ವಿಜಯ್ ದೇವರಕೊಂಡ ರಶ್ಮಿಕಾ ನಡುವೆ ಪ್ರೀತಿ ಇರೋದು ನಿಜ.. ಬಹಿರಂಗವಾಗಿ ರಶ್ಮಿಕಾ ಹೇಳಿದ ಮಾತು ನೋಡಿ.. ಇಷ್ಟೇ ಜೀವನ..

0 views

ಸ್ಯಾಂಡಲ್ವುಡ್ ನಟಿ ಅನ್ನೋದಕ್ಕಿಂತ ಸಧ್ಯ ಬಹುಭಾಷಾ ನಟಿಯಾಗಿಯೇ ಹೆಚ್ಚು ಗುರುತಿಸಿಕೊಂಡಿರುವ ನಟಿ ರಶ್ಮಿಕಾ ಮಂದಣ್ಣ ಸಾಮಾಜಿಕ ಜಾಲತಾಣದಲ್ಲಿ ಆಗಾಗ ಸುದ್ದಿಯಾಗೋದು ಹೊಸ ವಿಚರಾವೇನೂ ಅಲ್ಲ.. ಆದರೆ ರಶ್ಮಿಕಾ ಮಂದಣ್ಣ ಅವರು ತಮ್ಮ ಸಿನಿಮಾ ವಿಚಾರಗಳಿಗಾಗಿ ಎಷ್ಟು ಸುದ್ಧಿಯಾಗುತ್ತಿದ್ದರೋ ಅಷ್ಟೇ ತಮ್ಮ ವ್ಯಯಕ್ತಿಕ ಜೀವನದ ವಿಚಾರವಾಗಿ ಸುದ್ಧಿಯಾಗುತ್ತಿದ್ದರು. ಅದರಲ್ಲಿಯೂ ಒಂದಷ್ಟು ವರ್ಷಗಳ ಹಿಂದೆ ರಕ್ಷಿತ್ ಶೆಟ್ಟಿ ವಿಚಾರವಾಗಿ ಸುದ್ದಿಯಾದರೆ.. ಆನಂತರ ವಿಜಯ್ ದೇವರಕೊಂಡ ಅವರ ವಿಚಾರವಾಗಿ ಸುದ್ದಿಯಾಗಿದ್ದರು.. ಆದರೆ ಇದೀಗ ರಶ್ಮಿಕಾ ಮಂದಣ್ಣ ಅವರ ವಿಚಾರವಾಗಿ ಹೊಸದೊಂದು ವಿಚಾರ ಹೊರ ಬಂದಿದ್ದು ಇಷ್ಟೇ ಜೀವನ ಎನ್ನುವಂತಾಗಿದೆ..

ಹೌದು ಮೊದಲ ಸಿನಿಮಾದಲ್ಲಿಯೇ ರಕ್ಷಿತ್ ಶೆಟ್ಟಿ ಅವರ ಜೊತೆ ಪ್ರೀತಿಯಲ್ಲಿ ಬಿದ್ದು ಮದುವೆಯ ನಿರ್ಧಾರ ಮಾಡಿ ಕೊನೆಗೆ ರಶ್ಮಿಕಾ ಮಂದಣ್ಣ ಹಾಗೂ ರಕ್ಷಿತ್ ಶೆಟ್ಟಿ ಅವರ ನಿಶ್ಚಿತಾರ್ಥ ಮುರಿದು ಬಿದ್ದ ವಿಚಾರ ಮರೆತು ಹೋದ ಹಾಗೂ ಇಬ್ಬರಿಗೂ ಬೇಡವಾದ ವಿಚಾರವಾಗಿ ಹೋಗಿದೆ.. ಅತ್ತ ತೆಲುಗು ಸಿನಿಮಾ ಇಂಡಸ್ಟ್ರಿಗೆ ಕಾಲಿಡುತ್ತಿದ್ದಂತೆ ಇತ್ತ ರಕ್ಷಿತ್ ಶೆಟ್ಟಿ ಅವರ ಜೊತೆಗಿನ ನಿಶ್ಚಿತಾರ್ಥ ಮುರಿದಿತ್ತು.. ಆನಂತರ ವಿಜಯ್ ದೇವರಕೊಂಡ ಅವರ ಜೊತೆ ರಶ್ಮಿಕಾ ಮಂದಣ್ಣ ಪ್ರೀತಿಯಲ್ಲಿ ಬಿದ್ದಿದ್ದಾರೆ ಎನ್ನುವ ಮಾತು ಕೇಳಿ ಬಂದಿತ್ತು.. ಗೀತಾ ಗೋವಿಂದಂ ನಂತರ ಡಿಯರ್ ಕಾಮ್ರೆಡ್ ಸಿನಿಮಾದಲ್ಲಿಯೂ ಇಬ್ಬರೂ ಒಟ್ಟಿಗೆ ಅಭಿನಯಿಸಿ ಮತ್ತಷ್ಟು ಆತ್ಮೀಯರಾಗಿದ್ದರು.. ಇನ್ನು ವಿಜಯ್ ದೇವರಕೊಂಡ ಅವರ ಮನೆಯ ಹಬ್ಬಗಳಲ್ಲಾಗಲಿ ಅಥವಾ ವಿಜಯ್ ಅವರ ಜೀವನದ ವಿಶೇಢ ದಿನಗಳಲ್ಲಾಗಲಿ ರಶ್ಮಿಕಾ ಮಂದಣ್ಣ ಅವರ ಹಾಜರಿ ಇದ್ದೇ ಇತ್ತು..

