ರಮೇಶ್‌ ಜಾರಕಿಹೋಳಿ ಸಿಡಿ ಪ್ರಕರಣಕ್ಕೆ ದೊಡ್ಡ ತಿರುವು.. ಅಧಿಕಾರಿಗಳ ಮುಂದೆ ಹಾಜರಾಗಿ ಎಲ್ಲಾ ಸತ್ಯ ಬಿಚ್ಚಿಟ್ಟ ಸಿಡಿಯ ನಿಜವಾದ ಕಿಂಗ್‌ ಪಿನ್‌ ಗಳು..

0 views

ರಮೇಶ್ ಜಾರಕಿಹೋಳಿ ಸಿಡಿ ಪ್ರಕರಣ.. ಸಧ್ಯ ಕೊರೊನಾ ಎರಡನೆ ಅಲೆಯ ಸುದ್ದಿಗಳ ನಡುವೆ ಕಾಣದಂತೆ ಮರೆಯಾಗಿ ಹೋದರೂ ಸಹ ಆಗಾಗ ಅಮಾವಾಸ್ಯೆಗೋ ಹುಣ್ಣಿಮೆಗೋ ಒಮ್ಮೆ ಸಿಡಿ ಮತ್ತೆ ಮತ್ತೆ ಟೆಲಿಕಾಸ್ಟ್ ಆಗುತ್ತಿರುವಂತೆ ಕಾಣುತ್ತಿದೆ.. ಹೌದು ರಮೇಶ್ ಜಾರಕಿಹೋಳಿ ಅವರ ಸಿಡಿ ಪ್ರಕರಣಕ್ಕೆ ಇದೀಗ ಹೊಸದೊಂದು ದೊಡ್ಡ ತಿರುವು ದೊರೆತಿದೆ.. ಹೌದು ಪ್ರಕರಣದ ಪ್ರಮುಖ ಕಿಂಗ್ ಪಿನ್ ಗಳು ಇದೀಗ ತನಿಖಾಧಿಕಾರಿಗಳ ಮುಂದೆ ಹಾಜರಾಗಿದ್ದು ನಡೆದ ಅಸಲಿ ಸತ್ಯಗಳನ್ನಿ ಬಿಚ್ವಿಟ್ಟಿದ್ದಾರೆ.. ಅಷ್ಟಕ್ಕೂ ಈ ಇಬ್ಬರು ಸೂತ್ರಧಾರರು ಯಾರು.. ಕುತೂಹಲಕ್ಕೆ ಇಲ್ಲಿದೆ ನೋಡಿ ಉತ್ತರ.. ಹೌದು ಕಳೆದ ನಾಲ್ಕು ತಿಂಗಳ ಹಿಂದೆ ರಾಜ್ಯ ರಾಜಕಾರಣದಲ್ಲಿ ದೊಡ್ಡ ಸಂಚಲನ ಮೂಡಿಸಿದ್ದ ರಮೇಶ್ ಜಾರಕಿಹೋಳಿ ಹಾಗೂ ಯುವತಿಯ ಸಿಡಿ ವಿಚಾರ ದಿನಕ್ಕೊಂದು ತಿರುವು ಪಡೆಯುತಿತ್ತು.. ಅದ್ಯಾರು ಬಿಡುಗಡೆ ಮಾಡಿದರೋ ತಿಳಿಯದು..

