ರಕ್ಷಿತ್ ರಿಂದ ದೂರಾದ ಬಗ್ಗೆ ನೋವು ಹಂಚಿಕೊಂಡ ರಶ್ಮಿಕಾ ರನ್ನು ತಕ್ಷಣ ಹೊಟೆಲ್ ಗೆ ಕರೆಸಿಕೊಂಡು ಸಮಾಧಾನ ಮಾಡಿದ ಆ ವ್ಯಕ್ತಿ ಯಾರು ಗೊತ್ತಾ.. ಇಬ್ಬರಿಂದಲೂ ಮದುವೆಯಾಗೋ ನಿರ್ಧಾರ..?

0 views

ಕನ್ನಡದ ಖ್ಯಾತ ನಟಿ ಸಧ್ಯ ತೆಲುಗು ಹಿಂದಿ ಇಂಡಸ್ಟ್ರಿಯಲ್ಲಿ‌ ಮಿಂಚುತ್ತಿರುವ ನಟಿ ರಶ್ಮಿಕಾ ಮಂದಣ್ಣ ಕೆಲ ಮೊನ್ನೆಯಷ್ಟೇ ದಕ್ಷಿತ್ ಶೆಟ್ಟಿ ಅವರ ಜೊತೆ ಆದ ಲವ್ ಬ್ರೇಕಪ್ ಬಗ್ಗೆ ಇಂಡೈರೆಕ್ಟ್ ಆಗಿ ಮಾತನಾಡಿ ಹಳೆಯ ನೆನಪುಗಳು ಆದಾಗಲೆಲ್ಲಾ ಕಣ್ಣೀರು ಹಾಕಿ‌ ಮಲಗುತ್ತಿದ್ದೇನೆ.. ವರ್ಷದಲ್ಲಿ ಬಹಳಷ್ಟು ದಿನ ನಾನು ಅಳುತ್ತಲೇ ಮಲಗಿದ್ದೇನೆ ಎಂದಿದ್ದರು.‌. ಆ ವಿಚಾರದ ಬಗ್ಗೆ ಬಹಳ ಭಾವುಕರಾಗಿ ಮಾತನಾಡಿದ್ದರು.. ಆ ವೀಡಿಯೋ ವನ್ನು ತಮ್ಮ ಇನ್ಸ್ಟಾಗ್ರಾಂ ನಲ್ಲಿಯೂ ಹಂಚಿಕೊಂಡಿದ್ದರು.. ಅದನ್ನು ನೋಡಿದ ಸ್ಟಾರ್ ನಟರೊಬ್ಬರು ಇದೀಗ ರಶ್ಮಿಕಾ ಮಂದಣ್ಣನನ್ನು ಕರೆಸಿಕೊಂಡು ಹೊಟೆಲ್ ನಲ್ಲಿ ಊಟ ಮಾಡಿ ಸಾಕಷ್ಟು ಸಮಯ ಕಳೆದು ಒಟ್ಟಿಗೆ ಮನೆಗೆ ಮರಳುವ ಸಮಯದಲ್ಲಿ ಮಾದ್ಯಮದ ಕ್ಯಾಮರಾ ಕಣ್ಣಿಗೆ ಬಿದ್ದಿದ್ದಾರೆ..

