ರಕ್ಷಿತ್ ಶೆಟ್ಟಿ ತನ್ನನ್ನು ಬಿಟ್ಟು ಹೋಗಿದ್ದೇಕೆ ಎಂದು ಮೊದಲ ಬಾರಿಗೆ ಮಾದ್ಯಮದ ಮುಂದೆ ತಿಳಿಸಿದ ರಶ್ಮಿಕಾ ಮಂದಣ್ಣ.. ನಿಜಕ್ಕೂ ಬೇಸರವನ್ನುಂಟು ಮಾಡುತ್ತದೆ..

0 views

ರಶ್ಮಿಕಾ ಮಂದಣ್ಣ ಬಹುಶಃ ದೊಡ್ಡ ಸ್ಟಾರ್ ನಟಿಯಾದರೂ ಸಹ ಸಾಮಾಜಿಕ ಜಾಲತಾಣದಲ್ಲಿ ಇವರು ಟ್ರೋಲ್ ಆದಷ್ಟು ಬಹುಶಃ ಬೇರೆ ಯಾರೂ ಸಹ ಟ್ರೋಲ್ ಆಗಿರುವುದಿಲ್ಲ.. ಮೊದಲ ಸಿನಿಮಾದಲ್ಲಿ ಸ್ಟೇಟ್ ಕ್ರಶ್ ಎಂದು ಹೆಸರು ಪಡೆದಿದ್ದಷ್ಟೇ ಆದರೆ ನಂತರ ಪ್ರತಿಯೊಂದು ವಿಚಾರಕ್ಕೂ ಟ್ರೋಲ್ ಆದರು.. ಹಾಕುವ ಬಟ್ಟೆ.. ಸರಿಯಾಗಿ ಕನ್ನಡ ಮಾತನಾಡದೇ ಇರುವುದು.. ಪ್ರಬುದ್ಧತೆಯಿಂದ ನಡೆದುಕೊಳ್ಳದಿರುವುದು ಹೀಗೆ ಸಾಕಷ್ಟು ವಿಚಾರಗಳಿಗೆ ಟ್ರೋಲ್ ಆದರು.. ಆದರೆ ಇದೆಲ್ಲವನ್ನೂ ಸಹ ಗಂಭೀರವಾಗಿ ತೆಗೆದುಕೊಳ್ಳದೇ ತಮ್ಮ ಸಿನಿಮಾ ಜೀವನವನ್ನು ಮುಂದೆ ಸಾಗಿಸುತ್ತಾ ಬಂದರು.. ಆದರೆ ರಕ್ಷಿತ್ ಶೆಟ್ಟಿ ಅವರ ವಿಚಾರದಲ್ಲಿ ಇದು ಬೇರೆತದ್ದೇ ರೀತಿಯಾಗಿತ್ತು.. ಹೌದು ಮೊದಲ ಸಿನಿಮಾದಲ್ಲಿಯೇ ದೊಡ್ಡ ಹಿಟ್ ಪಡೆದ ರಶ್ಮಿಕಾ ಮಂದಣ್ಣ ಆ ಸಿನಿಮಾದ ನಾಯಕ ರಕ್ಷಿತ್ ಶೆಟ್ಟಿ ಜೊತೆಗೆ ಪ್ರೀತಿಯಲ್ಲಿ ಬಿದ್ದಿದ್ದರು.. ಇತ್ತ ರಕ್ಷಿತ್ ಕೂಡ ಕಿರಿಕ್ ಪಾರ್ಟಿ ಸಿನಿಮಾ ಚಿತ್ರೀಕರಣದ ಸಮಯದಲ್ಲಿಯೇ ರಶ್ಮಿಕಾ ಅವರಿಗೆ ರಿಂಗ್ ಕೊಟ್ಟು ಪ್ರಪೋಸ್ ಮಾಡಿದ್ದರು.. ಪರಸ್ಪರರ ಪ್ರೀತಿ ಮದುವೆ ಹಂತಕ್ಕೆ ಬಂತು..

