಾಡಿದ ರಕ್ಷಿತ್ ಶೆಟ್ಟಿ ಅವರು ನಿಜಕ್ಕೂ ದೊಡ್ಡತನ ತೋರಿದ್ದಾರೆ.. ಹೌದು ರಶ್ಮಿಕಾ ಅವರ ಹೆಸರನ್ನು ಹೇಳದೆಯೇ ಅವರ ಕುರಿತು ಮಾತನಾಡಿದ್ದು ಅಭಿಮಾನಿಗಳಿಗೆ ನೇರವಾಗಿಯೇ ರಶ್ಮಿಕಾ ಕುರಿತ ತಮ್ಮ ಅನಿಸಿಕೆಯನ್ನು ತಿಳಿಸಿದ್ದಾರೆ.. ಹೌದು ಅಭಿಮಾನಿಗಳು ಸಾಕಷ್ಟು ಮಂದಿ ರಶ್ಮಿಕಾ ಅವರ ಬಗ್ಗೆಯೇ ಮಾತನಾಡಿದಾಗ ಪ್ರತಿಕ್ರಿಯೆ ನೀಡಿದ ರಕ್ಷಿತ್ ಅವರು..

“ನೋಡಿ ಇಲ್ಲಿ ಸಾಕಷ್ಟು ಜನ ಹಳೆಯ ವಿಚಾರಗಳ ಬಗ್ಗೆಯೇ ಕಮೆಂಟ್ ಮಾಡ್ತಿದ್ದೀರಾ.. ದಯವಿಟ್ಟು ಆಗೋಗಿರೋದನ್ನ ಯಾರೂ ಸಹ ಬದಲು ಮಾಡೋಕೆ ಸಾಧ್ಯವಿಲ್ಲ.. ಅದನ್ನು ಅಲ್ಲಿಗೆ ಬಿಟ್ಟುಬಿಡಬೇಕು.. ಪಾಸ್ಟ್ ಈಸ್ ಪಾಸ್ಟ್ ಅಷ್ಟೇ.. ಅದನ್ನ ಪದೇ ಪದೇ ನೆನಪು ಮಾಡಿಕೊಳ್ಳಬಾರದು.. ನಮ್ಮ ಬಗ್ಗೆ ನಮಗೆ ಅಸಹ್ಯವಾಗುವಂತೆ ನಾವು ನಡೆದುಕೊಳ್ಳಬಾರದು.. ಅದನ್ನು ಅಲ್ಲಿಗೆ ಬಿಟ್ಟುಬಿಡಿ.. ನೀವೆಲ್ಲಾ ಅರ್ಥ ಮಾಡ್ಕೋತೀರಾ ಅಂದುಕೊಂಡಿದ್ದೀನಿ.. ನಿಮ್ಮಿಂದ ಒಳ್ಳೆಯ ಕಮೆಂಟ್ ಗಳನ್ನು ನಾನು ಇಲ್ಲಿ ನಿರೀಕ್ಷೆ ಮಾಡುತ್ತೇನೆ.. ಇಲ್ಲಿ ಚಾರ್ಲಿ ಸಿನಿಮಾ ಕುರಿತ ಕಮೆಂಟ್ ಗಳನ್ನು ನಿರೀಕ್ಷೆ ಮಾಡ್ತೇನೆ.. ದಯವಿಟ್ಟು ಬೇರೆ ಕಮೆಂಟ್ ಗಳನ್ನು ಮಾಡಬೇಡಿ.. ಮುಗಿದು ಹೋದದನ್ನು ಮುಗಿಸಿಬಿಡಿ..

ನಮ್ಮ ಬಗ್ಗೆ ನಮಗೆ ಹೆಮ್ಮೆಯಾಗುವಂತೆ ನಡೆದುಕೊಳ್ಳಬೇಕು ಎಂದು ಬಹಳ ಪ್ರಬುದ್ಧವಾಗಿ ನಡೆದುಕೊಳ್ಳುವ ಮೂಲಕ ರಶ್ಮಿಕಾ ಅವರನ್ನು ಬೈದು ಕಮೆಂಟ್ ಮಾಡುತ್ತಿದ್ದವರಿಗೆ ವಿನಮ್ರವಾಗಿಯೇ ಆ ರೀತಿ ಮಾಡಬೇಡಿ ಎನ್ನುವ ಮನವಿ ಸಹ ಮಾಡಿದ್ದು ನಿಜಕ್ಕೂ ಒಮ್ಮೆ ಪ್ರೀತಿಸಿದ ಜೀವ ಪ್ರೀತಿ ಹೋದರು ಆ ಜೀವದ ಗೌರವವನ್ನು ಎಂದೂ ಸಹ ಕಡಿಮೆಯಾಗದಂತೆ ನೋಡಿಕೊಳ್ಳುತ್ತದೆ ಎಂಬುದಕ್ಕೆ ರಕ್ಷಿತ್ ಅವರೇ ನೈಜ್ಯ ಉದಾಹರಣೆ.. ಇನ್ನು ರಕ್ಷಿತ್ ಅವರ ಮಾತನ್ನು ಕೇಳಿದ ಕೆಲ ಅಭಿಮಾನಿಗಳು ಭಾವುಕರಾಗಿದ್ದು ನಿಮ್ಮ ಮುಂದಿನ ಜೀವನ ಚೆನ್ನಾಗಿರಲಿ ಸರ್ ಎಂದು ಶುಭ ಹಾರೈಸಿದ್ದಾರೆ..