ಮೈಸೂರಿನಲ್ಲಿ ಅಣ್ಣ ಇಲ್ಲವಾದ ದಿನವೇ ತಂಗಿ ಏನಾದಳು ನೋಡಿ..

0 views

ಅಣ್ಣ ತಂಗಿ ಬಾಂಧವ್ಯವೇ ಹಾಗೆ.. ಮನೆಯಲ್ಲಿ ಸದಾ ಒಬ್ಬರಿಗೊಬ್ಬರೂ ಕಿತ್ತಾಡಿಕೊಂಡರೂ ಸಹ ಹೊರಗೆ ಒಬ್ಬರಿಗೊಬ್ಬರು ಏನು ಬೇಕಾದರೂ ಮಾಡುವಷ್ಟು ಪ್ರೀತಿ ಅವರುಗಳ ನಡುವೆ ಇರುತ್ತದೆ.. ಒಬ್ಬರಿಗೆ ಏನಾದರೂ ಸಣ್ಣ ನೋವು ಆದರೂ ಸಹ ಮತ್ತೊಬ್ಬರು ಸಹಿಸಲಾರರು.. ತಂಗಿಗೆ ಅಣ್ಣ ಸದಾ ಶ್ರೀರಕ್ಷೆಯಾಗಿ ನಿಂತರೆ.. ಅಣ್ಣನಿಗೆ ತಂಗಿ ಯಾವಾಗಲೂ ಎರಡನೇ ತಾಯಿಯಾಗಿರುತ್ತಾಳೆ.. ಆದರೆ ಅಂತಹ ಅಣ್ಣನೇ ಜೀವ ಕಳೆದುಕೊಂಡು ಮಲಗಿರುವುದನ್ನು ನೋಡುವ ಆ ಸ್ಥಿತಿ ಯಾರಿಗೂ ಬಾರದಿರಲಿ.. ಮೈಸೂರಿನಲ್ಲಿ ಅಂತಹುದೇ ಒಂದು ಮನಕಲಕುವ ಘಟನೆ ನಡೆದಿದ್ದು ಜೀವ ಕಳೆದುಕೊಂಡು ಮಲಗಿದ್ದ ಅಣ್ಣನನ್ನು ನೋಡುತ್ತಿದ್ದಂತೆ ತಂಗಿ ಆದ ಸ್ಥಿತಿ ಕಂಡು ಇದೀಗ ಇಡೀ ಕುಟುಂಬವೇ ಬೆಚ್ಚಿಬಿದ್ದಿದೆ‌‌..

ಹೌದು ಈತನ ಹೆಸರು ಕೀರ್ತಿ.. ವಯಸ್ಸು ಕೇವಲ ಇಪ್ಪತ್ತೆಂಟು ವರ್ಷ.. ಮೈಸೂರು ಜಿಲ್ಲೆಯ ಹುಣಸೂರಿನ ಸೋಮನಹಳ್ಳಿಯ ನಿವಾಸಿ.. ಬದುಕಿ ಬಾಳಬೇಕಾದ ಹುಡುಗ.. ಆದರೆ ಇಪ್ಪತ್ತೆಂಟು ವರ್ಷಕ್ಕೆ ಜೀವ ಕಳೆದುಕೊಳ್ಳುವಂತಾಯಿತು.. ಹೌದು ಹುಣಸೂರು ತಾಲೂಕಿನ ಸೋಮನಹಳ್ಳಿ ಗೇಟ್ ಬಳಿ ನಿನ್ನೆ ಬೈಕ್ ನಲ್ಲಿ ತೆರಳುತ್ತಿದ್ದ ಕೀರ್ತಿಗೆ ಎದುರಿನಿಂದ ಕಾರ್ ಒಂದು ಬಂದಿತ್ತು.. ಹೌದು ಬೈಕ್ ಹಾಗೂ ಕಾರ್ ನಡುವೆ ನಡೆದ ಘಟನೆಯಿಂದಾಗಿ ಕೀರ್ತಿ ಸ್ಥಳದಲ್ಲಿಯೇ ಜೀವ ಕಳೆದುಕೊಳ್ಳುವಂತಾಯಿತು..

ಹೌದು ಕೀರ್ತಿ ಸ್ಥಳದಲ್ಲಿಯೇ ಜೀವ ಕಳೆದುಕೊಂಡರೆ ಇತ್ತ ಮತ್ತೆ ಮೂವರಿಗೆ ಗಂಭೀರ ಗಾಯಗೊಂಡು ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು.. ಇನ್ನು ಇತ್ತ ಕೀರ್ತಿಯ ಅಂತ್ಯ ಸಂಸ್ಕಾರವನ್ನು ಸ್ವಗ್ರಾಮದಲ್ಲಿ ಏರ್ಪಡಿಸಲಾಗಿತ್ತು.. ಅಂತ್ಯ ಸಂಸ್ಕಾರಕ್ಕೆ ಕುಟುಂಬದವರು ಸಂಬಂಧಿಕರು ಗ್ರಾಮಸ್ಥರು ಎಲ್ಲರೂ ಆಗಮಿಸಿದರು.. ಅತ್ತ ಕೀರ್ತಿಯ ತಂಗಿ ರಶ್ಮಿ ಸಹ ಬೇರೆ ಊರಿನಿಂದ ಅಣ್ಣನ ವಿಚಾರ ತಿಳಿದು ದುಃಖದಲ್ಲಿಯೇ ಆಗಮಿಸಿದಳು.. ಆದರೆ ಮುಂದೆ ನಡೆದ ಘಟನೆ ಮಾತ್ರ ನೆರೆದಿದ್ದವರನ್ನು ಬೆಚ್ಚಿ ಬೀಳುವಂತೆ ಮಾಡಿದೆ..

