ಹೊಟ್ಟೆ ಬಟ್ಟೆ ಕಟ್ಟಿ ಕೂಲಿ ಮಾಡಿ ಮಗಳನ್ನು ಸಾಕಿದ್ದ ತಾಯಿ.. ಆದರೆ ಇಂದು ದಾವಣಗೆರೆಯಲ್ಲಿ ಮಗಳನ್ನು ನೋಡಿ ಬೆಚ್ಚಿಬಿದ್ದರು.. ನಿಜಕ್ಕೂ ಮನಕಲಕುತ್ತದೆ..

0 views

ಜೀವನದಲ್ಲಿ ಕನಸುಗಳು ಒಬ್ಬ ವ್ಯಕ್ತಿಯನ್ನು ಇನ್ನಷ್ಟು ದಿನ ಬದುಕುವಂತೆ ಮಾಡುತ್ತದೆ.. ಆದರೆ ಅದೇ ಕನಸುಗಳನ್ನು ನಾವು ಸಾಕಾರಗೊಳಿಸಿಕೊಳ್ಳಲು ಸಾಧ್ಯವಾಗಲಿಲ್ಲ ಎಂದಾದರೆ ಅದೇ ಕನಸುಗಳು ನಮ್ಮ ಜೀವನವನ್ನೇ ಇಲ್ಲವಾಗಿಸಿಬಿಡುತ್ತವೆ.. ಆದರೆ ಅದೆಂತಹ ಪರಿಸ್ಥಿತಿ ಬಂದರೂ ಸಹ ನಮ್ಮ ಗುರಿ ಕನಸುಗಳನ್ನು ಸಾಕಾರಗೊಳಿಸಿಕೊಳ್ಳಲು ದಾರಿ ಹುಡುಕಬೇಕೆಯೇ ಹೊರತು ಜೀವನವನ್ನೇ ಅಂತ್ಯ ಮಾಡಿಕೊಳ್ಳಬಾರದು.. ಆದರೆ ಇದೆಲ್ಲದಕ್ಕೂ ಮೀರಿ ದಾವಣಗೆರೆಯಲ್ಲಿ ಮನಕಲಕುವ ಘಟನೆಯೊಂದು ನಡೆದಿದ್ದು ಈ ಹೆಣ್ಣು ಮಗಳ ತಾಯಿ ಮಗಳನ್ನು ಕಂಡು ಬೆಚ್ಚಿಬಿದ್ದಿದ್ದಾರೆ.. ಹೌದು ಈಕೆಯ ಹೆಸರು ರಕ್ಷಿತಾ.ಮ್ ವಯಸ್ಸು ಕೇವಲ ಹದಿನೆಂಟು.. ಮೊನ್ನೆಮೊನ್ನೆಯಷ್ಟೇ ಪಿಯುಸಿ ಉತ್ತೀರ್ಣಳಾಗಿದ್ದಳು.. ದಾವಣಗೆರೆ ಜಿಲ್ಲೆಯ ಜಗಳೂರು ತಾಲೂಕಿನ ಉಜ್ಜಪ್ಪ ವಡೇರಹಳ್ಳಿಯ ನಿವಾಸಿ.. ಈಕೆಯ ತಂದೆಯ ಹೆಸರು ನಾಗರಾಜಪ್ಪ.. ತಾಯಿಯ ಹೆಸರು ಚಂದ್ರಮ್ಮ.. ಬಡ ಕುಟುಂಬವಾದರೂ ನೆಮ್ಮದಿಗೇನು ಕಡಿಮೆಯಿರಲಿಲ್ಲ.. ಹೇಗೋ ಜೀವನ ನಡೆಯುತಿತ್ತು.. ಆದರೆ ಕಳೆದ ಮೂರು ವರ್ಷದ ಹಿಂದೆ ರಕ್ಷಿತಾಳ ತಂದೆ ನಾಗರಾಜಪ್ಪ ಧರ್ಮಸ್ಥಳಕ್ಕೆ ಕೂಲಿ ಕೆಲಸಕ್ಕೆ ಹೋಗಿದ್ದರು.. ಆ ಸಮಯದಲ್ಲಿ ವಿದ್ಯುತ್ ತಗುಲಿ ಜೀವ ಕಳೆದುಕೊಂಡಿದ್ದರು..

