ಮೈಸೂರಿನ ಮದುವೆ ಮನೆಯಲ್ಲಿ ಮನಕಲಕುವ ಘಟನೆ.. ಮಗನ ಮದುವೆ ಪೂರ್ತಿ ಮಾತಿಲ್ಲದೇ ಒಂದೇ ಕಡೆ ಕೂತ ತಂದೆ.. ಕಾರಣ ಕೇಳಿದರೆ ಕಣ್ಣೀರು ಜಾರುತ್ತದೆ..

0 views

ತನ್ನವರ ಆಸೆಗಳಿಗಾಗಿ ತನ್ನ ಆಸೆಗಳನ್ನು ಪಕ್ಕಕ್ಕಿಡುವವನೇ ನಿಜವಾದ ತಂದೆ.. ಪ್ರಪಂಚದಲ್ಲಿ ಅಂತಹ ತಂದೆಯರು ಸಾಕಷ್ಟು ಮಂದಿ ಇದ್ದಾರೆ.. ತನ್ನ ಸ್ವಾರ್ಥವನ್ನೇ ನೋಡಿಕೊಂಡು ಹೆಂಡತಿ ಮಕ್ಕಳನ್ನು ಬೀದಿಗೆ ಬಿಟ್ಟವರೂ ಸಹ ಇದ್ದಾರೆ.. ಆದರೆ ಈಗಲೂ ಕುಟುಂಬಕ್ಕಾಗಿ ಹಗಲು ರಾತ್ರಿ ತಮ್ಮ ಜೀವ ಹಾಗೂ ಜೀವನ ಸವೆಸುವ ಅದೆಷ್ಟೋ ತಂದೆಯರು ಏನೂ ನಿರೀಕ್ಷೆ ಇಲ್ಲದೇ ಸುಮ್ಮನೇ ತಮ್ಮ ಜವಾಬ್ದಾರಿಗಳನ್ನು ನಿಭಾಯಿಸಿಕೊಂಡು ಹೋಗುತ್ತಿದ್ದಾರೆ.. ಕೊನೆಗೆ ಜವಾಬ್ದಾರಿಗಳ ಜೊತೆಗೆ ತಮ್ಮ ಜೀವನವನ್ನೂ ಸಹ ಹಾಗೆಯೇ ಮುಗಿಸಿ ಬಿಡುತ್ತಾರೆ.. ಆದರೆ ಇಲ್ಲೊಬ್ಬ ತಂದೆ ತನ್ನ ಮಗನ ಮದುವೆ ನಡೆಯುತ್ತಿದ್ದ ಸಮಯದಲ್ಲಿ ಸಂಪೂರ್ಣ ಮದುವೆ ಪೂರ್ತಿ ಸುಮ್ಮನೆ ಒಂದೇ ಕಡೆ ಕೂತಿದ್ದರು.. ಇದಕ್ಕೆ ಕಾರಣ ತಿಳಿದರೆ ನಿಜಕ್ಕೂ ಕಣ್ಣೀರು ಜಾರುತ್ತದೆ..

ಹೌದು ಇಂತಹದೊಂದು ಮನಕಲಕುವ ಘಟನೆ ಮೈಸೂರಿನಲ್ಲಿ ನಡೆದಿದೆ.. ಮೈಸೂರು ಜಿಲ್ಲೆಯ ನಂಜನಗೂಡಿನಲ್ಲಿ ಚಿಕ್ಕಮಗಳೂರು ಮೂಲದ ರಮೇಶ್ ಎಂಬುವವರು ವಾಸವಾಗಿದ್ದರು.. ಅವರ ಮಗನನ್ನು ಅಂದುಕೊಂಡಂತೆ ಡಾಕ್ಟರ್ ಮಾಡಿದ್ದರು.. ಮಗ ದೊಡ್ಡವನಾಗಿ ಡಾಕ್ಟರ್ ಆದನೆಂದು ರಮೇಶ್ ಬಹಳ ಸಂತೋಷ ಪಟ್ಟಿದ್ದರು.. ಇನ್ನೇನು ಮಗನ‌ ಮದುವೆ ಮಾಡಬೇಕೆಂದು ನಿರ್ಧಾರ ಮಾಡಿದ್ದರು.. ಮಗನ ಮದುವೆ ನೋಡಿ ಅವನಿಗೆ ಅಕ್ಷತೆ ಹಾಕಿದರೆ ಸಾಕು ನನ್ನ ಜೀವನ ಸಾರ್ಥಕ ಎನ್ನುವ ಮಾತನ್ನಾಡಿದ್ದರು.

