ಹೊರಬಿತ್ತು ರಾಮಾಚಾರಿ ಧಾರಾವಾಹಿ.. ಕಾರಣವೇನು ಗೊತ್ತಾ..

0 views

ಕನ್ನಡ ಕಿರುತೆರೆಯಲ್ಲಿ ಕಳೆದ ಮೂರು ವಾರದ ಹಿಂದಷ್ಟೇ ಶುರುವಾದ ಖ್ಯಾತ ಧಾರಾವಾಹಿ ರಾಮಾಚಾರಿ ಇದೀಗ ಹೊರಬಿದ್ದಿದೆ.. ಹೌದು ಕನ್ನಡ ಕಿರುತೆರೆಯಲ್ಲಿ ಕೆಲವೊಂದು ಧಾರಾವಾಹಿಗಳು ಶುರುವಾಗುವ ಮುನ್ನವೇ ಸಾಕಷ್ಟು ನಿರೀಕ್ಷೆಗಳನ್ನು ಹುಟ್ಟುಹಾಕುತ್ತದೆ.. ಅಂತಹ ಧಾರಾವಾಹಿಗಳಲ್ಲಿ ಒಂದು ರಾಮಾಚಾರಿ.. ಹೌದು ಕಲರ್ಸ್ ಕನ್ನಡ ವಾಹಿನಿಯಲ್ಲಿ ಕಳೆದ ಮೂರು ವಾರದ ಹಿಂದೆ ಪ್ರಸಾರವನ್ನು ಶುರು ಮಾಡಿದ ರಾಮಾಚಾರಿ ಧಾರಾವಾಹಿ ಶುರುವಿನಲ್ಲಿಯೇ ದೊಡ್ಡ ಮಟ್ಟದ ಯಶಸ್ಸನ್ನು ಪಡೆದಿತ್ತು.. ಕಲರ್ಸ್ ಕನ್ನಡ ವಾಹಿನಿಯ ಧಾರಾವಾಹಿಗಳು ಮತ್ತೆ ಟಾಪ್ ಧಾರಾವಾಹಿಗಳ ಪಟ್ಟಿಯಲ್ಲಿ ಕಾಣಿಸಿಕೊಳ್ಳಲು ಶುರುವಾಗಿದ್ದು ಮತ್ತೆ ಕಲರ್ಸ್ ವಾಹಿನಿ ನಂಬರ್ ಒನ್ ವಾಹಿನಿಯಾಗುವ ನಿರೀಕ್ಷೆಯನ್ನು ಹುಟ್ಟುಹಾಕಿತ್ತು.. ಆದರೆ ಇದೀಗ ಆಗಿದ್ದೇ ಬೇರೆ..

