ಮಾಲ್ಡೀವ್ಸ್ ನಲ್ಲಿ ತನ್ನ ಹುಡುಗನ ಜೊತೆ ಕಾಣಿಸಿಕೊಂಡ ಕನ್ನಡ ಕಿರುತೆರೆಯ ಖ್ಯಾತ ನಟಿ..

0 views

ಕಿರುತೆರೆಯ ಕೆಲವು ಧಾರಾವಾಹಿಗಳನ್ನು ಮತ್ತು ಅದರಲ್ಲಿನ ಕೆಲವು ಪಾತ್ರಗಳನ್ನಿ ಎಂದಿಗೂ ಮರೆಯಲು ಸಾಧ್ಯವಿಲ್ಲ. ಅಂತಹ ಧಾರಾವಾಹಿಗಳಲ್ಲಿ ಒಂದು ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿದ್ದ ಲಕ್ಸ್ಮಿ ಬಾರಮ್ಮ ಧಾರವಾಹಿ. ಲಕ್ಷ್ಮೀ ಬಾರಮ್ಮ ಧಾರಾವಾಹಿ ಯಾರಿಗೆ ತಾನೇ ಗೊತ್ತಿಲ್ಲ ಹೇಳಿ. ಲಕ್ಷ್ಮೀ ಬಾರಮ್ಮ ಧಾರವಾಹಿ ಮುಗಿದು ಹೋಗಿ ವರ್ಷಗಳೇ ಕಳೆದರು ಸಹ ಇನ್ನು ಅದೆಷ್ಟೋ ಜನರ ಮನಸ್ಸಿನಲ್ಲಿ ಅಚ್ಚೋತುಬಿಟ್ಟಿದೆ. ಈ ಧಾರಾವಾಹಿಯ ಲಚ್ಚಿ( ಚಿನ್ನು), ಗೊಂಬೆ ಹಾಗೂ ಚಂದು ಪಾತ್ರವನ್ನು ಇಂದಿಗೂ ಸಹ ಜನ ನೆನಪಿಸಿಕೊಳ್ಳುತ್ತಾರೆ. ಈ ಧಾರಾವಾಹಿಯ ಚಿನ್ನು ಪಾತ್ರಧಾರಿ ರಶ್ಮಿ ಪ್ರಭಾಕರ್. ಕಿರುತೆರೆಯ ಟಾಪ್ ನಟಿಯರಲ್ಲಿ ನಟಿ ರಶ್ಮಿ ಪ್ರಭಾಕರ್ ಕೂಡ ಒಬ್ಬರು. ಸದ್ಯ ನಟಿ ರಶ್ಮಿ ತಮ್ಮ ದಾಂಪತ್ಯ ಜೀವನವನ್ನು ಸಕತ್ ಎಂಜಾಯ್ ಮಾಡುತ್ತಿದ್ದಾರೆ.

ಕಿರಿತೆರೆ ನಟಿ ಲಕ್ಷ್ಮಿ ಬಾರಮ್ಮ ಖ್ಯಾತಿಯ ಧಾರಾವಾಹಿಯ ಮೂಲಕ ಚಿನ್ನು ಎಂದೇ ಮನೆ ಮಾತಾಗಿದ್ದಾರೆ ನಟಿ ರಶ್ಮಿ ಪ್ರಭಾಕರ್. ನಟಿ ರಶ್ಮಿ ಪ್ರಭಾಕರ್ ಕನ್ನಡ ಕಿರುತೆರೆಯ ಜೊತೆಗೆ ತೆಲುಗಿನಲ್ಲಿ ಸಹ ಸಕ್ರಿಯರಾಗಿರುವ ನಟಿ. ಕನ್ನಡದ ಲಕ್ಷ್ಮೀ ಬಾರಮ್ಮ, ಶುಭ ವಿವಾಹ, ಜೀವನಚೈತ್ರಾ, ಮನಸೆಲ್ಲಾ ನೀನೇ, ಮಹಾಭಾರತ, ದರ್ಪಣ, ಇನ್ನು ತಮಿಳಿನಲ್ಲಿ ಅರುಂಧತಿ ಹಾಗೂ ತೆಲುಗಿನಲ್ಲಿ ಪೌರ್ಣಮಿ ಹಾಗೂ ಕಾವ್ಯಂಜಲಿ ಧಾರಾವಾಹಿಗಳಲ್ಲಿ ನಟಿಸಿದ್ದಾರೆ. ಕನ್ನಡದ ಜೊತೆಗೆ ತಮಿಳು ಹಾಗೂ ತೆಲುಗಿನಲ್ಲಿ ಸಹ ನಟಿ ಅಪಾರ ಅಭಿಮಾನಿ ಬಳಗವನ್ನು ಸಂಪಾದಿಸಿಕೊಂಡಿದ್ದಾರೆ. ಸದ್ಯ ನಟಿ ಯಾವುದೇ ಧಾರಾವಾಹಿಗಳಲ್ಲಿ, ಇದೀಗ ನಟಿ ತಮ್ಮ ಪತಿ ನಿಖಿಲ್ ಭಾರ್ಗವ ಅವರ ಜೊತೆ ಮದುವೆಯ ಜೀವನವನ್ನು ಎಂಜಾಯ್ ಮಾಡುತ್ತಿದ್ದಾರೆ.

