ರಾನು ಮೊಂಡಲ್.. ಸಮಾಜಿಕ ಜಾಲತಾಣದ ಪವರ್ ಏನು ಅಣ್ತ ತೋರಿಸಿಕೊಟ್ಟ ಘಟನೆಗಳಲ್ಲಿ ರಾನು ಮೊಂಡಲ್ ಅವರ ಘಟನೆಯೂ ಒಂದು.. ಆದರೆ ದೇವರು ಒಮ್ಮೆ ಎಲ್ಲವನ್ನೂ ಕೊಟ್ಟು ನೋಡುತ್ತಾನೆ ಎನ್ನುವುದಕ್ಕ್ರ್ ನೈಜ್ಯ ಘಟನೆ ಹಾಗೂ ಎಲ್ಲರಿಗೂ ಇದೊಂದು ಪಾಠವೇ ಸರಿ. ಹೌದು ಅಂದು ರೈಲ್ವೇ ನಿಲ್ದಾಣವೊಂದರಲ್ಲಿ ಸುಮಧುರವಾಗಿ ಹಾಡಿಕೊಂಡು ಜನರಿಂದ ಹಣ ಪಡೆಯುತ್ತಿದ್ದ ರಾನು ಮೊಂಡಲ್ ರನ್ನ ನೋಡಿ ಒಳ್ಳೆಯ ಮನಸ್ಸಿನ ವ್ಯಕ್ತಿಯೊಬ್ಬರು ವೀಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟರು..
ಪ್ರತಿಭೆ ಯಾರ ಸ್ವತ್ತೂ ಅಲ್ಲ ಎಂದು ಸಾಮಾಜಿಕ ಜಾಲತಾಣದಲ್ಲಿ ವೀಡಿಯೋ ವೈರಲ್ ಕೂಡ ಆಯಿತು.. ಸೆನ್ಸೇಷನ್ ಕ್ರಿಯೇಟ್ ಮಾಡಿದ ವೀಡಿಯೋ ದೊಡ್ಡ ದೊಡ್ಡವರ ಕಣ್ಣಿಗೂ ಬಿತ್ತು.. ರಾನು ವನ್ನು ಗುರುತಿಸಿ ಆಲ್ಬಂ ನಲ್ಲಿ ಹಾಡಿಸಿದರು.. ಲಕ್ಷ ಲಕ್ಷ ಸಂಭಾವನೆಯನ್ನೂ ಕೊಟ್ಟರು.. ಇಷ್ಟು ದಿನ ಇಲ್ಲದ ಸಂಬಂಧಗಳೆಲ್ಲಾ ರಾನು ಕೈಗೆ ಹಣ ಬಂದ ನಂತರ ಬಂದವು.. ಆಕೆ ಅಷ್ಟು ದಿನ ಪಟ್ಟ ಕಷ್ಟಕ್ಕೆಲ್ಲಾ ಮುಕ್ತಿ ದೊರೆಯಿತು.. ಇನ್ನಾದರೂ ಆಕೆ ಚೆನ್ನಾಗಿರಲಿ ಎಂದು ಎಲ್ಲರೂ ಹಾರೈಸಿದ್ದರು.. ಆದರೆ ಮುಂದೆ ನಡೆದದ್ದೇ ಬೇರೆ.. ಹೌದು ರಾನು ಜೀವನದಲ್ಲಿ ಹಣ ಬರುತ್ತಿದ್ದಂತೆ ಆಕೆಗೆ ಅಹಂಕಾರವೂ ಬಂದಿತು..