ಆಗಿನಿಂದ ಚಂದ್ರಮ್ಮರೇ ಸಂಸಾರದ ನೊಗ ಹೊತ್ತಿದ್ದರು.. ಮಗಳನ್ನು ಪಿಯುಸಿ ವರೆಗೂ ಓದಿಸಿದರು.. ಚಂದ್ರಮ್ಮ ಕೂಲಿ‌ ಕೆಲಸ ಮಾಡಿಕೊಂಡು ಮನೆ ಜವಾಬ್ದಾರಿ ನಿಭಾಯಿಸಿಕೊಂಡು ಮಗಳನ್ನೂ ಸಹ ಓದಿಸಿಕೊಂಡು ಬಂದರು.. ಇತ್ತ ದಾವಣಗೆರೆಯ ಸೀತಮ್ಮ ಪಿಯು ಕಾಲೇಜಿನಲ್ಲಿ ರಕ್ಷಿತಾ ಪಿಯುಸಿ ವ್ಯಾಸಂಗವನ್ನೂ ಮುಗಿಸಿದಳು.. ಆದರೆ ಮುಂದೆ ನಡೆದ ಘಟನೆ ನಿಜಕ್ಕೂ ಮನಕಲಕುತ್ತದೆ.. ಹೌದು ಪಿಯುಸಿ ಮುಗಿದ ಬಳಿಕ ಆಕೆಗೆ ಓದುವ ಆಸೆ.. ಜೀವನದಲ್ಲಿ ಏನಾದರು ಸಾಧನೆ ಮಾಡಬೇಕೆನ್ನುವ ಆಸೆ.. ಆದರೆ ಬಡತನ ಇಂದು ಆಕೆಯನ್ನು ಬೇರೆಯದ್ದೇ ಸ್ಥಿತಿಯಲ್ಲಿ ತಾಯಿ ನೋಡುವಂತೆ ಮಾಡಿಬಿಟ್ಟಿದೆ.. ಹೌದು ಮುಂದೆ ಓದಬೇಕು ಎಂದು ರಕ್ಷಿತಾ ಆಸೆ ಪಟ್ಟಳು.. ಆದರೆ ಇತ್ತ ಚಂದ್ರಮ್ಮ ನವರಿಗೆ ಲಾಕ್ ಡೌನ್ ಕಾರಣದಿಂದಾಗಿ ಕೂಲಿ‌ಕೆಲಸ ಸಿಗದಂತಾಗಿದೆ.. ತಿನ್ನುವ ತುತ್ತು ಅನ್ನಕ್ಕೂ ಕಷ್ಟ ಪಡುವಂತಾಗಿದೆ.. ಮನೆಯಲ್ಲಿ ಬಡತನ ಇದೆ ಮುಂದೆ ಓದಿಸುವುದು ಕಷ್ಟ ಎಂದು ಮಗಳ ಬಳಿ ತಾಯಿ‌ ನೊಂದುಕೊಂಡೇ ಹೇಳಿಕೊಂಡಿದ್ದಾರೆ..