ನಿಶ್ಚಿತಾರ್ಥವೂ ಆಯಿತು.. ಇಬ್ಬರ ನಡುವಿನ ವಯಸ್ಸಿನ ಅಂತರ ಹತ್ತು ವರ್ಷಕ್ಕಿಂತ ಹೆಚ್ಚಿದ್ದರೂ ಸಹ ಇಬ್ಬರೂ ಹೇಳಿ ಮಾಡಿಸಿದ ಜೋಡಿ ಎನಿಸಿಕೊಂಡಿದ್ದರು.. ಆದರೆ ನಿಶ್ಚಿತಾರ್ಥವಾದ ಕೆಲವೇ ದಿನಗಳಲ್ಲಿ ಇಬ್ಬರ ನಡುವಿನ ಸಂಬಂಧ ಮುರಿದುಬಿದ್ದಿತ್ತು.. ಆಗ ಸಾಮಾಜಿಕ ಜಾಲತಾಣದಲ್ಲಿ ಬಹಳಷ್ಟು ಬೆಳವಣಿಗೆಗಳು ಆದವು.‌ ಇತ್ತ ರಕ್ಷಿತ್ ಶೆಟ್ಟಿ ಸಾಮಾಜಿಕ ಜಾಲತಾಣದಿಂದಲೂ ದೂರವಾಗಿ ಬಿಟ್ಟರು.. ಇನ್ನು ರಶ್ಮಿಕಾ ಮಂದಣ್ಣ ಅವರ ಬಗ್ಗೆಯಂತೂ ಹೇಳಲೂ ಅಸಾಧ್ಯವಾದಷ್ಟು ಟ್ರೋಲ್ ಗಳಾದವು‌.. ಬಳಸಬಾರದ ಭಾಷೆಗಳಲ್ಲಿ ಅವರ ಬಗ್ಗೆ ಕಮೆಂಟ್ ಸಹ ಮಾಡಿದ್ದರು.. ಇನ್ನು ಇದೆಲ್ಲವನ್ನು ದಾಟಿ ತೆಲುಗು ಹಾಗೂ ಇತರ ಭಾಷೆಗಳಲ್ಲಿ ಗಟ್ಟಿಯಾಗಿ ನೆಲೆಯೂರಿದರು ರಶ್ಮಿಕಾ.. ಆದರೆ ರಕ್ಷಿತ್ ಹಾಗೂ ರಶ್ಮಿಕಾ ದೂರವಾಗಲು ನಿಜವಾದ ಕಾರಣ ಏನೆಂದು ತಿಳಿಯಲೇ ಇಲ್ಲ.. ಇನ್ನು ಇದೀಗ ಹಿಂದಿ ಮೂಲದ ಮಾದ್ಯಮವೊಂದರ ಸಂದರ್ಶನದಲ್ಲಿ ರಕ್ಷಿತ್ ಶೆಟ್ಟಿ ತನ್ನಿಂದ ದೂರಾದ ವಿಚಾರವಾಗಿ ಕಾರಣ ಏನೆಂದು ತಿಳಿಸಿದ್ದಾರೆ..

ಹೌದು ಮೊದಲಿಗೆ ಕಿರಿಕ್ ಪಾರ್ಟಿ ಸಿನಿಮಾ ಬಗ್ಗೆ ಮಾತನಾಡಿರುವ ರಶ್ಮಿಕಾ ನಾನು ಸಿನಿಮಾಗೋಸ್ಕರ ಬೆಂಗಳೂರಿಗೆ ಬರಲಿಲ್ಲ.. ನಾನು ಡಿಗ್ರಿ ಓದುವ ಸಲುವಾಗಿ ಬೆಂಗಳೂರಿಗೆ ಬಂದೆ.. ಆನಮ್ಟರ ಮಾಡೆಲಿಂಗ್ ನಲ್ಲಿ‌ ತೊಡಗಿಕೊಂಡೆ.. ಆ ಬಳಿಕ ಸಾಕಷ್ಟು ಸಿನಿಮಾಗಳ ಅವಕಾಶಗಳು ಬಂದವು.. ಆದರೆ ಯಾವ ಕತೆಯೂ ಇಷ್ಟವಾಗಿರಲಿಲ್ಲ.. ಆನಂತರ ಕಿರಿಕ್ ಪಾರ್ಟಿ ಸಿ‌ನಿಮಾ ಅವಕಾಶ ಬಂತು.. ನಾನು ಸಹ ಆ ಸಮಯದಲ್ಲಿ ಕಾಲೇಜಿನಲ್ಲಿ ಓದುತ್ತಿದ್ದ ಕಾರಣ ಆ ಕತೆ ಇಷ್ಟವಾಯಿತು.. ಒಪ್ಪಿಕೊಂಡೆ.. ನಂತರ ಸಿನಿಮಾನೇ ಜೀವನವಾಯಿತು.. ಎಂದರು.. ನಂತರ ಟ್ರೋಲ್ ಗಳ ಬಗ್ಗೆ ಮಾತನಾಡಿರುವ ರಶ್ಮಿಕಾ ನನ್ನನ್ನು ಸಾಕಷ್ಟು ಬಾರಿ ಟ್ರೋಲ್ ಮಾಡಲಾಗಿದೆ.. ಮೊದಮೊದಲು ಟ್ರೋಲ್ ಗಳಾದಾಗ ನಾನು ಕುಗ್ಗಿ ಹೋಗುತ್ತಿದ್ದೆ.. ಸಿನಿಮಾ ಇಂಡಸ್ಟ್ರಿಯಿಂದಲೇ ದೂರವಾಗುವ ನಿರ್ಧಾರವನ್ನೂ ಸಹ ಮಾಡಿದ್ದೆ.. ಆಗ ನನ್ನ ಕುಟುಂಬ ನನ್ನ ಜೊತೆ ನಿಂತಿತ್ತು.. ಮತ್ತೆ ಸಿನಿಮಾದಿಂದಲೇ ಬದುಕನ್ನು ಪುನರಾರಂಭಿಸಿದೆ..