ಹೌದು ರಾಮಾಚಾರಿ ಧಾರಾವಾಹಿಗೆ ಕಳೆದ ಆರು ತಿಂಗಳುಗಳಿಂದ ಸತತ ಪೂರ್ವ ತಯಾರಿಗಳನ್ನು ಮಾಡಿಕೊಂಡು ಸಾಕಷ್ಟು ಪ್ರಚಾರವನ್ನೂ ಸಹ ಮಾಡಿ ಮೂರು ವಾರದ ಹಿಂದೆ ಭರ್ಜರಿಯಾಗಿ ಆರಂಭ ಮಾಡಲಾಗಿತ್ತು.. ಇದಕ್ಕೆ ಕಾರಣವೂ ಇತ್ತು.. ಕೆಲ ವರ್ಷಗಳ ಹಿಂದೆ ನಂಬರ್ ಒನ್ ಆಗಿದ್ದ ಕಲರ್ಸ್ ಕನ್ನಡ ವಾಹಿನಿ ಇದೀಗ ಎರಡನೇ ಸ್ಥಾನದಲ್ಲಿದ್ದು ಜೀ ಕನ್ನಡ ವಾಹಿನಿ ಮೊದಲ ಸ್ಥಾನದಲ್ಲಿ ಮುಂದುವರೆಯುತ್ತಿದ್ದು ಟಿ ಆರ್ ಪಿ ಪಟ್ಟಿಯಲ್ಲಿ ಜೀ ವಾಹಿನಿಯ ಧಾರಾವಾಹಿಗಳೇ ಅಗ್ರಸ್ಥಾನದಲ್ಲಿ ಕಾಣಿಸಿಕೊಳ್ಳುತ್ತಿದೆ.. ಆದರೆ ಇತ್ತ ಮರಳಿ ತನ್ನ ಸ್ಥಾನಕ್ಕೆ ಬರುವ ಪ್ರಯತ್ನದಲ್ಲಿರುವ ಕಲರ್ಸ್ ವಾಹಿನಿ ಸಾಕಷ್ಟು ಒಳ್ಳೆಯ ಕತೆಯುಳ್ಳ ಧಾರಾವಾಹಿಗಳನ್ನು ತಂದರೂ ಸಹ ಡಿಜಿಟಲ್ ಮಾದ್ಯಮದ ಮೂಲಕ ನೋಡುವ ಪ್ರೇಕ್ಷಕರ ಸಂಖ್ಯೆ ಹೆಚ್ಚಾಗಿದ್ದು ಟಿವಿಯಲ್ಲಿ ನೋಡುವವರ ಸಂಖ್ಯೆ ಕಡಿಮೆಯಾಗಿದ್ದು ಟಿ ಆರ್ ಪಿ ವಿಚಾರದಲ್ಲಿ ಕೊಂಚ ಕಡಿಮೆಯೇ ಇದೆ..

ಇನ್ನೂ ಮರಳಿ ತನ್ನ ಸ್ಥಾನಕ್ಕೆ ಬರುವ ನಿಟ್ಟಿನಲ್ಲಿ ಹೊಸ ಹೊಸ ಶೋಗಳು ಹೊಸ ಹೊಸ ಧಾರಾವಾಹಿಗಳನ್ನು ಶುರು ಮಾಡಿದ್ದು ಡ್ಯಾನ್ಸಿಂಗ್ ಚಾಂಪಿಯನ್ ಶೋ ಅತ್ತ ಜೀ ವಾಹಿನಿಯ ಗೋಲ್ಡನ್ ಗ್ಯಾಂಗ್ ಶೋಗಿಂತ ಹೆಚ್ಚು ರೇಟಿಂಗ್ ಪಡೆಯುತ್ತಿದ್ದು ಭರವಸೆ ಮೂಡಿಸಿದೆ.. ಇನ್ನು ಇತ್ತ ಧಾರಾವಾಹಿಗಳ ಮೂಲಕವೂ ಕಂಬ್ಯಾಕ್ ಮಾಡಬೇಕೆಂದು ರಾಮಾಚಾರಿ ಧಾರಾವಾಹಿಯನ್ನು ಆರಂಭಿಸಲಾಗಿದ್ದು ಅಂದುಕೊಂಡಂತೆ ಮೊದಲ ವಾರವೇ 6.5 ರೇಟಿಂಗ್ ಪಡೆದು ಆರನೇ ಸ್ಥಾನಕ್ಕೆ ಬಂದಿತ್ತು.. ಅದ್ಧೂರಿ ನಿರ್ಮಾಣ.. ಗಟ್ಟಿಯಾದ ಕತೆ.. ಒಳ್ಳೆಯ ಕಲಾವಿದರ ಆಯ್ಕೆ ಹೀಗೆ ಸಾಕಷ್ಟು ಸಕಾರಾತ್ಮಕ ಸಂಗತಿಯುಳ್ಳ ರಾಮಾಚಾರಿ ಎರಡನೇ ವಾರವೂ ಸಹ ಒಳ್ಳೆಯ ರೇಟಿಂಗ್ ಪಡೆದು ಕನ್ನಡ ಕಿರುತೆರೆಯ ಟಾಪ್ ಐದನೇ ಧಾರಾವಾಹಿಯಾಗಿ ಹೊರ ಬಂದಿತ್ತು..

