ರಶ್ಮಿಕಾ ಹುಟ್ಟುಹಬ್ಬದ ದಿನವೇ ಸಿಹಿಸುದ್ದಿ ನೀಡಿದ ರಕ್ಷಿತ್‌.. ಇದಕ್ಕೆ ಹೇಳೋದು ಹುಡುಗರ ಹಾರ್ಟು ಅಂತಾ..

0 views

ರಕ್ಷಿತ್ ರಶ್ಮಿಕಾ.. ಈ ಎರಡು ಹೆಸರುಗಳನ್ನು ಕೇಳಿದೊಡನೆ ಈಗಲೂ ಒಮ್ಮೆ ಈ ಜೋಡಿ ಮತ್ತೆ ಮೊದಲಿನಂತೆ ಒಂದಾಗಬಾರದ ಎಂದೆನಿಸುವುದು ಸುಳ್ಳಲ್ಲ.‌. ಈ ಜೋಡಿ ತೆರೆ ಮೇಲೆ ಬಂದಾಗ ಮೆಚ್ಚಿಕೊಂಡ ಎಲ್ಲರೂ ನಿಜ ಜೀವನದಲ್ಲಿಯೂ ಈ ಜೋಡಿ ಒಂದಾಗುತ್ತುದೆ ಎಂದು ತಿಳಿದು ಇನ್ನಷ್ಟು ಸಂತೋಷ ಪಟ್ಟಿದ್ದರು ಈ ಜೋಡಿ ಸದಾ ಜೊತೆಯಾಗಿರಲಿ ಎಂದು ಹಾರೈಸಿದ್ದರು.. ಆದರೆ ವ್ಯಯಕ್ತಿಕ ಕಾರಣಗಳಿಂದ ಇಬ್ಬರೂ ದೂರಾದರು..

ಆದರೀಗ ಇವರಿಬ್ಬರು ಒಂದಾಗಬೇಕು ಎಂದು ಪ್ರಾರ್ಥಿಸಿದ್ದ ಅಭಿಮಾನಿಗಖಿಗೆ ಸಿಹಿಸುದ್ದಿ ದೊರೆತಿದೆ.. ಹೌದು ಅದರಲ್ಲೂ ಇಂದು ರಶ್ಮಿಕಾರ ಹುಟ್ಟುಹಬ್ಬದ ದಿನ ಮತ್ತೆ ಈ ಜೋಡಿಯಿಂದ ಸಿಹಿ ಸುದ್ದಿ ದೊರೆತಿದೆ.. ಹೌದು ಕಿರಿಕ್ ಪಾರ್ಟಿ ಸಿನಿಮಾ ಸಮಯದಲ್ಲಿ ಈ ಜೋಡಿ ಪ್ರೀತಿಯಲ್ಲಿ ಬಿದ್ದಿದ್ದರು.. ಚಿತ್ರೀಕರಣದ ಸಂದರ್ಭದಲ್ಲಿ ರಕ್ಷಿತ್ ಶೆಟ್ಟಿ ಉಂಗುರ ನೀಡಿ ಪ್ರಪೋಸ್ ಮಾಡಿದ್ದರು.. ಸಿನಿಮಾ ಬಿಡುಗಡೆಯಾಗಿ ಹಿಟ್ ಕೂಡ ಆಯಿತು.. ನೋಡು ನೋಡುತ್ತಿದ್ದಂತೆ ರಕ್ಷಿತ್ ರಶ್ಮಿಕಾರ ಮದುವೆ ಕೂಡ ನಿಶ್ಚಯವಾಗಿ ಅದ್ಧೂರಿಯಾಗಿ ನಿಶ್ಚಿತಾರ್ಥ ನೆರವೇರಿತು.. ಆದರೆ ಅದ್ಯಾರ ಕಣ್ಣು ಬಿತ್ತೋ ಈ ಜೋಡಿ ಕೆಲವೇ ತಿಂಗಳಲ್ಲಿ ನಿಶ್ಚಿತಾರ್ಥವನ್ನು ಮುರಿದುಕೊಂಡರು..

ಹೌದು ಈ ಬಗ್ಗೆ ಖುದ್ದು ರಶ್ಮಿಕಾ ಅವರ ತಾಯಿಯೇ ಹೇಳಿಕೆ ಕೊಟ್ಟು‌ ನಿಶ್ಚಿತಾರ್ಥ ಮುರಿದಿದೆ ಎಂದಿದ್ದರು.. ನಿಶ್ಚಿತಾರ್ಥದಲ್ಲಿ ಬದಲಿಸಿಕೊಂಡಿದ್ದ ಉಂಗುರವನ್ನೂ ಸಹ ಮರಳಿಸಿದ್ದರು.. ನಂತರ ಸಾಮಾಜಿಕ ಜಾಲತಾಣದಿಂದ ದೂರವಾದ ರಕ್ಷಿತ್ ಶೆಟ್ಟಿ ಇದೆಲ್ಲದರಿಂದ ಚೇತರಿಸಿಕೊಳ್ಳಲು ಮೂರು ವರ್ಷಗಳ ಕಾಲ ತೆಗೆದುಕೊಂಡು ಅವನೇ ಶ್ರೀಮನ್ನಾರಾಯಣ ಸಿನಿಮಾ ಮೂಲಕ ಭರ್ಜರಿಯಾಗಿ ಕಂಬ್ಯಾಕ್ ಮಾಡಿದರು.. ಅತ್ತ ರಶ್ಮಿಕಾ ಮಂದಣ್ಣ ತೆಲುಗು ತಮಿಳು ಚಿತ್ರರಂಗದಲ್ಲಿ ಸಿಕ್ಕಾಪಟ್ಟೆ ಬ್ಯುಸಿ ಆಗಿದ್ದು ಸಾಲು ಸಾಲು ಸಿನಿಮಾಗಳಲ್ಲಿ ಅಭಿನಯಿಸಿ ಹೆಸರು ಮಾಡಿದರು..