ಅಷ್ಟೇ ಅಲ್ಲದೇ ಬಾಲಿವುಡ್ ಗೆ ಕಾಲಿಟ್ಟ ರಶ್ಮಿಕಾ ಮಂದಣ್ಣ ಅವರು ಮುಂಬೈ ನಲ್ಲಿದ್ದಾಗ ಸಂದರ್ಶನವೊಂದರಲ್ಲಿ ತಮ್ಮ ನಿಶ್ಚಿತಾರ್ಥ ಮುರಿದು ಬಿದ್ದ ವಿಚಾರ ತಿಳಿಸಿ ಅವರು ಸಾಕಷ್ಟು ವರ್ಷಗಳ ಕಾಲ ರಾತ್ರಿ ಮಲಗುವಾಗ ಕಣ್ಣೀರು ಹಾಕಿಯೇ ಮಲಗಿದ ವಿಚಾರ ತಿಳಿಸಿ ಭಾವುಕರಾಗಿದ್ದರು.. ಅದೇ ದಿನ ರಾತ್ರಿ ರಶ್ಮಿಕಾ ಮಂದಣ್ಣ ಅವರನ್ನು ಸಂತೈಸುವ ಸಲುವಾಗಿ ವಿಜಯ್ ದೇವರಕೊಂಡ ಅವರೂ ಸಹ ಮುಂಬೈ ನ ಹೊಟೆಲ್ ಒಂದರಲ್ಲಿ ರಶ್ಮಿಕಾ ಮಂದಣ್ಣ ಅವರ ಜೊತೆ ತಡರಾತ್ರಿಯಲ್ಲಿ ಕಾಣಿಸಿಕೊಂಡು ಸುದ್ದಿಯಾಗಿತ್ತು.. ನಂತರದಲ್ಲಿ ಹೊಸ ವರ್ಷಾಚರಣೆಯಾಗಿರಬಹುದು ಅಥವಾ ಯಾವುದೇ ಹಬ್ಬಗಳಾಗಿರಬಹುದು ವಿಜಯ್ ದೇವರಕೊಂಡ ಅವರ ಕುಟುಂಬದ ಜೊತೆಯೇ ರಶ್ಮಿಕಾ ಮಂದಣ್ಣ ಇರುತ್ತಿದ್ದರು..

ಹೌಆದರೆ ಇವರಿಬ್ಬರು ಮಾತ್ರ ಪ್ರೀತಿಸುತ್ತಿರುವ ವಿಚಾರವನ್ನು ಹೊರಗೆಲ್ಲೂ ಹೇಳಿಕೊಂಡಿರಲಿಲ್ಲ.. ಆದರೆ ಇದೀಗ ಈ ಇಬ್ಬರ ನಡುವೆ ಪ್ರೀತಿ ಇದ್ದದ್ದು ನಿಜ ಎಂದು ಹೊರಬಿದ್ದಿದೆ.. ಆದರೆ ಈಗ ನಡೆದಿರೋದೆ ಬೇರೆ.. ಹೌದು ರಶ್ಮಿಕಾ ಮಂದಣ್ಣ ಹಾಗೂ ವಿಜಯ್ ದೇವರಕೊಂಡ ಅವರು ಸಾಮಾಜಿಕ ಜಾಲತಾಣದಲ್ಲಿಯೂ ಸಹ ಒಬ್ಬರನ್ನೊಬ್ಬರು ಕಾಲೆಳುದುಕೊಂಡು ತಮಾಷೆ ಮಾಡಿಕೊಂಡು ಟ್ವೀಟ್ ಮಾಡುತ್ತಿದ್ದ ಜೋಡಿ.. ಆದರೆ ಮೊನ್ನೆ ವಿಜಯ್ ದೇವರಕೊಂಡ ಅವರ ಹುಟ್ಟುಹಬ್ಬವಿದ್ದರೂ ಸಹ ರಶ್ಮಿಕಾ ಮಂದಣ್ಣ ಮಾತ್ರ ಒಂದು ವಿಶ್ ಕೂಡ ಮಾಡಿರಲಿಲ್ಲ.. ಈ ಬಗ್ಗೆ ಸಾಕಷ್ಟು ಅನುಮಾನಗಳು ಹುಟ್ಟುಕೊಂಡಿದ್ದು ಇಬ್ಬರ ನಡುವಿನ ಸ್ನೇಹ ಮುರಿದು ಬಿತ್ತ ಎನ್ನುವ ಮಾತು ಕೇಳಿ ಬಂದಿತ್ತು.. ಆದರೆ ಅಸಲಿ ವಿಚಾರ ಬೇರೆಯೇ ಇದೆ..

