ಮತ್ತೆ ಒಂದಾದ ರಕ್ಷಿತ್ ರಶ್ಮಿಕಾ.. ವಿಶೇಷ ದಿನದ ಸಂತೋಷ ಹಂಚಿಕೊಂಡ ರಕ್ಷಿತ್ ಶೆಟ್ಟಿ..

0 views

ರಕ್ಷಿತ್ ರಶ್ಮಿಕಾ ಕಳೆದ ಕೆಲ ದಿನಗಳಿಂದ ಭಾರಿ ಸದ್ದು ಮಾಡುತ್ತಿರುವ ಜೋಡಿ.. ಸದ್ಯ ಇದೀಗ ರಕ್ಷಿತ್ ಶೆಟ್ಟಿ ಅವರು ತಮ್ಮಿಬ್ಬರ ಜೀವನದ ವಿಶೇಷ ದಿನದ ಸಂತೋಷ ಹಂಚಿಕೊಂಡಿದ್ದಾರೆ.. ಹೌದು ಕಿರಿಕ್ ಪಾರ್ಟಿ ಸಿನಿಮಾ ಮೂಲಕ ಸ್ಯಾಂಡಲ್ವುಡ್ ಗೆ ಎಂಟ್ರು ಕೊಟ್ಟ ರಶ್ಮಿಕಾ ಮಂದಣ್ಣ ಅವರಿಗೆ ಅವಕಾಶ ನೀಡಿದ್ದು ನಮ್ ರಕ್ಷಿತ್ ಶೆಟ್ರು.. ರಿಷಭ್ ಶೆಟ್ಟಿ ಹಾಗೂ ರಕ್ಷಿತ್ ಶೆಟ್ಟಿ ಮತ್ತು ತಂಡದ ಕನಸಾದ ಕಿರಿಕ್ ಪಾರ್ಟಿ ಸಿನಿಮಾದಲ್ಲಿ ರಶ್ಮಿಕಾ ಮಂದಣ್ಣ ಸಾನ್ವಿಯಾಗಿ ಮಿಂಚಿದರು.. ಒಂದೇ ಸಿನಿಮಾದಲ್ಲಿ ಕರ್ನಾಟಕದ ಕ್ರಶ್ ಎನಿಸಿಕೊಂಡರು.. ತಮ್ಮ ನಟನೆಯ ಮೂಲಕ ಜನರ ಮನಗೆದ್ದ ರಶ್ಮಿಕಾಗೆ ಸಾಲು ಸಾಲು ಸಿನಿಮಾಗಳಲ್ಲಿ ಅವಕಾಶ ದೊರೆಯಿತು.. ಇನ್ನು ಈ ನಡುವೆಯೇ ರಕ್ಷಿತ್ ಹಾಗೂ ರಶ್ಮಿಕಾ ಪ್ರೀತಿಯಲ್ಲಿ ಬಿದ್ದಿರುವ ವಿಚಾರ ಹೊರ ಬರಲು ಹೆಚ್ಚು ಸಮಯ ಬೇಕಾಗಲಿಲ್ಲ..

