ರಾಮಾಚಾರಿ ಧಾರಾವಾಹಿಯಿಂದ ಹೊರ ನಡೆದ ನಟಿ.. ಕಾರಣವೇನು ಗೊತ್ತಾ..

0 views

ಕನ್ನಡ ಕಿರುತೆರೆಯ ಖ್ಯಾತ ಧಾರಾವಾಹಿಗಳಲ್ಲಿ ಒಂದಾಗಿರುವ ರಾಮಾಚಾರಿ ಧಾರಾವಾಹಿ ಸಾಕಷ್ಟು ವಿಚಾರಗಳಿಗೆ ಸದ್ದು ಮಾಡಿದ್ದುಂಟು.. ಪ್ರಸಾರಕ್ಕೂ ಮುನ್ನವೇ ಸಾಕಷ್ಟು ಪ್ರಚಾರ ಪಡೆದು ನಿರೀಕ್ಷೆ ಹುಟ್ಟು ಹಾಕಿದ್ದ ಧಾರಾವಾಹಿ ಶುರುವಿನಲ್ಲಿಯೇ ನಿರೀಕ್ಷೆಗೂ ಮೀರಿ ರೇಟಿಂಗ್ ಪಡೆದು ಕಲರ್ಸ್ ಕನ್ನಡದ ನಂಬರ್ ಒನ್ ಧಾರಾವಾಹಿಯಾದರೆ ಅತ್ತ ಟಿ ಆರ್ ಪಿ ಲೆಕ್ಕಾಚಾರದಂತೆ ಕನ್ನಡ ಕಿರುತೆರೆಯ ಟಾಪ್ ಐದನೇ ಧಾರಾವಾಹಿಯಾಗಿ ಹೊರ ಬಂದಿತ್ತು.. ಶುರುವಿನಿಂದಲೂ ಸಾಕಷ್ಟು ವಿಶೇಷತೆಗಳಿಂದ ಕೂಡಿದ್ದ ಧಾರಾವಾಹಿಯನ್ನು ಜನರು ಒಪ್ಪಿಕೊಂಡಿದ್ದು ಈಗಲೂ ಸಹ ಟಾಪ್ ಆರನೇ ಸ್ಥಾನದಲ್ಲಿ ಮುಂದುವರೆಯುತ್ತಿದೆ.. ಇನ್ನು ರಾಮಾಚಾರಿ ಧಾರಾವಾಹಿಯ ಯಶಸ್ಸಿಗೆ ಪ್ರಮುಖ ಕಾರಣ ಒಳ್ಳೆಯ ಕತೆ.. ಅದ್ಧೂರಿ ನಿರ್ಮಾಣ.. ಹಾಗೂ ದೊಡ್ಡ ತಾರಾಬಳಗವೇ ಎನ್ನಬಹುದು..

ಆದರೆ ಇದೀಗ ಆ ದೊಡ್ಡ ತಾರಾಬಳಗದಿಂದ ನಟಿ ಹೊರಬಂದಿದ್ದಾರೆ.. ಹೌದು ರಾಮಾಚಾರಿ ಧಾರಾವಾಹಿ ಸಾಮಾನ್ಯಕ್ಕಿಂತ ಕೊಂಚ ವಿಭಿನ್ನ ಕತೆ ಹೊತ್ತು ತೆರೆ ಮೇಲೆ ಬಂದ ಧಾರಾವಾಹಿಯಾಗಿದೆ.. ಸರಿಯಾದದ್ದನ್ನು ಮಾತ್ರವೇ ಮಾಡುವ ರಾಮಾಚಾರಿ ಒಂದೆಡೆಯಾದರೆ.. ಮಾಡಿದ್ದೆಲ್ಲಾ ಸರಿ ಎನ್ನುವ ಚಾರು ಮತ್ತೊಂದು ಕಡೆ.. ಇನ್ನು ಇತ್ತ ಚಾರು ವನ್ನು ಸಮರ್ಥಿಸಿಕೊಳ್ಳಲು ಆಕೆಯ ತಾಯಿ ಮಾನ್ಯತ.. ಇತ್ತ ರಾಮಾಚಾರಿಗೆ ಸಂಪೂರ್ಣ ಕುಟುಂಬವೇ ಬೆಂಬಲ.. ಹೀಗೆ ಇಬ್ಬರ ನಡುವೆ ನಡೆಯುವ ಘಟನೆಗಳು ಕತೆಯಾಗಿ ಆ ಕತೆಯ ನಿರೂಪಣೆ ಸೊಗಸಾಗಿ ಬಂದ ಕಾರಣ ಧಾರಾವಾಹಿ ಯಶಸ್ವಿಯಾಗಿ ಮುಂದೆ ಸಾಗುತ್ತಿದೆ ಎನ್ನಬಹುದು.. ಇನ್ನೂ ಸ್ಯಾಂಡಲ್ವುಡ್ ನಿಂದ ಕನ್ನಡ ಕಿರುತೆರೆಗೆ ಕಲಾವಿದರ ಆಗಮನ ಹೊಸ ವಿಚಾರವೇನೂ ಅಲ್ಲ..