ಭಾಷೆಯ ವಿಚಾರಕ್ಕೆ ಬಹಳಷ್ಟು ಬಾರಿ ಟ್ರೋಲ್ ಆಗಿದ್ದೇನೆ.. ನಿಜ ಹೇಳಬೇಕೆಂದರೆ ನನಗೆ ಈಗಲೂ ಯಾವ ಭಾಷೆಯೂ ಸರಿಯಾಗಿ ಬರುವುದಿಲ್ಲ.. ಹೊಸ ಹೊಸ ಭಾಷೆ ಕಲಿಯುವಾಗ ಎಲ್ಲವೂ ಮಿಕ್ಸ್ ಆಗಿಬಿಡುತ್ತದೆ.. ಹಾಗಂತ ನನಗೆ ಭಾಷೆಯ ಮೇಲೆ ಪ್ರೀತಿ ಇಲ್ಲ ಅಂತಲ್ಲಾ.. ಆದರೆ ಅದನ್ನೇ ಟ್ರೋಲ್ ಮಾಡಿಬಿಡುತ್ತಾರೆ.. ಅದನ್ನೆಲ್ಲಾ ನೋಡಿದಾಗ ಬೇಸರವಾಗುತಿತ್ತು.. ಆದರೆ ಈಗ ಅದಕ್ಕೆಲ್ಲಾ ಹೆಚ್ಚು ಗಮನ ನೀಡುವುದಿಲ್ಲ.. ನನ್ನಿಂದ ಎಷ್ಟು ಸಾಧ್ಯವೋ ಅಷ್ಟು ಪ್ರೀತಿ ಹಂಚುವೆ ಎಂದಿದ್ದಾರೆ.. ಇನ್ನು ರಕ್ಷಿತ್ ಶೆಟ್ಟಿ ಅವರ ಬಗ್ಗೆಯೂ ಮಾತನಾಡಿರುವ ರಶ್ಮಿಕಾ ಮಂದಣ್ಣ ಇಂಡೈರೆಕ್ಟ್ ಆಗಿ ರಕ್ಷಿತ್ ತನ್ನನ್ನು ಬಿಟ್ಟು ಹೋಗಲು ಕಾರಣ ಏನೆಂದು ತಿಳಿಸಿದ್ದಾರೆ.. ಹೌದು ನಾನು ಎಲ್ಲರನ್ನೂ ನಂಬುತ್ತೇನೆ.. ಪ್ರೀತಿ‌ ಮಾಡುತ್ತೇನೆ..