ನೋಡು ನೋಡುತ್ತಿದ್ದಂತೆ ಅದ್ಧೂರಿಯಾಗಿ ಕೊಡಗಿನಲ್ಲಿ ಇಬ್ಬರ ನಿಶ್ಚಿತಾರ್ಥವೂ ನೆರವೇರಿತು.. ಆದರೆ ಪ್ರೀತಿ ಎಷ್ಟು ಬೇಗ ಚಿಗುರಿತೋ ಅಷ್ಟೇ ಬೇಗ ಈ ಜೋಡಿಯ ನಡುವಿನ ನಿಶ್ಚಿತಾರ್ಥ ಸಂಬಂಧವೂ ಮುರಿದುಬಿದ್ದಿತ್ತು.. ನಂತರ ಉತ್ತರ ದಕ್ಷಿಣವಾದ ರಕ್ಷಿತ್ ಹಾಗೂ ರಶ್ಮಿಕಾ ತಮ್ಮ ತಮ್ಮ ಸಿನಿಮಾ ಕೆರಿಯರ್ ಕಡೆ ಗಮನ ಕೊಟ್ಟರು.. ಅತ್ತ ಕನ್ನಡ ಸಿನಿಮಾ ಇಂಡಸ್ಟ್ರಿಯ ಜೊತೆಗೆ ತಮಿಳು ತೆಲುಗು ಸಿನಿಮಾ ಇಂಡಸ್ಟ್ರಿಯಲ್ಲಿಯೂ ಬ್ಯುಸಿ ಆದ ನಟಿ ರಶ್ಮಿಕಾಗೆ ಇದರಿಂದ ಹೊರ ಬರಲು ಹೆಚ್ಚು ದಿನಗಳು ಬೇಕಾಗಲಿಲ್ಲ.. ಆದರೆ ರಕ್ಷಿತ್ ಶೆಟ್ಟಿ ಅವರು ಮಾತ್ರ ಒಂದೆರೆಡು ವರ್ಷ ಯಾರಿಗೂ ಕಾಣಿಸಿಕೊಳ್ಳಲಿಲ್ಲ.. ಸಾಮಾಜಿಕ ಜಾಲತಾಣದಿಂದಲೂ ದೂರಾದ ರಕ್ಷಿತ್ ಶೆಟ್ಟಿ ಅವರು ನಂತರ ತಮ್ಮ ಅವನೇ ಶ್ರೀಮನ್ನಾರಾಯಣ ಸಿನಿಮಾದಲ್ಲಿ ಬ್ಯುಸಿ ಆದರು..

ಇದೀಗ ಸಂಪೂರ್ಣವಾಗಿ ಆ ವಿಚಾರದಿಂದ ಹೊರ ಬಂದ ರಕ್ಷಿತ್ ಶೆಟ್ಟಿ ಅವರು ಸಹ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿ ಆಗಿದ್ದಾರೆ.. ಕಿರಿಕ್ ಪಾರ್ಟಿ 2 ಸಿನಿಮಾ ಮಾಡಲು ಸಹ ತಯಾರಿ ನಡೆಸುತ್ತಿದ್ದಾರೆ ಎಂದು ತಿಳಿದುಬಂದಿದೆ.. ಇನ್ನು ಈ ನಡುವೆ ಮೊನ್ನೆಮೊನ್ನೆಯಷ್ಟೇ ನಟಿ ರಶ್ಮಿಕಾ ಅವರು ಸಾಮಾಜಿಕ‌ ಜಾಲತಾಣದಲ್ಲಿ ತಮ್ಮ ಪೋಸ್ಟ್ ಒಂದರಲ್ಲಿ ರಕ್ಷಿತ್ ಶೆಟ್ಟಿ ಅವರನ್ನು ಟ್ಯಾಗ್ ಮಾಡುವ ಮೂಲಕ ಅಭಿಮಾನಿಗಳಿಗೆ ಆಶ್ಚರ್ಯವನ್ನುಂಟು ಮಾಡುದ್ದರು.. ಹೌದು ಮೊನ್ನೆಮೊನ್ನೆಯಷ್ಟೇ ಕಿರಿಕ್ ಪಾರ್ಟಿ ಸಿ‌ನಿಮಾದ ಬೆಳಗೆದ್ದು ಯಾರ ಮುಖವ ಹಾಡು ನೂರು ಮಿಲಿಯನ್ ವೀಕ್ಷಣೆ ಪಡೆದ ಸಂತೋಷ ಹಂಚಿಕೊಂಡಿದ್ದ ರಶ್ಮಿಕಾ ಮಂದಣ್ಣ ಸಂತೋಷ ಹಂಚಿಕೊಂಡು ಹಳೆಯ ದಿನಗಳನ್ನು ನೆನೆದಿದ್ದರು..