ಆದರೆ ಸಿಡಿ ಬಿಡುಗಡೆಯಾದ ತಕ್ಷಣ ಅದು ನಾನಲ್ಲ.. ಸಂಪೂರ್ಣ ಗ್ರಾಫಿಕ್ಸ್.. ನನಗೆ ಆಗದೇ ಇರುವವರು ಆ ರೀತಿ ಮಾಡಿದ್ದಾರೆ ಎಂದು ರಮೇಶ್ ಜಾರಕಿ ಹೋಳಿ ಅವರು ಹೇಳಿಕೆ ಕೊಟ್ಟಿದ್ದರು.. ಆದರೆ ಅತ್ತ ಯುವತಿ ಸಹ ತನ್ನ ಅಪ್ಪ ಅಮ್ಮನ ಜೊತೆ ಫೋನಿನಲ್ಲಿ ಮಾತನಾಡುವ ಸಮಯದಲ್ಲಿ ಅದು ಗ್ರಾಫಿಕ್ಸ್ ಚಿನ್ನಿ ಎಂದು ತಮ್ಮನಿಗೆ ಹೇಳಿದ್ದಳು.. ಆದರೆ ಹೊರಗೆ ಮಾತ್ರ ಸಾಲು ಸಾಲು ವೀಡಿಯೋಗಳನ್ನು ಬಿಟ್ಟು ರಮೇಶ್ ಜಾರಕಿಹೋಳಿ ಇಂದ ನನಗೆ ಅನ್ಯಾಯ ಆಗಿದೆ.. ಅವರು ನನಗೆ ಕೆಲಸ ಕೊಡಿಸುತ್ತೇನೆ ಎಂದು ನನ್ನನ್ನು ಬಳಸಿಕೊಂಡಿದ್ದಾರೆ.. ನನಗೆ ನ್ಯಾಯ ಕೊಡಿಸಿ ಎಂದು ದೂರನ್ನು ಸಹ ನೀಡಿದ್ದಳು.. ಆಕೆ ಎರಡು ಮೂರು ದಿನ ಎಸ್ ಐ ಟಿ ಮುಂದೆ ಹಾಜರಾಗಿ ಎಲ್ಲಾ ವಿವರಗಳನ್ನು ಸಹ ನೀಡಿದಳು.. ಅತ್ತ ರಮೇಶ್ ಜಾರಕಿಹೋಳಿ ಅವರು ಇನ್ನೇನು ವಿಚಾರಣೆಗೆ ಹಾಜರಾಗಬೇಕು ಅನ್ನೋವಷ್ಟರಲ್ಲಿ‌ ಕೊನೆ ಘಳಿಗೆಯಲ್ಲಿ ಕೊರೊನಾ ಕಾಣಿಸಿಕೊಂಡು ಕೊರೊನಾ ದಯೆಯಿಂದ ಒಂದು ಹದಿನಾಲ್ಕು ದಿನ ಬಚಾವ್ ಸಹ ಆದರು..

ಆನಂತರ ಇತ್ತ ಕೊರೊನಾ ಎರಡನೇ ಅಲೆಯ ಅಬ್ಬರ ಹೆಚ್ಚಾದ ಕಾರಣ ನಮ್ಮದೇ ನಮಗೆ ತಲೆನೋವಾಗಿದೆ.. ಮಧ್ಯದಲ್ಲಿ ಇದು ಬೇರೆ ಎಂದು ಸಿಡಿ ನೋಡುವವರು.. ಆ ವಿಚಾರಕ್ಕೆ ತಲೆ ಕೆಡಿಸಿಕೊಳ್ಳುವವರು ಕಡಿಮೆಯಾದರು ಬಿಡಿ.. ಇನ್ನು ಮೊನ್ನೆ ಮೊನ್ನೆಯಷ್ಟೇ ರಮೇಶ್ ಜಾರಕಿಹೋಳಿ ಅವರೇ ಖುದ್ದಾಗಿ ಪ್ರಕರಣಕ್ಕೆ ಹೊಸ ತಿರುವು ಕೊಟ್ಟು ಆ ಸಿಡಿಯಲ್ಲಿ ಇರೋದು ನಾನೇ.. ಅದು ನಾನೇ.. ಇಬ್ಬರ ಒಮ್ಮತದಿಂದ ಆ ಕ್ರಿಯೆ ನಡೆದಿದೆ.. ಅದಕ್ಕೆ ಆ ಯುವತಿಯದ್ದೂ ಒಪ್ಪಿಗೆ ಇತ್ತು ಎಂದು ಹೊಸ ಹೇಳಿಕೆ ಕೊಟ್ಟು.. ಅದಾಗಲೇ ಜನರಿಗೆ ಸತ್ಯ ಎಂದು ಗೊತ್ತಿದ್ದ ವಿಚಾರವನ್ನು ತಾವೂ ಸಹ ಒಪ್ಪಿಕೊಂಡಿದ್ದರು.. ಈ ಮೂಲಕ ಪ್ರಕರಣ ಬಹಳ ದುರ್ಬಲವೂ ಆಯಿತು.. ಬಹಿತೇಕ ಕೇಸ್ ಖುಲಾಸೆಯಾಗುವ ಹಂತಕ್ಕೂ ಬಂತು..