ಹಾಗೆಯೇ ನನ್ನ ಹೃದಯವನ್ನೂ ಸಹ ಕೊಡುತ್ತೇನೆ.. ಆದರೆ ಅವರು ಅದನ್ನು ಅರ್ಥ ಮಾಡಿಕೊಳ್ಳಲಿಲ್ಲ.. ನನ್ನನ್ನು ನಾನಾಗಿಯೇ ಇರಲು ಬಿಡಲಿಲ್ಲ.. ಇದೇ ಕಾರಣಕ್ಕೆ ನನ್ನನ್ನು ಕಳೆದುಕೊಂಡಿದ್ದಾರೆ.. ಇದರಿಂದ ನಾನು ಕುಗ್ಗಿ ಹೋಗಲಿಲ್ಲ.. ಈಗ ನಾನು ಖುಷಿಯಾಗಿಯೇ ಇದ್ದೇನೆ.. ಆ ಸಮಯದಲ್ಲಿ ನನಗೆ ಬಹಳ ನೋವಾಯಿತು.. ಆದರೆ ಅದನ್ನು ನಾನು ಯಾರ ಬಳಿಯೂ ತೋರಿಸಿಕೊಳ್ಳಲಿಲ್ಲ.. ಎಷ್ಟು ದಿನ ಕಣ್ಣೀರು ಹಾಕಿ ಮಲಗಿದ್ದೀನೋ ನನಗೆ ಗೊತ್ತಿಲ್ಲ.. ಈಗಲೂ ಸಹ ಕೆಲವೊಂದು ನೆನಪುಗಳು ಕಾಡಿದಾಗ ಕಣ್ಣೀರು ಹಾಕಿ ಮಲಗಿದ್ದೇನೆ.. ನಿದ್ರೆ ಇಲ್ಲದೇ ಯೋಚನೆಯಲ್ಲಿಯೇ ಸನಯ ಕಳೆದಿದ್ದೇನೆ.. ಆದರೆ ಇದೆಲ್ಲವನ್ನು ನಾನು ಮನೆಯವರ ಜೊತೆ ಹೇಳಿಕೊಳ್ಳಲು ಸಾಧ್ಯಾನಾ.. ಎಂದು ಬೇಸರವನ್ನೂ ಸಹ ಮಾಡಿಕೊಂಡರು.. ಇದೆಲ್ಲವೂ ಸತ್ಯವೇ ಆಗಿದ್ದರೆ ನಿಜಕ್ಕೂ ರಶ್ಮಿಕಾ ಅವರ ವಿಚಾರ ಬೇಸರವನ್ನುಂಟು ಮಾಡೋದು ಖಚಿತ..

ಆದರೆ ಟ್ರೋಲ್ ಗಳ ವಿಚಾರಕ್ಕೆ ಬಂದರೆ ಅವರು ಯಾವುದೇ ವಿಚಾರವಾಗಲಿ ಅಥವಾ ಯಾವುದೇ ಸಂದರ್ಭವಾಗಲಿ ಪ್ರಬುದ್ಧರಾಗಿ ನಡೆದುಕೊಂಡರೆ ಬಹುಶಃ ಈ ಟ್ರೋಲ್ ಅನ್ನೋ ಪದವೂ ಅವರ ಜೀವನದಲ್ಲಿ ಇರುವುದಿಲ್ಲವೇನೋ.. ಆದರೆ ಕಾರ್ಯಕ್ರಮಗಳಲ್ಲಿ ಅಥವಾ ಮಾದ್ಯಮದ ಮುಂದೆ ಮೆಚ್ಯುರಿಟಿ ಇಲ್ಲದಂತೆ ನಡೆದುಕೊಂಡು ಟ್ರೋಲ್ಗಳಿಗೆ ತಾವೇ ಕಾರಣರಾಗಿರುವುದಂತೂ ಸತ್ಯ.. ಇನ್ನು ಇದೆಲ್ಲವನ್ನು ಹೊರತು ಪಡಿಸಿ ವ್ಯಯಕ್ತಿಕ ಜೀವನದ ಬಗ್ಗೆ ಮಾತನಾಡುವುದಾರೆ ಅವರವರ ಆಯ್ಕೆ ಅವರವರದ್ದು.. ನೋವು ಅನುಭವಿಸಿದ ನಂತರ ಹೊಸ ಜೀವನ ಕಟ್ಟಿಕೊಳ್ಳಬಾರದು ಎಂದೇನಿಲ್ಲ.. ಸಧ್ಯ ಅಲ್ಲಿ ತಪ್ಪು ಯಾರದ್ದೇ ಆಗಿರಲಿ.. ಇಬ್ಬರೂ ಮುನ್ನಡೆದದ್ದಾಗಿದೆ.. ಮುಂದೆ ಇಬ್ಬರ ಜೀವನವೂ ಅವರುಗಳು ಅಂದುಕೊಂಡಂತೆ ಸಂತೋಷವಾಗಿರಲಿ ಅಷ್ಟೇ..