ರಾಮಾಚಾರಿ ಧಾರಾವಾಹಿ ನಟನ ಅಸಲಿ ಕತೆ ಬೇರೆಯೇ ಇದೆ..

0 views

ಕನ್ನಡ ಕಿರುತೆರೆಯ ಖ್ಯಾತ ಧಾರಾವಾಹಿಗಳಲ್ಲಿ ಒಂದಾಗಿರುವ ರಾಮಾಚಾರಿ ಧಾರಾವಾಹಿ ಸಾಕಷ್ಟು ವಿಚಾರಗಳ ಮೂಲಕ ಜನರ ಗಮನ ಸೆಳೆದಿತ್ತು. ಅದರಲ್ಲೂ ಧಾರಾವಾಹಿಯಲ್ಲಿನ ಹೀರೋ ರಾಮಾಚಾರಿಯ ಪಾತ್ರ ಜನರ ಮನಸ್ಸು ಗೆದ್ದಿದ್ದು ಇದ್ದರೆ ಇಂತಹ ಮಗನಿರಬೇಕು ಎನ್ನುವ ಮಟ್ಟಕ್ಕೆ ಪಾತ್ರ ಖ್ಯಾತಿ ಗಳಿಸಿತ್ತು.. ಆದರೆ ಈ ಪಾತ್ರ ಮಾಡುತ್ತಿರುವ ನಟನ ಅಸಲಿ ಕತೆ ಬೇರೆಯೇ ಇದೆ ಎನ್ನುವುದು ಸಾಕಷ್ಟು ಜನರಿಗೆ ತಿಳಿದಿಲ್ಲ.. ಹೌದು ರಾಮಾಚಾರಿ ಧಾರಾವಾಹಿ ಕಲರ್ಸ್ ಕನ್ನಡ ವಾಹಿನಿಯಲ್ಲಿ ಕಳೆದ ಕೆಲ ತಿಂಗಳ ಹಿಂದೆ ತನ್ನ ಪ್ರಸಾರವನ್ನು ಆರಂಭಿಸಿತ್ತು.. ಶುರುವಿನಲ್ಲಿಯೇ ಸಾಕಷ್ಟು ನಿರೀಕ್ಷೆ ಹುಟ್ಟುಹಾಕಿದ್ದ ಧಾರಾವಾಹಿ ಅದ್ಧೂರಿಯಾಗಿ ನಿರ್ಮಾಣಗೊಂಡಿತ್ತು.. ದೊಡ್ಡ ಮಟ್ಟದಲ್ಲಿಯೇ ಪ್ರಚಾರವಾಗಿದ್ದ ರಾಮಾಚಾರಿ ಅಂದುಕೊಂಡಂತೆ ಮೊದಲ ವಾರವೇ 6.5 ಟಿ ಆರ್ ಪಿ ಪಡೆದು ಕಲರ್ಸ್ ಕನ್ನಡ ವಾಹಿನಿಯ ನಂಬರ್ ಒನ್ ಧಾರಾವಾಹಿಯಾಗಿ ಹೊರಬಂತು..

