ಸಿಡಿ ವಿಚಾರಕ್ಕೆ ತಿರುವು.. ಎರಡನೇ ವೀಡಿಯೋ ಬಿಡುಗಡೆ ಮಾಡಿದ ಯುವತಿ.. ಡಿಕೆಶಿ, ಸಿದ್ದರಾಮಯ್ಯ ಅವರಿಗೆ ಯುವತಿ ಹೇಳಿದ್ದೇನು ಗೊತ್ತಾ?

0 views

ಕಳೆದ ಕೆಲ ದಿನಗಳಿಂದ ರಾಜ್ಯ ರಾಜಕಾರಣದಲ್ಲಿ ಬಹಳಷ್ಟು ಸದ್ದು ಮಾಡುತ್ತಿರುವ ರಮೇಶ್ ಜಾರಕಿಹೋಳಿ ಅವರ ಕುರಿತ ಸಿಡಿ ವಿಚಾರಕ್ಕೀಗ ತಿರುವು ದೊರೆತಿದೆ.. ಹೌದು ರಮೇಶ್ ಜಾರಕಿಹೋಳಿ ಅವರ ವೀಡಿಯೋ ಬಿಡುಗಡೆಯಾದ ದಿನದಿಂದಲೂ ರಮೇಶ್ ಜಾರಕಿಹೋಳಿ ಅವರು ಅದು ನಾನಲ್ಲ.. ಅದು ನಕಲಿ ಎನ್ನುತ್ತಿದ್ದರು.. ಕೆಲ ದಿನಗಳ ನಂತರ ನನ್ನಿಂದ ನಾಲ್ಕು ತಿಂಗಳಿನಿಂದ ಹಣ ಪಡೆಯುತ್ತಿದ್ದರು ಎಂದೂ ಸಹ ಹೇಳಿದ್ದರು.. ಈ ಬಗ್ಗೆ ಎಸ್ ಐ ಟಿ ತನಿಖೆ ಮಾಡುತ್ತಿದ್ದ ಬೆನ್ನಲ್ಲೇ ರಮೇಶ್ ಜಾರಕಿಹೋಳಿ ಅವರು ಪೊಲೀಸ್ ಠಾಣೆಯಲ್ಲಿ ದೂರನ್ನು ಸಹ ದಾಖಲು ಮಾಡಿದ್ದರು.. ಆದರೀಗ ಯುವತಿ ಹೇಳುತ್ತಿರೋದೆ ಬೇರೆ..

ಹೌದು ಅಂದಿನಿಂದ ಯುವತಿ ಯಾರ ಕೈಗೂ ಸಿಗದೆ ಹತ್ತು ದಿನಗಳ ಹಿಂದೆ ವೀಡಿಯೋ ಮೂಲಕ ಸಂದೇಶ ರವಾನಿಸಿದ್ದಳು.. ಹದಿಮೂರನೇ ತಾರೀಕು ರಮೇಶ್ ಜಾರಕಿ ಹೋಳಿ ಅವರು ದೂರು ನೀಡಿದ ಬಳಿಕ ಅರ್ಧ ಗಂಟೆ ಆದನಂತರ ಯುವತಿಯ ವೀಡಿಯೋ ಬಿಡುಗಡೆಯಾಗಿತ್ತು.. ಇದೆಲ್ಲವೂ ನನ್ನ ವಿರುದ್ಧ ನಡೆಯುತ್ತಿರುವ ಪಿತೂರಿ ಎಂದಿದ್ದರು ರಮೇಶ್ ಜಾರಕಿಹೋಳಿ.‌.

ಆದರೆ ತನಿಖೆ ನಡೆಸುತ್ತಿರುವ ಅಧಿಕಾರಿಗಳು ರಮೇಶ್ ಜಾರಕಿಹೋಳಿ ಹಾಗೂ ಯುವತಿ ಎರಡೂ ಕಡೆಗೂ ನೋಟಿಸ್ ಜಾರಿ ಮಾಡಿದ್ದು ಇಬ್ಬರೂ ಸಹ ವಿಚಾರಣೆಗೆ ಹಾಜರಾಗಿಲ್ಲ.‌. ಈ ನಡುವೆ ಯುವತಿ ಮತ್ತೊಂದು ವೀಡಿಯೋ ಬಿಡುಗಡೆ ಮಾಡಿದ್ದು ಅದರಲ್ಲಿ ಡಿಕೆಶಿ ಸಿದ್ದರಾಮಯ್ಯ ಅವರ ಹೆಸರನ್ನೂ ಸಹ ಪ್ರಸ್ತಾಪ ಮಾಡಿದ್ದಾಳೆ..