ಆದರೆ ತಾಯಿಯ ಕಷ್ಟವನ್ನು ಸರಿಯಾದ ರೀತಿತಲ್ಲಿ ಮಗಳು ಅರ್ಥ ಮಾಡಿಕೊಂಡು ತಾನು ಓದಲು ಬೇರೆ ದಾರಿಗಳನ್ನು ಹುಡುಕಬಹುದಿತ್ತು.. ಆದರೆ ದುಡುಕಿ ರಕ್ಷಿತಾ ಬೇರೆ ನಿರ್ಧಾರ ತೆಗೆದುಕೊಂಡು ಬಿಟ್ಟಳು.. ಹೌದು ತನ್ನ ಗ್ರಾಮವಾದ ಉಜ್ಜಪ್ಪ ವಡೇರಹಳ್ಳಿಯಲ್ಲಿಯೇ ಓದಿ ಹತ್ತನೇ ತರಗತಿಯಲ್ಲಿ ಗ್ರಾಮಕ್ಕೆ ಅತಿ ಹೆಚ್ಚು ಅಂಕ ಪಡೆದು ನಂತರ ದಾವಣಗೆರೆಯ ವಿದ್ಯಾರ್ಥಿನಿ ನಿಲಯದಲ್ಲಿ ಇದ್ದುಕೊಂಡು ಸೀತಮ್ಮ ಕಾಲೇಜಿನಲ್ಲಿ ಕಲಾ ವಿಭಾಗದಲ್ಲಿ ಪಿಯುಸಿ ಮುಗಿಸಿ ಒಳ್ಳೆಯ ಅಂಕ ಪಡೆದುಕೊಂಡಳು.. ಮುಂದೆ ಬಿ ಎ ಓದಬೇಕೆಂಬ ಆಸೆ ಇದ್ದ ರಕ್ಷಿತಾ ಈ ವಿಚಾರವನ್ನು ತಾಯಿಗೆ ಹೇಳಿದ್ದಾಳೆ.. ಆದರೆ ತಾಯಿ ತನ್ನ ಕಷ್ಟವನ್ನು ಹೇಳಿಕೊಂಡು ಓದಿಸಲು ಆರ್ಥಿಕ ಸಂಕಷ್ಟು ಇನ್ನು ಮುಂದೆ ಮನೆಯಲ್ಲಿಯೇ ಇರುವಂತೆ ತಿಳಿಸಿದ್ದಾರೆ.. ಆದರೆ ತಾಯಿಯ ಈ ಮಾತಿನಿಂದ ಮನನೊಂದ ರಕ್ಷಿತಾ ತನ್ನ ಓದುವ ಕನಸು ನಮಸಾಗುವುದಿಲ್ಲ ವೆಂದು ನಿರ್ಧರಿಸಿ ಜೀವವನ್ನೇ ಕಳೆದುಕೊಳ್ಳುವ ನಿರ್ಧಾರ ಮಾಡಿಬಿಟ್ಟಳು..

ಹೌದು ಮನೆಯಲ್ಲಿಯೇ ಯಾರೂ ಇಲ್ಲದ ಸಮಯದಲ್ಲಿ ರಕ್ಷಿತಾ ಜೀವ ಕಳೆದುಕೊಂಡಿದ್ದು ಮನೆಗೆ ಬಂದ ತಾಯಿ ಅಕ್ಷರಶಃ ಮಗಳ ಸ್ಥಿತಿಯನ್ನು ನೋಡಿ ಕುಸಿದು ಬಿದ್ದಿದ್ದಾರೆ.. ಏನಾಗಿ ಹೋಯ್ತು ಎಂದು ಅರ್ಥ ಮಾಡಿಕೊಳ್ಳಲು ಸಹ ಆ ತಾಯಿಗೆ ನಡೆದ ಘಟನೆಯನ್ನು ಅರಗಿಸಿಕೊಳ್ಳಲು ಸಾಧ್ಯವಾಗಲಿಲ್ಲ.. ಗಂಡ ಹೋದ ಮೇಲೆ ಹೊಟ್ಟೆ ಬಟ್ಟೆ ಕಟ್ಟಿ ಮಗಳನ್ನು ಸಾಕಿ ಓದಿಸಿದ್ದರು.. ಆದರೆ ಮಗಳು ದುಡುಕಿ ಈ ನಿರ್ಧಾರ ಮಾಡಿಕೊಂಡದ್ದು ನೋಡಿ ತಾಯಿ ಬೆಚ್ಚಿಬಿದಿದ್ದಾರೆ. ಆ ತಾಯಿಯ ಸಂಕಟ ನೋವು ಆಕ್ರಂದನ ನಿಜಕ್ಕೂ ಯಾವ ಶತ್ರುವಿಗೂ ಬೇಡವೆನ್ನುವಂತಿತ್ತು.. ದಯವಿಟ್ಟು ಕನಸುಗಳು ಈಡೇರಲಿಲ್ಲವೆಂದು ಯಾರೂ ಸಹ ದುಡುಕಿ ಇಂತಹ ನಿರ್ಧಾರಗಳನ್ನು ತೆಗೆದುಕೊಳ್ಳಬೇಡಿ.. ಜೀವನದಲ್ಲಿ ಕನಸುಗಳನ್ನು ಗಂಟು ಮೂಟೆ ಕಟ್ಟಿ ಎಸೆದು ಕುಟುಂಬಕ್ಕಾಗಿ ಕೆಲಸಕ್ಕೆ ಸೇರಿಕೊಂಡು ತಾವು ಬದುಕುತ್ತಾ ತಮ್ಮ ಕುಟುಂಬವನ್ನೂ ಬದುಕಿಸುತ್ತಾ ಲಕ್ಷಾಂತರ ಮಧ್ಯಮ ವರ್ಗದ ಯುವಕರು ಯುವತಿಯರು ಈಗಲೂ ಸಹ ಜೀವನ ಸಾಗಿಸುತ್ತಿದ್ದಾರೆ..