ಆದರೀಗ ಎಸ್ ಐ ಟಿ ಅಧಿಕಾರಿಗಳ ಮುಂದೆ ಕೇಸ್ ನ ಪ್ರಮುಖ ಕಿಂಗ್ ಪಿನ್ ಗಳು ಹಾಜರಾಗಿ ಹೇಳಿಕೆ ನೀಡಿದ್ದಾರೆ.. ಹೌದು ಈ ಇಬ್ಬರು ಮತ್ಯಾರೂ ಅಲ್ಲ ಈ ಕೇಸ್ ನ ಪ್ರಮುಖ ಸೂತ್ರಧಾರಿಗಳಾದ ನರೇಶ್ ಗೌಡ.‌. ಮತ್ತು ಶ್ರವಣ್.. ಈ ಹಿಂದೆಯೇ ಇವರಿಬ್ಬರು ನನ್ನನ್ನು ಸಿಕ್ಕಿಸುವ ಸಲುವಾಗು ಹುಡುಗಿ ಬಿಟ್ಟು ವೀಡಿಯೋ ಮಾಡಿದ್ದಾರೆ.. ಇವರೇ ಸಿಡಿ ಬಿಡುಗಡೆ ಸಹ ಮಾಡಿರೋದು.. ಈ ಹಿಂದೆ ಕೆಲ ತಿಂಗಳು ಸಾಕಷ್ಟು ಹಣವನ್ನು ಸಹ ಇವರಿಗೆ ಕೊಟ್ಟಿದ್ದೇನೆ ಎಂದು ರಮೇಶ್ ಜಾರಕಿಹೋಳಿ ಅವರೇ ದೂರು ನೀಡಿದ್ದರು.. ಇನ್ನು ಜೂನ್ ಎಂಟರಂದು ನರೇಶ್ ಹಾಗೂ ಶ್ರವಣ್ ಇಬ್ಬರಿಗೂ ನಿರೀಕ್ಷಣಾ ಜಾಮೀನು ಮಂಜೂರಾಗಿತ್ತು.. ಜಾಮೀನು ಸಿಕ್ಕ ನಾಲ್ಕು ದಿನಕ್ಕೆ ಇಂದು ಎಸ್ ಐ ಟಿ ಮುಂದೆ ಇಬ್ಬರೂ ಸಹ ಹಾಜರಾಗಿ ರಮೇಶ್ ಜಾರಕಿಹೋಳಿ ಹಾಗೂ ಯುವತಿಯ ಬಗ್ಗೆ ಸತ್ಯ ಬಿಚ್ಚಿಟ್ಟಿದ್ದಾರೆ..

ಅಷ್ಟೇ ಅಲ್ಲದೇ ಈ ಇಬ್ಬರನ್ನು ಅವಶ್ಯಕತೆ ಬಿದ್ದರೆ ತಮ್ಮ ವಶಕ್ಕೆ ತನಿಖಾಧಿಕಾರಿಗಳು ಪಡೆಯಲು ಸ್ವತಂತ್ರರು ಎಂದೂ ಸಹ ಸೂಚನೆ ನೀಡಿದೆ.. ಇನ್ನಿ ಸಧ್ಯ ವಿಚಾರಣೆ ನಡೆಸಿ ನಂತರ ಇಬ್ಬರನ್ನೂ ಸಹ ತಮ್ಮ ವಶಕ್ಕೆ ಎಸ್ ಐ ಟಿ ಅಧಿಕಾರಿಗಳು ಪಡೆಯಬಹುದಾಗಿದ್ದು ಈ ಇಬ್ಬರೂ ಯುವತಿ ಹಾಗೂ ಜಾರಕಿಹೋಳಿ ಅವರ ಸಂಬಂಧದ ಬಗ್ಗೆ ತಿಳಿಸಿದ್ದು ನಿಜಕ್ಕೂ ಆ ಯುವತಿಗೆ ಅನ್ಯಾಯ ಅಗಿದೆಯಾ ಅಥವಾ ಇಬ್ಬರ ಸಮ್ಮತಿಯಿಂದ ಎಲ್ಲಾ ಮುಗಿಸಿ ಅದನ್ನು ವೀಡಿಯೋ ಮಾಡಿದ್ದಾರೆ ಸತ್ಯ ಕೆಲವೇ ದಿನಗಳಲ್ಲಿ ಹೊರ ಬೀಳಲಿದೆ..