ಹೌದು “ನಮ್ಮ ಅಪ್ಪ ಅಮ್ಮ ಸ್ವ ಇಚ್ಛೆಯಿಂದ ದೂರು ಕೊಟ್ಟಿರೋದಕ್ಕೆ ಸಾಧ್ಯನೇ ಇಲ್ಲ.. ಯಾಕಂದ್ರೆ ಅವರಿಗೆ ಗೊತ್ತು ಅವರ ಮಗಳು ತಪ್ಪೇ ಮಾಡಿರಲ್ಲ ಅಂತ.. ಅವರು ಹೆದುರೊ ಯಾವ ಅವಶ್ಯಕತೆಯೂ ಇಲ್ಲ.. ನನಗೆ ಏನಪ್ಪಾ ಅಂದ್ರೆ ಮೊದಲು ನಮ್ಮ ಅಪ್ಪ ಅಮ್ಮನ ರಕ್ಷಣೆ ಮುಖ್ಯ.. ಯಾವಾಗ ನಮ್ ಅಪ್ಪ ಅಮ್ಮ ಸೇಫ್ ಆಗಿ ಇದಾರೆ ಅಂತ ಗೊತ್ತಾಗತ್ತೋ ಆಗ ನಾನು ಅಧಿಕಾರಿಗಳ ಮುಂದೆ ಬಂದು ಇರೋ ವಿಚಾರವನ್ನು ಹೇಳ್ತೀನಿ.. ಅದಕ್ಕಿಂತ ಮುಂಚೆ ನಾನು ಸಿದ್ದರಾಮಯ್ಯ ಅವರನ್ನ.. ಡಿ ಕೆ ಶಿವಕುಮಾರ್ ಅವರನ್ನ ರಮೇಶ್ ಕುಮಾರ್ ಅವರನ್ನ.. ಮತ್ತೆ ಇನ್ನಿತರ ಮಹಿಳಾ ಸಂಘಟನೆ ಅವರಲ್ಲಿ ಮನವಿ ಮಾಡಿಕೊಳ್ತೀನಿ ನಮ್ಮ ಅಪ್ಪ ಅಮ್ಮನಿಗೆ ರಕ್ಷಣೆ ಕೊಡಿ.. ಅವರು ಇಂತ ಕಡೆ ಸೇಫ್ ಆಗಿ ಇದಾರೆ ಅಂತ ಅಂದ್ರೆ ಸಾಕು.. ಎರಡು ದಿನದಿಂದ ನನಗೆ ಎಲ್ಲೋ‌ ಒಂದು ಕಡೆ ಭರವಸೆ ಇದೆ.. ನನಗೆ ನ್ಯಾಯ ಸಿಕ್ಕೇ ಸಿಗತ್ತೆ ಅನ್ನೋ ನಂಬಿಕೆ ಇದೆ..

ನಾನು ಏನಂದ್ರೆ ಹನ್ನೆರಡನೇ ತಾರೀಕು ಒಂದು ವೀಡಿಯೋ ಮಾಡಿ ಕಮಿಷನರ್ ಆಫೀಸಿಗೆ ತಲುಪಿಸಿದ್ದೆ… ಎಸ್ ಐ ಟಿ ಅಧಿಕಾರಿಗಳಿಗೂ ತಲುಪಿಸಿದ್ದೆ.. ಆದರೆ ಆ ವೀಡಿಯೋನ ಹದಿಮೂರನೇ ತಾರೀಕು ರಮೇಶ್ ಜಾರಕಿಹೋಳಿ ಅವರು ತರಾತುರಿಯಲ್ಲಿ ದೂರು ಕೊಡ್ತಾರೆ ಕೊಟ್ಟಂತಹ ಅರ್ಧ ಗಂಟೆ ಆದಮೇಲೆ ನನ್ನ ವೀಡಿಯೋನ ಈಚೆ ಬಿಡ್ತಾರೆ.. ನನಗೆ ಇದ್ರಲ್ಲಿ ಅರ್ಥ ಆಗ್ತಾ ಇಲ್ಲ.. ಎಸ್ ಐ ಟಿ ಅವರು ಯಾರ ಪರ ಅಂತ….” ಎಂದು ಮಾತನಾಡಿ ಆ ವೀಡಿಯೋವನ್ನು ಕಮಿಷನರ್ ಹಾಗೂ ಎಸ್ ಐ ಟಿ ಅವರಿಗೆ ತಲುಪಿಸಿದ್ದಾಳೆ‌..