ಅದಾಗಲೇ ನಟ ಅನಿರುದ್ಧ್ ಉಮಾಶ್ರೀ ಅವರು.. ಅಭಿಜಿತ್ ಅವರು.. ಹಿರಿಯ ನಟ ಶಿವರಾಂ ಅವರು.. ಹೇಮಾ ಚೌಧರಿ ಅವರು.. ಭಾರತಿ ವಿಷ್ಣುವರ್ಧನ್ ಅವರು ಶ್ರೀನಿವಾಸ ಮೂರ್ತಿ ಅವರು ಹೀಗೆ ಇನ್ನು ಸಾಕಷ್ಟು ಕಲಾವಿದರು ಕಿರುತೆರೆಗೆ ಕಾಲಿಟ್ಟು ತಮ್ಮ ಮುಂದಿನ ಜೀವನವನ್ನೂ ಸಹ ಕಲಾವಿದರಾಗಿಯೇ ಕಳೆಯುವ ನಿರ್ಧಾರ ಮಾಡಿದ್ದರು.. ಹಾಗೆಯೇ ಆ ನಿರ್ಧಾರದಲ್ಲಿ ಯಶಸ್ಸನ್ನು ಕಂಡಿದ್ದರು.. ಇನ್ನು ಇತ್ತ ಅದೇ ರೀತಿ ರಾಮಾಚಾರಿ ಧಾರಾವಾಹಿಯಲ್ಲಿಯೂ ಸಹ ದೊಡ್ಡ ತಾರಾಬಳಗವೇ ಇದ್ದು ನಟ ನಿರ್ಮಾಪಕ ಗುರುದತ್.. ನಟಿ ಭಾವನಾ.. ಹಿರಿಯ ನಟರಾದ ಶಂಕರ್ ಅಶ್ವತ್ಥ್ ಅವರು ಬಾಲರಾಜ್ ಅವರು ಹೀಗೆ ಇನ್ನು ಸಾಕಷ್ಟು ಮಂದಿ ಹಿರಿಯ ಕನ್ನಡ ಚಿತ್ರರಂಗದ ಕಲಾವಿದರು ರಾಮಾಚಾರಿ ಧಾರಾವಾಹಿಯಲ್ಲಿ ಕಾಣಿಸಿಕೊಂಡು ಧಾರಾವಾಹಿಯ ಯಶಸ್ಸಿಗೆ ಅವರುಗಳು ಸಹ ಕಾರಣರಾಗಿದ್ದರು..

ಆದರೆ ಇದೀಗ ಈ ತಾರಾ ಬಳಗದಿಂದ ಪ್ರಮುಖ ನಟಿಯೊಬ್ಬರು ಹೊರ ಬಂದಿದ್ದಾರೆ.. ಹೌದು ಧಾರಾವಾಹಿಯಲ್ಲಿ ನಾಯಕಿ ಚಾರುವಿನ ತಾಯಿ ಪಾತ್ರ ಮಾಡಿದ್ದ ಹಿರಿಯ ನಟಿ ಭಾವನಾ ಅವರು ಇದೀಗ ಧಾರಾವಾಹಿಯಿಂದ ಹೊರ ನಡೆದಿದ್ದಾರೆ.. ಮಾನ್ಯತಾ ಪಾತ್ರದ ಮೂಲಕ ಜನರ ಮನಗೆದ್ದಿದ್ದ ಆ ಪಾತ್ರಕ್ಕೆ ಜೀವ ತುಂಬಿದ್ದ ಭಾವನಾ ಅವರು ಧಾರಾವಾಹಿಯಿಂದ ಹೊರ ಬಂದಿದ್ದು ಅವರ ಪಾತ್ರಕ್ಕೆ ಮತ್ತೊಬ್ಬ ನಟಿಯ ಆಗಮನವಾಗಿದೆ.. ರಾಮಾಚಾರಿ ಧಾರಾವಾಹಿಯಲ್ಲಿ ಮಾನ್ಯತಾ ಪಾತ್ರಕ್ಕೆ ಬಹಳ ಪ್ರಾಮುಖ್ಯತೆ ಇದ್ದು ಗುರುದತ್ ಅವರಿಗೆ ಜೋಡಿಯಾಗಿ ಕಾಣಿಸಿಕೊಂಡಿದ್ದರು..