ಇನ್ನು ಇದೇ ರೀತಿ ರಾಮಾಚಾರಿ ಧಾರಾವಾಹಿಯ ಯಶಸ್ಸು ಮುಂದುವರೆದು ರೇಟಿಂಹ್ ಹೆಚ್ಚಾಗು ಟಾಪ್ ಒಂದು ಅಥವಾ ಎರಡನೇ ಧಾರಾವಾಹಿಯಾಗಬಹುದು ಎಂದುಕೊಳ್ಳಲಾಗಿತ್ತು.. ಆದರೆ ಇದೀಗ ಈ ವಾರದ ರೇಟಿಂಗ್ ಹೊರ ಬಂದಿದ್ದು ರಾಮಾಚಾರಿ ಧಾರಾವಾಹಿ ಟಾಪ್ ಐದು ಧಾರಾವಾಹಿಗಳ ಪಟ್ಟಿಯಿ‌ಂದಲೇ ಹೊರಬಿದ್ದಿದೆ.. ಹೌದು ರಾಮಾಚಾರಿ ಧಾರಾವಾಹಿ ಟಾಪ್ ಐದು ಧಾರಾವಾಹಿಗಳಲ್ಲಿ ಒಂದಾಗದೇ ತನ್ನ ಸ್ಥಾನದಿಂದ ಕುಸಿತ ಕಂಡಿದೆ.. ಇತ್ತ ರಾಮಾಚಾರಿಯ ಸಕ್ಸಸ್ ಕಂಡ ಜೀ ಕನ್ನಡ ವಾಹಿನಿ ತಂಡ ತಮ್ಮ ಧಾರಾವಾಹಿಗಳ ಕತೆಗಳಲ್ಲಿ ಬದಲಾವಣೆ ತಂದಿದ್ದು ಸತ್ಯ ಧಾರಾವಾಹಿಯ ಕತೆಯಲ್ಲಿ ಕೆಲ ರೋಚಕ ಸಂಗತಿಗಳನ್ನು ಸೇರಿಸಲಾಗಿದ್ದು ವಿಜೃಂಭಣೆಯ ಮದುವೆಯ ಸಂಚಿಕೆಗಳು ಶುರುವಾಗುತ್ತಿದೆ..

ಜೊತೆಗೆ ಬೇರೆ ಧಾರಾವಾಹಿಗಳಲ್ಲಿಯೂ ಸಹ ಬದಲಾವಣೆಗಳನ್ನು ತರಲಾಗುತ್ತಿದ್ದು ಜೀ ವಾಹಿನಿಯ ಉಳಿದ ಧಾರಾವಾಹಿಗಳು ಸಹ ತನ್ನ ರೇಟಿಂಗ್ ಅನ್ನು ಹೆಚ್ಚಿಸಿಕೊಂಡಿದೆ.. ಈ ವಾರದ ಟಿ ಆರ್ ಪಿ ಪಟ್ಟಿಯಂತೆ ಪುಟ್ಟಕ್ಕನ ಮಕ್ಕಳು ಧಾರಾವಾಹಿ ಮೊದಲ ಸ್ಥಾನದಲ್ಲಿದ್ದರೆ ಗಟ್ಟಿಮೇಳ ಧಾರಾವಾಹಿ ಎರಡನೇ ಸ್ಥಾನದಲ್ಲಿದೆ.. ಮೂರನೇ ಸ್ಥಾನದಲ್ಲಿ ಹಿಟ್ಲರ್ ಕಲ್ಯಾಣ ಧಾರಾವಾಹಿ ಹಾಗೂ ನಾಲ್ಕನೇ ಸ್ಥಾನದಲ್ಲಿ ಜೊತೆಜೊತೆಯಲಿ ಧಾರಾವಾಹಿ ಇದೆ.. ಇನ್ನು ಐದನೇ ಸ್ಥಾನದಲ್ಲಿ ಪಾರು ಧಾರಾವಾಹಿ ಮತ್ತೆ ಸ್ಥಾನ ಪಡೆದುಕೊಂಡಿದ್ದು ಸತ್ಯ ಧಾರಾವಾಹಿ ಆರನೇ ಸ್ಥಾನದಲ್ಲಿದೆ.. ಇನ್ನೂ ರಾಮಾಚಾರಿ ಧಾರಾವಾಹಿಯೂ ಕೂಡ ಆರನೇ ಸ್ಥಾನಕ್ಕೆ ತೃಪ್ತಿ ಪಟ್ಟುಕೊಳ್ಳುವಂತಾಗಿದ್ದು ನಾಗಿಣಿ ಧಾರಾವಾಹಿ ಏಳನೇ ಸ್ಥಾನದಲ್ಲಿದೆ..