ಹೌದು ರಶ್ಮಿಕಾ ಮಂದಣ್ಣ ಕೆಲ ದಿನಗಳ ಹಿಂದಷ್ಟೇ ಹಿಂದಿ ಮೂಲದ ಮಾದ್ಯಮವೊಂದಕ್ಕೆ ಸಂದರ್ಶನ ನೀಡಿದ್ದರು.. ಆ ಸಮಯದಲ್ಲಿ ತಾವು ಇಂಡಸ್ಟ್ರಿಗೆ ಬಂದ ವಿಚಾರವಾಗಿ ಹಾಗೂ ಸಾಕಷ್ಟು ವ್ಯಯಕ್ತಿಕ ವಿಚಾರಗಳನ್ನು ತಾವು ಟ್ರೋಲ್ ಆಗುವುದರ ಬಗ್ಗೆಯೂ ಹಂಚಿಕೊಂಡಿದ್ದು ಇದೇ ಸಮಯದಲ್ಲಿ ತಮ್ಮ ಹಾಗೂ ರಕ್ಷಿತ್ ಶೆಟ್ಟಿ ಅವರ ಪ್ರೀತಿಯ ವಿಚಾರವಾಗಿಯೂ ಮಾತನಾಡಿ ನೋವು ಹಂಚಿಕೊಂಡಿದ್ದರು.. ಹೌದು “ನಾನು ಡಿಗ್ರಿ ಓದುವ ಸಲುವಾಗಿ ಬೆಂಗಳೂರಿಗೆ ಬಂದೆ.. ನಂತರ ಮಾಡೆಲಿಂಗ್ ಕ್ಷೇತ್ರದಲ್ಲಿ ಗುರುತಿಸಿಕೊಂಡೆ.. ನಂತರ ಸಾಕಷ್ಟು ಸಿನಿಮಾಗಳ ಅವಕಾಶ ಬಂದವು ಆದರೆ ಯಾವ ಕತೆಯೂ ಇಷ್ಟವಾಗಲಿಲ್ಲ.. ಕೊನೆಗೆ ಕಿರಿಕ್ ಪಾರ್ಟಿ ಸಿನಿಮಾ ಅವಕಾಶ ಬಂದಿತು.. ನಂತರ ಎಲ್ಲರ ಪ್ರೀತಿಯಿಂದ ನಾನು ಇಲ್ಲಿಯವರೆಗೆ ಬಂದಿದ್ದೇನೆ‌ ಎಂದರು..

ಅಷ್ಟೇ ಅಲ್ಲದೇ ನಾನು ಬಹಳ ಟ್ರೋಲ್ ಆಗುತ್ತಿರುತ್ತೇನೆ.. ಸಾಮಾನ್ಯವಾಗಿ ಭಾಷೆಯ ವಿಚಾರವಾಗಿಯೇ ಟ್ರೋಲ್ ಆಗುತ್ತೇನೆ.. ಆದರೆ ಎಲ್ಲಾ ಭಾಷೆಗಳಲ್ಲಿಯೂ ಅಭಿನಯಿಸಿ ಎಲ್ಲಾ ಭಾಷೆಗಳನ್ನು ಕಲಿಯುತ್ತಾ ಎಲ್ಲವೂ ಮಿಕ್ಸ್ ಆಗುತ್ತದೆ ಅಷ್ಟೇ.. ಅದನ್ನು ಹೊರತುಪಡಿಸಿ ನನಗೆ ಭಾಷೆಯ ಮೇಲೆ ಪ್ರೀತಿ ಇಲ್ಲ ಅಂತಲ್ಲ.. ಮೊದಲು ಟ್ರೋಲ್ ಆದಾಗ ಬಹಳ ನೋವಾಗುತಿತ್ತು ಸಿನಿಮಾವನ್ನೇ ಬಿಟ್ಟು ಬಿಡುವ ನಿರ್ಧಾರ ಮಾಡಿದ್ದೆ.. ಆದರೆ ನಂತರ ಎಲ್ಲವೂ ಅಭ್ಯಾಸವಾಯಿತು.. ಎಂದರು ಜೊತೆಗೆ ರಕ್ಷಿತ್ ಶೆಟ್ಟಿ ಅವರ ಜೊತೆಗಿನ ಪ್ರೀತಿಯ ವಿಚಾರ ಮಾತನಾಡಿ ನಾನು ಎಲ್ಲರನ್ನು ನಂಬುತ್ತೇನೆ.. ಪ್ರೀತಿ ಮಾಡುತ್ತೇನೆ.. ಹಾಗೆಯೇ ನನ್ನ ಹೃದಯವನ್ನೂ ಸಹ ಕೊಡುತ್ತೇನೆ.. ಆದರೆ ಅವರು ಅದನ್ನು ಅವರು ಅರ್ಥ ಮಾಡಿಕೊಳ್ಳಲಿಲ್ಲ.. ನನ್ನನ್ನು ನಾನಾಗಿಯೇ ಇರಲು ಬಿಡಲಿಲ್ಲ.. ಇದೇ ಕಾರಣಕ್ಕೆ ನನ್ನನ್ನು ಕಳೆದುಕೊಂಡಿದ್ದಾರೆ.. ಎಂದರು..

