ರಮೇಶ್ ಜಾರಕಿಹೋಳಿ ಬೆನ್ನಲ್ಲೇ ನಮ್ಮ ವೀಡಿಯೋ ಪ್ರಕಟಿಸಬೇಡಿ ಎಂದು ಕೋರ್ಟ್ ಮೊರೆ ಹೋದ ಪ್ರಭಾವಿ ಆರು ಸಚಿವರು ಯಾರು ಯಾರು ಗೊತ್ತಾ..

0 views

ರಾಜ್ಯ ರಾಜಕಾರಣದಲ್ಲಿ ಸಂಚಲನ ಮೂಡಿಸಿರುವ ರಮೇಶ್ ಜಾರಕಿಹೋಳಿ ವಿಚಾರ ಸದ್ಯ ಸಚಿವ ಸ್ಥಾನಕ್ಕೆ ರಾಜಿನಾಮೆ ಕೊಟ್ಟು ರಮೇಶ್ ಜಾರಕಿಹೋಳಿ ಅವರು ಹೊರನಡೆದಿದ್ದಾರೆ.. ಆದರೆ ಅವರು ಈಗಲೂ ಆ ವೀಡಿಯೋ ನನ್ನದಲ್ಲ ಎಂದೇ ಹೇಳಿದ್ದು ವಿಚಾರಣೆ ನಡೆದರಷ್ಟೇ ಸತ್ಯ ಹೊರ ಬರಲಿದೆ.. ಆದರೆ ಸಂತ್ರಸ್ಥೆ ಎನ್ನಲಾಗುತ್ತಿರುವ ಮಹಿಳೆಯಾಗಲಿ ಅಥವಾ ಸಂಬಂಧಪಟ್ಟವರಗಾಲಿ ತಮಗೆ ಅನ್ಯಾಯವಾಗಿದೆ ಎಂದು ಯಾರೂ ಸಹ ರಮೇಶ್ ಜಾರಕಿಹೋಳಿ ವಿರುದ್ಧವಾಗಿ ದೂರು ನೀಡದ ಕಾರಣ ಯಾವುದೇ ಕ್ರಮ ಕೈಗೊಳ್ಳುವುದಿಲ್ಲ..

ಇನ್ನು ಅಡಕೆಗೆ ಹೋದ ಮಾನ ಆನೆ ಕೊಟ್ಟರು ಬಾರದೆಂಬಂತೆ ರಮೇಶ್ ಜಾರಕಿ ಹೋಳಿ ವೀಡಿಯೋ ರಾಜ್ಯದಲ್ಲಿ ಮಾತ್ರವಲ್ಲ ರಾಷ್ಟ್ರ ಮಟ್ಟದಲ್ಲಿ ಸುದ್ದಿಯಾಗಿ ಅಲ್ಲಿನ ವಾಹಿನಿಗಳಿಗೂ ಆಹಾರವಾಗಿ ಹೋಯ್ತು.. ಇದೀಗ ರಮೇಶ್ ಜಾರಕಿಹೋಳಿ ಸುದ್ದಿ ನೋಡಿದ ಆರು ಜನ ಸಚಿವರು ತಮ್ಮ ಬಗ್ಗೆ ಸುದ್ದಿಯಾಗಲಿ ವೀಡಿಯೋ ಆಗಲಿ ಪ್ರಕಟಿಸಬಾರದು ಎಂದು ಕೋರ್ಟ್ ಮೊರೆ ಹೋಗಿದ್ದಾರೆ.. ಹೌದು ವಲಸೆ ಬಂದ ಆರು ಪ್ರಭಾವಿ ಸಚಿವರು ಕೋರ್ಟ್ ಮೊರೆ ಹೋಗಿದ್ದಾರೆ.. ಕಾರ್ಮಿಕ ಹಾಗೂ ಸಕ್ಕರೆ ಸಚಿವರಾದ ಶಿವರಾಮ ಅರಬೈಲ್‌ ಹೆಬ್ಬಾರ್‌, ಕೃಷಿ ಸಚಿವ ಬಿ.ಸಿ ಪಾಟೀಲ್‌, ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಕೆ.ಸುಧಾಕರ್‌, ಸಹಕಾರ ಸಚಿವ ಎಸ್‌.ಟಿ ಸೋಮಶೇಖರ್‌, ನಗರಾಭಿವೃದ್ಧಿ ಸಚಿವ ಭೈರತಿ ಬಸವರಾಜ ಹಾಗೂ ತೋಟಗಾರಿಕೆ ಹಾಗೂ ಕ್ರೀಡಾ ಸಚಿವ ಕೆ.ಸಿ ನಾರಾಯಣಗೌಡ ಅವರು ಸದ್ಯ ಕೋರ್ಟ್ ಮೊರೆ ಹೋಗಿದ್ದು ತಮ್ಮ ವಿರುದ್ಧ ಮಾಧ್ಯಮಗಳು ವರದಿ ಮಾಡಬಾರದು ಎಂದು ಕೋರ್ಟ್‌ಗೆ ಮನವಿ ಮಾಡಿದ್ದಾರೆ.

