ಹೋದ ಕಡೆಯಲೆಲ್ಲಾ ರಶ್ಮಿಕಾ ಮಾಡಿರೋ ಆಸ್ತಿ ಎಷ್ಟು ಗೊತ್ತಾ.. ಶಾಕ್‌ ಆಗ್ತೀರಾ..

0 views

ನಟಿ ರಶ್ಮಿಕಾ ಕನ್ನಡ, ಕೊಡಗಿನಲ್ಲಿ ಹುಟ್ಟಿ ಬೆಳೆದ ಹುಡುಗಿ. ಕರ್ನಾಟಕದ ಹುಡುಗಿಯಾಗಿರುವ ರಶ್ಮಿಕಾ ಇಂದು ಟಾಲಿವುಡ್, ಬಾಲಿವುಡ್, ಕಾಲಿವುಡ್ ಎಲ್ಲಾ ಚಿತ್ರರಣಗದಲ್ಲೂ ದೊಡ್ಡ ಮಟ್ಟದಲ್ಲಿ ಮಿಂಚುತ್ತಿದ್ದಾರೆ. ಬಹುಬೇಡಿಕೆ ಸೃಷ್ಟಿಸಿಕೊಂಡಿದ್ದಾರೆ. ಇದೆಲ್ಲವೂ ನಡೆದದ್ದು ರಶ್ಮಿಕಾ ಅವರಿಗೆ ಇರುವ ಅದ್ಭುತವಾದ ಟ್ಯಾಲೆಂಟ್ ಇಂದ. ನಟನೆ ನೃತ್ಯ ಎಲ್ಲದರಲ್ಲೂ ಮುಂದಿರುವ ರಶ್ಮಿಕಾ ಅವರಿಗೆ ಅದೃಷ್ಟ ಕೂಡ ಚೆನ್ನಾಗಿರುವುದರಿಂದ ಆಕೆ ಮುತ್ತಿದ್ದೆಲ್ಲ ಚಿನ್ನ ಎನ್ನುವ ಹಾಗೆ ಆಗಿದೆ. ಸಕ್ಸಸ್ ಸಂತೋಷದಲ್ಲಿರುವ ರಶ್ಮಿಕಾ ಸಂಭಾವನೆ ಸಹ ಹೆಚ್ಚಿಸಿಕೊಂಡಿದ್ದಾರೆ. ಎಲ್ಲಾ ಇಂಡಸ್ಟ್ರಿಗಳಲ್ಲೂ ಬ್ಯುಸಿ ಇರುವ ರಶ್ಮಿಕಾ, ಯಾವ ಊರುಗಳಲ್ಲಿ ಸ್ವಂತ ಮನೆ ಹೊಂದಿದ್ದಾರೆ ಗೊತ್ತಾ..

ನಟಿ ರಶ್ಮಿಕಾ ಮಂದಣ್ಣ ಒಂದು ರೀತಿ ಲಕ್ಕಿ ಚಾರ್ಮ್ ಎಂದರೆ ತಪ್ಪಲ್ಲ. ರಶ್ಮಿಕಾ ಮಂದಣ್ಣ ನಟಿಸಿದ ಸಿನಿಮಾಗಳೆಲ್ಲವು ಸೂಪರ್ ಹಿಟ್ ಆಗಿ, ಅಥವಾ ಒಳ್ಳೆಯ ಹಣ ಮಾಡಿರುವ ಕಾರಣ, ಒಂದಾದ ಮೇಲೊಂದು ಅವಕಾಶಗಳು ಬರುತ್ತಲೇ ಇವೆ. ತಮಿಳಿನ ಖ್ಯಾತ ನಟ ವಿಜಯ್ ಅವರ ಮುಂದಿನ ಸಿನಿಮಾಗೆ ನಾಯಕಿಯಾಗಿ ಆಯ್ಕೆಯಾದರು ರಶ್ಮಿಕಾ ಮಂದಣ್ಣ. ರಶ್ಮಿಕಾ ಅವರ ಹುಟ್ಟುಹಬ್ಬಸ ದಿನವೇ ಈ ಸುದ್ಧಿ, ಅಧಿಕೃತವಾಗಿ ಘೋಷಣೆಯಾಯಿತು. ನಂತರ ಸಿನಿಮಾದ ಮುಹೂರ್ತ ಸಹ ನೆರವೇರಿತು. ರಶ್ಮಿಕಾ ಅವರ ಹುಟ್ಟುಹಬ್ಬದ ದಿನವೆ, ಆಕೆ ಅಭಿನಯಿಸಿರುವ ಮೊದಲ ಮಲಯಾಳಂ ಸಿನಿಮಾ ಫಸ್ಟ್ ಲುಕ್ ಪೋಸ್ಟರ್ ಸಹ ಬಿಡುಗಡೆಯಾಯಿತು.