ಹಣದ ಸೊಕ್ಕಿನ ಮಹಿಳೆಯಾದರೂ ಸಹ ತನಗೆ ಗಂಡನಿಂದ ಆದ ಅನ್ಯಾಯವನ್ನು ಕ್ಷಮಿಸದ ಪಾತ್ರವಾಗಿದ್ದ ಮಾನ್ಯತಾ ಪಾತ್ರಕ್ಕೆ ಭಾವನಾ ಅವರು ಹೇಳಿ ಮಾಡಿಸಿದಂತಿದ್ದರು.. ಆದರೆ ಇದೀಗ ಭಾವನಾ ಅವರು ಈ ಪಾತ್ರದಿಂದ ಹೊರ ಬಂದಿದ್ದು ರಾಮಾಚಾರಿ ಪ್ರೇಕ್ಷಕರಿಗೆ ಬೇಸರವಾಗಿದ್ದುಂಟು.. ಆದರೆ ಭಾವನಾ ಅವರು ಹೊರ ಬರಲು ಕಾರಣವೇನು ಎನ್ನಿವ ಕುತೂಹಲವೂ ಮೂಡಿದೆ.. ಹೌದು ಭಾವನಾ ಅವರು ಸಧ್ಯ ಚಿತ್ರರಂಗಕ್ಕೆ ಮರಳಿದ್ದು ಕೆಲ ಸಿನಿಮಾಗಳಲ್ಲಿಯೂ ಅಭಿನಯಿಸುತ್ತಿದ್ದಾರೆ ಎನ್ನಲಾಗಿದೆ.. ಅದರ ಜೊತೆಗೆ ತಮ್ಮ ವ್ಯಯಕ್ತಿಕ ಕೆಲಸಗಳಲ್ಲಿಯೂ ಬ್ಯುಸಿ ಆಗಿರುವ ಕಾರಣ ಧಾರಾವಾಹಿಯ ಚಿತ್ರೀಕರಣಕ್ಕೆ ಸಮಯ ನೀಡಲಾಗುತ್ತಿಲ್ಲ..

ಅದೇ ಕಾರಣಕ್ಕೆ ಕಳೆದ ಕೆಲ ತಿಂಗಳಿಂದ ಆಗಾಗ ಮಾತ್ರ ಧಾರಾವಾಹಿಯಲ್ಲಿ ಕಾಣಿಸಿಕೊಳ್ಳುತ್ತಿದ್ದರು.. ಸುಮ್ಮನೆ ತಮ್ಮಿಂದ ಧಾರಾವಾಹಿ ತಂಡಕ್ಕೆ ತೊಂದರೆ ಆಗೋದು ಬೇಡವೆಂದು ಧಾರಾವಾಹಿಯಿಂದ ಸಂಪೂರ್ಣವಾಗಿ ಹೊರ ಬಂದಿದ್ದಾರೆ.. ಅವರ ಪಾತ್ರಕ್ಕೆ ಇದೀಗ ಹೊಸ ನಟಿಯ ಆಗಮನವಾಗಿದ್ದು ಧಾರಾವಾಹಿಯಿಯ ಪ್ರೇಕ್ಷಕರಿಗೆ ಅವರನ್ನು ಒಪ್ಪಿಕೊಳ್ಳಲು ಸ್ವಲ್ಪ ಕಾಲಾವಕಾಶ ಬೇಕೆನ್ನಬಹುದು‌.. ಇನ್ನು ಯಶಸ್ವಿಯಾಗಿ ಸಾಗುವ ಧಾರಾವಾಹಿಯಲ್ಲಿ ಈ ರೀತಿ ಪಾತ್ರದ ಬದಲಾವಣೆಗಳಾದರೆ ಆ ಧಾರಾವಾಹಿಯ ರೇಟಿಂಗ್ ಮೇಲೂ ಪರಿಣಾಮ ಬೀರುವುದು ಸಹಜವಾಗಿದ್ದು ರಾಮಾಚಾರಿಯ ಹೊಸ ಕಲಾವಿದೆಯನ್ನು ಜನರು ಒಪ್ಪಿಕೊಂಡು ಅದೇ ಯಶಸ್ಸಿನಲ್ಲಿ ಮುಂದೆ ಸಾಗಲಿ ಎನ್ನುವುದು ಪ್ರೇಕ್ಷಕರ ಅಭಿಒರಾಯವಾಗಿದ್ದು ಕಾದು ನೋಡಬೇಕಿದೆ..