ಇನ್ನೂ ಕಳೆದ ನಾಲ್ಕೈದು ವರ್ಷಗಳಿಂದ ಕನ್ನಡ ಕಿರುತೆರೆಯಲ್ಲಿ ನಂಬರ್ ಒನ್ ಆಗಿರುವ ಜೀ ಕನ್ನಡದ ಧಾರಾವಾಹಿಗೆ ಪ್ರಬಲ ಪೈಪೋಟಿ ನೀಡಿದ ರಾಮಾಚಾರಿ ಕನ್ನಡ ಕಿರುತೆರೆ ಧಾರಾವಾಹಿಗಳ ಪೈಕಿ ಟಾಪ್ ಐದನೇ ಸ್ಥಾನ ಪಡೆದು ಸಧ್ಯ ತಿಂಗಳುಗಳ ಬಳಿಕವೂ ಆರನೇ ಸ್ಥಾನದಲ್ಲಿ ಮುಂದುವರೆಯುತ್ತಿದೆ.. ಇನ್ನು ಒಂದು ಧಾರಾವಾಹಿ ಫೇಮಸ್ ಆದರೆ ಸಾಮಾನ್ಯವಾಗಿ ಆ ಧಾರಾವಾಹಿಯ ಕಲಾವಿದರುಗಳು ಕೂಡ ಫೇಮಸ್ ಆಗೋದು ಹೌದು.. ಅದೇ ರೀತಿ ರಾಮಾಚಾರಿಯ ಸಾಕಷ್ಟು ಕಲಾವಿದರುಗಳಿಗೆ ಈ ಧಾರಾವಾಹಿ ಹೆಸರು ತಂದುಕೊಟ್ಟಿತು.. ಹಿರಿಯ ನಟ ಶಂಕರ್ ಅಶ್ವತ್ಥ್ ಅವರಿಗೆ ಹೊಸ ಆರಂಭ ನೀಡಿದರೆ.. ಹೊಸ ಕಲಾವಿದರುಗಳಿಗೆ ವೃತ್ತಿ ಬದುಕು ಕಟ್ಟಿಕೊಳ್ಳಲು ನೆರವಾಯಿತು..

ಇನ್ನು ಈ ಧಾರಾವಾಹಿಯ ಪ್ರಮುಖ ಪಾತ್ರ ರಾಮಾಚಾರಿ ಪಾತ್ರದ ನಟನಿಗೆ ಇದು ಮೊದಲ ಧಾರಾವಾಹಿಯಾದರೂ ಸಹ ದೊಡ್ಡ ಮಟ್ಟದಲ್ಲಿ ಯಶಸ್ಸು ನೀಡಿತು.. ಅಷ್ಟಕ್ಕೂ ಈ ನಟ ಯಾರು.. ತೆರೆ ಮೇಲೆ ಅಷ್ಟು ಚೆನ್ನಾಗಿ ಪಾತ್ರ ಪೋಷಣೆ ಮಾಡುವ ನಟನ ನಿಜ ಜೀವನ ಯಾವ ರೀತಿ ಇದೆ ಎನ್ನುವ ಕುತೂಹಲ ಪ್ರೇಕ್ಷಕರಲ್ಲಿ ಇದ್ದೇ ಇದೆ.. ಹೌದು ಈ ನಟನ ಹೆಸರು ಹೃತ್ವಿಕ್.. ಹೃತ್ವಿಕ್ ಮೂಲತಃ ಮೈಸೂರಿನ ಹುಡುಗ.. ಹೈಸ್ಕೂಲು ಓದುತ್ತಿರುವಾಗಲೇ ರಂಗಭೂಮಿಯಲ್ಲಿ ತೊಡಗಿಸಿಕೊಂಡ ಹೃತ್ವಿಕ್ ಮುಂದೆ ತಾನು ನಟನೆಯಲ್ಲಿಯೇ ತನ್ನ ಜೀವನವನ್ನು ಕಟ್ಟಿಕೊಳ್ಳಬೇಕೆನ್ನುವ ನಿರ್ಧಾರ ಮಾಡಿದರು.. ಮೈಸೂರಿನಲ್ಲಿಯೇ ಡಿಗ್ರಿ ಮುಗಿಸುದ ಹೃತ್ವಿಕ್ ನಂತರದಲ್ಲಿ ನಟನಾಗಲು ಸಾಕಷ್ಟು ಆಡಿಷನ್ ಗಳನ್ನು ನೀಡಿದರು..