ಮಾಲ್ ಗಳಲ್ಲಿ ಆಕೆಯ ಜೊತೆ ಫೋಟೋ ತೆಗೆಸಿಕೊಳ್ಳಲು ಜನರು ಬಂದಾಗ.. ನನ್ನನ್ನು ಮುಟ್ಟಬೇಡಿ ದೂರದಲ್ಲಿ ನಿಂತು ಫೋಟೋ ತೆಗೆದುಕೊಳ್ಳಿ ಎಂದಿದ್ದ ರಾನು ಮೊಂಡಲ್ ನನ್ನು ಇಂದು ಮುಟ್ಟುವುದಿರಲಿ ಮಾತನಾಡಿಸುವವರೂ ಯಾರೂ ಇಲ್ಲ.. ಹೌದು ಹಣ ಬಂದಾಗ ಹೋದ ಜಾಗಗಳಲೆಲ್ಲಾ ಜನರ ಜೋತೆ ಅಹಂಕಾರದಿಂದ ನಡೆದುಕೊಂಡ ರಾನು ಮೊಂಡಲ್ ಇದೀಗ ಮತ್ತೆ ತಮ್ಮ್ ಅಹಳೆಯ ವೃತ್ತಿಗೆ ಮರಳಿದ್ದಾರೆ.. ಹೌದು ರಸ್ತೆಗಳಲ್ಲಿ ತನ್ನ ಬಟ್ಟೆ ತುಂಬಿದ ಬ್ಯಾಗ್ ಹಿಡಿದು ಹಳೆಯ ಕೊಳಕು ಬಟ್ಟೆ ತೊಟ್ಟು ಬೀದಿ ಬೀದಿ ಸುತ್ತುತ್ತಿದ್ದಾರೆ.. ಜನರ ಬಳಿ ಹಣ ಪಡೆಯುತ್ತಿದ್ದಾರೆ..
ಅದರಲ್ಲೂ ಹಿಂದೊಮ್ಮೆ ದುಬಾರಿ ಮೇಕಪ್ ನಿಂದಲೂ ಸದ್ದು ಮಾಡಿದ್ದ ರಾನು ಮೊಡಲ್ ವಿಚಾರ ದೊಡ್ಡ ಸುದ್ದಿಯಾಗಿತ್ತು.. ಟ್ರೋಲ್ ಕೂಡ ಆಗಿತ್ತು.. ಆದರೀಗ ಪ್ಯಾಂಟ್ ಇಲ್ಲದೇ ಕೇವಲ ಒಂದು ಚೂಡಿದಾರ್ ಟಾಪ್ ಧರಿಸಿ ರಸ್ತೆಗಳಲ್ಲಿ ಬ್ಯಾಗ್ ಹಿಡಿದು ತಿರುಗುತ್ತಿದ್ದು ರಾನು ಮೊಂಡಲ್ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.. ಜನರಿಂದ ಹಣ ಪಡೆದು ಹೊಟ್ಟೆಗೆ ಏನಾದರು ತಿನ್ನಲು ಬೇಕರಿಯೊಂದಕ್ಕೆ ತೆರಳಿದಾಗ ಜನರ ಕಣ್ಣಿಗೆ ಬಿದ್ದಿದ್ದಾರೆ..
ನಿಜಕ್ಕೂ ಎಲ್ಲರಿಗೂ ಇದೊಂದು ಎಚ್ಚರಿಕೆಯ ಘಂಟೆಯೂ ಹೌದು.. ಜೀವನದ ಪಾಠವೂ ಹೌದು.. ದೇವರು ಸಿರಿವಂತಿಕೆ ಕೊಟ್ಟಾಗ ನಮ್ಮ ಗುಣ ದೊಡ್ದಾದಾಗಬೇಕು.. ಆದರೆ ಹಣವಿದೆ ಎಂದು ದೊಡ್ಡಸ್ಥಿಕೆ ತೋರಿದರೆ ಮತ್ತೆ ಹಳೆ ಸ್ಥಿತಿಗೆ ಮರಳಿಸುವನು ಎಂಬುದನ್ನು ಇಂದು ರಸ್ತೆಯಲ್ಲಿ ರಾನು ಮೊಂಡಲ್ ಸ್ಥಿತಿಯೇ ನೈಜ್ಯ ಉದಾಹರಣೆ..