ಅಷ್ಟೇ ಅಲ್ಲದೇ ನಾನು ಈ ನೋವನ್ನು ಯಾರ ಬಳಿಯೂ ತೋರಿಸಿಕೊಳ್ಳಾ.. ಈಗಲೂ ಸಹ ನನಗೆ ಆ ನೆನಪುಗಳು ಕಾಡುತ್ತವೆ.. ನೆನಪುಗಳು ಕಾಡಿದಾಗ ಕಣ್ಣೀರು ಹಾಕಿ ಮಲಗುತ್ತೇನೆ.. ನಿದ್ರೆ ಇಲ್ಲದ ಸಾಕಷ್ಟು ರಾತ್ರಿಗಳನ್ನು ಕಳೆದಿದ್ದೇನೆ.. ಇದನ್ನೆಲ್ಲಾ ನಾನು‌ ಕುಟುಂಬದ ಬಳಿ ಹೇಳಿಕೊಳ್ಳಲು ಸಾಧ್ಯವಿಲ್ಲ ನನ್ನೊಳಗೇ ಸಾಕಷ್ಟು ನೋವಿದೆ ಎಂದು ಭಾವುಕರಾಗಿದ್ದರು.. ಇನ್ನು ಈ ಸಂದರ್ಶನದ ವೀಡಿಯೋವನ್ನು ಅವರ ಇನ್ಸ್ಟಾಗ್ರಾಂ ನ ಸ್ಟೇಟಸ್ ನಲ್ಲಿಯೂ ಹಂಚಿಕೊಂಡಿದ್ದರು.. ಇದನ್ನು ನೋಡಿದ ರಶ್ಮಿಕಾ ಮಂದಣ್ಣ ಅವರ ಸ್ನೇಹಿತ ಸ್ಟಾರ್ ನಟರೊಬ್ಬರು ರಶ್ಮಿಕಾ ಅವರನ್ನು ನಿನ್ನೆ ರಾತ್ರಿ ಮುಂಬೈ ನ ಹೊಟೆಲ್ ಒಂದಕ್ಕೆ ಕರೆಸಿಕೊಂಡಿದ್ದು ಅಲ್ಲಿಯೇ ಊಟ ಮುಗಿಸಿ ಸಾಕಷ್ಟು ಸಮಯ ಒಟ್ಟಿಗೆ ಕಳೆದು ರಶ್ಮಿಕಾ ಅವರಿಗೆ ಸಮಾಧಾನ ಮಾಡಿದ್ದಾರೆ..