ಇನ್ನುಳಿದಂತೆ ಗಿಣಿರಾಮ ಎಂಟನೇ ಸ್ಥಾನ.. ಗೀತಾ ಒಂಭತ್ತನೇ ಸ್ಥಾನ.. ಲಕ್ಷಣ ಹತ್ತನೇ ಸ್ಥಾನ.. ಮಂಗಳ ಗೌರಿ ಮದುವೆ ಹನ್ನೊಂದನೇ ಸ್ಥಾನ.. ಕನ್ನಡತಿ ಹನ್ನೆರಡನೇ ಸ್ಥಾನ.. ಕಮಲಿ ಧಾರಾವಾಹಿ ಹದಿಮೂರನೇ ಸ್ಥಾನದಲ್ಲಿದೆ.. ಇನ್ನು ಇತ್ತ ಉದಯ ವಾಹಿನಿಗ ಅಣ್ಣ ತಂಗಿ ಹದಿನಾಲ್ಕನೇ ಸ್ಥಾನದಲ್ಲಿದ್ದರೆ ನನ್ನರಸಿ ರಾಧೆ ಹದಿನಾರನೇ ಸ್ಥಾನದಲ್ಲಿದೆ.. ಹದಿನೇಳರಲ್ಲಿ ಮರಳಿ ಮನಸಾಗಿದೆ ಹಾಗೂ ನಂಬರ್ ಒನ್ ಸೊಸೆ ಧಾರಾವಾಹಿ ಇದ್ದು ಹದಿನೆಂಟನೇ ಸ್ಥಾನದಲ್ಲಿ ಪುನರ್ ವಿವಾಹ ಎಡಿಯೂರು ಸಿದ್ದಲಿಂಗೇಶ್ವರ ಧಾರಾವಾಹಿ ಸ್ಥಾನ ಪಡೆದುಕೊಂಡಿದೆ.. ಇನ್ನು ಬೆಟ್ಟದ ಹೂವು.. ಕೃಷ್ಣ ತುಳಸಿ ಹತ್ತೊಂಭತ್ತನೇ ಸ್ಥಾನದಲ್ಲಿದ್ದರೆ ದೊರೆಸಾನಿ ಧಾರಾವಾಹಿ ಇಪ್ಪತ್ತನೇ ಸ್ಥಾನದಲ್ಲಿದೆ.. ಒಟ್ಟಿನಲ್ಲಿ ಟಿಆರ್ ಪಿ ಅಂಕಣದಲ್ಲಿ ಜೀ ಕನ್ನಡ ಹಾಗೂ ಕಲರ್ಸ್ ಕನ್ನಡ ವಾಹಿನಿ ಪೈಪೋಟಿ ನಡೆಸುತ್ತಿದ್ದು ಧಾರಾವಾಹಿಗಳ ರೇಟಿಂಗ್ ಬದಲಾವಣೆಯಾಗುತ್ತಲೇ ಇದೆ ಎನ್ನಬಹುದು..