ಅವರ ಆಸೆಯಂತೆಯೇ ಮಗ ಡಾಕ್ಟರ್ ಯತೀಶ್ ಅವರಿಗೆ ಚಾಮರಾಜನಗರ ಮೂಲದ ಡಾಕ್ಟರ್ ಅಪೂರ್ವ ಅವರ ಜೊತೆ ಮದುವೆ ನಿಶ್ಚಯವಾಯಿತು.. ಅಂದುಕೊಂಡಂತೆ ನಿನ್ನೆ ನಂಜನಗೂಡಿನಲ್ಲಿ ಮಗ ಡಾಕ್ಟರ್ ಯತೀಶ್ ಹಾಗೂ ಡಾಕ್ಟರ್ ಅಪೂರ್ವ ಅವರ ಮದುವೆ ಅದ್ಧೂರಿಯಾಗಿ ನೆರವೇರಿತು.. ಮದುವೆ ಮನೆ ತುಂಬೆಲ್ಲಾ ನೆಂತರಿಷ್ಟರು ಓಡಾಡಿಕೊಂಡು ಸಂಭ್ರಮದಿಂದ ಮದುವೆ ಮಾಡಿದರು.. ಆದರೆ ಅದೇ ಮದುವೆ ಮನೆಯಲ್ಲಿ ಮಗನ‌ ಮದುವೆ ಕನಸು ಕಂಡಿದ್ದ ಡಾಕ್ಟರ್ ಯತೀಶ್ ಅವರ ತಂದೆ ರಮೇಶ್ ಅವರು ಮಾತ್ರ ಒಂದೇ ಕಡೆ ಒಂದೇ ಚೇರ್ ಮೇಲೆ ಕೂತಿದ್ದರು.. ಮಗನ‌ ಮದುವೆ ಕಣ್ಣ ಮುಂದೆ ನಡೆಯುತ್ತಿದ್ದರೂ ಸಹ ಅವರು ಒಂದೂ ಮಾತನಾಡಲಿಲ್ಲ..

ಇತ್ತ ರಮೇಶ್ ಅವರ ಪತ್ನಿ ಮಗನ ಮದುವೆಯ ಸಂಭ್ರಮದ ಜೊತೆಗೆ ಕಣ್ಣಲ್ಲಿ ನೀರು ತುಂಬಿಕೊಂಡರು.. ಇದಕ್ಕೆ ಕಾರಣ ಅಲ್ಲಿ ಚೇರ್ ಮೇಲೆ ಕೂತಿರುವ ರಮೇಶ್ ಅವರು ಜೀವಂತವಾಗಿಲ್ಲ.. ಹೌದು ಕಳೆದ ವರ್ಷವೇ ರಮೇಶ್ ಅವರು ಕೋವಿಡ್ ನಿಂದಾಗಿ ಜೀವ ಕಳೆದುಕೊಂಡು ಬಿಟ್ಟಿದ್ದರು.. ಆದರೆ ರಮೇಶ್ ಅವರು ಮಗನ‌ ಮದುವೆ ನೋಡಬೇಕು ಎಂದು ಬಹಳ ಆಸೆ ಪಟ್ಟಿದ್ದರು.. ಆ ಕಾರಣಕ್ಕೆ ಮಗ ತನ್ನ ತಂದೆ ಇಲ್ಲದೇ ನಾನು ಹೇಗೆ ಮದುವೆಯಾಗಲಿ ಎಂದು ಅಪ್ಪನ ಸಿಲಿಕಾನ್ ಪ್ರತಿಮೆಯನ್ನು ಮಾಡಿಸಿದನು.. ಹೌದು ಡಾಕ್ಟರ್ ಯತೀಶ್ ಅವರು ತನ್ನ ಸಹೋದರನ ಜೊತೆ ಸೇರಿ ಸಿಲಿಕಾನ್ ಪ್ರತಿಮೆಯನ್ನು ಮಾಡಿಸುವ ನಿರ್ಧಾರ ಮಾಡಿದರು..