ಹೌದು ವಿಜಯ್ ದೇವರಕೊಂಡ ಹಾಗೂ ರಶ್ಮಿಕಾ ಮಂದಣ್ಣ ನಡುವಿನ ಸ್ನೇಹವಲ್ಲ ಪ್ರೀತಿಯೇ ಮುರಿದು ಬಿದ್ದಿದೆ.. ಹೌದು ಅದೇ ಕಾರಣಕ್ಕೆ ರಶ್ಮಿಕಾ ಅವರು ವಿಜಯ್ ದೇವರಕೊಂಡ ಅವರಿಂದ ಅಂತರ ಕಾಯ್ದುಕೊಂಡಿದ್ದು ಹುಟ್ಟುಹಬ್ಬಕ್ಕೂ ಸಹ ಶುಭಾಶಯ ತಿಳಿಸಿಲ್ಲ.. ಅಷ್ಟಕ್ಕೂ ಇಬ್ಬರ ನಡುವೆ ನಡೆದದ್ದೇನು.. ಇಬ್ಬರ ಪ್ರೀತಿ ಮುರಿದು ಬೀಳಲು ಕಾರಣ ಮತ್ತೊಬ್ಬ ನಟಿ.. ಹೌದು ವಿಜಯ್ ದೇವರಕೊಂಡ ಅವರು ಕಳೆದ ಕೆಲ ತಿಂಗಳುಗಳಿಂದ ನಟಿ ಅನನ್ಯ ಪಾಂಡೆ ಅವರ ಜೊತೆ ಬಹಳ ಆತ್ಮೀಯವಾಗಿದ್ದು ಇಬ್ಬರ ನಡುವೆ ಪ್ರೀತಿ‌ ಮೂಡಿದೆ ಎನ್ನುವ ಮಾತುಗಳು ಕೇಳಿ ಬರುತ್ತಿದೆ..

ಹೌದು ವಿಜಯ್ ದೇವರಕೊಂಡ ಅವರ ಮುಂದಿನ ಸಿನಿಮಾ ಲೈಗರ್ ಸಿನಿಮಾದ ನಾಯಕಿಯೂ ಆಗಿರುವ ಅನನ್ಯ ಪಾಂಡೆ ಸಿನಿಮಾ ಹೊರತಾಗಿಯೂ ವಿಜಯ್ ದೇವರಕೊಂಡ ಅವರ ಜೊತೆ ರೆಸ್ಟೋರೆಂಟ್ ಗಳು ಹಾಗೂ ಇನ್ನಿತರ ಕಡೆಗಳಲ್ಲಿ ಕಾಣಿಸಿಕೊಳ್ಳುತ್ತಿದ್ದು ಇಬ್ಬರ ನಡುವಿನ ಆತ್ಮೀಯತೆ ಹೆಚ್ಚಾಗಿಯೇ ಇತ್ತು.. ಆದರೆ ಇದೆಲ್ಲದಕ್ಕೂ ಮೀರಿ ಅತ್ತ ಅನನ್ಯ ಪಾಂಡೆ ಈ ಹಿಂದೆ ಪ್ರೀತಿಸುತ್ತಿದ್ದ ನಟ ಇಶಾನ್ ಕಟ್ಟರ್ ಜೊತೆ ಬ್ರೇಕಪ್ ಮಾಡಿಕೊಂಡಿದ್ದು ವಿಜಯ್ ದೇವರಕೊಂಡ ಅವರಿಗಾಗಿಯೇ ಎನ್ನುವ ಮಾತುಗಳು ಕೇಳಿ ಬರುತ್ತಿದೆ.. ಈ ವಿಚಾರವೆಲ್ಲವೂ ತಿಳಿದ ರಶ್ಮಿಕಾ ಮಂದಣ್ಣ ವಿಜಯ್ ಅವರ ಜೊತೆ ಜಗಳ ಮಾಡಿಕೊಂಡಿದ್ದು ತಮ್ಮಿಬ್ಬರ ಪ್ರೀತಿಯನ್ನು ಬ್ರೇಕಪ್ ಮಾಡಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ..