ಈ ಜೋಡಿ ಒಬ್ಬರನೊಬ್ಬರು ಮಾತನಾಡಿಸದೇ ಇರುವಷ್ಟು ದೂರವಾಗಿ ಹೋಗಿದ್ದರು.. ಆದರೀಗ ಪ್ರೇಮಿಗಳಾಗಿ ಅಲ್ಲದಿದ್ದರು ಸ್ನೇಹಿತರಾಗಿ ಮತ್ತೆ ಒಂದಾಗಿದ್ದಾರೆ.. ಹೌದು ಇಂದು ರಶ್ಮಿಕಾ ಮಂದಣ್ಣರ ಹುಟ್ಟುಹಬ್ಬವಿದ್ದು ರಶ್ಮಿಕಾ ಅವರು ಕಿರಿಕ್ ಪಾರ್ಟಿ ಸಿನಿಮಾ ಸಮಯದಲ್ಲಿ ಆಡಿಷನ್ ನ ವೀಡಿಯೋವೊಂದನ್ನು ಹಂಚಿಕೊಂಡಿರುವ ರಕ್ಷಿತ್ ಶೆಟ್ಟಿ “ಕಿರಿಕ್ ಪಾರ್ಟಿ ಸಿನಿಮಾದ ಆಡಿಷನ್ ಸಮಯದ ಸುಂದರ ನೆನಪಿನ ನಿಮ್ಮ ವೀಡಿಯೋ ವೊಂದನ್ನು ಹಂಚಿಕೊಳ್ಳುತ್ತಿದ್ದೇನೆ.. ಆಗಿನಿಂದ ಇಂದಿನವರೆಗೆ ಬಹಳಷ್ಟು ದೂರ ಪ್ರಯಾಣಿಸಿದ್ದೀಯಾ.. ನಿನ್ನ ಗುರಿಯನ್ನು ಬೆನ್ನಟ್ಟಿ.. ನಿಜವಾದ ವಾರಿಯರ್ ರೀತಿಯಲ್ಲಿ.. ನಿನ್ನ ಕಂಡರೆ ನನಗೆ ಹೆಮ್ಮೆ ಇದೆ.. ಹುಟ್ಟು ಹಬ್ಬದ ಶುಭಾಶಯಗಳು.. ಇನ್ನು ಹೆಚ್ಚೆಚ್ಚು ಯಶಸ್ಸು ನಿನ್ನದಾಗಲಿ” ಎಂದು ಬರೆದು ಪೋಸ್ಟ್ ಮಾಡುವ ಮೂಲಕ ರಶ್ಮಿಕಾರಿಗೆ ಮನತುಂಬಿ ಹುಟ್ಟುಹಬ್ಬದ ಶುಭಾಶಯಗಳನ್ನು ತಿಳಿಸಿದ್ದಾರೆ..

ಇತ್ತ ರಶ್ಮಿಕಾ ಮಂದಣ್ಣ ಕೂಡ ರಕ್ಷಿತ್ ಶೆಟ್ಟಿ ಅವರಿಗೆ ಧನ್ಯವಾದಗಳನ್ನು ತಿಳಿಸಿ ಹಳೆಯ ದಿನಗಳನ್ನು ನೆನೆದಿದ್ದಾರೆ.. ಇನ್ನು ಅಭಿಮಾನಿಗಳು ಈ ಜೋಡಿ ಪರಸ್ಪರ ಮಾತನಾಡಿದ್ದನ್ನು ಕಂಡು ಸಂತೋಷ ಪಟ್ಟಿದ್ದಾರೆ.. ಇಬ್ಬರು ಮೊದಲಿನಂತೆ ಸ್ನೇಹಿತರಾಗಿರುವ ನಿರ್ಧಾರ ಮಾಡಿದ್ದು ಇನ್ನು ಮುಂದೆ ಹಾಗೆಯೇ ಇರಲಿದ್ದಾರೆ ಎಂದು ತಿಳಿದುಬಂದಿದೆ.. ಇನ್ನು ಇಂದು ರಕ್ಷಿತ್‌ ಶೆಟ್ಟಿ ಅವರು ರಶ್ಮಿಕಾ ಅವರಿಎ ಮನತುಂಬಿ ಶುಭಾಶಯ ತಿಳಿಸಿದ್ದು ನೋಡಿ ಸಾಮಾಜಿಕ ಜಾಲತಾಣದಲ್ಲಿ ರಕ್ಷಿತ್ ನಡೆಗೆ ಮಚ್ಚುಗೆ ವ್ಯಕ್ತಪಡಿಸಿದ್ದಾರೆ..‌ ಅಷ್ಟೇ ಅಲ್ಲದೇ ಹುಡುಗರ ಮನಸ್ಸೇ ಹೀಗೆ.. ಮನಸ್ಪೂರ್ತಿಯಾಗಿ ಪ್ರೀತಿಸಿದ ಹುಡುಗಿ ಯಾವಾಗಲೂ ಸಂತೋಷವಾಗಿರಲಿ ಎಂದೇ ಬಯಸುತ್ತದೆ ಎಂದಿದ್ದಾರೆ..