ಒಂದು ರೀತಿ ರಶ್ಮಿಕಾ ಅವರಿಗೆ ಮತ್ತು ಅವರ ಅಭಿಮಾನಿಗಳಿಗೆ ಈ ವರ್ಷದ ಬರ್ತ್ ಡೇ ತುಂಬಾ ಸ್ಪೆಶಲ್ ಆಗಿತ್ತು. ಒಂದಲ್ಲ ಒಂದು ಸರ್ಪ್ರೈಸ್ ಗಳು ಕಾದಿದ್ದವು. ಇನ್ನು ರಶ್ಮಿಕಾ ಅಭಿನಯದ ಬಾಲಿವುಡ್ ಸಿನಿಮಾಗಳು ಸಹ ಬಿಡುಗಡೆಗೆ ಸಿದ್ಧವಾಗಿದ್ದು, ರಣಬೀರ್ ಕಪೂರ್ ಅವರ ಮುಂದಿನ ಸಿನಿಮಾಗು ರಶ್ಮಿಕಾ ಅವರೇ ನಾಯಕಿಯಾಗಿ ಆಯ್ಕೆಯಾಗಿದ್ದಾರೆ. ಕನ್ನಡ ಚಿತ್ರರಂಗದಿಂದ ಶುರುವಾದ ಈ ಜರ್ನಿ ಇಂದು ಇಷ್ಟು ಎತ್ತರಕ್ಕೆ ಏರಿರುವುದು ನಿಜಕ್ಕೂ ಸಂತೋಷದ ವಿಷಯವೆ.

ರಶ್ಮಿಕಾ ಮಂದಣ್ಣ ಅವರು ಎಲ್ಲಾ ಭಾಷೆಯ ಚಿತ್ರೀಕರಣಗಳಲ್ಲಿ ಬ್ಯುಸಿ ಇರುತ್ತಾರೆ. ಬೇರೆ ಊರುಗಳಲ್ಲಿ ಹೆಚ್ಚು ದಿನಗಳು ಇರಬೇಕಾದಾಗ, ಹೋಟೆಲ್ ನಲ್ಲಿಯೇ ಉಳಿದುಕೊಳ್ಳುವುದು ಸೂಕ್ತವಾಗಿರುವುದಿಲ್ಲ. ಹಾಗಾಗಿ ರಶ್ಮಿಕಾ ಮಂದಣ್ಣ ಅವರು, ಅಲ್ಲೆಲ್ಲಾ ಒಂದು ಮನೆ ಮಾಡಿದ್ದಾರೆ. ಮನೆ ಎಂದರೆ ಸರಳವಾದ ಮನೆಯಲ್ಲೂ, ಎಲ್ಲವೂ ಕೋಟಿ ಕೋಟಿ ಬೆಲೆ ಬಾಳುವ ಐಷಾರಾಮಿ ಮನೆಗಳೇ ಆಗಿವೆ. ನಟಿ ರಶ್ಮಿಕಾ ಮಂದಣ್ಣ ಅವರ ಮನೆಗಳು ಎಲ್ಲೆಲ್ಲಿವೆ ತಿಳಿಸುತ್ತೇವೆ ನೋಡಿ.. ಮೊದಲಿಗೆ ರಶ್ಮಿಕಾ ಮಂದಣ್ಣ ಅವರ ಹುಟ್ಟೂರು, ಅಂದ್ರೆ ಕೂರ್ಗ್ ನಲ್ಲಿ ಐಷಾರಾಮಿ ದೊಡ್ಡದಾದ ಸ್ವಂತ ಮನೆ ಹೊಂದಿದ್ದಾರೆ ರಶ್ಮಿಕಾ.