ಸಹ ನಟನ ಪಾತ್ರಗಳಿಗೂ ಆಡಿಷನ್ ಕೊಟ್ಟರು.. ಆದರೆ ಎಲ್ಲಿಯೂ ಆಯ್ಕೆಯಾಗಲಿಲ್ಲ.. ಕೊನೆಗೆ ಬೇರೊಂದು ಪಾತ್ರಕ್ಕೆ ಆಡಿಷನ್ ಗೆ ಹೋದ ಸಮಯದಲ್ಲಿ ನಿರ್ದೇಶಕ ರಾಮ್ ಜೀ ಅವರ ಕಣ್ಣಿಗೆ ನಟ ಹೃತ್ವಿಕ್ ಬಿದ್ದಿದ್ದಾರೆ.. ಆಗ ಅವರಿಗೆ ರಾಮಾಚಾರಿ ಧಾರಾವಾಹಿಯ ಅವಕಾಶ ನೀಡಿದರು.. ಆದರೆ ಆ ಮುಂದಿನ ಬದುಕು ಮಾತ್ರ ಬಹಳ ಸವಾಲಾಗಿತ್ತು.. ಹೌದು ಧಾರಾವಾಹಿಯಲ್ಲಿ ಶ್ಲೋಕಗಳನ್ನು ಹೇಳಬೇಕಿತ್ತು.. ಅದಕ್ಕಾಗಿ ಸಾಕಷ್ಟು ಅಭ್ಯಾಸ ಮಾಡಿದರು ಹೃತ್ವಿಕ್.. ಅಷ್ಟೇ ಅಲ್ಲದೇ ಮುಖ್ಯವಾಗಿ ನೂರ ಮೂವತ್ತು ಕೆಜಿ ತೂಕ ಇದ್ದ ನಟ ಹೃತ್ವಿಕ್ ಎಂಭತ್ತು ಕೆಜಿಗೆ ತನ್ನ ತೂಕವನ್ನು ಇಳಿಸಿಕೊಳ್ಳಬೇಕಿತ್ತು..

ಇದು ಬಹಳ ದೊಡ್ಡ ಸವಾಲೇ ಆಗಿತ್ತು.. ಕೇವಲ ಆರು ತಿಂಗಳ ಅವಕಾಶ ಇತ್ತು.. ಹೃತ್ವಿಕ್ ಸಾಕಷ್ಟು ಪರಿಶ್ರಮ ಹಾಕಿ ಯೋಗ ಡ್ಯಾನ್ಸ್ ವರ್ಕೌಟ್ ಎಲ್ಲವನ್ನೂ ಮಾಡಿ ತನ್ನ ತೂಕವನ್ನು ಇಳಿಸಿಕೊಂಡು ಪಾತ್ರಕ್ಕೆ ತಯಾರಾದರು.. ಇನ್ನು ತೆರೆ ಮೇಲೆ ಬಹಳ ಒಳ್ಳೆಯ ಸುಸಂಸ್ಕೃತ ವ್ಯಕ್ತಿಯ ಪಾತ್ರ ಮಾಡುತ್ತಿರುವ ಹೃತ್ವಿಕ್ ನ ನಿಜ ಜೀವನದ ಶೈಲಿ ಬೇರೆಯದ್ದೇ ರೀತಿ ಇತ್ತು.‌. ಆದರೆ ಈ ಪಾತ್ರ ಒಪ್ಪಿಕೊಂಡ ನಂತರ ತಮ್ಮ ನಿಜ‌ ಜೀವನದಲ್ಲಿಯೂ ಸಾಕಷ್ಟು ಬದಲಾವಣೆ ಕಂಡುಕೊಂಡರು.