ಹೌದು ಆ ನಟ ಮತ್ಯಾರೂ ಅಲ್ಲ ರಶ್ಮಿಮಾ ಅವರ ಆತ್ಮೀಯ ವಿಜತ್ ದೇವರಕೊಂಡ.. ಅಷ್ಟೇ ಅಲ್ಲದೇ ಈ ಇಬ್ಬರು ಮದುವೆಯನ್ನೂ ಸಹ ಆಗ್ತಾರೆ ಎನ್ನುವ ಮಾತುಗಳು ಕೇಳಿ ಬರುತ್ತಿದೆ.. ಹೌದು ರಶ್ಮಿಕಾ ತೆಲುಗು ಸಿನಿಮಾ ಇಂಡಸ್ಟ್ರಿಯಲ್ಲಿ ಕಾಲಿಟ್ಟಿದ್ದೇ ವಿಜಯ್ ದೇವರಕೊಂಡ ಅವರ ಜೊತೆಗಿನ ಗೀತಾ ಗೋವಿಂದಂ ಸಿನಿಮಾ ಮೂಲಕ.. ಮೊದಲ ಸಿನಿಮಾನೇ ದೊಡ್ಡ ಯಶಸ್ಸನ್ನು ತಂದು ಕೊಟ್ಟು ತೆಲುಗಿನ ಸ್ಟಾರ್ ನಟಿಯ ಪಟ್ಟ ತಂದುಕೊಟ್ಟಿತು.. ಅದರ ಬೆನ್ನಲ್ಲೇ ಇತ್ತ ರಕ್ಷಿತ್ ಜೊತೆ ಬ್ರೇಕಪ್ ಆದ ನಂತರ ಅತ್ತ ವಿಜಯ್ ದೇವರಕೊಂಡ ಅವರ ಜೊತೆ ಸಾಕಷ್ಟು ಆತ್ಮೀಯವಾಗಿದ್ದ ರಶ್ಮಿಕಾ ಅವರು ವಿಜಯ್ ದೇವರಕೊಂಡ ಅವರನ್ನು ಪ್ರೀತಿಸುತ್ತಿದ್ದಾರೆ ಇಬ್ಬರು ಮದುವೆಯಾಗ್ತಾರೆ ಎನ್ನುವ ಸುದ್ದಿ ಹಬ್ಬಿತ್ತು.. ಒಂದರ ನಂತರ ಒಂದು ಸಿನಿಮಾಗಳಲ್ಲಿ‌ ಕಾಣಿಸಿಕೊಂಡರು..

ಆದರೆ ನಾವಿಬ್ಬರು ಸ್ನೇಹಿತರು ಮಾತ್ರ ಎಂದೇ ಹೇಳಿಕೊಂಡು ಓಡಾಡುತ್ತಿದ್ದರು.. ನಡುವೆ ಇಬ್ಬರ ನಡುವೆ ಮನಸ್ತಾಪಗಳು ಮೂಡಿ ಇಬ್ಬರ ಸ್ನೇಹ ಮುರಿದು ಬಿದ್ದಿದೆ ಎನ್ನುವ ಮಾತು ಸಹ ಕೇಳಿ ಬಂದಿತ್ತು..ಆದರೀಗ ರಶ್ಮಿಕಾ ಪ್ರೀತಿಯ ಬಗ್ಗೆ ನೋವು ಹಂಚಿಕೊಂಡ ವಿಚಾರ ತಿಳಿಯುತ್ತಿದ್ದಂತೆ ವಿಜಯ್ ದೇವರಕೊಂಡ ರಶ್ಮಿಕಾ ಅವರನ್ನು ಕರೆಸಿಕೊಂಡು ಸಂತೈಸಿದ್ದಾರೆ.. ಹೌದು ವಿಜಯ್ ಹಾಗೂ ರಶ್ಮಿಕಾ ಇಬ್ಬರೂ ಸಹ ಮುಂಬೈ ನಲ್ಲಿದ್ದು ಮುಂಬೈನ ಬಾಂದ್ರಾ ದಲ್ಲಿರುವ ಹೊಟೆಲ್ ನಲ್ಲಿ ಇಬ್ಬರು ಊಟ ಮುಗಿಸಿ ತಡರಾತ್ರಿಯಲ್ಲಿ ಹೊರ ಬಂದಿದ್ದು ಕ್ಯಾಮರಾ ಕಣ್ಣಿಗೆ ಬಿದ್ದಿದ್ದಾರೆ.. ಇನ್ನು ಇಬ್ಬರ ನಡುವೆ ಪ್ರೀತಿ ಇರೋದು ನಿಜ.. ಇಬ್ಬರು ಮದುವೆಯಾಗುವ ನಿರ್ಧಾರವನ್ನೂ ಸಹ ಮಾಡಿದ್ದು ಅಧಿಕೃತವಾಗಿ ವಿಚಾರ ಹೊರ ಬರಬೇಕಿದೆ ಅಷ್ಟೇ ಎನ್ನುತ್ತಿದೆ ತೆಲುಗಿನ ಮೂಲಗಳು..