ರಶ್ಮಿಕಾ ನಂತರ ಕನ್ನಡದ ಮತ್ತೊಬ್ಬ ಸ್ಟಾರ್ ನಟಿ ತೆಲುಗಿಗೆ ಎಂಟ್ರಿ.. ರಶ್ಮಿಕಾರನ್ನು ಹಿಂದೆ ಸರಿಸೋದು ಗ್ಯಾರಂಟಿ ಎಂದ ಅಭಿಮಾನಿಗಳು..

0 views

ಕನ್ನಡ ಸಿನಿಮಾ ಇಂಡಸ್ಟ್ರಿ ಇಂದ ಇತರ ಸಿನಿಮಾ ಇಂಡಸ್ಟ್ರಿಗೆ ನಾಯಕಿಯರು ಹೋಗೋದು ಸಾಮನಯ ಸಂಗತಿ.. ಅದಾಗಲೇ ರಶ್ಮಿಕಾ ಮಂದಣ್ಣ.. ರಚಿತಾ ರಾಮ್ ಇತರ ಭಾಷೆಗಳಲ್ಲಿ ಅಭಿನಯಿಸುತ್ತಿದ್ದು ಅಲ್ಲಿಯೂ ಯಶಸ್ವಿಯಾಗಿ ಹೆಸರು ಮಾಡಿದ್ದಾರೆ.. ಆದರೆ ಇದೀಗ ಕನ್ನಡದ ಮತ್ತೊಬ್ಬ ಖ್ಯಾತ ನಟಿ ತೆಲುಗು ಸಿನಿಮಾ ಇಂಡಸ್ಟ್ರಿಗೆ ಕಾಲಿಟ್ಟಿದ್ದಾರೆ.. ಹೌದು ದೊಡ್ಡ ಬ್ಯಾನರ್ ಸಿನಿಮಾವೊಂದರಲ್ಲಿ ಕನ್ನಡದ ಮತ್ತೊಬ್ಬ ನಟಿ ಕಾಣಿಸಿಕೊಳ್ಳುತ್ತಿದ್ದಾರೆ..

ಹೌದು ಆ ನಟಿ ಮತ್ಯಾರೂ ಅಲ್ಲ.. ಕಿಸ್.. ಭರಾಟೆ ಸಿನಿಮಾ ಮೂಲಕ ಜನರ ಮನ ಗೆದ್ದ.. ಗಂಡ್ ಹೈಕಳ ನಿದ್ದೆ ಕದ್ದ.. ಸುಂದರಿ.. ಮುದ್ದು ಮುಖದ ಶ್ರೀಲೀಲಾ.. ಹೌದು ಕಿರಿಕ್ ಪಾರ್ಟಿ ಸಿನಿಮಾ ಮೂಲಕ ಕನ್ನಡ ಸಿನಿಮಾ ಇಂಡಸ್ಟ್ರಿಗೆ ಕಾಲಿಟ್ಟಿದ್ದ ನಟಿ ರಶ್ಮಿಕಾ ಮಂದಣ್ಣ ನಂತರದ ದಿನಗಳಲ್ಲಿ ದರ್ಶನ್.. ಗಣೇಶ್.. ಪುನೀತ್.. ಹೀಗೆ ಕನ್ನಡದ ಸೂಪರ್ ಸ್ಟಾರ್ ಗಳ ಜೊತೆ ಅಭಿನಯಿಸಲು ಅವಕಾಶ ದೊರೆಯಿತು.. ಆದರೆ ಗೀತಾ ಗೋವಿಂದಂ ಸಿನಿಮಾ ಮೂಲಕ ತೆಲುಗು ಇಂಡಸ್ಟ್ರಿಗೆ ಕಾಲಿಟ್ಟ ನಂತರ ರಶ್ಮಿಕಾ ಮಂದಣ್ಣ ಅಲ್ಲಿಯೇ ಸಿಕ್ಕಾಪಟ್ಟೆ ಬ್ಯುಸಿ‌ ಆಗಿ ಹೋದರು.. ವಿಜಯ್ ದೇವರಕೊಂಡ ನಂತರ ಮಹೇಶ್ ಬಾಬು ಜೊತೆಯೂ ನಟಿಸಿ ಸೈ ಎನಿಸಿಕೊಂಡರು.. ನಂತರ ಇದೀಗ ಅಲ್ಲು ಅರ್ಜುನ್ ಜೊತೆಗೂ ಅಭಿನಯಿಸುತ್ತಿದ್ದು ತೆಲುಗಿನ ಟಾಪ್ ಹೀರೋಯಿನ್ ಗಳಲ್ಲಿ ಒಬ್ಬರಾಗಿ ನಿಂತಿದ್ದು ಬಾಲಿವುಡ್ ಗೂ ಎಂಟ್ರಿ ಕೊಟ್ಟಿದ್ದಾರೆ..