ನಟಿ ರಶ್ಮಿ ಪ್ರಭಾಕರ್ ಹಾಗೂ ನಿಖಿಲ್ ಭಾರ್ಗವ ಇಬ್ಬರೂ ಒಬ್ಬರನೊಬ್ಬರು ಪ್ರೀತಿಸಿ ಮದುವೆಯಾದವರು. ನಿಖಿಲ್ ಭಾರ್ಗವ ಅವರು ಬೆಂಗಳೂರಿನ ಜಾಹೀರಾತು ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದಾರೆ. ಮೊದಲಿಗೆ ರಶ್ಮಿ ಹಾಗೂ ನಿಖಿಲ್ ಇಬ್ಬರೂ ಸ್ನೇಹಿತರಾಗಿದ್ದರು, ನಂತರ ಸ್ನೇಹಾ ಪ್ರೀತಿಗೆ ತುರಿಗಿ, ಹಲವು ವರ್ಷಗಳ ಕಾಲ ಜೊತೆಗಿದ್ದು, ಒಬ್ಬರನೊಬ್ಬರು ಸಂಪೂರ್ಣವಾಗಿ ಅರಿತುಕೊಂಡು ಮದುವೆಯಾಗಲು ನಿರ್ಧರಿಸಿದರು. ತಮ್ಮ ಪ್ರೀತಿಯ ವಿಷಯವನ್ನು ತಮ್ಮ ಪೋಷಕರ ಬಳಿ ಹೇಳಿ, ಇಬ್ಬರ ಮನೆಯಲ್ಲಿ ಒಪ್ಪಿಗೆ ತೆಗೆದುಕೊಂಡು, ಗುರು ಹಿರಿಯರು ಹಾಗೂ ಸ್ನೇಹಿತರ ಸಮುಖದಲ್ಲಿ ನಟಿ ರಶ್ಮಿ ಪ್ರಭಾಕರ್ ಹಾಗೂ ನಿಖಿಲ್ ಭಾರ್ಗವ್ ಏಪ್ರಿಲ್ 25 ರಂದು ದಾಂಪತ್ಯ ಜೀವನಕ್ಕೆ ಕಾಲಿಟ್ಟರು.

ನಟಿ ರಶ್ಮಿ ಪ್ರಭಾಕರ್ ಹಾಗೂ ನಿಖಿಲ್ ಅವರ ಮದುವೆಗೆ ಕುಟುಂಬಸ್ಥರು, ಸ್ನೇಹಿತರು ಹಾಗೂ ಕಿರುತೆರೆಯ ಅನೇಕ ನಟ ನಟಿಯರು ಭಾಗಿಯಾಗಿದ್ದರು. ಇನ್ನು ತಮ್ಮ ಮದುವೆಯ ಫೋಟೋಗಳನ್ನು ನಟಿ ತಮ್ಮ ಸೋಷಿಯಲ್ ಮಿಡಿಯಾದಲ್ಲಿ ಹಂಚಿಕೊಂಡಿದ್ದರು, ಈ ಫೋಟೋ ನೋಡಿ ಅಭಿಮಾನಿಗಳು ಕಾಮೆಂಟ್ ಮಾಡುವ ಮೂಲಕ ನವಜೋಡಿಗೆ ಶುಭಕೋರಿದ್ದರು. ಇದೀಗ ನಟಿ ರಶ್ಮಿ ಹಾಗೂ ಪತಿ ನಿಖಿಲ್ ಹನಿಮೂನ್ ಹಾಗಿ ತೆರಳಿದ್ದಾರೆ. ಹೌದು ನಟಿ ರಶ್ಮಿ ಹಾಗೂ ಪತಿ ನಿಖಿಲ್ ಹನಿಮೂನ್ ಗಾಗಿ ಮಾಲ್ಡೀವ್ಸ್ ಗೆ ತೆರಳಿದ್ದಾರೆ. ಸದ್ಯ ರಶ್ಮಿ ದಂಪತಿ ಮಾಲ್ಡೀವ್ಸ್ ನಲ್ಲಿ ಸಕತ್ ಎಂಜಾಯ್ ಮಾಡುತ್ತಿದ್ದಾರೆ.

ಸೋಷಿಯಲ್ ಮೀಡಿಯಾದಲ್ಲಿ ಸಕತ್ ಆಕ್ಟಿವ್ ಇರುವ ನಟಿ ರಶ್ಮಿ ಪ್ರಭಾಕರ್ ಆಗಾಗ ತಮ್ಮ ಫೋಟೋ ಮತ್ತು ವಿಡಿಯೋಗಳನ್ನು ತಮ್ಮ ಅಭಿಮಾನಿಗಳ ಜೊತೆ ಹಂಚಿಕೊಳ್ಳುತ್ತಿರುತ್ತಾರೆ. ಇದೀಗ ನಟಿ ರಶ್ಮಿ ಹಾಗೂ ಅವರ ಪತಿ ಮಾಲ್ಡೀವ್ಸ್ ನಲ್ಲಿ ಸಕತ್ ಎಂಜಾಯ್ ಮಾಡುತ್ತಿದ್ದಾರೆ. ಸದ್ಯ ಅಲ್ಲಿನ ಸುಂದರ ಜಾಗಗಳಲ್ಲಿ ನಟಿ ತಮ್ಮ ಪತಿ ನಿಖಿಲ್ ಅವರ ಜೊತೆ ಪೋಸ್ ನೀಡಿದ್ದು, ಅದರ ಫೋಟೋಗಳನ್ನು ಇದೀಗ ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಈ ಫೋಟೋಗಳನ್ನು ನೋಡಿ ಅಭಿಮಾನಿಗಳು ಲೈಕ್ ಹಾಗೂ ಕಾಮೆಂಟ್ ಮಾಡುವ ಮೂಲಕ ಖುಷಿ ವ್ಯಕ್ತಪಡಿಸುತ್ತಿದ್ದಾರೆ. ಕೆಲವರು ಕ್ಯೂಟ್ ಕಪಲ್ ಎಂದು ಕೆಂಪು ಹೃದಯದ ಎಮೋಜಿಗಳನ್ನು ಕಾಮೆಂಟ್ ಮಾಡುತ್ತಿದ್ದಾರೆ.