ಇನ್ನು ಚಿನ್ನ ರನ್ನ ಎಂದು ಪ್ರತಿ ವರ್ಷವೂ ವಿಶ್ ಮಾಡುತ್ತಿದ್ದ ರಶ್ಮಿಕಾ ಮಂದಣ್ಣ ಈ ವರ್ಷ ವಿಜಯ್ ಅವರ ಜೊತೆಗಿನ ಪ್ರೀತಿಗೆ ಬ್ರೇಕಪ್ ಮಾಡಿಕೊಂಡಿದ್ದು ತಮ್ಮ ಪಾಡಿಗೆ ತಾವು ತಮ್ಮ ಕೆಲಸದಲ್ಲಿ ತೊಡಗಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.. ಅದಕ್ಕೂ ಮೀರಿ ಕಳೆದ ಇಪ್ಪತ್ತೈದು ದಿನಗಳಿಂದ ರಶ್ಮಿಕಾ ಮಂದಣ್ಣ ಅವರು ವಿಜಯ್ ದೇವರಕೊಂಡ ಅವರ ವಿಚಾರವಾಗಿಯೇ ಬಹಳ ಡಿಸ್ಟರ್ಬ್ ಆಗಿದ್ದರು ಎನ್ನಲಾಗಿದ್ದು ಈ ಬಗ್ಗೆ ಖುದ್ದು ರಶ್ಮಿಕಾ ಮಂದಣ್ಣ ಅವರೇ ಸಾಮಾಜಿಕ ಜಾಲತಾಣದಲ್ಲಿ ಹಾಕಿರುವ ಪೋಸ್ಟ್ ನಿಂದ ತಿಳಿದಿದೆ.. ಹೌದು ನಿನ್ನೆ ಹೊಸ ಸ್ಟಾರ್ಟ್ ಮಾಡಬೇಕೆಂದು ಪೋಸ್ಟ್ ಮಾಡಿರುವ ರಶ್ಮಿಕಾ ಮಂದಣ್ಣ ತಮ್ಮ ದಿನಚರಿತ ಬಗ್ಗೆಯೂ ತಿಳಿಸಿ ಕಳೆದ ಇಪ್ಪತ್ತೈದು ಬೇಸರದ ದಿನಗಳಿಂದ ಹೊರ ಬರಲು ವರ್ಕೌಟ್ ಮೊರೆ ಹೋಗಿದ್ದಾರೆ..

ಅಷ್ಟೇ ಅಲ್ಲದೇ ತಮಿಳಿನ ವಿಜಯ್ ಜೊತೆ ಸಿನಿಮಾ ಸಹ ಒಪ್ಪಿಕೊಂಡಿದ್ದು ಅವರನ್ನೆಲ್ಲಾ ಭೇಟಿಯಾಗಿ ಒಳ್ಳೆಯ ದಿನಗಳನ್ನು ಕಳೆದೆ ಎಂದೂ ಸಹ ಪೋಸ್ಟ್ ಮಾಡಿಕೊಂಡಿದ್ದಾರೆ… ಇನ್ನು ರಶ್ಮಿಕಾ ಹಾಗೂ ವಿಜಯ್ ದೇವರಕೊಂಡ ಅವರ ನಡುವಿನ ಪ್ರೀತಿ ಬ್ರೇಕಪ್ ಆದ ವಿಚಾರ ತಿಳಿದು ಕೆಲ ಅಭಿಮಾನಿಗಳು ಬೇಸರ ವ್ಯಕ್ತಪಡಿಸಿದರೆ ಮತ್ತೆ ಕೆಲವರು ಅಂದು ರಕ್ಷಿತ್ ಶೆಟ್ಟಿ ಅವರನ್ನು ಬಿಟ್ಟು ಹೋದಿರಿ.. ಇಂದು ವಿಜಯ್ ನಿಮ್ಮನ್ನು ಬಿಟ್ಟು ಹೋದರು.. ಇಷ್ಟೇ ಜೀವನ ಎಂದಿದ್ದಾರೆ..