ಇನ್ನು ಇತ್ತ ನಟಿ ರಚಿತಾ ರಾಮ್ ಕೂಡ ತಮಿಳಿನ ಸೂಪರ್ ಮಚ್ವಿ ಸಿನಿಮಾ ಮೂಲಕ ತಮಿಳು ಚಿತ್ರರಂಗಕ್ಕೆ ಕಾಲಿಟ್ಟು ಕನ್ನಡದ ಜೊತೆಗೆ ಅಲ್ಲಿಯೂ ಬ್ಯುಸಿ ಆಗಿದ್ದಾರೆ.. ಸದ್ಯ ಇದೀಗ ನಮ್ಮ ಮುದ್ದು ಮುಖದ ಸುಂದರಿ ಶ್ರೀಲೀಲಾ ಕೂಡ ತೆಲುಗು ಸಿನಿಮಾ ಇಂಡಸ್ಟ್ರಿಗೆ ಕಾಲಿಡುತ್ತಿದ್ದು ದೊಡ್ಡ ಬಡ್ಜೆಟ್ ಸಿನಿಮಾದಲ್ಲಿ ಅಭಿನಯಿಸಲು ಅವಕಾಶ ದೊರೆತಿದೆ..

ಹೌದು ತೆಲುಗಿನ ನಟ ಶ್ರೀಕಾಂತ್ ಅವರ ಮಗ ರೋಷನ್‌ ಜೊತೆ ಶ್ರೀಲೀಲಾ ತೆರೆ ಮೇಲೆ ಕಾಣಿಸಿಕೊಳ್ಳುತ್ತಿದ್ದಾರೆ.. ಈ ಹಿಂದೆ ಅಕ್ಕಿನೇನಿ ನಾಗಾರ್ಜುನ ನಿರ್ಮಾಣದ ನಿರ್ಮಲ ಕಾನ್ವೆಂಟ್ ಎಂಬ ಸಿನಿಮಾದಲ್ಲಿ ರೋಷನ್ ನಟಿಸಿದ್ದರು.. ಇದೀಗ ಪೂರ್ಣ ಪ್ರಮಾಣದ ನಾಯಕನಾಗಿ ಅಭಿನಯಿಸುತ್ತಿದ್ದು ತನ್ನ ತಂದೆಯ ಹಿಟ್ ಸಿನಿಮಾ ಪೆಳ್ಳಿ ಸಂದಡಿ ಸಿನಿಮಾದ ಸಿಕ್ವೇಲ್‌ನಲ್ಲಿ ಹೀರೋ ಆಗಿ ಅಭಿನಯಿಸುತ್ತಿದ್ದಾರೆ..

ಇನ್ನು ಇದರ ಜೊತೆಗೆ ಕನ್ನ‌ಡದಲ್ಲಿಯೂ ಸಾಲು ಸಾಲು ಸಿನಿಮಾಗಳಲ್ಲಿ ಶ್ರೀಲೀಲಾ ಬ್ಯುಸಿ ಆಗಿದ್ದು ಧನ್ವೀರ್ ಜೊತೆಗಿನ ಹೊಸ ಸಿನಿಮಾ.. ಧೃವ ಸರ್ಜಾ ಜೊತೆಗೆ ದುಬಾರಿ ಸಿನಿಮಾದಲ್ಲಿ.. ಹಾಗೂ ಇನ್ನೂ ಎರಡು ಸಿನಿಮಾಗಳ ಅವಕಾಶ ಶ್ರೀಲೀಲಾ ಕೈಗಳಲ್ಲಿವೆ.. ಒಟ್ಟಿನಲ್ಲಿ ಮುದ್ದು ಮುಖದ ಚೆಲುವೆ ಕನ್ನಡದ ಜೊತೆಗೆ ತೆಲುಗಿನಲ್ಲಿಯೂ ಮೋಡಿ ಮಾಡಲಿದ್ದು ಅದೃಷ್ಟ ಕೈಹಿಡಿದರೆ ರಶ್ಮಿಕಾ ಮಂದಣ್ಣರನ್ನ ಹಿಂದಿಕ್ಕಲಿದ್ದಾರೆ ಎನ್ನುವ ಮಾತುಗಳು ಕೇಳಿಬರುತ್ತಿದೆ..