ಓದಲೇ ಬೇಕೆಂಬ ಕನಸಿದ್ದರೆ ಅದಕ್ಕೆ ನಿಜಕ್ಕೂ ನೂರಾರು ದಾರಿಗಳಿವೆ.. ಸರ್ಕಾರಿ ಕಾಲೇಜುಗಳಿಗೆ ಸೇರಿಕೊಳ್ಳಿ ಕನಿಷ್ಟ ಶುಲ್ಕವನ್ನು ಯಾರ ಬಳಿಯಾದರೂ ಸಹಾಯ ಪಡೆದು ಕಟ್ಟಿಬಿಡಿ.. ಜೀವ ಕಳೆದುಕೊಳ್ಳುವುದಕ್ಕಿಂದ ಇನ್ನೊಬ್ಬರ ಸಹಾಯ ಪಡೆದು ಓದುವುದು ಯಾವುದೇ ಅವಮಾನ ತರುವುದಿಲ್ಲ.. ಆದರೆ ಅದೆಲ್ಲವನ್ನು ಬಿಟ್ಟು ನಿಮ್ಮನ್ನೇ ನಂಬಿಕೊಂಡು ನಿಮ್ಮ ಸಂತೋಷವೇ ತಮ್ಮ ಜೀವನ ಎಂದುಕೊಂಡು ಬದುಕುತ್ತಿರುವ ಜೀವಗಳನ್ನು ಬಿಟ್ಟು ಹೋಗುವ ನಿರ್ಧಾರ ಮಾಡಬೇಡಿ.. ಈಗ ಆ ತಾಯಿ ಮಾಡಿದ ತಪ್ಪಾದರೂ ಏನು.. ಅತ್ತ ಗಂಡನೂ ಇಲ್ಲ.. ಈಗ ಮಗಳೂ ಇಲ್ಲ.. ಇನ್ನು ಜೀವನ ಪೂರ್ತಿ ಕೊರಗುತ್ತಲೇ ಬದುಕಬೇಕಾದ ಪರಿಸ್ಥಿತಿ ಆ ತಾಯಿಯದ್ದು.. ಯಾರಿಗೂ ಇಂತಹ ಪರಿಸ್ಥಿತಿ ಬಾರದಿರಲಿ.. ಆ ತಾಯಿಗೆ ನೋವು ತಡೆಯುವ ಶಕ್ತಿಯನ್ನು ಆ ದೇವರು ನೀಡಲಿ.. ಇನ್ನು ಯಾರೇ ಆಗಲಿ ದಯವಿಟ್ಟು ನಿಮ್ಮಗಳ ಅಕ್ಕ ಪಕ್ಕ ಯಾರಾದರೂ ಈ ರೀತಿ ಓದುವ ಸಲುವಾಗಿ ಕಷ್ಟ ಪಡುತ್ತಿದ್ದರೆ ನಿಮ್ಮ ಕೈಲಾದರೆ ನೀವು ಉಳ್ಳವರಾಗಿದ್ದರೆ ದಯವಿಟ್ಟು ಅವರಿಗೆ ಒಂದಿಷ್ಟು ಸಹಾಯ ಮಾಡಿಬಿಡಿ.. ಅಥವಾ ಸರಳವಾದ ಮಾರ್ಗಗಳನ್ನು ತೋರಿ ದಾರಿ ತೋರಿಸಿ.. ಭಗವಂತ ನಿಜಕ್ಕೂ ಮುಂದೊಂದು ದಿನ ಬೇರೆಯದ್ದೇ ರೂಪದಲ್ಲಿ ನಿಮಗೆ ನೆರವಾಗುವನು..