ಹೌದು ಆಕೆಯ ಹೆಸರು ರಶ್ಮಿ.. ವಯಸ್ಸು ಇಪ್ಪತ್ತೊಂದು ವರ್ಷ.. ರಶ್ಮಿ ಬೇರೆ ಊರಿನಿಂದ ಅಣ್ಣನ ಅಂತ್ಯ ಸಂಸ್ಕಾರಕ್ಕಾಗಿ ಬಂದಳು ಆದರೆ ಅಣ್ಣ ಕೀರ್ತಿಯನ್ನು ನೋಡುತ್ತಿದ್ದಂತೆ ಇತ್ತ ರಶ್ಮಿ ಸಹ ಅದೇ ಕ್ಷಣ ಇಲ್ಲವಾಗಿ ಹೋದಳು.. ಹೌದು ರಶ್ಮಿ ತನ್ನ ಅಣ್ಣ ಕೀರ್ತಿ ಇಲ್ಲವಾದ ವಿಚಾರ ತಿಳಿದು ಊರಿಗೆ ಬಂದಳು ಅಣ್ಣನ ಅಂತ್ಯ ಸಂಸ್ಕಾರ ಮಾಡಲು ಬಂದ ಜನ ತಂಗಿಯ ಅಂತ್ಯ ಸಂಸ್ಕಾರವನ್ನೂ ಸಹ ಮಾಡುವಂತಾಗಿ ಹೋಯ್ತು.. ಒಂದು ಕ್ಷಣ ನಡೆದ ಘಟನೆ ನೋಡಿ ನೆರೆದಿದ್ದವರೆಲ್ಲಾ ಬೆಚ್ಚಿಬಿದ್ದರು..

ಹೌದು ರಶ್ಮಿ ಏನು ಕೀರ್ತಿಯ ಸ್ವಂತ ತಂಗಿಯಲ್ಲ.. ಆತನ ದೊಡ್ಡಪ್ಪನ ಮಗಳು.. ಆದರೆ ಇಬ್ಬರೂ ಸಹ ಸ್ವಂತ ಅಣ್ಣ ತಂಗಿಯಾಗಿಯೇ ಒಟ್ಟಾಗಿ ಬೆಳೆದವರು.. ಅಣ್ಣನೆಂದರೆ ಆಕೆಗೂ ಜೀವ.. ಇತ್ತ ತಂಗಿ ಕಂಡರೆ ಕೀರ್ತಿಗೂ ಅಷ್ಟೇ ಪ್ರೀತಿ.. ಇತ್ತ ರಸ್ತೆಯಲ್ಲಿ ನಡೆದ ಘಟನೆಯಿಂದಾಗಿ ಜೀವ ಕಳೆದುಕೊಂಡ ಕೀರ್ತಿ ನೋಡಲು ಬಂದ ರಶ್ಮಿ ಅಣ್ಣನನ್ನು ನೋಡುತ್ತಿದ್ದಂತೆ ನೊಂದು ಅದೇ ಸ್ಥಳದಲ್ಲಿ ಕುಸಿದು ಬಿದ್ದಿದ್ದಾರೆ..

ತಕ್ಷಣ ಆಕೆಯನ್ನು ಹುಣಸೂರಿನ ಆಸ್ಪತ್ರೆಗೆ ಕರೆದುಕೊಂಡು ಬಂದು ದಾಖಲಿಸಿ ಚಿಕಿತ್ಸೆ ಕೊಡಿಸಲಾಯಿತು.. ಆದರೆ ಪ್ರಯೋಜನವಾಗಲಿಲ್ಲ‌‌ ಅದಾಗಲೇ ರಶ್ಮಿ ತನ್ನ ಅಣ್ಣನ ಜೊತೆಯೇ ಹೋಗಲು ನಿರ್ಧಾರ ಮಾಡಿಯಾಗಿತ್ತು.. ಹೌದು ಅಣ್ಣನ ಜೊತೆಯೇ ತಂಗಿಯ ಅಂತ್ಯ ಸಂಸ್ಕಾರವನ್ನೂ ಸಹ ಮಾಡುವಂತಾಯಿತು.. ಚಿಕ್ಕ ವಯಸ್ಸಿಗೆ ಅಣ್ಣ ತಂಗಿ ಇಬ್ಬರೂ ಸಹ ಒಟ್ಟಿಗೆ ಕೊನೆಯುಸಿರೆಳೆದು ಒಟ್ಟಿಗೆ ಅಂತ್ಯ ಸಂಸ್ಕಾರ ಮಾಡುವಂತಾಗಿ ಹೋಯ್ತು.. ಕುಟುಂಬದ ಆಕ್ರಂದನ ಮುಗಿಲು ಮುಟ್ಟಿತ್ತು.. ಸಂಕಟ ತರುವ ಘಟನೆ ನೋಡಿ ಜನರು ಮರುಗಿದರು.. ಅಣ್ಣ ತಂಗಿ ಬಾಂಧವ್ಯ ನೋಡಿ ಕಣ್ಣೀರಿಟ್ಟರು.. ಯಾರಿಗೂ ಇಂತಹ ಸ್ಥಿತಿ ಬಾರದಿರಲಿ.. ಬದುಕಿ ಬಾಳಬೇಕಾದ ಮಕ್ಕಳನ್ನು ಈ ರೀತಿ ಒಟ್ಟೊಟ್ಟಿಗೆ ಕಳೆದುಕೊಂಡ ಆ ತಂದೆ ತಾಯಂದಿರಿಗೆ ಧೈರ್ಯ ನೀಡಲಿ..