ಸಚಿವರುಗಳ ಈ ನಡೆ ಆಶ್ಚರ್ಯ ಹಾಗೂ ಅನುಮಾನ ಮೂಡಿಸಿದ್ದು ಸಾಮಾಮ್ಯ ಜನರು ಬೇರೆ ಬೇರೆ ರೀತಿಯ ಅಭಿಪ್ರಾಯಗಳನ್ನು ವ್ಯಕ್ತ ಪಡಿಸುತ್ತಿದ್ದಾರೆ.. ಆದರೆ ಇದೀಗ ಕೋರ್ಟ್ ಮೊರೆ ಹೋಗಲು ಕಾರಣವೇನು ಎಂದು ಸಚಿವ ಸುಧಾಕರ್ ಅವರು ತಿಳಿಸಿದ್ದು ಈ ಕುರಿತು ಸ್ಪಷ್ಟನೆ ನೀಡಿದ್ದಾರೆ.. ಹೌದು ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿರುವ ಸಚಿವ ಸುಧಾಕರ್ ಅವರು “ಸತ್ಯ ಹೊಸಲು ದಾಟುವುದರೊಳಗೆ, ಸುಳ್ಳು ಊರೆಲ್ಲಾ ಸುತ್ತಾಡಿಕೊಂಡು ಬಂದಿರುತ್ತದೆ ಎಂಬಂತೆ, ಜೀವಮಾನವಿಡೀ ಗಳಿಸಿರುವ ಒಳ್ಳೆಯ ಹೆಸರು, ಯಾರದೋ ಷಡ್ಯಂತ್ರದಿಂದ ಕ್ಷಣಮಾತ್ರದಲ್ಲಿ ನಶಿಸಿ ಹೋಗುವ ಸಾಧ್ಯತೆ ಇರುವುದರಿಂದ, ಮುನ್ನೆಚ್ಚರಿಕೆಯಿಂದ ಪ್ರಮಾಣೀಕರಿಸದ ಸುದ್ದಿಗಳನ್ನು ಪ್ರಸಾರ ಮಾಡದಂತೆ ತಡೆಯಾಜ್ಞೆ ಕೋರಿ ನ್ಯಾಯಾಲಯದ ಮೊರೆ ಹೋಗಿದ್ದೇವೆ.. ರಾಜ್ಯದಲ್ಲಿ ದಕ್ಷತೆಯಿಂದ ಕಾರ್ಯ ನಿರ್ವಹಿಸಿ ಜನಮನ್ನಣೆ ಗಳಿಸುತ್ತಿರುವ ಸಚಿವರ ವಿರುದ್ಧ ವ್ಯವಸ್ಥಿತ ಸಂಚು ರೂಪಿಸಿ ತೇಜೋವಧೆ ಮಾಡುವ ರಾಜಕೀಯ ಷಡ್ಯಂತ್ರ ನಡೆಯುತ್ತಿರುವ ಗುಮಾನಿ ಇದೆ. ಆಧುನಿಕ ತಂತ್ರಜ್ಞಾನದ ಯುಗದಲ್ಲಿ ಪ್ರತ್ಯಕ್ಷ ಕಂಡರೂ ಪ್ರಮಾಣಿಸಿ ನೋಡು ಎಂಬ ಪರಿಸ್ಥಿತಿ ಇರುವುದು ಸುಳ್ಳಲ್ಲ..

ಸಾರ್ವಜನಿಕ ಜೀವನದಲ್ಲಿರುವವರಿಗೆ ಈ ರೀತಿಯ ಸವಾಲುಗಳು ಸಾಮಾನ್ಯ. ಆದರೆ ನಮ್ಮ ವಿರುದ್ಧ ಷಡ್ಯಂತ್ರಗಳು ನಡೆದಾಗ ಇಂತಹ ದುಷ್ಟ ಶಕ್ತಿಗಳನ್ನು ಎದುರಿಸುವುದೂ ಅನಿವಾರ್ಯ. ನಮ್ಮ ಆತ್ಮಸಾಕ್ಷಿ ಸರಿ ಇರುವವರೆಗೂ, ಜನರ ಆಶೀರ್ವಾದ ಇರುವವರೆಗೂ ಯಾವ ಷಡ್ಯಂತ್ರವೂ ಯಶಸ್ವಿಯಾಗುವುದಿಲ್ಲ. ನಮ್ಮ ನ್ಯಾಯವ್ಯವಸ್ಥೆ ಮೇಲೆ ಸಂಪೂರ್ಣ ವಿಶ್ವಾಸವಿದೆ ಎಂದು ತಿಳಿಸಿದ್ದಾರೆ..

ಒಟ್ಟಿನಲ್ಲಿ ಯಾವುದು ಸತ್ಯ ಯಾವುದು ಸುಳ್ಳು ಎನ್ನುವುದಕ್ಕಿಂತ ಇಲ್ಲಿ ರಮೇಶ್ ಜಾರಕಿಹೋಳಿ ಅವರ ಕುರಿತು ಪ್ರಕಟವಾದ ವಿಚಾರ ಸತ್ಯವೇ ಆಗಿದ್ದರೆ ನಿಜವಾಗಿ ಅನ್ಯಾಯ ಆಗಿದ್ದು ಮಾತ್ರ ರಮೇಶ್ ಜಾರಕಿಹೋಳಿ ಅವರ ಪತ್ನಿಗೆ ಎನ್ನುವ ಮಾತು ಸಾಮಾಜಿಕ ಜಾಲತಾಣದಲ್ಲಿ ಕೇಳಿ ಬರುತ್ತಿದೆ..