ಬಹಳ ಕೋಪಿಷ್ಟನಾಗಿದ್ದ ಹೃತ್ವಿಕ್ ಧಾರಾವಾಹಿಯಲ್ಲಿ ಅಭಿನಯಿಸಲು ಶುರು ಮಾಡಿದ ನಂತರ ಬಹಳ ತಾಳ್ಮೆಯನ್ನು ಮೈಗೂಡಿಸಿಕೊಂಡರು.. ಅಷ್ಟೇ ಅಲ್ಲದೇ ಈ ಪಾತ್ರದಲ್ಲಿ ಅಭಿನಯಿಸಿದ ಬಳಿಕ ಮಾಂಸಹಾರ ಹಾಗೂ ಇನ್ನಿತರ ಕೆಲ ಅಭ್ಯಾಸಗಳನ್ನೂ ಸಹ ಬಿಟ್ಟುಬಿಟ್ಟರಂತೆ.. ಇನ್ನು ನಟನೆಯ ಜೊತೆಗೆ ತಮ್ಮ ಮಾಸ್ಟರ್ ಡಿಗ್ರಿಯನ್ನೂ ಸಹ ಓದುತ್ತಿರುವ ಹೃತ್ವಿಕ್ ತಮ್ಮ ಈ ರಾಮಾಚಾರಿ ಪಯಣದ ಬಗ್ಗೆ ಮಾದ್ಯಮದ ಸಂದರ್ಶನವೊಂದರಲ್ಲಿ ಸಂತೋಷ ಹಂಚಿಕೊಂಡಿದ್ದು ಜನರು ತಮ್ಮ ಮನೆ ಮಗನಂತೆ ಪ್ರೀತಿ ತೋರುತ್ತಿದ್ದಾರೆ ಅದು ಬಹಳ ಖುಷಿ ತಂದಿದೆ.. ನಟನೆಯ ಜೊತೆಗೆ ನಿರ್ದೇಶನ ಹಾಗೂ ತಾಂತ್ರಿಕ ಸಂಗತಿಗಳನ್ನೂ ಕಲಿಯುತ್ತುದ್ದೇನೆ.. ಅವೆಲ್ಲವೂ ಮುಂದೆ ನನಗೆ ಉಪಯೋಗವಾಗಲಿದೆ..

ನನಗೆ ನೆಗಟಿವ್ ಶೇಡ್ ನಲ್ಲಿ‌ ಪಾತ್ರ ಮಾಡಬೇಕೆಂಬ ಆಸೆ ಇದೆ.. ಮುಂದೆ ಅಂತಹ ಪಾತ್ರಗಳು ಸಿಕ್ಕಾಗ ಅಭಿನಯಿಸುವೆ ಎಂದಿದ್ದಾರೆ.. ಅಷ್ಟೇ ಅಲ್ಲದೇ ರಾಮಾಚಾರಿ ನನಗೆ ತೃಪ್ತಿ ತಂದಿದೆ.. ನನ್ನ ವ್ಯಕ್ತಿತ್ವದಲ್ಲಿಯೂ ಬದಲಾವಣೆ ತಂದಿದೆ.. ಇದನ್ನು ನನ್ನ ತಾಯಿಯೂ ಗಮನಿಸಿ ಸಂತೋಷ ವ್ಯಕ್ತ ಪಡಿಸಿದ್ದಾರೆ.. ಇದಕ್ಕಿಂತ ಇನ್ನೇನು ಬೇಕು ಎಂದಿದ್ದಾರೆ.. ಒಟ್ಟಿನಲ್ಲಿ ಧಾರಾವಾಹಿಗಳು ಕಲಾವಿದರ ವೃತ್ತಿ ಬದುಕು ಮಾತ್ರವಲ್ಲ ಅವರುಗಳ ದಿನನಿತ್ಯದ ಜೀವನ ಶೈಲಿಯನ್ನೇ ಬದಲಿಸಿ ಬಿಡುತ್ತದೆ ಎಂಬುದಕ್ಕೆ ಹೃತ್ವಿಕ್ ಅವರೇ ನೈಜ್ಯ ಉದಾಹರಣೆ.. ಅವರ ಮುಂದಿನ ಸಿನಿ ಪಯಣಕ್ಕೆ ಶುಭವಾಗಲಿ..