ಇದಲ್ಲದೆ ಬೆಂಗಳೂರಿನಲ್ಲಿ ಕೂಡ ರಶ್ಮಿಕಾ ಅವರಿಗೆ ಒಂದು ದೊಡ್ಡದಾದ ಸ್ವಂತ ಮನೆ ಇದೆ. ರಶ್ಮಿಕಾ ಅವರು ತೆಲುಗು ಸಿನಿಮಾಗಳಲ್ಲಿ ಹೆಚ್ಚಾಗಿ ನಟಿಸುವ ಕಾರಣ, ಹೈದರಾಬಾದ್ ನಲ್ಲಿ ಉಳಿದುಕೊಳ್ಳಬೇಕಾಗುತ್ತದೆ. ಹಾಗಾಗಿ ಹೈದರಾಬಾದ್ ನ ಐಷಾರಾಮಿ ನಗರದಲ್ಲಿ ದೊಡ್ಡ ಮನೆಯೊಂದನ್ನು ಹೊಂದಿದ್ದಾರೆ. ಹೈದರಾಬಾದ್ ಮನೆ ಬಗ್ಗೆ ದೊಡ್ಡ ಸುದ್ದಿಯೇ ಆಗಿತ್ತು. ಅದಲ್ಲದೆ ರಶ್ಮಿಕಾ ಅವರು ಹಿಂದಿ ಸಿನಿಮಾದಲ್ಲಿ ಅಭಿನಯಿಸುತ್ತಿದ್ದ ಕಾರಣ ಮುಂಬೈನಲ್ಲಿ ನಲ್ಲಿ ಸಹ ಐಷಾರಾಮಿ ಫ್ಲ್ಯಾಟ್ ಖರೀದಿ ಮಾಡಿದ್ದರು.

ಇದೆಲ್ಲವನ್ನು ಹೊರತುಪಡಿಸಿ, ಗೋವಾದಲ್ಲಿ ಸಹ ದೊಡ್ಡ ಮನೆಯೊಂದನ್ನು ಖರೀದಿ ಮಾಡಿದ್ದಾರೆ. ಗೋವಾ ಮನೆಯಲ್ಲೇ ರಶ್ಮಿಕಾ ಹೊಸವರ್ಷ ಆಚರಿಸಿದ್ದರು. ರಶ್ಮಿಕಾ ಮಂದಣ್ಣ ಅವರು ಇಷ್ಟೆಲ್ಲಾ ನಗರಗಳಲ್ಲಿ ಮನೆಗಳನ್ನು ಹೊಂದಿದ್ದು, ಪುಷ್ಪ ಸಿನಿಮಾ ನಂತರ ಸಂಭಾವನೆಯನ್ನು ಸಹ ಹೆಚ್ಚಿಸಿಕೊಂಡಿದ್ದಾರೆ. ಎಲ್ಲಾ ನಗರಗಳಲ್ಲಿ ಮನೆ ಹೊಂದಿದ್ದಾರೆ ಅಂದ್ರೆ, ರಶ್ಮಿಕಾ ಅವರ ಬಳಿ ಇರುವ ಹಣ ಎಷ್ಟು ಎಂದು ಊಹಿಸಲು ಶುರು ಮಾಡಿದ್ದಾರೆ ನೆಟ್ಟಿಗರು.