ಅಪ್ಪನಂತೂ ಇಲ್ಲ.. ಅಪ್ಪನ ಪ್ರತಿಮೆಯ ಮುಂದಾದರೂ ಮದುವೆಯಾಗುವ ನಿರ್ಧಾರ ಮಾಡಿದ ಯತೀಶ್ ಅಂದುಕೊಂಡಂತೆ ತನ್ನ ತಂದೆಯನ್ನೇ ಯಥಾವತ್ ಹೋಲುವ ಸಿಲಿಕಾನ್ ಪ್ರತಿಮೆ ಮಾಡಿಸಿ ಅದನ್ನು ಮದುವೆ ಮನೆಗೆ ತಂದು ಮದುವೆ ಮಂಟಪದ ಬಳಿ ಇರಿಸಿದರು.. ಒಂದು ಚೇರ್ ಮೇಲೆ ಕೂರಿಸಿದರು.. ನೋಡಲು ನಿಜವಾಗಿಯೂ ರಮೇಶ್ ಅವರೇ ಕೂತಂತೆ ಭಾಸವಾಗುತಿತ್ತು.. ಮದುವೆಗೆ ಬಂದ ದೂರದ ಸಂಬಂಧಿಗಳು ಒಂದು ಕ್ಷಣ ಆಶ್ಚರ್ಯ ಪಟ್ಟುದ್ದೂ ಉಂಟು. ಇನ್ನು ಮಗನ ಈ ಕೆಲಸಕ್ಕೆ ತಂದೆಯ ಪ್ರತಿಮೆ ಮಾಡಿಸಿ ಅದರ ಮುಂದೆ ಮದುವೆಯಾಗಿದ್ದಕ್ಕೆ ಸಂಬಂಧಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ..

ಇನ್ನು ಅತ್ತ ಕುಟುಂಬದ ಫೋಟೋ ಚಿತ್ರೀಕರಣ ವೇಳೆಯೂ ಅಪ್ಪನ ಪ್ರತಿಮೆಯ ಪಕ್ಕ ಅಮ್ಮನನು ಕೂರಿಸಿ ಫೋಟೋ ಚಿತ್ರಿಕರಣ‌ ಮಾಡಿಸಿದ್ದು ನಿಜಕ್ಕೂ ಮನಕಲಕುವಂತಿತ್ತು.. ಮಗನ ಮದುವೆ ನೋಡುವ ಆಸೆ ಪಟ್ಟ ತಂದೆಯ ಕನಸನ್ನು ಈ ಮೂಲಕ ನನಸು ಮಾಡಿದ ಮಗ ಯತೀಶ್ ಅವರಿಗೆ ನಿಜಕ್ಕೂ ಹ್ಯಾಟ್ಸ್ ಆಫ್.. ನಾವಾಯ್ತು ನಮ್ಮ ಸಂತೀಷವಾಯ್ತು ಅಂತ ಇರೋ ಎಷ್ಟೋ ಮಕ್ಕಳ ನಡುವೆ ಇಲ್ಲವಾದ ತಂದೆಯ ಆಸೆಯನ್ನು ನೆರವೇರಿಸಲು ತಮ್ಮ ಕೈಲಾದ ಪ್ರಯತ್ನ ಮಾಡಿದ ಮಗ ಯತೀಶ್ ಅವರ ನಡೆ ನಿಜಕ್ಕೂ ಮೆಚ್ಚುವಂತದ್ದು.. ರಮೇಶ್ ಅವರು ಜೀವಂತವಾಗಿ ಇಲ್ಲದಿರಬಹುದು ಆದರೆ ಮಗನ ಈ ಪ್ರೀತಿಯನ್ನು ದೂರದಲ್ಲೆಲ್ಲೋ ನಿಂತು ಕಂಡು ಕಣ್ಣೀರಿಟ್ಟಿರುವುದಂತೂ ಸತ್ಯ.. ಕುಟುಂಬದ ಮೇಲೆ ತಂದೆ ತಾಯಿಯ ಮೇಲೆ ಮಕ್ಕಳಿಗೆ ಇರಬೇಕಾದ ಪ್ರೀತಿ ಅದು. ಒಳ್ಳೆದಾಗಲಿ..