ನನಗೆ ಈಗಲೂ ಎಲ್ಲಾ ಕ್ಷಣಗಳು ನೆನಪಿದೆ.. ಮತ್ತೊಮ್ಮೆ ನಾನು ಸಾನ್ವಿಯಾಗಲು ಇಷ್ಟ ಪಡುತ್ತೇನೆ ಎಂದಿದ್ದರು.. ರಕ್ಷಿತ್ ಶೆಟ್ಟಿ ಅವರನ್ನು ಟ್ಯಾಗ್ ಸಹ ಮಾಡಿದ್ದರು.. ಅದಕ್ಕೆ ಪ್ರತಿಕ್ರಿಯೆ ನೀಡಿದ್ದ ರಕ್ಷಿತ್ ಶೆಟ್ಟಿ ಅವರು.. ಇನ್ನೂ ಉತ್ತುಂಗಕ್ಕೆ ಬೆಳಿ.. ನಿನ್ನೆಲ್ಲಾ ಕನಸುಗಳು ನನಸಾಗಲಿ ಎಂದು ಶುಭ ಹಾರೈಸಿದ್ದರು.. ರಕ್ಷಿತ್ ಶೆಟ್ಟಿ ಅವರು ನಡೆದುಕೊಂಡ ರೀತಿಗೆ ಸಾಮಾಜಿಕ ಜಾಲತಾಣದಲ್ಲಿ ಬಹಳ ಮೆಚ್ಚುಗೆ ವ್ಯಕ್ತವಾಗಿತ್ತು.. ಆಗ ರಶ್ಮಿಕಾ ಮಂದಣ್ಣ ಅವರ ಸರದಿಯಾದರೆ ಈಗ ರಕ್ಷಿತ್ ಶೆಟ್ಟಿ ಅವರ ಸರದಿ‌.. ಹೌದು ಇಂದು ರಕ್ಷಿತ್ ಶೆಟ್ಟಿ ಅವರು ತಮ್ಮ ಹಾಗೂ ರಶ್ಮಿಕಾ ಜೀವನದ ವಿಶೇಷ ದಿನದ ಅಂಗವಾಗಿ ವೀಡಿಯೋ ಒಂದನ್ನು ಹಂಚಿಕೊಂಡು ಸಂತೋಷ ವ್ಯಕ್ತಪಡಿಸಿ ಅದಕ್ಕೆ ರಶ್ಮಿಕಾರನ್ನು ಟ್ಯಾಗ್ ಮಾಡಿದ್ದಾರೆ.. ಹೌದು ಕಿರಿಕ್ ಪಾರ್ಟಿ ಸಿನಿಮಾ ಬಿಡುಗಡೆಯಾಗಿ ಇಂದಿಗೆ ನಾಲ್ಕು ವರ್ಷ..‌

ಇದೇ ವಿಚಾರವನ್ನು ಹಂಚಿಕೊಂಡಿರುವ ರಕ್ಷಿತ್ ಶೆಟ್ಟಿ ಅವರು ಕಿರಿಕ್ ಪಾರ್ಟಿ ಸಿನಿಮಾದ ಯಶಸ್ಸು ಒಂದು ಒಳ್ಳೆಯ ತಂಡದ ಪರಿಶ್ರಮಕ್ಕೆ ಸಿಕ್ಕ ಅತ್ಯದ್ಭುತ ಉಡುಗೊರೆ.. ನಾಲ್ಕು ವರ್ಷದ ಜರ್ನಿ ನೆನೆಯುವಂತದ್ದು” ಎಂದು ಬರೆದು ರಶ್ಮಿಕಾ ಮಂದಣ್ಣ ಅವರನ್ನು ಟ್ಯಾಗ್ ಮಾಡಿದ್ದಾರೆ.. ಸದ್ಯ ಇಬ್ಬರು ಸಾಮಾಜಿಕ ಜಾಲತಾಣದಲ್ಲಿ ಪರಸ್ಪರ ಮಾತನಾಡಿದ್ದನ್ನು.. ಬೇಸರ ಬಿಟ್ಟು ಇಬ್ಬರು ಸ್ನೇಹಿತರಾಗಿ ಒಂದಾಗಿ ಮತ್ತೆ ಸಹಜವಾಗಿ ಇರುವುದನ್ನು ಹಾಗೂ ಇಬ್ಬರ ನಡುವಿನ ಸ್ನೇಹವನ್ನು ನೋಡಿದ ಅಭಿಮಾನಿಗಳು ಇಬ್ಬರು ಮತ್ತೆ ಒಂದಾಗಿ ಎಂದು ಸಾಲು ಸಾಲು ಕಮೆಂಟ್ ಮೂಲಕ ಮನವಿ ಮಾಡಿಕೊಂಡಿದ್ದಾರೆ..